Bengaluru Power Cut: ಕೇಬಲ್ ಅಳವಡಿಕೆ ಹಿನ್ನೆಲೆ ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bengaluru Power Cut:ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್​ ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ನಿರ್ವಹಣಾ ಕಾರ್ಯ ಮತ್ತು ಕೇಬಲ್ ಅಳವಡಿಕೆ ಕೆಲಸ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ  ತಿಳಿಸಿದೆ.  ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

ರಾಜಾಜಿನಗರ, ಆರ್.ಆರ್ ನಗರ, ಕೆಂಗೇರಿ, ಶಿವಾಜಿನಗರ , ಜಯನಗರ, ಕೋರಮಂಗಲ, ಹೆಚ್​ಎಸ್​ಆರ್​ ಲೇಔಟ್, ಇಂದಿರಾನಗರ, ವೈಟ್​ಫೀಲ್ಡ್,ಸೇರಿದಂತೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ  ವಿದ್ಯುತ್ ಸಮಸ್ಯೆಯಾಗಲಿದೆ ಎಂದು ತಿಳಿಸಿದೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಪೀಣ್ಯ, ಹೆಬ್ಬಾಳ, ಜಾಲಹಳ್ಳಿ, ಮಲ್ಲೇಶ್ವರಂ, ಇಂದಿರಾನಗರ, ಶಿವಾಜಿನಗರ, ರಾಜಾಜಿನಗರ, ಆರ್​ಆರ್​ ನಗರ, ಕೆಂಗೇರಿ, ಕೋರಮಂಗಲ, ಜಯನಗರ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.ಈ ಏರಿಯಾಗಳಲ್ಲಿ ಪವರ್ ಕಟ್ 

 ವಿದ್ಯಾನಗರ ಕ್ರಾಸ್, ದೊಡ್ಡಜಾಲ, ಚಿಕ್ಕಜಾಲ, ಸೋನಪ್ಪನಹಳ್ಳಿ, ಮೇಸಗಾನಹಳ್ಳಿ, ಹುಟ್ಟನಹಳ್ಳಿ, ಕೋಳಿಪುರ, ಕಾದಿಗಾನಹಳ್ಳಿ, ನವರತ್ನ ಅಗ್ರಹಾರ, ಸಾದಹಳ್ಳಿ ಗೇಟ್, ಚನ್ನಹಳ್ಳಿ, ಬೈನಹಳ್ಳಿ, ಥರಬನಹಳ್ಳಿ, ಗಾದೇನಹಳ್ಳಿ, ಹೊಸಹಳ್ಳಿ, ಹುಣಸಮಾರನಹಳ್ಳಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕೂಡ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು  ಸಹಕರಿಸಬೇಕು ಎಂದು ಮನವಿ ಮಾಡಿದೆ.

ಬೂದಿಗೆರೆ ಟೌನ್, ಗಂಗಾವರ, ಚೌಡಪ್ಪನಹಳ್ಳಿ, ನಾಗೇನಹಳ್ಳಿ, ರೆಡ್ಡಿಹಳ್ಳಿ, ಮಂಚಪ್ಪನಹಳ್ಳಿ, ಹುಣಸೂರು, ದೊಡ್ಡಹುಲ್ಲೂರು, ಚಿಕ್ಕನಲ್ಲೂರಹಳ್ಳಿ, ಯೆಲಚೇನಹಳ್ಳಿ, ತಾವರೆಕೆರೆ, ಗಂಗಾಪುರ, ಕಮ್ಮಸಂದ್ರ, ಅತ್ತಿಬೆಲೆ, ಸೂಲಿಬೆಲೆ, ನಲಗಾನಹಳ್ಳಿ, ಚನ್ನರಾಯಪಟ್ಟಣದಲ್ಲಿ ವಿದ್ಯುತ್ ಇರುವುದಿಲ್ಲ ಎಂದು ತಿಳಿಸಿದೆ.

ಇದಿಷ್ಟೇ ಅಲ್ಲದೇ ಬೇರೆ ಕೆಲ ನಗರಗಳಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತಿದೆ. ಬೆಸ್ಕಾಂ ಮುಂಚಿತವಾಗಿ ಮಾಹಿತಿಯನ್ನೇನೋ ನೀಡಿದೆ, ಆದರೆ ಇದು ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ. ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ವಾರಗಳ ಕಾಲ  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ..

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ. ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.
Published by:Sandhya M
First published: