Bengaluru Power Cut: ಮಂಗಳವಾರ,ಬುಧವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ....

Bengaluru Power Cut: ನೆಲದಡಿ ಕೇಬಲ್‌ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಆರ್‌.ಆರ್‌. ನಗರ, ವಿಡಿಯಾ, ನೆಲಗೆದರನಹಳ್ಳಿ, ಬ್ಯಾಡರಹಳ್ಳಿ, ಶ್ರೀಗಂಧಕಾವಲ್‌, ವಿಜಯನಗರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಹಲವೆಡೆ ಇಂದು ಕೂಡ  ವಿದ್ಯುತ್​ ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಮತ್ತು ಬುಧವಾರ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

 ನೆಲದಡಿ ಕೇಬಲ್‌ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಆರ್‌.ಆರ್‌. ನಗರ, ವಿಡಿಯಾ, ನೆಲಗೆದರನಹಳ್ಳಿ, ಬ್ಯಾಡರಹಳ್ಳಿ, ಶ್ರೀಗಂಧಕಾವಲ್‌, ವಿಜಯನಗರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ಈ ಪ್ರದೇಶಗಳಲ್ಲಿ ಮಂಗಳವಾರ  ಪವರ್ ಕಟ್

ಭೂಮಿಕಾ ಲೇಔಟ್‌, ಪಟ್ಟಣಗೆರೆ, ಬಿಎಚ್‌ಇಎಲ್‌ ಲೇಔಟ್‌, ಮಾರಪ್ಪ ಲೇಔಟ್‌, ಆಂಧ್ರಹಳ್ಳಿ ಸರ್ಕಾರಿ ಶಾಲೆ, ಆಂಧ್ರಹಳ್ಳಿ ಸರ್ಕಲ್‌, ಮಾರುತಿ ನಗರ ಬಿಡಬ್ಲ್ಯೂಎಸ್‌ಎಸ್‌ಬಿ, ಲಕ್ಷ್ಮಣ್ ನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಕ್ರಾಸ್‌, ಸುಂಕದಕಟ್ಟೆ, ಪೈಪ್‌ಲೈನ್‌ ರೋಡ್‌ ಸುಂಕದಕಟ್ಟೆ,ಕೊಟ್ಟಿಗೆಪಾಳ್ಯ ಹಾಗೂ  ಕೆಜಿಎಚ್‌ಎಸ್‌ ಲೇಔಟ್‌, ಪಾಪರೆಡ್ಡಿ ಪಾಳ್ಯ,  ಕೆ.ಕೆ. ಲೇಔಟ್‌, ಬಿನ್ನಿ ಲೇಔಟ್‌, ಜಯಲಕ್ಷ್ಮಮ್ಮ ಲೇಔಟ್‌ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್  ಸಮಸ್ಯೆ ಎದುರಾಗಲಿದೆ.

ರಾಜಾನುಕುಂಟೆ ಮತ್ತು ಕೆಎಚ್‌ಬಿ ಕಾಲೊನಿಯ ಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: ಚಿನ್ನ - ಬೆಳ್ಳಿ ಬೆಲೆಯಲ್ಲಿ ಏರಿಕೆ- ಅಕ್ಟೋಬರ್ 1 ರವರೆಗೆ ರಾಜ್ಯದಲ್ಲಿ ಭಾರೀ ಮಳೆ, ಬೆಳಗಿನ ಟಾಪ್ ನ್ಯೂಸ್

ಭೂಮಿಕಾ ಲೇಔಟ್‌, ಪಟ್ಟಣಗೆರೆ, ಬಿಎಚ್‌ಇಎಲ್‌ ಲೇಔಟ್‌, ಮಾರಪ್ಪ ಲೇಔಟ್‌, ಆಂಧ್ರಹಳ್ಳಿ ಸರ್ಕಾರಿ ಶಾಲೆ, ಆಂಧ್ರಹಳ್ಳಿ ಸರ್ಕಲ್‌, ಮಾರುತಿ ನಗರ ಬಿಡಬ್ಲ್ಯೂಎಸ್‌ಎಸ್‌ಬಿ, ಲಕ್ಷ್ಮಣ್ ನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಕ್ರಾಸ್‌, ಸುಂಕದಕಟ್ಟೆ, ಪೈಪ್‌ಲೈನ್‌ ರೋಡ್‌ ಸುಂಕದಕಟ್ಟೆ, ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ. .

ಚಿಕ್ಕಬೊಮ್ಮಸಂದ್ರ, ಶಾರದಾನಗರ, ಬಿ ಸೆಕ್ಟರ್‌, ಚಿಕ್ಕಮುನಿಯಪ್ಪ ಲೇಔಟ್‌, ಅಲ್ಲಸಂದ್ರ, ಜಿಕೆವಿಕೆ ಲೇಔಟ್‌, ಕೈಗಾರಿಕಾ ಪ್ರದೇಶ, ರಾಮಗೊಂಡನಹಳ್ಳಿ, ಐವಿಆರ್‌ಐ ರಸ್ತೆ, ಪುಟ್ಟೇನಹಳ್ಳಿ, ಕೆಎಚ್‌ಬಿ ಕಾಲೊನಿ ಹಾಗೂ ಸುರಭಿ ಲೇಔಟ್‌, ರೈತರ ಸಂತೆ, ಶಿವನಹಳ್ಳಿ, ಗಾಂಧಿನಗರ, ಬಿ.ಬಿ. ರಸ್ತೆ, ಯಲಹಂಕ ಓಲ್ಡ್‌ ಟೌನ್‌ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ ಎಲ್ಲೆಲ್ಲಿ ಪವರ್ ಕಟ್

ಸೋಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ 10ರಿಂದ 4ರವರೆಗೆ ಹಾಗೂ  ಐಐಎಚ್‌ಆರ್‌, ಕುಂಬಾರಹಳ್ಳಿ, ಕಸಘಟ್ಟಪುರ, ಕೆಂಪಾಪುರ, ದೊಡ್ಡಬ್ಯಾಲದಕೆರೆ, , ಮಾದಪ್ಪನಹಳ್ಳಿ ಮುಂತಾದ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಕಾಡಲಿದೆ ಎಂದು ತಿಳಿಸಿದೆ.

ನಗರಗಿರಿ ಟೌನ್‍ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಹೆಣ್ಣೂರು ಉಪ-ಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ವಿದ್ಯುತ್‌ ಸ್ಥಗಿತ: 66/11 ಕೆ.ವಿ ಹೆಣ್ಣೂರು ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಇರುವುದಿಲ್ಲ.

ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತ ಜಯಂತಿ ಕಾಲೇಜು, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‍ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‍ಶಿಪ್, ಮೇಡಿಅಗ್ರಹಾರ, ಶಿವಕೋಟೆ, ಕೊಂಡಶೆಟ್ಟಿಹಳ್ಳಿ, ಕುರುಬರಹಳ್ಳಿ, ಚಿಕ್ಕಬ್ಯಾಲದಕೆರೆ, ಹುರುಳಿಚಿಕ್ಕನಹಳ್ಳಿ, ಲಿಂಗನಹಳ್ಳಿ ಅಂಜನಪ್ಪ ಲೇಔಟ್​ಗಳಲ್ಲಿ ಕೂಡ ಪವರ್ ಇರುವುದಿಲ್ಲ.

ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೊನಿ ಮಂಜುನಾಥ್ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ದೇವಸ್ಥಾನ, ಎ.ಕೆ.ಆರ್ ಸ್ಕೂಲ್ ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್  ಹಾಗೂ  ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲಹಳ್ಳಿ, ಮಂತ್ರಿ ಅಪಾರ್ಟ್‍ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿ ರಾಮ್ ಲೇಔಟ್, ವಡ್ಡರ ಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಬೈರತಿ ಹಳ್ಳಿ, ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಂ ಎನ್‍ಕ್ಲೇವ , ಪ್ರಕಾಶ್ ಗಾರ್ಡನ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಏರಿಕೆ ಕಂಡ ಚಿನ್ನ ಬೆಳ್ಳಿ-ಬೆಲೆ- ಬೆಂಗಳೂರಿನಲ್ಲಿ ಚಿನ್ನದ ರೇಟ್ ಹೀಗಿದೆ..

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ. ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.
Published by:Sandhya M
First published: