Car Silencer: ರಾತ್ರೋ ರಾತ್ರಿ ಲಕ್ಷಾಧೀಶರಾಗಲು ಈ ಕಾರ್ ಸೈಲೆನ್ಸರ್ ಕದಿಯುತ್ತಿರುವ ಕಳ್ಳರು: ಈ ಕಾರ್ ನಿಮ್ಮ ಬಳಿಯಲಿದ್ರೆ ಎಚ್ಚರ!

ಈ ಕಾರಿನ ಸೈಲೆನ್ಸರ್ ನ ಹನಿಕಾಂಬ್ ನಲ್ಲಿ ಪಲೋಡಿಯಂ, ರೋಡಿಯಂ ಪ್ಲಾಟಿನಂ ವಸ್ತುಗಳಿರುತ್ತದೆ. ಇದನ್ನ ಖದೀಮರು ಹೇಗೋ ತಿಳಿದುಕೊಂಡಿದ್ದಾರೆ. ತಿಳಿದ ನಂತ್ರ ಸುಮ್ಮನಿರ್ತಾರಾ ಅವರ ಕೈಚಳಕ ತೋರಿಸೋಕೆ ಶುರು ಮಾಡಿದ್ದಾರೆ.

ಕಾರ್ ಸೈಲೈನ್ಸರ್

ಕಾರ್ ಸೈಲೈನ್ಸರ್

  • Share this:
ಸಾಮಾನ್ಯವಾಗಿ ಕಾರ್ ಕಳ್ಳತನದ ಕೇಸ್ (Car Theft Case) ನಾವು ಕೇಳ್ತಾನೇ ಇರ್ತೀವಿ.ಆದ್ರೆ ಇಲ್ಲಿ ಸ್ವಲ್ಪ ಡಿಫರೆಂಟ್. ಕಾರ್ ಅಲ್ಲ ಕಾರಿನ ಸೈಲೆನ್ಸರ್ (Car Silencer) ಈ ಖದೀಮರ ಟಾರ್ಗೆಟ್. ಅಷ್ಟಕ್ಕೂ ಅದು ಯಾವ ಕಾರಿನ ಸೈಲೆನ್ಸರ್? ಯಾಕೆ ಈ ಸೈಲೆನ್ಸರ್ ಗೆ ಅಷ್ಟೊಂದು ಬೇಡಿಕೆ ಅನ್ನೋದು ನಿಮಗೆ ಅನಿಸೋದು ಕಾಮನ್. ಅದನ್ನ ಯಾಕೆ ಅನ್ನೋದನ್ನ ನಾವು ಈಗ ಹೇಳ್ತೀವಿ. ಕಾರಿನ ಟೇಪ್ ರೆಕಾರ್ಡರ್ (Tape Recorder) , ಕಾರಿನ ಆ ಪಾರ್ಟ್ ಕಳ್ಳತನವಾಯ್ತು, ಈ ಕಾರ್ ಕಳ್ಳತನವಾಯ್ತು ಅನ್ನೋದು ಕಾಮನ್ ಕಂಪ್ಲೈಟ್.  ಇದೀಗ ಕಾರಿನ ಸೈಲೆನ್ಸರ್ ಕಳ್ಳತನ ಇದೀಗ ಹೊಸದಾಗಿ ಪೊಲೀಸರ ಕಂಪ್ಲೈಟ್ ಬುಕ್ ನಲ್ಲಿ ಸೇರಿಕೊಂಡಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಸೈಲೆನ್ಸರ್ ಕಳ್ಳತನದ ಕೇಸ್ ಅಧಿಕವಾಗ್ತಿದೆ. ಅದೂ ಒಂದೇ ಬ್ರಾಂಡಿನ ಕಾರಿನ ಸೈಲೆನ್ಸರ್. ಹಾಗಾದ್ರೆ ಅದು ಕೋಟಿಗಟ್ಟಲೆ ಬೆಲೆಬಾಳುವ ಕಾರ್ ಇರ್ಬೇಕು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು .ಅದೇನು ಕೋಟಿಗಟ್ಟಲೆ ಬೆಲೆಬಾಳುವ ಕಾರ್ ಅಲ್ವೇ ಅಲ್ಲ. ಮಾರುತಿ ಕಂಪನಿಯ ಇಕೋ ಕಾರ್.

ನಿಮಗೆ ಒಂದ್ಸಾರಿ ಕೇಳಿ ಶಾಕ್ ಆಗಬೇಕು..ಇಕೋ ಕಾರಿನ ಸೈಲೆನ್ಸರ್ ಗೆ ಇಷ್ಟೊಂದು ಬೆಲೆನಾ ಅಂತಾ. ಆದ್ರೂ ನೀವು ನಂಬಲೇಬೇಕು. ಹೌದು ಮಾರುತಿ ಇಕೋ ಕಾರಿನ (Maruti Eeco Car) ಸೈಲೆನ್ಸರ್ ಕಾರಿನ ಕಳ್ಳತನ ಸಿಲಿಕಾನ್ ಸಿಟಿಯಲ್ಲಿ ಜಾಸ್ತಿಯಾಗ್ತಿದೆ. ಅದಕ್ಕೆ ಕಾರಣ ಕೂಡಾ ಇದೆ.

ಈ ಕಾರಿನ ಸೈಲೆನ್ಸರ್ ನಲ್ಲಿರುತ್ತೆ ಈ ಮೂರು ವಸ್ತು!

ಈ ಕಾರಿನ ಸೈಲೆನ್ಸರ್ ನ ಹನಿಕಾಂಬ್ ನಲ್ಲಿ ಪಲೋಡಿಯಂ, ರೋಡಿಯಂ ಪ್ಲಾಟಿನಂ ವಸ್ತುಗಳಿರುತ್ತದೆ. ಇದನ್ನ ಖದೀಮರು ಹೇಗೋ ತಿಳಿದುಕೊಂಡಿದ್ದಾರೆ. ತಿಳಿದ ನಂತ್ರ ಸುಮ್ಮನಿರ್ತಾರಾ ಅವರ ಕೈಚಳಕ ತೋರಿಸೋಕೆ ಶುರು ಮಾಡಿದ್ದಾರೆ.

ಕಾರಿನ ಸೈಲೆನ್ಸರ್ ಕದ್ದು ಮಾರ್ತಿದ್ದಾರೆ. ಅಂದ ಹಾಗೆ ಈ ಮೂರು ಕೆಮಿಕಲ್ ವಸ್ತುಗಳ ‌ಬೆಲೆ  ಲಕ್ಷಕ್ಕೂ ಅಧಿಕ ಇದ್ಯಂತೆ. ಇಷ್ಟೊಂದು ದುಡ್ಡು ಬರುತ್ತೆ ಅಂದ್ರೆ ಬಿಡ್ತಾರಾ..? ಒಂದಾದ್ರ ಮೇಲೆ ಒಂದ್ರಂತೆ ಕದಿಯುತ್ತಾ ಹೋಗಿದ್ದಾರೆ. ಸೈಲೆನ್ಸರ್ ನ್ನು ಕದಿಯೋ ಖದೀಮರು ಅದರಲ್ಲಿರುವ ಹನಿಕಾಂ‌ನಿಂದ ಪಲೋಡಿಯಂ ,ರೇಡಿಯಂ ಪ್ಲಾಟಿನಂ ಈ ಮೂರು ವಸ್ತುಗಳನ್ನು ಪೌಡರ್ ಮಾಡಿ ಮಾರಾಟ ಮಾಡ್ತಾರೆ.

ಇದನ್ನೂ ಓದಿ  PSI Exam Scam: ಕಾಂಗ್ರೆಸ್​ ಶಾಸಕರ ಗನ್​ ಮ್ಯಾನ್ ಸೇರಿ ಇಬ್ಬರ ಬಂಧನ; ಪ್ರಕರಣದ ಆಳ ತನಿಖೆಗೆ ಸಿಎಂ ಸೂಚನೆ

ಪೊಲೀಸರ ಅನುಮಾನ ಇವರ ಮೇಲೆಯೇ?

ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದಾರೆ. ಈ ಮೂರು ಕೆಮಿಕಲ್ ವಸ್ತುಗಳಿಗಾಗಿ ಕನ್ನ ಹಾಕ್ತಿದ್ದಾರೆ ಅಂದ್ರೆ ಇದರ ಹಿಂದೆ ವಿಜ್ಞಾನಕ್ಕೆ ಸಂಬಂಧಪಟ್ಟವರು ಅಥವಾ ಮೆಕಾನಿಕ್ ಗಳ ಕೈವಾಡ ಇರಬಹುದು ಅನ್ನೋ ಅನುಮಾನ‌ ಪೊಲೀಸಸರು ವ್ಯಕ್ತಪಡಿಸ್ತಿದ್ದಾರೆ.

ಯಾಕಂದ್ರೆ ಈ ರಾಸಾಯನಿಕ ವಸ್ತುಗಳ ವಿಷಯ ಸಾಮಾನ್ಯ ಕಳ್ಳರಿಗೆ, ಜನರಿಗೆ ಅಷ್ಟೊಂದು ಗೊತ್ತಿರೋದಿಲ್ಲ. ಯಾರೋ ಈ ಕೆಮಿಕಲ್ ಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರೋರು ಕಳ್ಳರ ಸಹಾಯದಿಂದ ಈ ಕೆಲಸ ಮಾಡ್ತಿರಬೇಕು ಅಥವಾ ಯಾರಾದ್ರೂ ಮೆಕಾನಿಕ್ ಕಳ್ಳರ ಸಹಾಯದಿಂದ ಈ ಕೆಲಸಕ್ಕೆ ಕೈ ಹಾಕಿರಬೇಕು.

ಬೆಂಗಳೂರಿನಲ್ಲಿ 15ಕ್ಕೂ ಅಧಿಕ ಪ್ರಕರಣ ದಾಖಲು!

ಈ ಬಗೆಗಿನ ಪೊಲೀಸರ ಡೌಟನ್ನೂ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ 2021 ರಿಂದಲೇ ಮಿಸ್ಸಿಂಗ್ ಕಂಪ್ಲೇಂಟ್ ಬರ್ತಿದ್ಯಂತೆ . ಆದ್ರೆ ಇತ್ತೀಚಿಗೆ ಇದು ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 15ಕ್ಕೂ ಅಧಿಕ‌ ಕೇಸ್ ದಾಖಲಾಗಿದೆ. ರೋಡಿನಲ್ಲಿರುವ ಕಾರ್ ಗಳೇ ಈ ಕಳ್ಳರ ಟಾರ್ಗೆಟ್ ಆಗಿದೆ.

ಸಾಮಾನ್ಯವಾಗಿ ಎಲ್ಲಾ ಕಾರಿನಲ್ಲಿ ಸೈಲೆನ್ಸರ್ ಇದ್ದೇ ಇರುತ್ತೆ. ಆದ್ರೆ ಈ ಇಕೋ ಕಾರಿನಲ್ಲಿರುವ ಸೈಲೆನ್ಸರ್ ಎಮಿಷನ್ ಕಡಿಮೆ ಮಾಡುತ್ತಂತೆ. ಇದು ಪರಿಸರಕ್ಕೆ ಹಾನಿಯುಂಟು ಮಾಡುವ ಹೈಡ್ರೋಕಾರ್ಬನ್, ಕಾರ್ಬನ್ ಮೊನಾಸ್ಕೈಡ್ ನಂತಹ ಹಾನಿಕಾರಕ ಅನಿಲವನ್ನು ಪರಿಸರಕ್ಕೆ ಸೇರಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡುತ್ತದೆ. ಹೀಗಾಗಿ ಇದು ಪರಿಸರ ಸ್ನೇಹಿ. ಇನ್ನು ಕೆಲಮೊಮ್ಮೆ ಹನಿಕಾಂನ್ನು ಮಾತ್ರ ಕಳ್ಳರು ಕದಿಯುತ್ತಿದ್ದಾರೆ. ಈ ವೇಳೆ ವೆಹಿಕಲ್  ಪರ್ಫಾಮೆನ್ಸ್ ಕಡಿಮೆ ಆಗುತ್ತೆ. ಅಲ್ಲದೆ ಗಾಡಿ ನಾಯ್ಸ್ ಕೂಡಾ ಜಾಸ್ತಿ ಆಗುತ್ತದೆ.

ಕಳ್ಳತನ ಕಾರ್ ಮಾಲೀಕರಿಗೆ ಗೊತ್ತೇ ಇರಲ್ಲ

ಗಾಡಿಯಲ್ಲಿ ಕಳ್ಳತನ ಆಗಿರೋ ವಿಚಾರ ಗಾಡಿ ಮಾಲೀಕರಿಗೆ ತಿಳಿದೇ ಇರೋದಿಲ್ಲ‌. ಯಾವಾಗ ಸರ್ವಿಸ್ ಗೆ ತೆಗದುಕೊಂಡು ಹೋಗ್ತಾರೋ ಆವಾಗಲೇ ಈ ವಿಚಾರ ಬೆಳಕಿಗೆ ಬರುತ್ತದೆ. ಇದು ಇದನ್ನು ಹೊಸದಾಗಿ ಹಾಕಿಸಬೇಕು ಅಂದ್ರೆ 80 ಸಾವಿರ ತನಕ ಖರ್ಚು ತಗಲುತ್ತದೆ. ಕಳ್ಳರಿಗೆ ರೋಡಿನಲ್ಲಿರುವ ಗಾಡಿಗಳೇ ಹೆಚ್ಚಾಗಿ  ಟಾರ್ಗೆಟ್ ಆಗಿದ್ದು ಸುಲಭವಾಗಿ ತಮ್ಮ ಕೈಗೆ ಸಿಕ್ತಿದೆ.

ಇದನ್ನೂ ಓದಿ:  Gandhi Bazar​​ಗೆ ಆಧುನಿಕ ಸ್ಪರ್ಶ ನೀಡಲು ವಿರೋಧ; ಅವೈಜ್ಞಾನಿಕ ಯೋಜನೆ ವಿರುದ್ಧ ಸಿಟ್ಟಿಗೆದ್ದ ವ್ಯಾಪಾರಿಗಳು

ಇದೀಗ ಸೈಲೆನ್ಸರ್ ಕಳ್ಳರನ್ನು ಲಕ್ಷಾಧೀಶ್ವರನ್ನಾಗಿ ಮಾಡಿದ್ರೆ ಪೊಲೀಸರಿಗೆ ಹೊಸ ತಲೆನೋವು ತಂದಿಟ್ಟಿದೆ. ಯಾವುದಕ್ಕೂ ನಿಮ್ಮಲ್ಲೂ ಇಕೋ ಕಾರಿದ್ರೆ ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ ಕಳ್ಳರು ನಿಮ್ಮ ಕಾರಿಗೂ ಕನ್ನ ಹಾಕಬಹುದು
Published by:Mahmadrafik K
First published: