Vehicles in Bengaluru: ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ 1 ಕೋಟಿ; ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡ್ರೆ ದೇವ್ರೇ ಗತಿ!

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿಯಾದರೂ ಅಚ್ಚರಿಯಿಲ್ಲ. ಕೆಲವೊಂದು ಮನೆಯಲ್ಲಿ ಕೇವಲ ಇಬ್ಬರೇ ಇದ್ದರೂ, ಅಲ್ಲಿ ನಾಲ್ಕೈದು ವಾಹನಗಳಿರುತ್ತವೆ. ಹೀಗಾಗಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಕೋಟಿ ತಲುಪಿದೆ!

ಬೆಂಗಳೂರು ಟ್ರಾಫಿಕ್‌ ಜಾಮ್‌ನ ಸಂಗ್ರಹ ಚಿತ್ರ

ಬೆಂಗಳೂರು ಟ್ರಾಫಿಕ್‌ ಜಾಮ್‌ನ ಸಂಗ್ರಹ ಚಿತ್ರ

  • Share this:
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಾರ್ವಜನಿಕ ಸಾರಿಗೆ (Public Transport) ಬಳಿಸಿ ಅಂತ ಎಷ್ಟೇ ಪ್ರಚಾರಾಂದೋಲನ ಮಾಡಿದರೂ ಜನ ಕೇಳ್ತಿಲ್ಲ. ಮನೆಯಲ್ಲಿ ಇದ್ದವರ ಬಳಿಯೆಲ್ಲಾ ಎರಡು, ಮೂರು ವಾಹನ (Vehicles) ಇಟ್ಟಿಕೊಂಡಿದ್ದಾರೆ. ಹೀಗಾಗಿ ಹೆಚ್ಚಾಗ್ತಿರೋ ವಾಹನಗಳ ಸಂಖ್ಯೆ ಭವಿಷ್ಯದಲ್ಲಿ ಉಸಿರಾಡುವ ಗಾಳಿ (Breathing Air) ವಿಷಕಾರಿಯಾಗುವ (Poison) ಆತಂಕ ಇದೆ. ವಾಹನ ದಟ್ಟಣೆ (Traffic Jam) ತಗ್ಗಿಸಲು ನಮ್ಮ ಮೆಟ್ರೋ (Namma Metro) ಸಂಚಾರವನ್ನು ಆರಂಭಿಸಿದ್ರೂ ನಗರದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ವಾಹನಗಳು ನೋಂದಣಿಯಾಗ್ತಿರೋದು (Registration) ಅಚ್ಚರಿ ಮೂಡಿಸಿದೆ.

1 ಕೋಟಿ ಸನಿಹಕ್ಕೆ ಬಂತು ವಾಹನಗಳ ಸಂಖ್ಯೆ

ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಜನಸಂಖ್ಯೆ ಸುಮಾರು 1 ಕೋಟಿ 30 ಲಕ್ಷ ಇದೆ. ಆದರೆ ವಾಹನ ಸಂಖ್ಯೆ ಒಂದು ಕೋಟಿ ಸನಿಹಕ್ಕೆ ಬಂದು ನಿಂತಿದೆ. ಜನ ಸಾರ್ವಜನಿಕ ವಾಹನಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಾಗಿ ಜನ ತಮ್ಮದೇ ಖಾಸಗಿ ವಾಹನಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದಿನದಿಂದ ದಿನಕ್ಕೂ ವಾಹನ ಸಂಖ್ಯೆ ಹೆಚ್ಚಳವಾಗ್ತಿರುವ ಹಿನ್ನೆಲೆ ಪರಿಸರ ಮಾಲಿನ್ಯ ಹೆಚ್ಚಾಗ್ತಿದೆ ಅಂತ ಕಳವಳ ವ್ಯಕ್ತವಾಗಿದೆ.

ಮನೆಯೊಂದು, ವಾಹನ ಹಲವು!

ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ವಾಹನಗಳಿರಬೇಕು. ಕೆಲವೊಮ್ಮೆ ಮನೆಯಲ್ಲಿ ಕೇವಲ ಇಬ್ಬರೇ ಮಂದಿ ಇದ್ದರೂ ನಾಲ್ಕೈದು ವಾಹನಗಳಿರುತ್ತವೆ. ನಗರದಲ್ಲಿ ದ್ವಿಚಕ್ರ, ಕಾರುಗಳು , ಬಸ್ ಸೇರಿ ಸಾರಿಗೆಯೇತರ ವಾಹನಗಳ ಸಂಖ್ಯೆನೇ ಬರೋಬ್ಬರಿ ಒಂದು ಕೋಟಿ ಮೂರು ಲಕ್ಷದ 21 ಸಾವಿರ ವಾಹನಗಲೂ ನೋಂದಣೆ ಅಗಿದೆ.

ಇದನ್ನೂ ಓದಿ: Electric Bus: ಬಿಎಂಟಿಸಿ ಪಾಲಿಗೆ 'ಬಿಳಿಯಾನೆ' ಆದ ಎಲೆಕ್ಟ್ರಿಕ್ ಬಸ್; ಆದಾಯಕ್ಕಿಂತ ಬಾಡಿಗೆಯೇ ಜಾಸ್ತಿ!

ಈಗಾಗಲೇ ನೋಂದಣಿಯಾಗಿರುವ ವಾಹನಗಳ ಸಂಖ್ಯೆ

2022 ರ ಮೇ ತಿಂಗಳ ವರೆಗೆ ರಾಜಧಾನಿಯಲ್ಲಿ ಆಗಿರುವ ವಾಹನಗಳ ನೋಂದಣಿ ಅಂಕಿ ಅಂಶ ನೋಡೋದಾದ್ರೆ, ದ್ವಿಚಕ್ರ ವಾಹನಗಳು : 68,72,763, ನಾಲ್ಕು ಚಕ್ರ ವಾಹನ  21,74,830, ಟ್ರಕ್, ಲಾರಿಗಳ ಸಂಖ್ಯೆ : 1,15,000, ಟ್ಯಾಕ್ಸಿ, ಆಟೋ ಗಳ ಸಂಖ್ಯೆ : 3,50,000, ಇತರೆ ವಾಹನಗಳು : 8,08,990 ಅಂದರೆ ಒಟ್ಟು ವಾಹನಗಳ ಸಂಖ್ಯೆ : 1,03,21,583ರಷ್ಟಾಗಿದೆ.

ಪೊಲ್ಯೂಷನ್ ಸಿಟಿಯಾಗ್ಬಿಡುತ್ತಾ ಸಿಲಿಕಾನ್ ಸಿಟಿ?

ಸಿಲಿಕಾನ್ ಸಿಟಿ ಟ್ರಾಫಿಕ್ ಸಮಸ್ಯೆಯಿಂದ ವಾಯು ಮಾಲಿನ್ಯ, ರಸ್ತೆ ಅಭಿವೃದ್ಧಿಗೆ ಮಾರಕವಾಗಿದೆ. ದೆಹಲಿ ಮಾದರಿಯ ವಾಯು ಮಾಲಿನ್ಯಕ್ಕೆ ಸಾಕ್ಷಿಯಾಗುತ್ತಾ ಬೆಂಗಳೂರು ಅನ್ನೋ ಭಯ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ವಾಹನಗಳ ನೋಂದಣಿ ಹೆಚ್ಚಳವಾಗ್ತಿದೆ. ಇದೇ ಕಾರಣಕ್ಕೆ ದಿನೇ ದಿನೆ ಹೆಚ್ಚಾಗ್ತಿದೆ ಸಂಚಾರ ದಟ್ಟಣೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ರಸ್ತೆ ಗುಣಮಟ್ಟಕ್ಕೂ ಬೀಳುತ್ತೆ ಹೊಡೆತ

ಬಿಬಿಎಂಪಿ ವ್ಯಾಪ್ತಿಯಲ್ಲಿ 1,940 km ನಷ್ಟು ಉದ್ದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ, ಈ ರಸ್ತೆಗಳು ಹೆಚ್ಚು ಕಮ್ಮಿ 60 ಲಕ್ಷ ವಾಹನಗಳನ್ನು ಮಾತ್ರ ಕೆಪಾಸಿಟಿ ಮಾತ್ರ ಹೊಂದಿದೆ. ಆದರೆ ಸದ್ಯಕ್ಕೆ 1 ಕೋಟಿಗೂ ಅಧಿಕ ವಾಹನಗಳಿವೆ, ಇದರಿಂದ ರಸ್ತೆ ಗುಣಮಟ್ಟಕ್ಕೆ ಹೊಡೆತ ಬಿದ್ದಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಮರೇಶ್ ಅಭಿಪ್ರಾಯ ವ್ಯಕ್ಯ ಪಡಿಸುತ್ತಿದ್ದಾರೆ.

ಕಟ್ಟುನಿಟ್ಟಿನ ಕಾನೂನು ಅಗತ್ಯ

ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆಮಾಡಬೇಕಾಗಿದ್ದರೆ ಕಾರ್‌ಪೋಲಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇದರಿಂದ ಹೆಚ್ಚು ವಾಹನಗಳು ರಸ್ತೆಗೆ ಬರುವುದನ್ನು ತಡೆಯಬಹುದಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮನೆಗೆ ಕಾರ್ ಇಲ್ಲ ಅನ್ನೋ  ವ್ಯವಸ್ಥೆ ಇರಬೇಕು. ಇಲ್ಲವಾದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಿದೆ.

ಸಾರ್ವಜನಿಕರ ಸಹಕಾರವೂ ಮುಖ್ಯ

ಸಾರ್ವಜನಿಕರು ನಗರದಲ್ಲಿ ಓಡಾಟಕ್ಕೆ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನು ಬಳಸಬೇಕು. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಆದರೆ ಈ ರೀತಿಯ ತೀರ್ಮಾನ ಮಾಡದೆ ಇರೋದು ನಗರದಲ್ಲಿ ಸಂಚಾರ ದಟ್ಟನೆಗೆ ಕಾರಣವಾಗಿದೆ.

ಇದನ್ನೂ ಓದಿ: Neo Train: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಸೇರ್ಪಡೆ, ಶೀಘ್ರವೇ ಓಡಾಡಲಿದೆ ಮೆಟ್ರೋ ನಿಯೋ ರೈಲು

ಒಟ್ನಲ್ಲಿ ರಾಜಧಾನಿ ಬೆಂಗಳೂರಿ ಈಗ ಪರಿಸರ ಮಾಲಿನ್ಯ ಸಿಟಿ ಅಗ್ತಿದೆ. ಇತ್ತ ವಾಹನಗಳ ದಟ್ಟಣೆಯಿಂದ ಟ್ರಾಪಿಕ್ ಸಮಾಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಹೀಗೆ ಆದರೆ ಒಂದಲ್ಲ ಒಂದು ದಿನ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣೆಗೆ ಬ್ರೇಕ್ ಬೀಳೋ ಸಾದ್ಯತೆ ಇದ್ದರೂ ಇರಬಹುದು.
Published by:Annappa Achari
First published: