Hight Court: ಹೆತ್ತವರ ಸಂಬಂಧ ಅನೈತಿಕ ಇರಬಹುದು, ಆದರೆ ಮಕ್ಕಳಲ್ಲ: ಕರ್ನಾಟಕ ಹೈಕೋರ್ಟ್

High Court Judgement: ಈ ಜಗತ್ತಿನಲ್ಲಿ ತಂದೆ ಮತ್ತು ತಾಯಿ ಇಲ್ಲದೆ ಯಾವುದೇ ಮಗು ಜನಿಸುವುದಿಲ್ಲ ಎಂದು ನಾವು ಅರಿತಿದ್ದೇವೆ. ಮಗುವಿಗೆ ತನ್ನ ಜನ್ಮದಲ್ಲಿ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಕಾನೂನು ಇದನ್ನು ಮನ್ನಿಸಬೇಕು. ಅನಧಿಕೃತ ಸಂಬಂಧದ ಪೋಷಕರು ಇರಬಹುದು, ಆದರೆ ಕಾನೂನುಬಾಹಿರ ಮಕ್ಕಳು ಇರಲ್ಲ ಎಂದು ತೀರ್ಪು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬೆಂಗಳೂರು: ಬೆಸ್ಕಾಂ ಲೈನ್‌ಮ್ಯಾನ್ ಮರಣ ಹೊಂದಿದ ನಂತರ ಲೈನ್‌ಮ್ಯಾನ್ ಪುತ್ರನು ತಂದೆಯ ಉದ್ಯೋಗ ಕೋರಿ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಈ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಕಾನೂನುಬಾಹಿರ ಪೋಷಕರು ಇರಬಹುದು. ಆದರೆ ಕಾನೂನುಬಾಹಿರ ಮಕ್ಕಳಿರಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಜನ್ಮನೀಡುವ ತಂದೆ ತಾಯಿ ಇಲ್ಲದೆ ಯಾವುದೇ ಮಗು ಜನ್ಮತಾಳಲು ಸಾಧ್ಯವಿಲ್ಲ. ಹಾಗಾಗಿ ಕಾನೂನಾತ್ಮಕವಾಗಿ ನೋಡುವುದಾದರೆ ಅನಧಿಕೃತ ಪೋಷಕರು ಇರಬಹುದು. ಆದರೆ ಅನಧಿಕೃತವಾಗಿ ಮಕ್ಕಳು ಹುಟ್ಟಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಸಾವಿನ ನಂತರ ಸಹಾನುಭೂತಿಯ ಆಧಾರದ ಮೇಲೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಬೆಸ್ಕಾಂ) ಕೆಲಸ ಕೋರಿ ಕೆ ಸಂತೋಷ್ ಸಲ್ಲಿಸಿದ್ದ ಅರ್ಜಿಯನ್ನು ಏಕ ನ್ಯಾಯಾಧೀಶರು ರದ್ದುಪಡಿಸಿದ್ದರು. ಸಂತೋಷ್ ತಂದೆಯು ಬೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿದ್ದು ಮೃತಪಟ್ಟಿದ್ದರು.


ನಂತರ ಸಂತೋಷ್ ತಮ್ಮ ತಂದೆಯ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಂತೋಷ್ ಅವರ ತಂದೆಯು ಲೈನ್‌ಮ್ಯಾನ್ ಗ್ರೇಡ್ -2 ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರ ತಂದೆಯ ಮರಣದ ನಂತರ, ಸಂತೋಷ್ ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಈ ಆದೇಶಕ್ಕೆ ವ್ಯತಿರಿಕ್ತವಾಗಿ ತೀರ್ಪು ನೀಡಿದೆ.


ಇದನ್ನೂ ಓದಿ: Diabetes: ಶುಗರ್ ಟೆಸ್ಟ್ ಮಾಡೋಕೆ ಸೂಜಿ ಚುಚ್ಚಬೇಕಿಲ್ಲ, ನೋವಿಲ್ಲದೇ ಮಧುಮೇಹ ಪರೀಕ್ಷಿಸೋ ವಿಧಾನ ಕಂಡುಹಿಡಿದಿದ್ದಾರೆ ವಿಜ್ಞಾನಿಗಳು !

ಸಂತೋಷ್ ತಂದೆಯು ಮೊದಲ ವಿವಾಹ ಅಸ್ತಿತ್ವದಲ್ಲಿದ್ದಾಗಲೇ ಎರಡನೆಯ ವಿವಾಹ ಮಾಡಿಕೊಂಡಿದ್ದು ಸಂತೋಷ್ ಎರಡನೆಯ ವಿವಾಹದಿಂದ ಜನಿಸಿದವರಾಗಿದ್ದಾರೆ. ಬೆಸ್ಕಾಂ ನೀತಿಗೆ ಇದು ವಿರುದ್ಧವಾಗಿದ್ದರಿಂದ ಸಂತೋಷ್ ಉದ್ಯೋಗ ಅರ್ಜಿಯನ್ನು ಅದು ತಿರಸ್ಕರಿಸಿದೆ. ನಂತರ ಅರ್ಜಿದಾರರು ಹೈಕೋರ್ಟ್‌ ಅನ್ನು ಸಂಪರ್ಕಿಸಿದರು ಮತ್ತು ಅವರ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು.


ಆದರೆ, ವಿಭಾಗೀಯ ಪೀಠವು, "ಈ ಜಗತ್ತಿನಲ್ಲಿ ತಂದೆ ಮತ್ತು ತಾಯಿ ಇಲ್ಲದೆ ಯಾವುದೇ ಮಗು ಜನಿಸುವುದಿಲ್ಲ ಎಂದು ನಾವು ಅರಿತಿದ್ದೇವೆ. ಮಗುವಿಗೆ ತನ್ನ ಜನ್ಮದಲ್ಲಿ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಕಾನೂನು ಇದನ್ನು ಮನ್ನಿಸಬೇಕು. ಅನಧಿಕೃತ ಸಂಬಂಧದ ಪೋಷಕರು ಇರಬಹುದು, ಆದರೆ ಕಾನೂನುಬಾಹಿರ ಮಕ್ಕಳು ಇರಲ್ಲ ಎಂದು ತೀರ್ಪು ನೀಡಿದೆ.


ಇದನ್ನೂ ಓದಿ: Bengaluru Crime: ಪರಪ್ಪನ ಅಗ್ರಹಾರದ ಆ ಒಂದು ಸೆಲ್​ನಿಂದಲೇ ಬಂದಿತ್ತು ಎಲ್ಲಾ ಡ್ರಗ್ಸ್, ಆ ಸೆಲ್​ ಬಾಂಬೆ ಸಲೀಂನದ್ದು

ಸಂಸತ್ತು ಮಕ್ಕಳ ಕಾನೂನುಬದ್ಧತೆಗೆ ಏಕರೂಪತೆಯನ್ನು ತರುವುದು ಮತ್ತು ಮಾನ್ಯ ವಿವಾಹವಲ್ಲದ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಯಾವ ರೀತಿಯಲ್ಲಿ ರಕ್ಷಣೆಯನ್ನು ಒದಗಿಸಬೇಕು ಎಂಬುದನ್ನು ನಿರ್ಧರಿಸುವುದು ಸಂಸತ್ತಿನ ಮೇಲಿದೆ ಎಂಬ ಹೇಳಿಕೆ ನೀಡಿ ನ್ಯಾಯಪೀಠ ಗಮನಸೆಳೆದಿದೆ.


ಈ ಪ್ರಕರಣದ ಸೀಮಿತ ಉದ್ದೇಶಕ್ಕೆ ಸಂಬಂಧಪಟ್ಟಂತೆ, ಇತರ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಅಮಾನ್ಯ ಮತ್ತು ಅನೂರ್ಜಿತ ವಿವಾಹಗಳಿಂದ ಜನಿಸಿದ ಮಕ್ಕಳನ್ನು ಕಾನೂನಿನ ಮೂಲಕ ಸಮಾನವಾಗಿ ರಕ್ಷಿಸಬೇಕು ಎಂದು ನಾವು ನಂಬುತ್ತೇವೆ. ಮಕ್ಕಳಿಗೆ ಸಮಾನವಾದ ಹಕ್ಕು ನೀಡಿ. ಸಹಾನುಭೂತಿ ಆಧಾರಿತ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಅಮಾನ್ಯ ಮತ್ತು ಅನೂರ್ಜಿತ ವಿವಾಹಗಳನ್ನು ಹಿಂದೂ ವಿವಾಹ ಕಾಯ್ದೆ ಅಥವಾ 1954 ರ ವಿಶೇಷ ವಿವಾಹ ಕಾಯ್ದೆಯಡಿ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: