Power cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ ನಿಮ್ಮ ಏರಿಯಾ ಹೆಸರನ್ನೊಮ್ಮೆ ಚೆಕ್ ಮಾಡಿ

ಫೆ 06 ಮತ್ತು ಫೆ 07 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈಗ ಕೊರೊನಾ (corona) ಮತ್ತು ಒಮಿಕ್ರಾನ್ (omicron) ಕೇಸ್ (cases) ಗಳು ಮನೆ ಮನೆಗಳಲ್ಲಿ ಎಂಬಂತಾಗಿದೆ. ಶೀತಗಾಳಿ, ಚಳಿ ಜನರನ್ನು ಬಾಧಿಸುತ್ತಿದೆ. ಇದರ ನಡುವೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಜನರನ್ನು ಹೈರಾಣಾಗಿಸಿವೆ. ಒಂದೆಡೆ ಜನರು ಮನೆಗಳಲ್ಲಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಈ ಮಧ್ಯೆ ಜನರಿಗೆ ಬೆಸ್ಕಾಂ (BESCOM) ಬಿಸಿ ಮುಟ್ಟಿಸುತ್ತಿದೆ. ಇಂದು ಮತ್ತು ನಾಳೆ ಬೆಂಗಳೂರಿನ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ (Power cut) ಉಂಟಾಗಲಿದೆ. ಫೆ. 06 ಮತ್ತು ಫೆ.07ರಂದ ಯಾವ ಯಾವ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ. ಇನ್ನು ಇಂದು ( ಫೆ.06) ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  

    ಫೆ. 6 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:  

    ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಜೆ.ಸಿ.ಇಂಡಸ್ಟ್ರಿಯಲ್ ಲೇಔಟ್ , ಬೆಳಗ್ಗೆ 10: 30ರಿಂದ ಸಂಜೆ 4 ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು ಮತ್ತು ಸುತ್ತಮುತ್ತಲಿನ ಪ್ರದೇಶ,

    ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಬೆಳಗ್ಗೆ 10ರಿಂದ ಸಂಜೆ 7ರವರೆಗೆ AMS ಲೇಔಟ್

    ಇದನ್ನೂ ಓದಿ: ಮುಗಿಯದ ಪವರ್ ಕಟ್ ಗೋಳು; ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

    ಪಶ್ಚಿಮ ವಲಯ: ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ಸುಬ್ಬಣ್ಣ ಗಾರ್ಡನ್, ವೈಯಾಲಿಕಾವಲ್ ಎಚ್‌ಬಿಸಿಎಸ್, ಹತ್ತಿರದ ವಿನಾಯಕ ಲೇಔಟ್, ಬಾಪೂಜಿ ಲೇಔಟ್ ಕೆನರಾ ಬ್ಯಾಂಕ್ ಕಾಲೋನಿ ಸ್ಕೈಲೈನ್ ಅಪಾರ್ಟ್‌ಮೆಂಟ್ ಮುಖ್ಯ ರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಮಾರುತಿ ನಗರ ಮುಖ್ಯರಸ್ತೆ ಸುತ್ತಮುತ್ತಲಿನ ಸೇಂಟ್ ಚಾರ್ಲ್ಸ್ ಶಾಲೆ.

    ಫೆ.07 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ ರಂಗಪ್ಪ, ಎ.ಟಿ.ಹಳ್ಳಿ, ಬಂಗಿಯಪ್ಪ ಗಾರ್ಡನ್ ಲಕ್ಷ್ಮಿ ರಸ್ತೆ, ಬಂಗಿಯಯ್ಯ ಗಾರ್ಡನ್ ಎ.ಟಿ.ಹಳ್ಳಿ ಲ್ಯಾಂಗ್‌ಫೋರ್ಡ್ ಉದ್ಯಾನ, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರ ಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ

    ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಸಿದ್ದಾಪುರ, 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 10ನೇ ಮುಖ್ಯ 1ನೇ ಬ್ಲಾಕ್, 3ನೇ ಬ್ಲಾಕ್, 18ನೇ ಕ್ರಾಸ್, 7ನೇ ಕ್ರಾಸ್, ಸೋಮೇಶ್ವರನಗರ, ಬಾಲಾಜಿ ಲೇಔಟ್, ತಲಘಟ್ಟಪುರ ಸೆಕ್ಷನ್ ಏರಿಯಾ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ಬಿಎಸ್‌ಆರ್ ಪರದಾಪುರ. RD, SJR ಕಾಲೇಜು ರಸ್ತೆ, ಮುನ್ನಿ ರೆಡ್ಡಿ ಲೇಔಟ್

    ಉತ್ತರ ವಲಯ: ಬೆಳಗ್ಗೆ 9:30ರಿಂದ ಸಂಜೆ 4 ರವರೆಗೆ 1ನೇ ಮುಖ್ಯ 7ನೇ ಕ್ರಾಸ್ ಪ್ರಕಾಶ್ ನಗರ, ಇ ಬ್ಲಾಕ್, ರಾಜಾಜಿನಗರ, ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಮತ್ತಿಕೆರೆ ಮುಖ್ಯ ರಸ್ತೆ, ಎಸ್‌ಬಿಎಂ ಕಾಲೋನಿ, ಮತ್ತಿಕೆರೆ ವಿಸ್ತರಣೆ, ರಾಮಯ್ಯ ಲೇಔಟ್, ಫುಲ್ ಫೀಡರ್, ತಿಂಡ್ಲು ಸರ್ಕಲ್ ರಸ್ತೆ

    ಇದನ್ನೂ ಓದಿ:  ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್, ನಿಮ್ಮ ಏರಿಯಾ ಹೆಸರು ಈ ಲಿಸ್ಟ್​ನಲ್ಲಿದ್ಯಾ ನೋಡಿ

    ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕಸ್ತೂರಿ ನಗರ, ದೂರವಾಣಿ ನಗರ, ಕೆಜಿ ಪುರ ಮುಖ್ಯ ರಸ್ತೆ, ಸ್ಮಶಾನ ಟಿಸಿ, ಮಣಿಪಾಲ ಟಿಸಿಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಇಸಿಸಿ ರಸ್ತೆ, ಇನ್ನರ್ ಸರ್ಕಲ್, ಕರುಮಾರಿಯಪ್ಪ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆ

    ಪಶ್ಚಿಮ ವಲಯ: ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ಸುಬ್ಬಣ್ಣ ಗಾರ್ಡನ್, ವೈಯಾಲಿಕಾವಲ್ ಎಚ್‌ಬಿಸಿಎಸ್, ಹತ್ತಿರದ ವಿನಾಯಕ ಲೇಔಟ್, ಬಾಪೂಜಿ ಲೇಔಟ್ ಕೆನರಾ ಬ್ಯಾಂಕ್ ಕಾಲೋನಿ ಸ್ಕೈಲೈನ್ ಅಪಾರ್ಟ್‌ಮೆಂಟ್ ಮುಖ್ಯ ರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಮಾರುತಿ ನಗರ, ರಾಜರಾವ್ ನಗರ, ರಾಜರಾವ್ ನಗರ, ಬೈನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    Published by:renukadariyannavar
    First published: