Mercy Killing: "ದಯ ಮಾಡಿ, ಮರಣ ನೀಡಿ" ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಬಿಎಂಟಿಸಿ ಡ್ರೈವರ್! ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ
ಬಿಎಂಟಿಸಿ ಬಸ್ ಚಾಲಕರೊಬ್ಬರು ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ದಯಾಮರಣಕ್ಕೆ (Mercy Killing) ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. “ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ಸಾಯಬೇಕಾಗಿದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಿ” ಅ್ಂತ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಅಂತ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ
ಬೆಂಗಳೂರು: ಸಾವು (Death) ಎಂದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೆದರುತ್ತಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿ ಬಸ್ ಡ್ರೈವರ್ (BMTC Bus Driver) ಒಬ್ಬರು ಸಾವನ್ನು ಬಯಸಿ, ದೇಶದ ರಾಷ್ಟ್ರಪತಿ (President) ಹಾಗೂ ಪ್ರಧಾನ ಮಂತ್ರಿಗೆ (Prime Minister) ಪತ್ರ (Letter) ಬರೆದಿದ್ದಾರೆ. ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹಾಗೂ ಸಾರಿಗೆ ಸಚಿವ (Transport Minister) ಬಿ. ಶ್ರೀರಾಮುಲು (B. Sriramulu) ಅವರಿಗೆ ಪತ್ರ ಬರೆದಿದ್ದರಂತೆ. ಇದೀಗ ಅವರಿಂದ ಸ್ಪಂದನೆ ದೊರೆಯದ ಕಾರಣ ನೇರವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದು, ದಯಾಮರಣಕ್ಕೆ (Mercy Killing) ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. “ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ಸಾಯಬೇಕಾಗಿದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಿ” ಅ್ಂತ ಮನವಿ (Request) ಮಾಡಿದ್ದಾರೆ. ಇದಕ್ಕೆ ಕಾರಣ ಏನು ಅಂತ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ!
ಪತ್ರ ಬರೆದ ಬಿಎಂಟಿಸಿ ಡ್ರೈವರ್ ಶಂಬುಲಿಂಗಯ್ಯ
ಬೆಂಗಳೂರಿನ ಬಿಎಂಟಿಸಿ ಬಸ್ ಡ್ರೈವರ್ ಶಂಬುಲಿಂಗಯ್ಯ ಚಿಕ್ಕಮಠ ಎಂಬುವವರೇ ದಯಾಮರಣಕ್ಕೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವವರು. “ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ಸಾಯಬೇಕಾಗಿದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಿ” ಅ್ಂತ ಮನವಿ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
“ಕೆಲಸ ಇಲ್ಲ, ತಿನ್ನಲು ಅನ್ನವೂ ಇಲ್ಲ”
ದಯಾಮರಣಕ್ಕೆ ಮನವಿ ಮಾಡಿದ್ದಕ್ಕೆ ಕಾರಣ ಏನು ಅಂತ ಶಂಬುಲಿಂಗಯ್ಯ ಚಿಕ್ಕಮಠ ಅವರು ಪತ್ರದಲ್ಲಿ ವಿವರಿಸಿದ್ದಾರೆ. “ನಾನು ಈ ಹಿಂದೆ ಬಿಎಂಟಿಸಿ ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಬದುಕಲು ದಿಕ್ಕೇ ಇಲ್ಲ. ತಿನ್ನಲು ಅನ್ನವಿಲ್ಲ. ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ. ಹೀಗಾಗಿ ನಮ್ಮ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಇದರಿಂದ ನಾನು, ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಸಾಯಲು ನಿರ್ಧರಿಸಿದ್ದೇನೆ” ಅಂತ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ತಮ್ಮ ಸಮಸ್ಯೆ ಬಗ್ಗೆ, ತಮಗೆ ಆಗಿರುವ ಅನ್ಯಾಯದ ಬಗ್ಗೆ ಚಾಲಕ ಶಂಬುಲಿಂಗಯ್ಯ ಚಿಕ್ಕಮಠ ಅವರು ಈ ಹಿಂದೆಯೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಪತ್ರ ಬರೆದಿದ್ದರಂತೆ. ಆದರೆ ಅವರಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ, ನನಗೆ ನ್ಯಾಯ ಕೊಡಿಸಲಿಲ್ಲ ಅಂತ ಆರೋಪಿಸಿದ್ದಾರೆ.
ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರನ್ನು ಮಾತ್ರ ಬಿಎಂಟಿಸಿ ಮೇಲಾಧಿಕಾರಿಗಳು ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ವಜಾಗೊಂಡ ಐದರಿಂದ ಹತ್ತು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ರಾಜ್ಯ ಸರ್ಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಹೀಗಾಗಿ ನನಗೆ ಅನ್ಯಾಯವಾಗಿದೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವವರು ಪತ್ರ ಬರೆದು ಮವವಿ ಮಾಡಿದ್ದಾರೆ.