Hosur Road Accident- ಹೊಸೂರು ರಸ್ತೆಯಲ್ಲಿ ಲಾರಿಗೆ ಆಂಬುಲೆನ್ಸ್ ಡಿಕ್ಕಿ; ಮೂವರು ಸಾವು, ನಾಲ್ವರಿಗೆ ಗಂಭೀರ ಗಾಯ

Ambulance Accident- ಮುಂಬೈನ ಕಲ್ಯಾಣ್​ನಿಂದ ಚೆನ್ನೈಗೆ ಹೋಗುತ್ತಿದ್ದ ಆಂಬುಲೆನ್ಸ್ವೊಂದು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದು ಭೀಕರ ಅಪಘಾತವಾಗಿದೆ. ಈ ದುರಂತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ ನಾಲ್ವರ ಸ್ಥಿತಿ ಗಂಭೀರವಿದೆ.

ಆಂಬುಲೆನ್ಸ್ ಅಪಘಾತ

ಆಂಬುಲೆನ್ಸ್ ಅಪಘಾತ

  • Share this:
ಆನೇಕಲ್: ಕಳೆದೊಂದು ತಿಂಗಳಿನಿಂದ ಎಲ್ಲಿ ನೋಡಿದರೂ ಅಪಘಾತಗಳದ್ದೇ ಸುದ್ದಿ. ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಯಮರಾಜ ಬೇಟೆಗೆ ನಿಂತಿರುವಂತಿದೆ. ಮೊನ್ನೆಯಷ್ಟೇ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓರ್ ಮೇಲೆ ಆದ ಅಪಘಾತದಿಂದ ಜನ ಹೊರ ಬಂದಿಲ್ಲ, ಅಷ್ಟರಲ್ಲೇ ಇಂದು ಗುರುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಿಂದ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಪ್ಯಾರಾಲಿಸಿಸ್ ಚಿಕಿತ್ಸೆ ಅಂತ ಮಹಾರಾಷ್ಟ್ರದ ಕಲ್ಯಾಣ್​ನಿಂದ ಚೆನೈಗೆ ಹೊರಟಿದ್ದ ಅಂಬುಲೆನ್ಸ್  ಲಾರಿಗೆ ಗುದ್ದಿದೆ (Ambulance Accident at hosur highway Road kills Three). ನಿದ್ರೆ ಮಂಪರಿನಲ್ಲಿದ್ದ ಅಂಬ್ಯುಲೆನ್ಸ್ ಚಾಲಕ ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಡಿಕ್ಕಿಯ ರಭಸಕ್ಕೆ ಅಂಬ್ಯುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದರ ಪರಿಣಾಮ ಮೂರು ಜನ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಕೆ ಕೃಷ್ಣವಂಶಿ ಅವರು ತಿಳಿಸಿದ್ದಾರೆ.

ವೃದ್ಧರೊಬ್ಬರ ಚಿಕಿತ್ಸೆಗಾಗಿ ನಿನ್ನೆ ಮುಂಬೈನ ಕಲ್ಯಾಣ್​ನಿಂದ ಆಂಬುಲೆನ್ಸ್ ಹೊರಟಿತ್ತು. ಬೆಂಗಳೂರು ದಾಟಿ ಅತ್ತಿಬೆಲೆ ಸಮೀಪದ ನೆರಳೂರು ಬಳಿ ಈ ಆಂಬುಲೆನ್ಸ್ ತನ್ನ ಮುಂದೆ ಸಾಗುತ್ತಿದ್ದ ಲಾರಿಯೊಂದಕ್ಕೆ ಹಿಂಬದಿಯಿಂದ ಗುದ್ದಿದೆ. ಎಡ ಭಾಗದಲ್ಲಿ ನಿಧಾನವಾಗಿಯೇ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಅಂಬ್ಯುಲೆನ್ಸ್ ಗುದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುದ್ದಿದ‌ ರಭಸಕ್ಕೆ ಪ್ಯಾರಲಿಸೀಸ್ ರೋಗಿ 68ವರ್ಷದ ಅನ್ವರ್ ಖಾನ್, ಡಾ. ಜಾಧವ್ ಅಶೋಕ್, ಚಾಲಕ ತುಕಾರಾಮ್ ನಾಮದೇವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಹ್ಮದ್ ರಾಜ್ ಶೇಖ್, ಡಾ. ಜೀತೆಂದ್ರ ಬಿರಾದರ್ ಹಾಗು ಇನ್ನೊಬ್ಬ ಚಾಲಕ ಅಸ್ಕಾನ್ ಮೆನಾನ್ ಹಾಗೂ ಪ್ಯಾರಾಲಿಸಿಸ್ ರೋಗಿ ಅನ್ವರ್ ಖಾನ್ ಸಹೋದರ ಯುಸೂಫ್ ಖಾನ್ ಗಾಯಗೊಂಡಿದ್ದಾರೆ.

ಇದನ್ನೂ ಓದಿ: Mobile ICU- ಯಶಸ್ವಿಯಾದ ಸಂಚಾರಿ ಐಸಿಯು ಪ್ರಯೋಗ; ಆಂಬುಲೆನ್ಸ್​ಗಿಂತ ಇದು ಹೇಗೆ ಭಿನ್ನ?

ಇನ್ನು, ‌ಹೊಸೂರು ಹೈವೇ ಸಂಬಂಧಿಸಿದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಹೈವೇ ಅಥಾರಿಟಿಯವರಿಗೆ ಎಷ್ಟೇ ಹೇಳಿದ್ರು ಏನೂ ಪ್ರಯೋಜನ ಆಗಿಲ್ಲ ಅಂತ ಸ್ಥಳೀಯರಾದ ಚಂದ್ರಶೇಖರ್ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

ಒಟ್ನಲ್ಲಿ ಕೋವಿಡ್ ಅನ್ಲಾಕ್ ಆದ ಬಳಿಕ ಒಂದು ತಿಂಗಳ ಅಂತರದಲ್ಲಿ ಬಹಳಷ್ಟು ಅಪಘಾತಗಳು ನಡೆದಿವೆ ಮತ್ತು ನಡೆಯುತ್ತಲೇ ಇರವೆ. ಅತ್ಯಂತ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆಯೇ ಇದಕ್ಕೆ ಪ್ರಮುಖ ಕಾರಣ ಅನ್ನೋದು ಮೇಲ್ನೊಟಕ್ಕೆ ಕಂಡು ಬರುತ್ತಿರುವ ಸತ್ಯ. ಕೆಲಸದ ನಿಮಿತ್ತ ಹೊರ ಹೋದವರು ವಾಪಸ್ ಬರದೇ ಅಪಘಾತವಾಗಿ ಹೆಣವಾದರೆ ಕುಟುಂಬ ಸದಸ್ಯರ ಗತಿ ಏನಾಗುತ್ತೆ ಅನ್ನೋದನ್ನು ವಾಹನ ನಡೆಸುವಾಗ ಸವಾರರು ಮತ್ತೆ ಮತ್ತೆ ಯೋಚಿಸಬೇಕಿದೆ.

ಇದನ್ನೂ ಓದಿ: Dengue Fever: ಯಾದಗಿರಿಯಲ್ಲಿ‌ ಮಕ್ಕಳಿಗೆ ಡೆಂಗ್ಯೂ, ಜ್ವರದ ಲಕ್ಷಣ; ಆತಂಕದಲ್ಲಿ ಪೋಷಕರು

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)

ವರದಿ: ಆದೂರು ಚಂದ್ರು
Published by:Vijayasarthy SN
First published: