Bengaluru Karaga: ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರಿನಲ್ಲಿ ಈ ಬಾರಿ ಅದ್ದೂರಿ ಕರಗ ಉತ್ಸವ ನಡೆಯಲಿದೆ. ಏ.8ರಿಂದ 18 ರ ವರೆಗೆ ವಿಜೃಂಭಣೆಯಾಗಿ ಉತ್ಸವ ಆಚರಿಸಲಾಗುತ್ತೆ

ಬೆಂಗಳೂರು ಕರಗ

ಬೆಂಗಳೂರು ಕರಗ

  • Share this:
ಬೆಂಗಳೂರು (ಮಾ 9): ಕೊರೊನಾ (Corona) ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ನಿರ್ಬಂಧ ವಿಧಿಸಲಾಗಿದ್ದ ವಿಶ್ವ ವಿಖ್ಯಾತ ಬೆಂಗಳೂರು ಕರಗ (Benagaluru karaga) ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಮುಂದಿನ ತಿಂಗಳು ಏಪ್ರಿಲ್​ 8 ರಂದು ಕರಗ ಉತ್ಸವ (Festival) ನಡೆಯಲಿದ್ದು, ಕರಗ ಸಮಿತಿಯವರು ಈಗಾಗಲೆ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ (Kempegowda) ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವ ಅರಂಭದ ದಿನದಿಂದಲೂ ಇಲ್ಲಿಯವರೆಗೆ ದೇಶ ವಿದೇಶಗಳ ಸಾವಿರಾರು ಮಂದಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಏ.8 ರಿಂದ 18 ರವರೆಗೆ ವಿಜೃಂಭಣೆಯ ಕರಗ 

ಕೊರೊನಾದಿಂದ ಕಳೆಗುಂದಿದ್ದ ಕರಗ ಈ ಬಾರಿ ಮತ್ತೆ ತನ್ನ ಗತ ವೈಭವಕ್ಕೆ ಮರಳಲಿದೆ. ಮೂರನೇ ಅಲೆ ಕಡಿಮೆಯಾದ ಹಿನ್ನಲೆ ಅದ್ದೂರಿ ಕರಗ ಮಹೋತ್ಸವಕ್ಕೆ ಉತ್ಸವ ಸಮಿತಿ ತೀರ್ಮಾನಿಸಿದೆ. ದ್ರೌಪದಿ ದೇವಿಯ ಆರಾಧನೆಗೆ ಭರದ ಸಿದ್ಧತೆಯೂ ಆರಂಭವಾಗಿದೆ. ಕೊರೊನಾ ಕಾಲಿಟ್ಟ ಮೇಲೆ ಎಲ್ಲವನ್ನೂ ತಲೆಕೆಳಗಾಗಿಸಿದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಅದೆಷ್ಟೋ ಸಂಪ್ರದಾಯಕ್ಕೂ  ಕೊರೊನಾದಿಂದ ನಿಂತು ಹೋಗಿದ್ವು. ಇದ್ರಲ್ಲಿ ಬೆಂಗಳೂರಿನ ವಿಶ್ವ ಪ್ರಸಿದ್ಧ ಕರಗ ಮಹೋತ್ಸವವೂ ಒಂದು.

ಕೊರೊನಾ ಹಿನ್ನೆಲೆ 2 ವರ್ಷ ಉತ್ಸವಕ್ಕೆ ಬ್ರೇಕ್

ಪ್ರವಾಹ, ಬರ, ಯುದ್ಧ, ಏನೇ ಆದ್ರೂ ನಿಲ್ಲದೇ ನಡೆದುಕೊಂಡು ಬಂದಿದ್ದ ಕರಗ ಶಕ್ತ್ಯೋತ್ಸವ ಕಳೆದ 2 ವರ್ಷದಿಂದ ನಿಂತು ಹೋಗಿತ್ತು. ಕೊರೊನಾ ಮಹಾಮಾರಿ ಆರ್ಭಟಕ್ಕೆ ಹೆದರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಪಾಲಿಕೆ ಬ್ರೇಕ್ ಹಾಕಿತ್ತು. ಆದ್ರೆ ಈ ಬಾರಿ ಕೊರೊನಾ ಇಳಿಕೆ ಹಾದಿ ಹಿಡಿದಿದ್ದು, ಮತ್ತೆ ಕರಗ ತನ್ನ ಹಿಂದಿನ ಗತವೈಭವಕ್ಕೆ ಮರಳುತ್ತಿದೆ.

ಕರಗ ಶಕ್ತ್ಯೋತ್ಸವಕ್ಕೆ ಭರ್ಜರಿ ತಯಾರಿ

ನಗರದ ಧರ್ಮರಾಯ ಸ್ವಾಮಿ ದೇವಾಲಯ ಆವರಣವೂ ಕರಗ ಶಕ್ತ್ಯೋತ್ಸವಕ್ಕೆ ಸಿದ್ಧಗೊಳ್ತಿದೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ರಮೇಶ್ ತಿಳಿಸಿದರು. ಏಪ್ರಿಲ್ 8 ರಂದು ಕರಗ ಶಕ್ತ್ಯೋತ್ಸವ ನಗರದಲ್ಲಿ ಆರಂಭಗೊಳ್ತಿದೆ. ಏಪ್ರಿಲ್ 14ರಂದು ಹಸಿ ಕರಗ ನಡೆಯಲಿದೆ. ಹಾಗೇ ಚೈತ್ರ ಮಾಸದ ಪೂರ್ಣಿಮೆಯಾದ ಏಪ್ರಿಲ್ 16 ರಂದು ದ್ರೌಪದಿ ದೇವಿಯ ಹೂವಿನ ಕಗರ ಶಕ್ತ್ಯೋತ್ಸವ ಜರುಗಲಿದೆ. ಸದ್ಯ ಕೊರೊನಾ ಕಡಿಮೆಯಾಗಿರೋ ಹಿನ್ನಲೆ ಸರ್ಕಾರ ಜಾತ್ರೆ, ಮಹೋತ್ಸವಕ್ಕೆ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ; KAR-TET Exam: ಕರ್ನಾಟಕದಲ್ಲಿ ಇನ್ಮುಂದೆ ವರ್ಷದಲ್ಲಿ 2 ಬಾರಿ ನಡೆಯಲಿದೆ K-TET ಪರೀಕ್ಷೆ

ಈ ಬಾರಿ ಕೊರೊನಾ ಸೋಂಕು ಕ್ಷೀಣಿಸಿರುವುದರಿಂದ ಏಪ್ರಿಲ್​ನಲ್ಲಿ  ನಡೆಯಲಿರುವ ಕರಗದ ಅದ್ಧೂರಿ ಆಚರಣೆಗೆ ಅನುಮತಿ ನೀಡುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಕರಗ ಸಮಿತಿ ಅಧ್ಯಕ್ಷ ಪಿ.ಆರ್.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿಕೊಂಡಿದ್ದರು. ರಮೇಶ್ ಅವರ ಮನವಿಗೆ ಆಯುಕ್ತರು ಮೌಖಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಕರಗ ಉತ್ಸವದ ಸಕಲ ಸಿದ್ಧತೆ ಆರಂಭಿಸಲಾಗಿದೆ.

ಈ ಬಾರಿ  ವಿಜೃಂಭಣೆಯಿಂದ ಕರಗ ಶಕ್ತ್ಯೋತ್ಸವ

ವಿಜೃಂಭಣೆಯಿಂದ ಕರಗ ಶಕ್ತ್ಯೋತ್ಸವ ನಡೆಸಲು ಕರಗ ಉತ್ಸವ ಸಮಿತಿ ತೀರ್ಮಾನಿಸಿದೆ. ಇನ್ನು ಕರಗದ ಆಹ್ವಾನ ಪತ್ರಿಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ಅಧಿಕೃತ ಆಹ್ವಾನ ಪತ್ರಿಕೆಯಲ್ಲ. ಯುಗಾದಿ ಹಬ್ಬದಂದು ಅಧಿಕೃತ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುತ್ತದೆ ಅಂತ ಕರಗ ಸಮಿತಿ ತಿಳಿಸಿದೆ.

ಇದನ್ನೂ ಓದಿ: Guru Raghavendra: ಮಂತ್ರಾಲಯದಲ್ಲಿ ರಾಯರ 427ನೇ ವರ್ಧಂತಿ ಉತ್ಸವದ ಸಂಭ್ರಮ; 150 ವಿದ್ವಾಂಸರಿಂದ ಗಾನಸುಧೆ

ಈ ಬಗ್ಗೆ ಸ್ಪಷ್ಟನೆಯನ್ನು ಕರಗ ಉತ್ಸವ ಸಮಿತಿ ಸದಸ್ಯ ಸತೀಶ್ ನೀಡಿದರು. ಇನ್ನು 7 ಬಾರಿ ಕರಗ ಹೊತ್ತ ಖ್ಯಾತಿ ಹೊಂದಿರೋ ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.  ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಕರಗ ಶಕ್ತ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ.  ಹೀಗಾಗಿ ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆ ಮಾಡಿದೆ. ನಗರದ ಧರ್ಮರಾಯ ಸ್ವಾಮಿ ದೇವಾಲಯ ಆವರಣವೂ ಕರಗ ಶಕ್ತ್ಯೋತ್ಸವಕ್ಕೆ ಸಿದ್ಧಗೊಳ್ತಿದೆ.
Published by:Pavana HS
First published: