Ramya Divyaspandana: 'ಶಿವ' ಶಿವಾ.. 'ಪದ್ಮಾವತಿ' Troll ಮಾಡ್ತಿದ್ಯಂತೆ ಕಾಣದ 'ಕೈ'? ತಾವೇ ಖುದ್ದು ಸಾಕ್ಷಿ ಕೊಟ್ರು ರಮ್ಯಾ!

ರಮ್ಯಾ ದಿವ್ಯಸ್ಪಂದನ ಡಿಕೆಶಿ ಹಾಗೂ ಕೆಪಿಸಿಸಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ. “ನನ್ನ ವಿರುದ್ಧ ಟ್ರೋಲ್ (Troll) ಮಾಡುವಂತೆ ಪಕ್ಷದ ಕಚೇರಿಯೇ ಕರೆಕೊಟ್ಟಿದೆ” ಅಂತ ಆರೋಪಿಸಿರುವ ರಮ್ಯಾ, ಅದಕ್ಕೆ ತಾವೇ ಸಾಕ್ಷಿಯನ್ನೂ ನೀಡಿದ್ದಾರೆ.

ರಮ್ಯಾ ದಿವ್ಯಸ್ಪಂದನ

ರಮ್ಯಾ ದಿವ್ಯಸ್ಪಂದನ

  • Share this:
ಬೆಂಗಳೂರು: ಮೋಹಕ ತಾರೆ, ಸ್ಯಾಂಡಲ್‌ವುಡ್ ಕ್ವೀನ್ (Sandalwood Queen) ರಮ್ಯಾ (Ramya) ಮತ್ತೆ ಸಿನಿಮಾಕ್ಕೆ (Cinema) ಬರ್ತಾರೆ ಅಂತ ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದ್ರೆ ‘ಪದ್ಮಾವತಿ’ ಮಾತ್ರ ಇತ್ತ ಸಿನಿಮಾಗಳೂ ಬೇಡ, ಅತ್ತ ರಾಜಕೀಯವೂ (Politics) ಬೇಡ ಅಂತ ಸುಮ್ಮನೆ ಇದ್ದಾರೆ. ಈ ಮಧ್ಯೆ ಅವ್ರು ಸಿನಿಮಾಗೆ ಬರ್ತಾರೆ ಅನ್ನೋ ಸುದ್ದಿಯೂ ಹರಿದಾಡ್ತಿತ್ತು. ಇದೀಗ ರಮ್ಯಾ ತಮ್ಮ ಸಿನಿಮಾಗಳಿಂದ ಅಲ್ಲದೇ, ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದು ಕೆಪಿಸಿಸಿ (KPCC) ಹಾಗೂ ಅದರ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧದ ಟ್ವೀಟ್ (Tweet) ವಿಚಾರಕ್ಕೆ. ಹೌದು, ರಮ್ಯಾ ದಿವ್ಯಸ್ಪಂದನ ಡಿಕೆಶಿ ಹಾಗೂ ಕೆಪಿಸಿಸಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ. “ನನ್ನ ವಿರುದ್ಧ ಟ್ರೋಲ್ (Troll) ಮಾಡುವಂತೆ ಪಕ್ಷದ ಕಚೇರಿಯೇ ಕರೆಕೊಟ್ಟಿದೆ” ಅಂತ ಆರೋಪಿಸಿರುವ ರಮ್ಯಾ, ಅದಕ್ಕೆ ತಾವೇ ಸಾಕ್ಷಿಯನ್ನೂ ನೀಡಿದ್ದಾರೆ.

ಡಿಕೆಶಿ ನಡೆಗೆ ಆಕ್ಷೇಪಿಸಿದ್ದ ರಮ್ಯಾ

ಸಚಿವ ಅಶ್ವತ್ಥ್​ ನಾರಾಯಣ್​ ಹಾಗೂ   ಮಾಜಿ ಸಚಿವ ಎಂಬಿ ಪಾಟೀಲ್ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ರಕ್ಷಣೆಗಾಗಿ ಅಶ್ವತ್ಥ್​ ನಾರಾಯಣ್​ ಎಂಬಿ ಪಾಟೀಲ್​ ಮೊರೆ ಹೋಗಿರುವ ಸಾಧ್ಯತೆ ಇದೆ ಎಂದಿದ್ದರು. ಇದಕ್ಕೆ ರಮ್ಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಎಂಬಿ ಪಾಟೀಲ್​ ಪರ ಬ್ಯಾಟಿಂಗ್ ನಡೆಸಿದ್ದ ರಮ್ಯಾ, ಇದೊಂದು ಸೌಹರ್ದಯುತ ಭೇಟಿ ಆಗಿರಬಹುದು. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದರು.

‘ಪದ್ಮಾವತಿ’ ವಿರುದ್ಧ ಕೆಪಿಸಿಸಿ ರಣಕಹಳೆ?

ಹೀಗಂತ ಖುದ್ದು ರಮ್ಯಾ ಅವರೇ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವಂತೆ ಕೆಪಿಸಿಸಿ ಕಚೇರಿಯಿಂದ ಸೂಚನೆ ಹೋಗಿದೆ ಅಂತ ಆರೋಪಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಕಚೇರಿಯಿಂದ ನನ್ನನ್ನು ಟ್ರೋಲ್ ಮಾಡುವಂತೆ ಸಂದೇಶವನ್ನು ರವಾನಿಸಲಾಗಿದ್ಯಂತೆ ಅಂತ ಆರೋಪಿಸಿದ್ದಾರೆ.ಇದನ್ನೂ ಓದಿ: DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

“ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ”

ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ ಅಂತ ರಮ್ಯಾ ಹೇಳಿದ್ದಾರೆ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ರೋಲ್ ಮಾಡಿರುವ ಸರಣಿ ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಳ್ಳುವುದರ ಮೂಲಕ ಕೆಪಿಸಿಸಿ ವಿರುದ್ಧ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ. ಅದಲ್ಲದೇ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿ.ಆರ್‌. ನಾಯ್ಡು ಅವರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿ, ಉತ್ತಮ ಕಾಪಿ, ಪೇಸ್ಟ್‌ ಜಾಬ್‌ ಎಂದು ವ್ಯಂಗ್ಯವಾಡಿದ್ದಾರೆ.

ರಮ್ಯಾ ಟ್ವೀಟ್ ಮಾಡಿರುವ ಸ್ಕ್ರೀನ್ ಶಾಟ್‌ನಲ್ಲಿ ಏನಿದೆ?

ಇನ್ನು ರಮ್ಯಾ ಟ್ವೀಟ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.  ಇನ್ನು ಅವರನನು ಟ್ರೋಲ್ ಮಾಡಿರುವ, ಪ್ರಶ್ನೆ ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ಅವರೇ ಪುನಃ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವಕಾಶ ಕೊಟ್ಟ ನಾಯಕರಿಗೆ ಬೆಲೆ ಕೊಡಲಿಲ್ಲ, ಅವಕಾಶ ಕೊಟ್ಟ ಜನರಿಗೂ ನ್ಯಾಯ ಕೊಡಲಿಲ್ಲ, ಇದೀಗ ಪ್ರತ್ಯಕ್ಷವಾಗಲು ಕಾರಣವೇನು? ದಯವಿಟ್ಟು ನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ ಅಂತ ಒಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Ramya: ಮೋಹಕ ತಾರೆ ರಮ್ಯಾ ಜೊತೆ ಪೋಸ್ ಕೊಟ್ಟ ಯುವಕನ್ಯಾರು? ಸ್ಯಾಂಡಲ್​ವುಡ್​ನಲ್ಲಿ ಬೇರೆಯದ್ದೇ ಗುಸಗುಸು!

“ಅಂಬರೀಷ್ ಅಂತ್ಯ ಸಂಸ್ಕಾರಕ್ಕೆ ಬಾರದವರು”

ಅಂದು ಅಂಬರೀಷ್‌ ಅಂತ್ಯ ಸಂಸ್ಕಾರಕ್ಕೂ ಬಾರದ ನೀವು ಇಂದು ಒಬ್ಬ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಂಡಿದ್ದೀರಾ? ಒಮ್ಮೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಅಂತ ಒಬ್ಬರು ಕಾಲೆಳೆದರೆ, ನಿಂಗೆ ಅವಕಾಶ ಕೊಟ್ಟ ನಾಯಕರನ್ನೇ ಮರೆತು ಮಾತನಾಡುತ್ತಿದ್ದೀಯಾ? ಏಣಿ ಹತ್ತಿದ ಮೇಲೆ ಒದೆಯುವುದು ಎಂದರೆ ಇದೇ. ನಮ್ಮ ನಾಯಕರ ಬಗ್ಗೆ ನೀವು ಮಾತನಾಡುವ ಅಗತ್ಯ ಇಲ್ಲ ಅಂತ ಮತ್ತೊಬ್ಬರು ಟೀಕಿಸಿದ್ದಾರೆ.
Published by:Annappa Achari
First published: