Crime News: ಎಲ್ಲರಂತಲ್ಲ ಈ ಗಂಡ! ಹೆಂಡ್ತಿನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ Flightನಲ್ಲಿ ಬಂದು ಕಳ್ಳತನ ಮಾಡ್ತಿದ್ದ ಭಂಡ!

ಇಲ್ಲೊಬ್ಬ ಗಂಡ ಇದ್ದ. ಆತನಿಗೂ ಹೆಂಡ್ತೀನ ರಾಣಿ ಹಾಗೆ ನೋಡಿಕೊಳ್ಳಬೇಕು ಅಂತ ಆಸೆ. ಆದ್ರೆ ಆ ಆಸೆ ಪೂರೈಸೋಕೆ ಆತ ಕೆಲ್ಸಾನೇ ಮಾಡ್ತಿರಲಿಲ್ಲ. ಸೀದಾ ರಾಜಸ್ಥಾನದಿಂದ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬರ್ತಿದ್ದ, ಮುಂದೆ ಇಲ್ಲಿ ಮಾಡಬಾರದ್ದು ಮಾಡ್ತಿದ್ದ.

ಬಂಧಿತ ಆರೋಪಿ ಉಮೇಶ್ ಲತಿಕ್

ಬಂಧಿತ ಆರೋಪಿ ಉಮೇಶ್ ಲತಿಕ್

  • Share this:
ಬೆಂಗಳೂರು: “ನನ್ನನ್ನು ನನ್ನ ಗಂಡ (Husband) ರಾಣಿ (Queen) ತರ ನೋಡಿಕೊಳ್ಳಲಿ” ಎನ್ನುವುದು ಎಲ್ಲ ಹೆಂಡತಿಯರ (Wife) ಆಸೆ. ಹಾಗೆಯೇ “ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು“ ಅನ್ನೋದು ಎಲ್ಲ ಗಂಡಂದಿರ ಆಸೆ. ಆದ್ರೆ ಆ ಆಸೆ ಪೂರೈಸುವುದಕ್ಕೆ ದುಡಿಯಬೇಕಾಗಿರೋದು ಅನಿವಾರ್ಯ, ಇಲ್ಲೊಬ್ಬ ಗಂಡ ಇದ್ದ. ಆತನಿಗೂ ಹೆಂಡ್ತಿನ ರಾಣಿ ಹಾಗೆ ನೋಡಿಕೊಳ್ಳಬೇಕು ಅಂತ ಆಸೆ. ಆದ್ರೆ ಆ ಆಸೆ ಪೂರೈಸೋಕೆ ಆತ ಕೆಲ್ಸಾನೇ (Work) ಮಾಡ್ತಿರಲಿಲ್ಲ. ಸೀದಾ ರಾಜಸ್ಥಾನದಿಂದ (Rajasthan) ಫ್ಲೈಟ್ (Flight) ಹತ್ಕೊಂಡು ಬೆಂಗಳೂರಿಗೆ (Bengaluru) ಬರ್ತಿದ್ದ, ಮುಂದೆ ಇಲ್ಲಿ ಮಾಡಬಾರದ್ದು ಮಾಡ್ತಿದ್ದ. ಇದೀಗ ಕಿತಾಪತಿ ಕಳ್ಳ (Thief) ತಗ್ಲಾಕೊಂಡಿದ್ದಾನೆ.

ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಕಳ್ಳತನ

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಉಮೇಶ್ ಲತೀಕ್ ಎಂಬಾತನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಕಳ್ಳತನ ಮಾಡುತ್ತಿದ್ದನಂತೆ.

ಫ್ಲೈಟ್‌ನಲ್ಲಿ ಬೆಂಗಳೂರಿಗೆ ಬಂದು ಸರಗಳ್ಳತನ

ರಾಜಸ್ಥಾನ ಮೂಲದ ಉಮೇಶ್ ಖತಿಕ್ ಕಳ್ಳತನಕ್ಕೆ ಅಂತಾನೇ ಫ್ಲೈಟ್‌ನಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬರ್ತಿದ್ದ. . ಹಲವು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕಿನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ‌‌. ಕಳ್ಳತನ ಬಳಿಕ ಊರಿಗೆ ರೈಲಿನಲ್ಲಿ ತೆರಳಿ ಹೆಂಡತಿಯನ್ನು ರಾಯಲ್ ಆಗಿ ನೋಡಿಕೊಳ್ಳುತ್ತಿದ್ದನಂತೆ.

ಇದನ್ನೂ ಓದಿ: Murder: ಮನೆಗೇ ಹೊಕ್ಕಿ ಯುವಕನನ್ನು ಹೊತ್ತೊಯ್ದರು, ಕೊಲೆ ಮಾಡಿ ಮನೆ ಬಳಿಯೇ ಎಸೆದರು!

ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿದ್ದ ಆರೋಪಿ

ಉಮೇಶ್ ಪ್ರೀತಿ ಮಾಡುವಾಗ ಆಕೆ ಅಪ್ರಾಪ್ತೆಯಾಗಿದ್ದಳು. ಅಪ್ರಾಪ್ತೆಯನ್ನೇ ಮದುವೆಯಾಗಿ ಫೋಕ್ಸೋ ಕೇಸ್ ಅಡಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಮತ್ತೆ ಮದುವೆಯಾಗಿದ್ದ. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದವ ಅರೆಸ್ಟ್

ಮತ್ತೊಂದು ಕೇಸ್‌ನಲ್ಲಿ  ಪತ್ನಿ ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಪತಿ ಅರೆಸ್ಟ್ ಆಗಿದ್ದಾನೆ. ಜಾರ್ಖಂಡ್ ಮೂಲದ ಫುಲ್ಚಾಂದ್ ಉರವ್  ಎಂಬಾತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್‌ 26ರಂದು ನಡೆದಿದ್ದ ಘಟನೆ

ಜಾರ್ಖಂಡ್ ಮೂಲದ ಇವರಿಬ್ಬರಿಗೆ ಕಳೆದ 20 ವರ್ಷಗಳ ಹಿಂದೆ ವಿವಾಹವಾಗಿತ್ತು. ಮರಗೆಲಸ ಮಾಡುತಿದ್ದ ಪೂಲ್ ಚಾಂದ್.ಕೆಲಸಗಾರರಿಗೆ ಅಡಗೆ ಮಾಡಿಕೊಡುವ ಕೆಲಸ ಮಾಡುತಿದ್ದ ಪತ್ನಿ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಕಳೆದ ತಿಂಗಳ 26ರಂದು ಈತ ತನ್ನ ಪತ್ನಿ ಸಂಚಿ ಉರವ್ ಎಂಬಾಕೆಯನ್ನು ಕೊಲೆ ಮಾಡಿದ್ದ. ಕನ್ನಿಂಗ್‌ ಹ್ಯಾಂ ರಸ್ತೆಯ ಮಾತೆನ್ ಬಿಲ್ಡಿಂಗ್ ಬಳಿ ಪತಿ, ಪತ್ನಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದ.

ಇದನ್ನೂ ಓದಿ: Trainನಲ್ಲಿ 'ಮುತ್ತು' ತಂದ ಕುತ್ತು; ಬಲವಂತದಿಂದ ಚುಂಬಿಸಿದವನಿಗೆ 10 ಸಾವಿರ ರೂ. ದಂಡ, 1 ವರ್ಷ ಕಠಿಣ ಶಿಕ್ಷೆ!

ಊರಿಗೆ ಎಸ್ಕೇಪ್ ಆಗಲು ಯತ್ನಿಸಿದ್ದ ವೇಳೆ ಅರೆಸ್ಟ್

ಪತ್ನಿ ಕೊಲೆ ಬಳಿಕ  ಫೋನ್ ಸ್ವಿಚ್ ಆಫ್ ಮಾಡಿಕೊಂಡು ಈತ ನಾಪತ್ತೆಯಾಗಿದ್ದ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿಧಾನಸೌಧ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಈತ ಊರು ಬಿಟ್ಟು ಹೊಗಲು ವಿಮಾನ ಟಿಕೇಟ್ ಬುಕ್ ಮಾಡಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Published by:Annappa Achari
First published: