10 ಲಕ್ಷ ಹಣವಿದ್ದ ಲಾಕರ್​ ಕದ್ದರೂ ಓಪನ್​ ಮಾಡಲು ಒದ್ದಾಡಿದ್ದ ಕಳ್ಳರ ಗ್ಯಾಂಗ್​.. ಕೊನೆಗೆ ಏನಾಯ್ತು?

ಲಾಕರ್ ಒಳಗೆ ಬರೋಬ್ಬರಿ 10 ಲಕ್ಷ ನಗದು ಹಾಗೂ ಕೆಲ ದಾಖಲೆಗಳಿದ್ದವು.. ಆದ್ರೆ ಲಾಕರ್ ಓಪನ್ ಆಗದ ಕಾರಣ ಅದು ಸೇಫಾಗೆ ಮಾಲೀಕರ ಕೈ ಸೇರಿದೆ.

ಘಟನಾ ಸ್ಥಳ

ಘಟನಾ ಸ್ಥಳ

  • Share this:
ಬೆಂಗಳೂರು: ಅದು ಮಧ್ಯರಾತ್ರಿ ಸಮಯ, ಜೋರಾದ ಮಳೆ ಬೇರೆ ಇತ್ತು. ಆ ಟೈಂನಲ್ಲಿ ಗೊದಾಮಿಗೆ ಎಂಟ್ರಿ ಕೊಟ್ಟಿದ್ದ ಅದೊಂದು ಗ್ಯಾಂಗ್ ತನ್ನ ಕೈಚಳಕ ತೋರಿತ್ತು. ಮಳೆಯ ಸದ್ದಿನ ನಡುವೆ ಯಾರಿಗೂ ತಿಳಿಯದ ಹಾಗೆ 60ಕೆಜಿಯ ಲಾಕರ್ ಹೊತ್ತೊಯ್ದ ಗ್ಯಾಂಗ್ ಮರುದಿನ ತಮ್ಮ ಕೆಲಸ ಮುಗಿಸೊ ಸ್ಕೆಚ್ ಹಾಕಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಎಂಟ್ರಿ ಕೊಟ್ಟಿದ್ದ ಪೊಲೀಸ್ ಡಾಗ್  ಖದೀಮರಿಗೆ ಚಳ್ಳೆಹಣ್ಣು ತಿನ್ನಿಸಿತ್ತು.

ಅದೊಂದು ಪಕ್ಕ ಸಿನಿಮೀಯ ಕೃತ್ಯ. ಆ ಘಟನೆ ನಡೆದಿರೋದು ನಗರದ ಸಂಪಿಗೆಹಳ್ಳಿಯಲ್ಲಿ. ಜು. 17ನೇ ತಾರೀಖು ಮಧ್ಯರಾತ್ರಿ ಸಮಯ.. ಜೋರಾಗಿ ಮಳೆ ಬೇರೆ ಬರ್ತಿತ್ತು.. ಈ ವೇಳೆ ಶ್ರೀರಾಮ್ ಪುರ ವಿಲೇಜ್ ನ ಗೊದಾಮನ್ನು ಟಾರ್ಗೆಟ್ ಮಾಡಿಕೊಂಡಿದ್ದ ಅದೊಂದು ಗ್ಯಾಂಗ್ ಖತರ್ನಾಕ್ ಸ್ಕೆಚ್ ಹಾಕಿತ್ತು. ಅದು ಅಂತಿತ ಸ್ಕೆಚ್ ಅಲ್ಲ ಬರೊಬ್ಬರಿ 60 ಕೆಜಿ ತೂಕದ ಲಾಕರ್ ನ ಒಳಗಿದ್ದ ಲಕ್ಷ ಲಕ್ಷ ಹಣ ಲೂಟಿ ಮಾಡೊ ಪ್ಲ್ಯಾನ್.. ಅಸಲಿಗೆ ಆನ್ ಲೈನ್ ಶಾಪಿಂಗ್ ವಸ್ತುಗಳ ಶಿಪ್ಟಿಂಗ್ ಪಾಯಿಂಟ್ ಇದಾಗಿದ್ದು, ದಿನ ಲಕ್ಷಾಂತರ ಮೌಲ್ಯದ ವಸ್ತುಗಳು ಇದೇ ಜಾಗದಿಂದ ಪಿಕ್ ಆಗಿ ನಂತರ ಸ್ಥಳೀಯ ಕೇಂದ್ರಗಳಿಗೆ ಹೋಗ್ತಿತ್ತು.

ಇನ್ನು ಇದರ ಬಗ್ಗೆ ಪಕ್ಕ ಮಾಹಿತಿ ಹೊಂದಿದ್ದ ಗ್ಯಾಂಗ್ ಲಾಕರ್ ಮೇಲೆ ಕಣ್ ಹಾಕಿದ್ರು.. ಅದರಂತೆ, ಮಧ್ಯರಾತ್ರಿ ಇಬ್ಬರು ಸೆಕ್ಯೂರಿಟಿ ಇದ್ದ ವೇಳೆ ಹಿಂಬದಿಯಿಂದ ಗೊದಾಮಿ ಎಂಟ್ರಿ ಕೊಟ್ಟ ಕಳ್ಳರು ಮೊದಲಿಗೆ ಸಿಸಿಟಿವಿ ವೈಯರ್ ಗಳನ್ನು ಕಟ್ ಮಾಡಿದ್ದಾರೆ.. ಬಳಿಕ ಮಳೆ ಸದ್ದಿನ ನಡುವೆ ಹಿಂಬದಿಯ ಡೊರ್ ನಿಂದ ಎಂಟ್ರಿ ಕೊಟ್ಟವರು ಮೊದಲಿಗೆ ಲಾಕರ್ ಓಪನ್ ಮಾಡೊ ಯತ್ನ ಮಾಡಿದ್ದಾರೆ.. ಆದ್ರೆ ಲಾಕರ್ ಯಾವುದೇ ಕಾರಣಕ್ಕೂ ಓಪನ್ ಆಗೊ ಹಂತದಲ್ಲಿರಲಿಲ್ಲ.. ಹೀಗಾಗಿಯೇ ಕದೀಮರು ಬರೊಬ್ಬರಿ 60ಕೆಜಿಯ ಲಾಕರ್ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದರು..ಹೀಗೆ ಲಾಕರ್ ಸಮೇತ ಎಸ್ಕೇಪ್ ಆದ ಕಳ್ಳರಿಗೆ ಭಾರಿ ತೂಕ ಇರುವುದರಿಂದ ಹೆಚ್ಚು ದೂರ ಕ್ರಮಿಸಲಾಗಿಲ್ಲ.. ಹಾಗಾಗಿಯೇ ಅಲ್ಲೇ 500 ಮೀಟರ್ ದೂರದಲ್ಲಿದ್ದ ಅದೊಂದು ಮೈದಾನಕ್ಕೆ ತೆಗೆದುಕೊಂಡು ಹೊಗಿದ್ದಾರೆ.

ಇದನ್ನೂ ಓದಿ: ಅತ್ತೆ ಪ್ರಾಣ ತೆಗೆದ ಸೊಸೆ: ಹಣ ಕೊಡುವುದಾಗಿ ಕರೆದು ವೃದ್ಧೆಯನ್ನು ಕೊಲೆ ಮಾಡಿಸಿದ ಪಾಪಿ!

ಬಳಿಕ ಅಲ್ಲಿ ಸಹ ಲಾಕರ್ ಓಪನ್ ಮಾಡಲು ಪ್ರಯತ್ನಿಸಿದ್ದು, ಆಗದ ಕಾರಣ ಮರುದಿನ ಓಪನ್ ಮಾಡೊ ಪ್ಲ್ಯಾನ್ ಮಾಡಿ ಅಲ್ಲೇ ಪೊದೆಯೊಳಗೆ ಇಟ್ಟು ಎಸ್ಕೇಪ್ ಆಗಿದ್ರು.. ಆದ್ರೆ ಮರುದಿನ ಘಟನೆಯ ಮಾಹಿತಿ ತಿಳಿದ ಗೊದಾಮಿನ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದ.. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಯಾವುದೇ ಕ್ಲೂಸಹ ಸಿಕ್ಕಿರಲಿಲ್ಲ.. ಆದ್ರೆ ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್ ನ ಲಕ್ಷ್ಮಿ ಎಂಬ ಡಾಗ್, ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡಿತ್ತು.. ಅಷ್ಟೇ ಅಲ್ಲಾ ಕಳ್ಳರು ಲಾಕರ್ ಬಿಟ್ಟು ಹೊಗಿದ್ದ ಸ್ಥಳಕೂಡ ಪತ್ತೆ ಮಾಡಿ, ಲಾಕರ್ ಮತ್ತೆ ಸೇಫ್ ಆಗಿ ವಾಪಾಸ್ ಬರುವಂತೆ ಲಕ್ಷ್ಮಿ ಕರ್ತವ್ಯ ಮೆರೆದಿದ್ದಳು.

ಇನ್ನು ಲಾಕರ್ ಒಳಗೆ ಬರೋಬ್ಬರಿ 10 ಲಕ್ಷ ನಗದು ಹಾಗೂ ಕೆಲ ದಾಖಲೆಗಳಿದ್ದವು.. ಆದ್ರೆ ಲಾಕರ್ ಓಪನ್ ಆಗದ ಕಾರಣ ಅದು ಸೇಫಾಗೆ ಮಾಲೀಕರ ಕೈ ಸೇರಿದೆ.. ಮತ್ತೊಂದೆಡೆ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.. ವಿಪರ್ಯಾಸ ಅಂದ್ರೆ ಕೃತ್ಯ ಎಸಗಿದ ಗ್ಯಾಂಗ್ ಗೊದಾಮಿನ ಒಳಗಿದ್ದ ಸಿಸಿಟಿವಿ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದು, ಯಾರೋ ಗೊತ್ತಿದ್ದವರೇ ಕೃತ್ಯ ಎಸಗಿರೋ ಶಂಖೆ ಮೂಡಿದೆ..
Published by:Kavya V
First published: