Power Cut: ದರ ಏರಿಕೆ ಬೆನ್ನಲ್ಲೇ BESCOMನಿಂದ ಮತ್ತೊಂದು ಶಾಕ್! ಇಂದು ರಾಜಧಾನಿಯಲ್ಲಿ ವಿದ್ಯುತ್ ವ್ಯತ್ಯಯ

ಇಂದು ಬೆಳಗ್ಗೆ 10 ಗಂಟೆ ಒಳಗೆ ಮನೆ ಕೆಲಸ ಮುಗಿಸಿದ್ರೆ ಬೆಟರ್! ಯಾಕೆಂದ್ರೆ ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ. ನಿನ್ನೆ ವಿದ್ಯುತ್ ದರ ಏರಿಸಿ ಶಾಕ್ ಕೊಟ್ಟಿದ್ದ ಬೆಸ್ಕಾಂ, ಇಂದು ಪವರ್ ಕಟ್ ಮಾಡಿ ಶಾಕ್ ಕೊಡಲಿದೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಿನ್ನೆ ವಿದ್ಯುತ್ ದರ (Power Bill Hike) ಏರಿಕೆ ಆದೇಶ ಹೊರಡಿಸಿ ಶಾಕ್ (Shock) ಕೊಟ್ಟಿದ್ದ ಬೆಸ್ಕಾಂ (BESCOM), ಇದೀಗ ಮತ್ತೊಂದು ಶಾಕ್ ಕೊಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಮಾಡಲಾಗುತ್ತಿದೆ. ಬೇಸಿಗೆಯಲ್ಲಿ (Summer) ವಿದ್ಯುತ್ ಕಡಿತ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ. ಬೇಸಿಗೆಯ ಸೆಖೆ ಒಂದು ಕಡೆಯಾದರೆ, ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ನಗರದ (City) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ ವಿದ್ಯುತ್ ವ್ಯತ್ಯಯ ಜನರನ್ನು ಒದ್ದಾಡುವಂತೆ ಮಾಡಿದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ (Problem) ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆ ಅಂಗಡಿಗಳಲ್ಲಿ ಬೇಸಗೆ ವ್ಯಾಪಾರ ಮಾಡಿಕೊಳ್ಳಬೇಕೆಂದು ಬಯಸುವ ವ್ಯಾಪಾರಿಗಳಿಗೆ ಶಾಕ್ ಕೊಟ್ಟಿದೆ. ವಿದ್ಯುತ್ ಇಲ್ಲದೆ, ಗಿರಾಕಿಗಳಿಗೆ ಜ್ಯೂಸ್, ಲಸ್ಸಿ ಸೇರಿದಂತೆ ತಂಪು ಪಾನೀಯ ನೀಡಲು ಸಾಧ್ಯವಾಗುತ್ತಿಲ್ಲ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

 ಇಂದು ವಿದ್ಯುತ್ ವ್ಯತ್ಯಯ

ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ನೋಡೋಣ.  ಏಪ್ರಿಲ್ 5ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಲಯದ ಕೆಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಟ್ ಆಗಲಿದೆ.

ಯಾವ್ಯಾವ ಏರಿಯಾಗಳಲ್ಲಿ ಪವರ್ ಕಟ್?

ಪಶ್ಚಿಮ ವಿಭಾಗದ ಚಂದ್ರಾಲೇಔಟ್, ನಂಜರಸಪ್ಪ ಲೇಔಟ್, ಸ್ಕೈಲೈನ್, ಬಿಬಿಎಂಪಿ ಪಾರ್ಕ್, ಉತ್ತರ ವಿಭಾಗದ ಮಲ್ಲೇಶ್ವರ, ದೇವಯ್ಯ ಪಾರ್ಕ್, ವಯ್ಯಾಲಿ ಕಾವಲ್, ಮತ್ತಿಕೆರೆ, ಆರ್‌ಎಂಬಿ, ಐಐಎಸ್‌ಸಿ, ಪ್ಲಾಲೇಸ್ ಗುಟ್ಟಹಳ್ಳಿ, ದೋಭಿಘಾಟ್‌ನಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ:  Climate Change Impact: ಹವಾಮಾನ ಬದಲಾವಣೆಯ ಪ್ರಭಾವ; ಗಾಳಿ, ಸೌರ ಶಕ್ತಿಗಳಿಗೆ ಫುಲ್ ಡಿಮ್ಯಾಂಡ್

 ಇನ್ನು ಎಲ್ಲೆಲ್ಲಿ ಇಂದು ಪವರ್ ಕಟ್?

ಇನ್ನು ಇಂದು ಪಶ್ಚಿಮ ವಿಭಾಗದ ವಿಜಯನಗರ, ಬ್ಯಾಡರಹಳ್ಳಿ, ಪೂರ್ವ ಶಿವಾಜಿನಗರ, ಗೋವಿಂದಪುರ, ಇಂದಿರಾನಗರ, ರಾಮಮೂರ್ತಿನಗರ, ಅಕ್ಷಯ ನಗರ, ಹೊಯ್ಸಳ ನಗರ, ಸಾಯಿ ಗಾರ್ಡನ್, ಉತ್ತರ ವಿಭಾಗದ ಜಾಲಹಳ್ಳಿ, ಅಬ್ಬಿಗೆರೆ, ಕಾನ್ಶಿರಾಂ ನಗರ, ಎಚ್‌ಎಂಟಿ ಇಂಡಸ್ಟ್ರಿಯಲ್ ಏರಿಯಾ, ಅಬ್ಬಿಗೆರೆ ಹಾಗೂ ವೆಸ್ಟ್ ಡಿವಿಜನ್‌ನ ಕೆಂಗೇರಿ, ಆರ್.ಆರ್. ಲೇಔಟ್, ಅಂಜನಾ ನಗರ, ಹೇರೋಹಳ್ಳಿ, ಬ್ಯಾಡರಹಳ್ಳಿ, ಆರ್‌.ಆರ್‌. ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತ ಬೆಸ್ಕಾಂ ತಿಳಿಸಿದೆ.

ಕರ್ನಾಟಕದ ಜನರಿಗೆ ‘ಕರೆಂಟ್​’ ಶಾಕ್ 

ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಸಾರ್ವಜನಿಕರನ್ನು ತಟ್ಟುತ್ತಲೇ ಇದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಈಗಾಗಲೇ ಗಗನಕ್ಕೇರಿದೆ. ಇದೀಗ ರಾಜ್ಯದ ಜನರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತೊಂದು ಶಾಕ್​ ಕೊಟ್ಟಿದೆ.  ಪ್ರತಿ ಯೂನಿಟ್ ಗೆ 5 ಪೈಸೆ ಏರಿಕೆ ಮಾಡಿದೆ. ಏಪ್ರಿಲ್ 1 ರಿಂದಲೇ ದರ ಏರಿಕೆ ಜಾರಿ ಮಾಡಿರೋದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

 ಇದನ್ನೂ ಓದಿ: Electricity Rate rise: ಕರ್ನಾಟಕದ ಜನರಿಗೆ ‘ಕರೆಂಟ್​’ ಶಾಕ್ ; ಪ್ರತಿ ಯೂನಿಟ್​ಗೆ ಎಷ್ಟು ಪೈಸೆ ಹೆಚ್ಚಳವಾಗಿದೆ ಗೊತ್ತಾ?

 ಎಲ್ಲಾ ವಿಭಾಗದಲ್ಲೂ ವಿದ್ಯುತ್ ದರ ಏರಿಕೆ

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಕಳೆದ ಬಾರಿ 1 ರೂಪಾಯಿ 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾಪ ಇಡಲಾಗಿತ್ತು, KERC ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ಕೇವಲ 30 ಪೈಸೆ ಮಾತ್ರ ಈ ಬಾರಿ ಪ್ರತಿ ಯೂನಿಟ್ ಗೆ ಒಂದು ರೂಪಾಯಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
Published by:Annappa Achari
First published: