Bengaluru: ಮಳೆಗೆ ಮುರಿದು ಬಿತ್ತು ದೊಡ್ಡ ಆಲದ ಮರದ ಭಾಗ; 400 ವರ್ಷಗಳ ಇತಿಹಾಸ ಪ್ರಸಿದ್ಧ ವೃಕ್ಷಕ್ಕೆ ಕಂಟಕ

ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಭಾನುವಾರ ರಾತ್ರಿ ದೊಡ್ಡ ಆಲದ ಮರದ ಭಾಗವೊಂದು ಕುಸಿದು ಬಿದ್ದಿದೆ. ಆದರೆ, ಬಿದ್ದಿರುವ ಭಾಗಗಳನ್ನು ತೆರವುಗೊಳಿಸಲು ರಾಜ್ಯ ಅರಣ್ಯ ಮತ್ತು ತೋಟಗಾರಿಕೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

ದೊಡ್ಡ ಆಲದಮರ

ದೊಡ್ಡ ಆಲದಮರ

  • Share this:
ಬೆಂಗಳೂರು (ಮೇ 12): ಅದು ಭಾರತದ ಟಾಪ್ 10 ಪುರಾತನ ಮರಗಳಲ್ಲಿ (Tree) ಒಂದು. ಬೆಂಗಳೂರಿನ (Bengaluru) ಹಿರಿಮೆ ಪ್ರತೀಕ ನಮ್ಮ ದೊಡ್ಡ ಆಲದ ಮರಕ್ಕೆ  (Big Banyan Tree) ಇದೀಗ ಆತಂಕ ಎದುರಾಗಿದೆ. ಕಳೆದೊಂದು ವಾರದ ಮಳೆಗೆ ಮರದ ಒಂದು ಭಾಗ ಧರೆಗುರುಳಿದೆ. ನ್ಯೂಸ್ 18 ವರದಿ ಮಾಡಿದ ಕೆಲ ಗಂಟೆಗೆ ಅಧಿಕಾರಿಗಳ (Officer) ತಂಡವೂ ಭೇಟಿ ನೀಡಿತು. ಧರೆಗೆ ಉರುಳಿದ ಬೃಹತ್ ಗಾತ್ರದ ಆಲದ ಮರ. ಪಾರ್ಕ್ ಅಂಗಾತ ಮಲಗಿರುವ ದೊಡ್ಡ ಆಲದ ಮರ ಇದೀಗ ಅಪಾಯದಂಚಿನಲ್ಲಿದೆ.

ಮುರಿದು ಬಿದ್ದ 'ದೊಡ್ಡ ಆಲದ ಮರ'ದ ಭಾಗ

ಭಾರತದ ಪುರಾತನ ಆಲದ ಮರಗಳಲ್ಲೇ ಆರನೆಯ ಸ್ಥಾನ ಹೊಂದಿರುವ ಆಲದ ಮರವಾಗಿದೆ. 400 ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ, ಅಪರೂಪದ ಮರದ ಒಂದು ಭಾಗ ಮಳೆ, ಬಿರುಗಾಳಿಗೆ ನೆಲಕ್ಕುರುಳಿದೆ. ದೇಶದಲ್ಲಿ ಅತಿ ದೊಡ್ಡ ಆಲದ ಮರದಲ್ಲಿ ಇದೂ ಒಂದು. ದೇಶದ ಟಾಪ್ 10 ಬೃಹತ್ ಮರಗಳಲ್ಲಿ ದೊಡ್ಡ ಆಲದ ಮರ. ಕೇತೋಹಳ್ಳಿ ಪಂಚಾಯತಿ ವ್ಯಾಪ್ತಿಯ ಮರಕಳೆದೊಂದು ವಾರದಿಂದ ಸುರಿದ ಮಳೆಗೆ ಬೇರು ಸಹಿತ ಧರೆಗೆ ದೊಡ್ಡ ಆಲದ ಮರ ಒಂದು ಭಾಗ ಉರುಳಿದೆ.

ದೇಶದ ಟಾಪ್ 10 ಬೃಹತ್ ಮರಗಳಲ್ಲಿ ಒಂದು

ದೇಶದ ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ. ಆಲದ ಮರದ ಎತ್ತರ 95 ಅಡಿ. ಕೊಂಬೆಗಳು ದೈತ್ಯ ಮರ  3 ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ. .

SLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ

2000ದಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ.ಕಳೆದೊಂದು ತಿಂಗಳ ಹಿಂದೆ ಆಲದ ಮರದ ಮತ್ತೊಂದು ಭಾಗ ನೆಲಕ್ಕುರುಳಿತ್ತು.‌ ಒಂದೊಂದಾಗಿ ಬೃಹತ್ ಆಲದ ಮರ ಭಾಗ ಧರೆಗುರುಳಿದರೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ತೋಟಗಾರಿಕೆ ನಿರ್ಲಕ್ಷ್ಯ ಎಂದು ಜನರ ಆರೋಪ

ತೋಟಗಾರಿಕೆ ವ್ಯಾಪ್ತಿಯಲ್ಲಿ ಬರುವ ಈ ಬೃಹತ್ ಆಲದ ಮರ ಕೊಂಬೆಯ ಬಳ್ಳಿ ಮತ್ತೊಂದು ಮರವಾಗಿ ಬೆಳೆಯುವ ವೇಳೆ ಬೇರು ಉತ್ತಮಗೊಳಿಸದೇ ತೋಟಗಾರಿಕೆ ನಿರ್ಲಕ್ಷ್ಯ ಮಾಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಾರೆ. ಈ ಬೃಹತ್ ದೊಡ್ಡ ಆಲದ ಆಲದ ಮರದ ಕೊಂಬೆಯ ಬಳ್ಳಿ (ಬಳಲು) ನಿಂದಲೇ ಮತ್ತೊಂದು ಗಿಡ ಮರವಾಗಿ ಬೆಳೆಯುತ್ತೆ. ಇಂಥ ಮರ ಧರೆಗುರುಳಿದ ದೊಡ್ಡ ಆಲದ ಮರ ಒಂದು ಭಾಗ ಹಿನ್ನೆಲೆ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಜ್ಞ ವಿಜ್ಞಾನಿಗಳು ಭೇಟಿ ನೀಡಿದೆ.

ಇದನ್ನೂ ಓದಿ: Kolluru Mookambika Temple: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ದೇಣಿಗೆ ಸಂಗ್ರಹ

ಅಧಿಕಾರಿಗಳ ಭೇಟಿ ಪರಿಶೀಲನೆ

ನ್ಯೂಸ್ 18 ವರದಿ ಮಾಡಿದ ಕೆಲ ಗಂಟೆಗಳಲ್ಲಿ ಆಗಮಿಸಿ ಧರೆಗುರುಳಿದ ದೊಡ್ಡ ಆಲದ ಮರ, ವಾಲಿದ ಜಾಗವನ್ನು ತಜ್ಞ ಸಸ್ಯಶಾಸ್ತ್ರ ವಿಜ್ಞಾನಿಗಳು ಪರಿಶೀಲಿಸಿದರು‌. ಡಾ ಯಲ್ಲಪ್ಪ ನೇತೃತ್ವದ ಮೂವರು ಸಮಿತಿ ಸದಸ್ಯರು ಭೇಟಿ ನೀಡಿ ವಾಲಿದ, ಹಾನಿಯಾದ ದೊಡ್ಡ ಆಲದ ಮರ ಹಾನಿಯಾಗದಂತೆ ಕೆಲ ಸಲಹೆ ನೀಡಿದರು. ಇಷ್ಟುಮಾತ್ರವಲ್ಲ ಕಳೆದೊಂದು ವಾರ ಮಳೆ ಪರಿಣಾಮ ಬೆಂಗಳೂರು ಹೊರವಲಯದಲ್ಲಿ ನೂರಕ್ಕೂ ಹೆಚ್ಚು ಮರ ನೆಲಕ್ಕುರುಳಿವೆ.‌ ದೊಡ್ಡ ಆಲದ ಮರದ ಸುತ್ತಲೂ ರಸ್ತೆ ಅಕ್ಕಪಕ್ಕದಲ್ಲಿದ್ದ ಮರ ನೆಲಕ್ಕುರುಳಿವೆ. ಒಟ್ಟಿನಲ್ಲಿ ಬೆಂಗಳೂರಿನ ಹೆಮ್ಮೆಯ ಪುರಾತನ ದೊಡ್ಡ ಆಲದ ಮರ ಸಂರಕ್ಷಿಸಿ ಎನ್ನುವುದು ನ್ಯೂಸ್ 18 ಕಾಳಜಿ.
Published by:Pavana HS
First published: