SBI ATM Theft: ಭಾರತೀಯ ಸ್ಟೇಟ್​ ಬ್ಯಾಂಕ್​ ಎಟಿಎಂ ಮಷೀನನ್ನೇ ಕದ್ದೊಯ್ದ ಕಳ್ಳರು

ಕದೀಮರು ಗ್ಯಾಸ್​ ಕಟರ್ ಬಳಸಿ ATM ತೆರೆದು ಹಣದೋಚಿಕೊಂಡು ಪರಾರಿಯಾಗಿದ್ದಾರೆ. ಆದ್ರೆ ಇನ್ನೂ ಬ್ಯಾಂಕ್​ ಸಿಬ್ಬಂದಿ ನಿರ್ದಿಷ್ಟವಾಗಿ ಎಷ್ಟು ಹಣ ಕಳುವಾಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ

ATM ಮಷೀನ್ ಕಳ್ಳತನ

ATM ಮಷೀನ್ ಕಳ್ಳತನ

  • Share this:
ಬೆಂಗಳೂರು (ಏ.16): ಎಟಿಎಂನಲ್ಲಿ (ATM) ಹಣ ಕದಿಯುತ್ತಿದ್ದ ಕದೀಮರು (Thieves) ಇದೀಗ ಎಟಿಎಂ ಮಷೀನ್​ನನ್ನೇ ಕದ್ದು ಪರಾರಿಯಾಗಿದ್ದಾರೆ. ಮಾಗಡಿ ರಸ್ತೆಯ (Magadi Road) ಚಿಕ್ಕಗೊಲ್ಲರಹಟ್ಟಿಯಲ್ಲಿ ಭಾರತೀಯ ಸ್ಟೇಟ್​ ಬ್ಯಾಂಕ್​ನ ಎಟಿಎಂ ಮಷೀನ್ (ATM Mission)​ ಕಳ್ಳತನವಾಗಿದೆ. ಹಣವಿದ್ದ ಎಟಿಎಂ ಮಷೀನ್​ ಕದ್ದೊಯ್ದಿದ್ದಾರೆ. ಖರ್ತಾನಕ್​ ಕಳ್ಳರು ಎಟಿಎಂ ಕದ್ದ ಯಾವುದೇ ಸುಳಿವು ಸಿಗಬಾರದೆಂದು ಸಿಸಿಟಿವಿಯ ಡಿವಿಆರ್​ನನ್ನು(CCTV DVR)  ಸಹ ಕದ್ದುಕೊಂಡು ಹೋಗಿದ್ದಾರೆ. ಬಳಿಕ 2 ಕಿಲೋ ಮೀಟರ್ ದೂರದಲ್ಲಿ ಎಟಿಎಂ ಸಿಕ್ಕಿದೆ. ಕದೀಮರು ಗ್ಯಾಸ್​ ಕಟರ್ ಬಳಸಿ ATM ತೆರೆದು ಹಣದೋಚಿಕೊಂಡು ಪರಾರಿಯಾಗಿದ್ದಾರೆ. ಆದ್ರೆ ಇನ್ನೂ ಬ್ಯಾಂಕ್​ ಸಿಬ್ಬಂದಿ ನಿರ್ದಿಷ್ಟವಾಗಿ ಎಷ್ಟು ಹಣ ಕಳುವಾಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ. ಈ ಸಂಬಂಧ ಮಾದನಾಯಕನ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ-ತಿರುಪತಿ ರೈಲು ಸೇವೆ ಆರಂಭ

ಶಿವಮೊಗ್ಗ, (ಏ.16): ನೈರುತ್ಯ ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ತಿರುಪತಿ ಸಮೀಪದ ರೇನಿಗುಂಟ ಮಾರ್ಗವಾಗಿ ಚೆನ್ನೈ ತಲುಪುವ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಧಾರ್ಮಿಕ ಕ್ಷೇತ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದೆ. ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಿನ ಉದ್ಘಾಟನಾ ಕಾರ್ಯಕ್ರಮವನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಏ.17ರ ಭಾನುವಾರ ಸಂಜೆ 6 ಗಂಟೆಗೆ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸಲಿದ್ದಾರೆ.

ಶಿವಮೊಗ್ಗದಿಂದ ಚೆನ್ನೈ ಮತ್ತು ತಿರುಪತಿಗೆ ನೇರ ರೈಲು ಸಂಪರ್ಕದ ಬೇಡಿಕೆಯನ್ನು ನವೆಂಬರ್ 2019 ರಲ್ಲಿ ಪೂರೈಸಿದ್ದು, ಕೋವಿಡ್ ಕಾರಣದಿಂದಾಗಿ ಈ ರೈಲುಗಳ ಸೇವೆಗಳನ್ನು ಕೊನೆಗೊಳಿಸಲಾಗಿತ್ತು. ಆದರೆ ರೈಲು ಸಂಪರ್ಕ ಸೇವೆಯ ಹೆಚ್ಚಿನ ಬೇಡಿಕೆ ಇದ್ದ ಕಾರಣ ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಧಾರ್ಮಿಕ ತಾಣವಾದ ತಿರುಪತಿ (ರೇನಿಗುಂಟ)ಗಳಿಗೆ ರೈಲನ್ನು ಮರು ಪ್ರಾರಂಭಿಸಲು ಸಂಸದ ಬಿ.ವೈ. ರಾಘವೇಂದ್ರ ಅವರ ಬೇಡಿಕೆಯಿಂದ ಈಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಹೊಸ ರೈಲನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯದ ಒಪ್ಪಿಗೆಯನ್ನು ಪಡೆಯಲು ಯಶಸ್ವಿಯಾಗಿದೆ.

ಇದನ್ನೂ ಓದಿ: Vijayanagar: ಕನ್ನಡ ವಿವಿಯಲ್ಲಿ ಎಂ.ಪಿ ಪ್ರಕಾಶ್​ ಹೆಸರಲ್ಲಿ ಸಂಶೋಧನಾ ಕೇಂದ್ರ ; ಸಿಎಂ ಬೊಮ್ಮಾಯಿ ಘೋಷಣೆ

ರೈಲು ಗಾಡಿ ಸಂ. 06223/06224 ಎರಡು ಎಸ್.ಎಲ್.ಆರ್.ಡಿ., ನಾಲ್ಕು ಸಾಮಾನ್ಯ ಕೋಚ್‍ಗಳು, ಆರು ಸ್ಲೀಪರ್ ಕೋಚ್‍ಗಳು, ಒಂದು ಎರಡನೆಯ ದರ್ಜೆ ಹವಾನಿಯಂತ್ರಿತ ಮತ್ತು ಒಂದು ಮೂರನೆಯ ದರ್ಜೆ ಹವಾನಿಯಂತ್ರಿತ ಕೋಚ್‍ಗಳನ್ನು ಒಳಗೊಂಡಿರುವ ಸಂಯೋಜನೆಯ 14 ಎಲ್‍ಎಚ್‌ಬಿ ಕೋಚ್‍ಗಳನ್ನು ಹೊಂದಿರುತ್ತದೆ.

ವಿಶೇಷ ಎಕ್ಸ್​ ಪ್ರೆಸ್ ರೈಲುಗಾಡಿ ಸಂಖ್ಯೆ. 06223 17.04.2022 ರಿಂದ 28.06.2022 ರವರೆಗೆ (22 ಸಂಚಾರಗಳು) ವಾರದಲ್ಲಿ ಎರಡು ದಿನ ಪ್ರತಿ ಭಾನುವಾರ ಮತ್ತು ಮಂಗಳವಾರ ಶಿವಮೊಗ್ಗದಿಂದ ಹೊರಟು ರೇನಿಗುಂಟಾ (ತಿರುಪತಿ) ಮಾರ್ಗವಾಗಿ ಪುರಚಿ ತಲೈವರ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣ ತಲುಪಲಿವೆ.

ವಾರದಲ್ಲಿ ಎರಡು ದಿನ ಸಂಚಾರ

ವಿಶೇಷ ಎಕ್ಸ್‍ಪ್ರೆಸ್ ರೈಲು ಗಾಡಿ ಸಂಖ್ಯೆ. 06224 18.04.2022 ರಿಂದ 29.06.2022 ರವರೆಗೆ (22 ಸಂಚಾರಗಳು) ಪ್ರತಿ ಸೋಮವಾರ ಮತ್ತು ಬುಧವಾರ ಈ ಎರಡು ದಿನ ಪುರಚಿ ತಲೈವರ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟು ರೇನಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ.

ಪ್ರಾಯೋಗಿಕ ಅವಧಿಯ ನಂತರ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಖಾಯಂಗೊಳಿಸಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ನೈರುತ್ಯ ರೈಲ್ವೇ, ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ ಅಂತ್ಯ; K.S ಈಶ್ವರಪ್ಪ ಸಾಮಾನ್ಯ ವ್ಯಕ್ತಿಯಲ್ಲ, ಸಾಕ್ಷಿ ನಾಶ ಮಾಡಬಲ್ಲರು- ಸಿದ್ದರಾಮಯ್ಯ

ನಿಲುಗಡೆ ಸ್ಥಳಗಳು

ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದ್ದು ನಂತರ ಚೆನ್ನೈ ಸೆಂಟ್ರಲ್ ತಲುಪಲಿದೆ.
Published by:Pavana HS
First published: