Bike Battery Thieves: ಬೈಕ್ ಮಾಲೀಕರೇ ವಾಹನ ನಿಲ್ಲಿಸುವ ಎಚ್ಚರ: ಸಿಲಿಕಾನ್ ಸಿಟಿಯಲ್ಲಿದ್ದಾರೆ ಬೈಕ್ ಬ್ಯಾಟರಿ ಕಳ್ಳರು!

ಏರಿಯಾಗೆ ಬಂದ ಕಳ್ಳರ ಬಗ್ಗೆ ಏರಿಯಾದಲ್ಲಿದ್ದ ನಾಯಿಗಳು ಎಚ್ವರಿಕೆ ನೀಡಿದ್ವು. ರಾತ್ರಿ ನಿರಂತರ ಬೊಗಳೋಕೆ ಪ್ರಾರಂಭ ಮಾಡಿದ್ದವು. ಆದರೆ ಜನ ಅಷ್ಟೇನು ತಲೆ ಕಡೆಸಿಕೊಂಡಿಲ್ಲ. ಆದ್ರೆ ಬೆಳಗ್ಗೆ ಬಂದು ನೋಡಿದಾಗ ಸ್ಕ್ರೂ ಡ್ರೈವರ್, ಕಟಿಂಗ್ ಪ್ಲೇಯರ್ ನಿಂದ ಬ್ಯಾಟರಿ ಕ್ಯಾಪ್ ಮುರಿದು ಬ್ಯಾಟರಿ ಕದ್ದು ಹೋಗಿರೋದು ಗೊತ್ತಾಗಿದೆ‌.

ಬುಲೆಟ್ ಬೈಕ್ ಬ್ಯಾಟರಿ ಕಳ್ಳತನ ಮಾಡಿರುವ ಕಳ್ಳರು.

ಬುಲೆಟ್ ಬೈಕ್ ಬ್ಯಾಟರಿ ಕಳ್ಳತನ ಮಾಡಿರುವ ಕಳ್ಳರು.

  • Share this:
Bengaluru Crime News ಬೆಂಗಳೂರು: ಪೊಲೀಸರು ಎಷ್ಟೇ ಎಚ್ಚರವಾಗಿದ್ದರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಕಳ್ಳರು ಮಾತ್ರ ತಮ್ಮ ಕೈ ಚಳಕ ತೋರಿಸುವುದನ್ನು ಮಾತ್ರ ಬಿಡುವುದಿಲ್ಲ. ಒಂದೊಂದು ಗ್ಯಾಂಗ್​ಗಳು ಒಂದೊಂದು ರೀತಿಯಲ್ಲಿ ಚಿತ್ರ, ವಿಚಿತ್ರವಾಗಿ ಕಳ್ಳತನ, ದರೋಡೆ ಮಾಡುವ ಮೂಲಕ ಜನರನ್ನು ಹಾಗೂ ಪೊಲೀಸರ ನಿದ್ದೆ ಗೆಡಿಸಿವೆ. ಇದೀಗ ನಗರದಲ್ಲಿ ಅಂತಹದ್ದೇ ಒಂದು ಗ್ಯಾಂಗ್ ಹುಟ್ಟಿಕೊಂಡಿದ್ದು, ಅದು ರಾತ್ರಿ ವೇಳೆ ಮನೆ ಹೊರಗೆ ನಿಲ್ಲಿಸಿರುವ ದುಬಾರಿ ಬೆಲೆಯ ಬೈಕುಗಳ ಬ್ಯಾಟರಿಗಳನ್ನು ಕಳ್ಳತನ (Bike Battery Thieves) ಮಾಡಲು ಆರಂಭಿಸಿದೆ.

ಆ ಏರಿಯಾದಲ್ಲಿ ಮಧ್ಯರಾತ್ರಿ ನಾಯಿ ಬೊಗಳೋ ಶಬ್ದ ಜೋರಾಗಿತ್ತು. ಏನೋ ಆಗಿದೆ ಅನ್ನೋ ಸುಳಿವಿದ್ದರೂ ಜನ ಗಾಢ ನಿದ್ದೆಗೆ ಜಾರಿದ್ದರು. ಆದರೆ ಎಂದಿನಂತೆ ಬೆಳಿಗ್ಗೆ ಎದ್ದು ನೋಡಿದಾಗ ರಾತ್ರಿ ಏನಾಯ್ತು ಅನ್ನೋ ಅಸಲಿಯತ್ತು ಗೊತ್ತಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳ ಬ್ಯಾಟರಿ ಕಳ್ಳತನವಾಗಿದ್ದು ಏರಿಯಾ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಇತ್ತೀಚಿಗೆ ಬೈಕ್ ಬ್ಯಾಟರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದೆ. ರಾತ್ರಿ ಹೊತ್ತು ಕಳ್ಳ ಬೆಕ್ಕಿನಂತೆ ಎಂಟ್ರಿ ಕೊಡುವ ಈ ಗ್ಯಾಂಗ್ ಬುಲೆಟ್ ಹಾಗೂ ಪಲ್ಸರ್ ಬೈಕ್ ಗಳಂತ ಹೈ ಎಂಡ್ ಬೈಕ್ ಗಳನ್ನ ಟಾರ್ಗೆಟ್ ಮಾಡಿ ಸೈಲೆಂಟ್ ಆಗಿ ಬ್ಯಾಟರಿ ಬಿಚ್ಚಿ ಎಸ್ಕೇಪ್ ಆಗ್ತಿದ್ದಾರೆ. ಹೀಗೆ ಕಳೆದ ರಾತ್ರಿ ಒಂದೇ ಏರಿಯಾದಲ್ಲಿ ಸಾಲಾಗಿ ನಿಂತಿದ್ದ ಬೈಕ್ ಬ್ಯಾಟರಿಗಳಿಗೆ ಕೈ ಹಾಕಿದ ಕಳ್ಳರು ಸುಮಾರು 17 ಕ್ಕೂ ಹೆಚ್ಚು ಬೈಕ್ ಬ್ಯಾಟರಿಗಳನ್ನು ಎಗರಿಸಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ಮಧ್ಯರಾತ್ರಿ ಕುರುಬರಹಳ್ಳಿಯ ಜೆ ಸಿ ನಗರದಲ್ಲಿ ಕೃತ್ಯ ನಡೆದಿದ್ದು ಬೈಕ್ ಮಾಲೀಕರು ಬೆಚ್ಚಿಬಿದ್ದಿದ್ದಾರೆ.

ಜೆ.ಸಿ ನಗರದ ಈ ಏರಿಯಾಗೆ ರಾತ್ರಿ ವೇಳೆ ಬಂದ ಖದೀಮರು ಪಲ್ಸರ್ ಮತ್ತು ಬುಲೆಟ್ ಬೈಕ್ ಬ್ಯಾಟರಿ ಕದ್ದು ಎಸ್ಕೇಪ್ ಆಗಿದ್ದಾರೆ. ಮೊದ ಮೊದಲು ಬೈಕ್ ನಲ್ಲಿದ್ದ ಪೆಟ್ರೋಲ್ ಕಳ್ಳತನ ಆಗ್ತಿತ್ತಂತೆ. ಹಾಗಾಗಿ ಜನ ಅಷ್ಟೇನು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಈಗ ಬ್ಯಾಟರಿ ಹೋಗಿರೋದು ಮುಂದೆ ಬೈಕ್ ಹೋದ್ರು ಹೋಗಬಹುದು ಅನ್ನೋ ಆತಂಕದಲ್ಲಿ ಬೈಕ್ ಮಾಲೀಕರಿದ್ದಾರೆ.

ಇನ್ನೂ ಗಾಢ ನಿದ್ದೆಯಲ್ಲಿದ್ದ ಏರಿಯಾಗೆ ಬಂದ ಕಳ್ಳರ ಬಗ್ಗೆ ಏರಿಯಾದಲ್ಲಿದ್ದ ನಾಯಿಗಳು ಎಚ್ವರಿಕೆ ನೀಡಿದ್ವು. ರಾತ್ರಿ ನಿರಂತರ ಬೊಗಳೋಕೆ ಪ್ರಾರಂಭ ಮಾಡಿದ್ದವು. ಆದರೆ ಜನ ಅಷ್ಟೇನು ತಲೆ ಕಡೆಸಿಕೊಂಡಿಲ್ಲ. ಆದ್ರೆ ಬೆಳಗ್ಗೆ ಬಂದು ನೋಡಿದಾಗ ಸ್ಕ್ರೂ ಡ್ರೈವರ್, ಕಟಿಂಗ್ ಪ್ಲೇಯರ್ ನಿಂದ ಬ್ಯಾಟರಿ ಕ್ಯಾಪ್ ಮುರಿದು ಬ್ಯಾಟರಿ ಕದ್ದು ಹೋಗಿರೋದು ಗೊತ್ತಾಗಿದೆ‌. ಆರೋಪಿಗಳು ಆಟೋದಲ್ಲಿ ಬಂದು ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸ್ತಿದ್ದಾರೆ.

ಇದನ್ನು ಓದಿ: Murder: ಪೆಟ್ರೋಲ್ ಸುರಿದು ಮಹಿಳೆ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

ಸದ್ಯ ಘಟನೆ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ಇತ್ತೀಚಿಗೆ ಮಾಗಡಿ ರಸ್ತೆಯಲ್ಲಿ ಇದೇ ರೀತಿ ಗ್ಯಾಂಗ್ ಒಂದು ಬೈಕ್ ಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿತು. ಕಳ್ಳರ ಕೈ ಚಳಕದಿಂದ ಹತ್ತಾರು ಬ್ಯಾಟರಿಗಳು ಕಳುವಾಗಿದ್ದವು. ಬ್ಯಾಟರಿ ಕಳ್ಳತನದಿಂದ ಸಾರ್ವಜನಿಕರು ಸಹ ಕಳ್ಳರಿಗೆ ಹಿಡಿ ಶಾಪ ಹಾಕಿದ್ದರು. ಈ ಬಗ್ಗೆ ಪೊಲೀಸರು ಕೇಸ್ ದಾಖಲಿಸಿ ಬ್ಯಾಟರಿ ಕದ್ದ  ಗ್ಯಾಂಗ್ ಬಂಧಿಸಿದ್ದರು. ಒಂದು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದು ಜೈಲಿನತ್ತ ಮುಖ ಮಾಡಿದ್ರೆ, ಈತ್ತ ಮತ್ತೊಂದು ಗ್ಯಾಂಗ್ ಅಂತಹದ್ದೇ ಕೃತ್ಯ ಎಸಗಿರೋದು ಪೊಲೀಸರ ನಿದ್ದೆ ಕೆಡಿಸಿದೆ.
Published by:HR Ramesh
First published: