ಇನ್ನೂ 10 ದಿನ Tomato Price ಏರುತ್ತಲೇ ಇರುತ್ತೆ; ಟೊಮೊಟೊ ದುಬಾರಿ ಬೆಲೆಗೆ ‘ಮಹಾ’ ಪರಿಹಾರ ಬೇಕಿದೆ!

ನಿರಂತರವಾಗಿ ಏರಿಕೆಯಾಗ್ತಿರೋ ಟೊಮೊಟೊ ಬೆಲೆ ಇನ್ನೂ 10 ದಿನ ಇದೇ ರೀತಿ ಬೆಲೆ ಏರಿಕೆ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಟೊಮೊಟೊ ಬೆಳೆ ಸಿಕ್ರೆ ಮಾತ್ರ ದರ ಇಳಿಕೆಯಾಗಲಿದೆ.

ಟೊಮೊಟೊ

ಟೊಮೊಟೊ

 • Share this:
ಬೆಂಗಳೂರು:  ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ(Heavy Rain) ತರಕಾರಿ, ಸೊಪ್ಪುಗಳ ಬೆಲೆ (Vegetable Price) ಗಗನಕ್ಕೇರಿದೆ. ಅದರಲ್ಲೂ ಟೊಮೊಟೊ ಬೆಲೆಯಂತೂ (Tomato Pric)  ಶತಕದತ್ತ ಬಂದು ನಿಂತಿದೆ.‌ ಒಂದು ಕಡೆ ಇಳುವರಿ ಇಲ್ಲದೇ ರೈತರು ಕಂಗಾಲಾಗಿದ್ರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.  ರಾಜ್ಯಾದ್ಯಂತ ಸುರಿದ ವರುಣಾರ್ಭಟ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದೊಂದು ತಿಂಗಳಿನಿಂದ ನಿರಂತವಾಗಿ ಬೆಲೆ ಏರಿಕೆಯಾಗುತ್ತಿದೆ.  ಕಳೆದೆರಡು ತಿಂಗಳ ಹಿಂದೆ ಈರುಳ್ಳಿ ಆಯಿತು. ಈಗ ಟೊಮೊಟೊ ಜನರ ಜೇಬು ಸುಡುತ್ತಿದೆ . ಹೋಲ್​​ಸೇಲ್​​​ ಟೊಮೊಟೊ ದರವೇ ಮೂರು ಪಟ್ಟು ಏರಿಕೆಯಾಗಿದೆ. ಈ ಹಿಂದೆ 300 ರೂ. ಇದ್ದ 25 ಕೆಜಿ ಟೊಮ್ಯಾಟೋ ದರ ಈಗ 1300 ರಿಂದ 1500 ಕ್ಕೆ ಏರಿಕೆಯಾಗಿದೆ. ನಾಟಿ ಟೊಮೊಟೊ 25 KG ಗೆ 1800 ರೂ ಇದೆ. ಈ ರೀತಿ ದರ ಏರಿಕೆಯಾದ್ರೆ ಅಡುಗೆ ಏನು ಮಾಡಬೇಕು ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. 

ಇನ್ನೂ 10 ದಿನ ಇದೇ ರೀತಿ ಬೆಲೆ ಏರಿಕೆ : ಆಂಧ್ರ, ಹಾಗೂ ತಮಿಳುನಾಡಿನಲ್ಲೂ ತೀವ್ರ ಮಳೆ ಪರಿಣಾಮ ರಾಜ್ಯದ ಟೊಮ್ಯಾಟೊ ಬೆಳೆಯೋ ಜಿಲ್ಲೆಗಳಲ್ಲೂ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದೆ. ಹೀಗಾಗಿ ನಿರಂತರವಾಗಿ ಏರಿಕೆಯಾಗ್ತಿರೋ ಟೊಮೊಟೊ ಬೆಲೆ ಇನ್ನೂ 10 ದಿನ ಇದೇ ರೀತಿ ಬೆಲೆ ಏರಿಕೆ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಟೊಮೊಟೊ ಬೆಳೆ ಸಿಕ್ರೆ ಮಾತ್ರ ದರ ಇಳಿಕೆಯಾಗಲಿದೆ. ಇಲ್ಲದಿದ್ರೆ ಇನ್ನಷ್ಟು ದಿನ ದರ ಏರುವ ಸಾಧ್ಯತೆಯಿದೆ. ಸದ್ಯ ಹೋಲ್ಸೇಲ್ 60 ರೂ ನಿಂದ 80 ರೂ ಟೊಮೊಟೊ ಮಾರಾಟವಾದ್ರೆ, ರೀಟೇಲ್ 100 ರಿಂದ 120ರೂ ವರೆಗೂ ಮಾರಾಟವಿರಲಿದೆ. ಹೀಗಾಗಿ ಜನರ ಬಾಯಿ ಕಹಿ ಮಾಡ್ತಿರೋ ಟೊಮೊಟೊ ಜೊತೆಗೆ ಇತರೆ ತರಕಾರಿ ದರವೂ ದುಬಾರಿಯಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ದರ ಹೀಗಿದೆ (1 ಕೆಜಿ) 

 1. ಹುರುಳಿಕಾಯಿ- 106 ರೂ.

 2. ಬದನೆಕಾಯಿ ಬಿಳಿ - 108 ರೂ.

 3. ಬದನೆಕಾಯಿ ಗುಂಡು - 72 ರೂ.

 4. ಬಾಟಲ್ ಬದನೆ - 75 ರೂ.

 5. ಬೀಟ್ರೂಟ್ - 59 ರೂ.

 6. ಸುವರ್ಣಗಡ್ಡೆ - 34 ರೂ.

 7. ಹಾಗಲಕಾಯಿ - 60 ರೂ.

 8. ಸೌತೆಕಾಯಿ - 70 ರೂ.

 9. ಸೀಮೆ ಬದನೆಕಾಯಿ  - 22 ರೂ.

 10. ಲೋಕಲ್ ಸೌತೆಕಾಯಿ - 24 ರೂ.

 11. ಇಸ್ರೇಲ್ ಸೌತೆಕಾಯಿ - 74. ರೂ.

 12. ಗೋರಿಕಾಯಿ - 80 ರೂ.

 13. ದಪ್ಪ ಮೆಣಸಿನಕಾಯಿ ಕೆಂಪು, ಹಳದಿ - 314 ರೂ.

 14. ಹಸಿ ಮೆಣಸು - 60 ರೂ.

 15. ಬಜ್ಜಿ ಮೆಣಸು - 62 ರೂ.

 16. ನಾಟಿ ಕ್ಯಾರೇಟ್ -94 ರೂ.

 17. ಅಲಸಂಡೆ - 75 ರೂ.

 18. ಎಲೆಕೋಸು (ದಪ್ಪ) 60 ರೂ.

 19. ಹೂಕೋಸು ಸಣ್ಣ - 64 ರೂ.

 20. ಟೊಮ್ಯಾಟೊ - 150 ರೂ.

 21. ನುಗ್ಗೆಕಾಯಿ - 270 ರೂ.


ಬೆಲೆ ಏರಿಕೆಗೆ ಜನಸಾಮಾನ್ಯರ ಬೇಸರ 

ಈರುಳ್ಳಿ ಬಿಟ್ರೆ ಉಳ್ದೆಲ್ಲಾ ತರಕಾರಿ, ಸೊಪ್ಪುಗಳು ಮಳೆಗೆ ಹಾಳಾಗಿ ಹೋಗಿರೋದ್ರಿಂದ ರೇಟ್ ಜಾಸ್ತಿಯಾಗಿದೆ. ಒಂದು ಕಡೆ ಮಳೆ, ಮತ್ತೊಂದೆಡೆ ಮಾಡೋಕೆ ಕೆಲ್ಸ ಇಲ್ಲ ಸಂಬಳವೂ ಇಲ್ಲ.‌ ಈ ಗ್ಯಾಪ್ ನಲ್ಲಿ ಟೊಮೊಟೊ 100 ರೂಪಾಯಿ ಆದ್ರೆ ಹೇಗೆ ಜೀವನ ಮಾಡೋದು ಎಂದು ಜನಸಾಮಾನ್ಯರು ಬೇಸರ ವ್ಯಕ್ತಪಡಿಸ್ತಿದ್ದಾರೆ.  ಹಾಪ್ ಕಾಮ್ಸ್ ಗಳಲ್ಲೂ ದರ ಏರಿಕೆಯಾಗಿದೆ. ಇದೇ ರೀತಿ ಮಳೆ ಮುಂದುವರಿದ್ರೆ ತರಕಾರಿ ಮತ್ತು ಹಣ್ಣುಗಳ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.ಅಕಾಲಿಕ ಮಳೆಯಿಂದಾಗಿ ಬೆಳೆದಿರುವ ತರಕಾರಿ ನೀರಿನಲ್ಲಿ ಕೊಳೆಯುವಂತಾಗಿದೆ. ಮತ್ತೊಂದು ಕಡೆ ತರಕಾರಿ ಕಟಾವು ಮಾಡಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗುತ್ತಿದೆ.

ಇದನ್ನೂ ಓದಿ: Rain Effect: ಬೆಳೆಗಾರರ ಕೈಗೆಟುಕದ ದ್ರಾಕ್ಷಿ.. ಹಣ್ಣಿನ ಜೊತೆ ರೈತರ ನೆಮ್ಮದಿಯನ್ನು ಆಪೋಷನ ಪಡೆದ ವರುಣ

ಕೆಳ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹೀಗೆ ಬೆಲೆ ಏರಿಕೆ ಹೆಚ್ಚಾದರೆ ಬದುಕು ಬಿದಿಗೆ ಬರುವುದು ಸತ್ಯ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೇಳೆ ಕಾಳುಗಳು, ಅಕ್ಕಿ, ತರಕಾರಿ ಎಲ್ಲದರ ಬೆಲೆ ಹೆಚ್ಚಾದರೆ ಬದುಕುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
Published by:Kavya V
First published: