• Home
  • »
  • News
  • »
  • state
  • »
  • Corona Mask: ನೀವು ಈ ಮಾಸ್ಕ್ ಬಳಸಿದ್ರೆ ಪ್ರಕೃತಿ ನಿಮಗೆ ಥ್ಯಾಂಕ್ಸ್ ಹೇಳುತ್ತೆ, ಬಿಸಾಕಿದ್ರೆ ಮನೆಯಲ್ಲಿ ಹಸಿರು ನಳನಳಿಸುತ್ತೆ !

Corona Mask: ನೀವು ಈ ಮಾಸ್ಕ್ ಬಳಸಿದ್ರೆ ಪ್ರಕೃತಿ ನಿಮಗೆ ಥ್ಯಾಂಕ್ಸ್ ಹೇಳುತ್ತೆ, ಬಿಸಾಕಿದ್ರೆ ಮನೆಯಲ್ಲಿ ಹಸಿರು ನಳನಳಿಸುತ್ತೆ !

ಸೀಡ್ ಮಾಸ್ಕ್

ಸೀಡ್ ಮಾಸ್ಕ್

ಈ ಮಾಸ್ಕ್ಗಳು ಒಂದಕ್ಕಿಂತ ಹೆಚ್ಚು ಬಗೆಯ ಮಾಲಿನ್ಯಕ್ಕೆ ಪರಿಹಾರ ಒದಗಿಸುತ್ತಿವೆ. ಮೊದಲು ಸರ್ಜಿಕಲ್ ಮಾಸ್ಕ್ನಲ್ಲಿರುವ ಪ್ಲಾಸ್ಟಿಕ್ನ್ನು ತಡೆಯಲು ಸಾಹಯವಾಗುತ್ತದೆ. ಜೊತೆಜೊತೆಗೆ ಕಸದ ರಾಶಿ ಸೇರೋ ಗಾರ್ಮೆಂಟ್ಸ್ ಬಟ್ಟೆ ತುಂಡುಗಳನ್ನೂ ಇದು ಮರುಬಳಕೆ ಮಾಡುವ ಮೂಲಕ ಆ ಕಸವನ್ನೂ ತಡೆಯುತ್ತದೆ. ಜೊತೆಗೆ ಉತ್ತಮ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

Startup Stories: ಈಗೊಂದು ವರ್ಷದಿಂದೀಚೆಗೆ ಮಾಸ್ಕ್ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೊರೊನಾ ಕಾಟ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ. ಹಾಗಾಗಿ ಇನ್ನೂ ಒಂದೆರಡು ವರ್ಷಗಳಾದ್ರೂ ಮಾಸ್ಕ್​ಗಳು ನಮ್ಮೊಂದಿಗೇ ಇರಲಿವೆ. ಭೂಮಿಯ ಮೇಲಿನ ಕಸದ ರಾಶಿಗೆ ಮಾಸ್ಕ್​ಗಳು ಸೈಲೆಂಟಾಗಿ ಸೇರಿಕೊಳ್ತಿವೆ. ಅದ್ರಲ್ಲೂ ಹೆಚ್ಚಾಗಿ ಬಳಸಿ ಬಿಸಾಡುವ ಸರ್ಜಿಕಲ್ ಮಾಸ್ಕ್​ಗಳಂತೂ ನೀರಿನ ಮೂಲಗಳ ಬಳಿ, ಕಸದ ರಾಶಿಯ ತುಂಬಾ ಎಲ್ಲೆಡೆ ಅವುಗಳದ್ದೇ ರಾಜ್ಯಭಾರ ಎನ್ನುವಂತಾಗಿದೆ. ಆದ್ರೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ ಹಾಗೆ ಮಾಸ್ಕ್ ಬಳಕೆ ನಿಷೇಧಿಸಲು ಸಾಧ್ಯವಿಲ್ಲ, ಅದು ಅತ್ಯಗತ್ಯವಾದದ್ದು. ಹಾಗಾಗಿ ಪರಿಸರಕ್ಕೆ ಹಾನಿ ಮಾಡದ, ನಮಗೇ ಒಂದಷ್ಟು ಹೆಚ್ಚು ಪ್ರಯೋಜನಕಾರಿಯಾದ ಮಾಸ್ಕ್ ಇದ್ದರೆ ಎಷ್ಟು ಒಳ್ಳೆಯದಲ್ವಾ? ಅಂಥದ್ದೊಂದು ವಿಶಿಷ್ಟ ಮಾಸ್ಕ್ ಇದೆ, ಬೆಂಗಳೂರಿನಲ್ಲೇ ತಯಾರಾದ ಆರೋಗ್ಯ ವೃದ್ಧಿಸುವ ಮಾಸ್ಕ್ ಒಂದು ರೆಡಿಯಾಗಿದೆ.


ಈಗ ಕೆಲ ವರ್ಷಗಳಿಂದ ಸೀಡ್ ಪೇಪರ್ ಅಂದ್ರೆ ಉಪಯುಕ್ತ ಗಿಡಗಳ ಬೀಜಗಳನ್ನು ಹೊಂದಿರುವ ಪೇಪರ್​ಗಳನ್ನು ತಯಾರಿಸಿ ಸೀಡ್ ಪೇಪರ್ ಇಂಡಿಯಾ ಎನ್ನುವ ಸ್ಟಾರ್ಟ್ ಅಪ್ ಮೂಲಕ ಮಾರುತ್ತಿದ್ದಾರೆ ಬೆಂಗಳೂರಿನ ರೋಶನ್ ರೇ. ಈ ಪೇಪರ್​ಗಳನ್ನು ಬಳಸಿ ಬಿಸಾಡಿದ ನಂತರ ಅವುಗಳಲ್ಲಿ ಅಡಕವಾಗಿರುವ ಬೀಜಗಳು ನೀರು ಬಿದ್ದ ನಂತರ ಮೊಳಕೆಯೊಡೆದು ಸುಂದರ ಗಿಡಗಳಾಗಿ ಬದಲಾಗುತ್ತವೆ. ಅನೇಕ ಪರಿಸರ ಪ್ರಿಯರ ಮನಗೆದ್ದಿರುವ ಈ ಪೇಪರ್​ನ ಮುಂದುವರೆದ ಭಾಗವೇ ‘ಸೀಡ್ ಮಾಸ್ಕ್.’ ಈ ವಿಶಿಷ್ಟ ಮಾಸ್ಕ್ ತಯಾರಿಸೋಕೆ ರೋಶನ್ ಗಾರ್ಮೆಂಟ್ಸ್ ಗಳಲ್ಲಿ ಬೇಡವೆಂದು ಬಿಸಾಡಿದ ಚಿಕ್ಕ ಚಿಕ್ಕ ಬಟ್ಟೆ ತುಂಡುಗಳನ್ನೇ ಪ್ರಮುಖ ಕಚ್ಚಾವಸ್ತುವಾಗಿ ಬಳಸುತ್ತಾರೆ.


This Made in Bengaluru mask not just protects you from covid, but also helps increase green cover
ತಾನು ತಯಾರಿಸಿದ ಸೀಡ್ ಮಾಸ್ಕ್ ಜೊತೆ ರೋಶನ್ ರೇ


ಕೇವಲ ಪೇಪರ್ ಬಳಸಿದ್ರೆ ಅದು ಬೇಗ ಒದ್ದೆಯಾಗುತ್ತೆ ಮತ್ತು ಬಳಸೋಕೂ ಅಷ್ಟೊಂದು ಸುಲಭವಲ್ಲ. ಹಾಗಾಗಿ ಬೇಡವಾದ ಬಟ್ಟೆತುಂಡುಗಳನ್ನು ಹೆಚ್ಚಾಗಿ ಬಳಸಿ ಅದರಲ್ಲೂ ಉಪಯುಕ್ತ ಬೀಜಗಳನ್ನು ಸೇರಿಸಿ ತಮ್ಮ ವಿಶಿಷ್ಟ ಮಾಸ್ಕ್​ಗಳನ್ನು ತಯಾರಿಸಿದ್ದಾರೆ ರೋಶನ್. ಕೇವಲ ಮಾಸ್ಕ್ ಮಾತ್ರವಲ್ಲ, ಅದನ್ನು ಧರಿಸಲು ಬೇಕಾದ ಎಲಾಸ್ಟಿಕ್ ಬದಲು ಖಾದಿ ಮತ್ತು ಸೆಣಬಿನ ದಾರಗಳನ್ನು ಬಳಸಲಾಗಿದೆ. ಹಾಗಾಗಿ ಈ ಮಾಸ್ಕ್​ಗಳು ಶೇಕಡಾ 100ರಷ್ಟು ಪರಿಸರ ಸ್ನೇಹಿಯಾಗಿವೆ.


ಅಂದ್ಹಾಗೆ ಈ ಮಾಸ್ಕ್​ಗಳಲ್ಲಿ ಅಡಕವಾಗಿರುವ ಬೀಜಗಳು ತುಳಸಿ, ಚೆಂಡುಹೂ ಮುಂತಾದವುಗಳು. ಮಾಸ್ಕ್ ಬಳಸುವಷ್ಟು ಹೊತ್ತೂ ಈ ಬೀಜಗಳ ಪದರದ ಮೂಲಕವೇ ಉಸಿರಾಡೋದ್ರಿಂದ ಅವುಗಳ ಉತ್ತಮ ಅಂಶಗಳೂ ದೇಹವನ್ನು ಸೇರುತ್ತವೆ. ಒಂದು ಮಾಸ್ಕ್​ನ್ನು ಸುಮಾರು ಒಂದು ವಾರದಿಂದ 10 ದಿನಗಳವರಗೆ ಬಳಸಬಹುದಾಗಿದೆ. ನಂತರ ಮಾಸ್ಕ್ ಬಿಸಾಡಿದ ಮೇಲೆ ಅವು ಗಿಡಗಳಾಗಿ ಬೆಳೆಯುತ್ತವೆ. ಮನೆಯ ಅಂಗಳದಲ್ಲೇ ಅವುಗಳನ್ನು ನೆಡಲೂಬಹುದು ಎನ್ನುತ್ತಾರೆ ರೋಶನ್ ರೇ.


ಇದನ್ನೂ ಓದಿhttps://kannada.news18.com/news/state/bengaluru-urban-volunteers-in-bengaluru-help-to-cremate-covid-dead-ones-where-even-the-families-cannot-step-up-sktv-559235.html


ಈ ಮಾಸ್ಕ್​​​ಗಳು ಒಂದಕ್ಕಿಂತ ಹೆಚ್ಚು ಬಗೆಯ ಮಾಲಿನ್ಯಕ್ಕೆ ಪರಿಹಾರ ಒದಗಿಸುತ್ತಿವೆ. ಮೊದಲು ಸರ್ಜಿಕಲ್ ಮಾಸ್ಕ್​ನಲ್ಲಿರುವ ಪ್ಲಾಸ್ಟಿಕ್​ನ್ನು ತಡೆಯಲು ಸಾಹಯವಾಗುತ್ತದೆ. ಜೊತೆಜೊತೆಗೆ ಕಸದ ರಾಶಿ ಸೇರೋ ಗಾರ್ಮೆಂಟ್ಸ್ ಬಟ್ಟೆ ತುಂಡುಗಳನ್ನೂ ಇದು ಮರುಬಳಕೆ ಮಾಡುವ ಮೂಲಕ ಆ ಕಸವನ್ನೂ ತಡೆಯುತ್ತದೆ. ಜೊತೆಗೆ ಉತ್ತಮ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಸದ್ಯ ಆನ್​ಲೈನ್ ಮೂಲಕ ಮತ್ತು ಮಾರುಕಟ್ಟೆಗಳಲ್ಲಿ ಈ ಮಾಸ್ಕ್​​ಗಳು ದೊರೆಯುತ್ತಿದ್ದು 140 ರೂಪಾಯಿಗೆ ಒಂದು ಮಾಸ್ಕ್​​ನಂತೆ ಬೆಲೆ ಇದೆ.


ಬಳಸಿ ಬಿಸಾಡಿದ ಕೆಲವೇ ವಾರಗಳಲ್ಲಿ ಸಂಪೂರ್ಣವಾಗಿ ಕರಗಿ ಹೋಗುವ ಈ ಮಾಸ್ಕ್​ಗಳು ಪರಿಸರಕ್ಕೆ ಉಪಕಾರವನ್ನೇ ಮಾಡುತ್ತವೆ. ಒಂದು ಅಂದಾಜಿನ ಪ್ರಕಾರ ಭಾರತ ದೇಶವೊಂದೇ ದಿನಕ್ಕೆ 3 ಮಿಲಿಯನ್ ಮಾಸ್ಕ್​ಗಳನ್ನು ಕಸದ ರಾಶಿಗೆ ಸೇರಿಸುತ್ತಿದೆ. ಸೀಡ್​ ಮಾಸ್ಕ್​​ನಂಥಾ ಪರ್ಯಾಯ ವಸ್ತುಗಳು ಈ ಕಸದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಬಹುದೊಡ್ಡ ಪಾತ್ರ ವಹಿಸಬಲ್ಲವು.


ಈಗಾಗಲೇ ಕೆನಡಾ, ಮೆಕ್ಸಿಕೋ, ಯುಎಸ್​ಎ ಮತ್ತು ನೆದರ್​ಲ್ಯಾಂಡ್ಸ್ ನಲ್ಲಿ ಈ ಪರಿಸರ ಸ್ನೇಹಿ ಮಾಸ್ಕ್​ಗೆ ಭಾರೀ ಬೇಡಿಕೆ ಇದೆ. ಕೆಲವು ದೇಶಗಳಲ್ಲಿ ಅಲ್ಲಿನ ಹವಾಮಾನಕ್ಕೆ ಉಪಯುಕ್ತವಾಗುವ ಔಷಧೀಯ ಗಿಡಗಳ ಬೀಜಗಳನ್ನು ಸೇರಿಸಿ ಮಾಸ್ಕ್ ತಯಾರಿಸಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ, ಸಂತದಿಂದ ತಮ್ಮವರಿಗೆ ಉಡುಗೊರೆಯಾಗಿ ಇವುಗಳನ್ನು ನೀಡುತ್ತಿದ್ದಾರೆ ಕೂಡಾ.

Published by:Soumya KN
First published: