ತಾಯಿಯ ಕಣ್ಣೀರು ನೋಡಲಾಗದೆ ರೌಡಿಶೀಟರ್​​ನ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ ಮಗ!

ಕೊಲೆಯಾದ ಹರೀಶ್ 2017 ರಲ್ಲಿ ‌ಕ್ಷುಲ್ಲಕ ಕಾರಣಕ್ಕೆ ರಕ್ಷಿತ್ ನ ಕಿವಿ ಕಟ್ ಮಾಡಿದ್ದನಂತೆ. ಆಪರೇಷನ್ ಮಾಡಿಸಿದ್ರೂ ನೋವು ಮಾತ್ರ ಕಮ್ಮಿ ಆಗಿರಲಿಲ್ಲ. ಪ್ರತಿನಿತ್ಯ ನೋವು ಅಂತ ರಕ್ಷಿತ್ ತಾಯಿ ಹತ್ತಿರ ಅಳ್ತಾ ಇದ್ದ. 

ಕೊಲೆಯಾದ ಹರೀಶ

ಕೊಲೆಯಾದ ಹರೀಶ

  • Share this:
ಬೆಂಗಳೂರು: ಆತ ಇಡೀ ಏರಿಯಾದಲ್ಲಿ ಫುಲ್ ಹವಾ ಮೈಂಟೇನ್ ಮಾಡ್ತಾ ಇದ್ದ ನಟೋರಿಯಡ್ ರೌಡಿ. ಪೊಲೀಸರು ಯಾವಾಗಲೇ ಲಾ ಅಂಡ್ ಆರ್ಡರ್ ಹೊರಡಿಸಿದ್ರೂ ಆತನನ್ನ ಠಾಣೆಗೆ ಕರ್ಕೊಂಡು ಬಂದು ವಾರ್ನ್ ಮಾಡ್ತಾ ಇದ್ರು. ಆದೇ ರೀತಿ ಸ್ಟೇಷನ್ ಗೆ ಬಂದು ಸಹಿ ಹಾಕಿ ಹೊರಗಡೆ ಬರ್ತಾ ಇದ್ದಿದ್ದೇ ರಸ್ತೆಯಲ್ಲಿ ಕಾದಿದ್ದ ಆಗಂತುಕರು‌ ಮನಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ. ಹರೀಶ್ ಅಲಿಯಾಸ್ ಮಿಟಾಯಿ ಬರ್ಬರವಾಗಿ ಕೊಲೆಯಾಗಿದ್ದಾರೆ

ಹರೀಶ್ ಬಾಣಸವಾಡಿ ಠಾಣೆಯ ರೌಡಿಶೀಟರ್. ಕೊಲೆ, ಕೊಲೆ ಯತ್ನ, ರಾಬರಿ ಸೇರಿ ಹಲವು ಕೇಸ್ ಗಳಲ್ಲಿ ಜೈಲು ಸೇರಿದ್ದ ಹರೀಶ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಜೈಲಿನಿಂದ ಬಂದಿದ್ದೇ ರೌಡಿಗಳ‌ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಹರೀಶ್ ನ ಠಾಣೆಗೆ ಕರೆಸಿ ವಾರ್ನ್ ಮಾಡಿ, ಪ್ರತಿ ವಾರವೂ ಬಂದು ಸಹಿ ಮಾಡುವಂತೆ ಹೇಳಿದ್ರು. ಅದ್ರಂತೆ ಜುಲೈ‌ 28 ರಂದು ಸಹಿ ಮಾಡಲು‌ ಬಂದಾಗ ಠಾಣೆಯ ಸಮೀಪವೇ ಎದುರಾಳಿಯ ಗುಂಪು ಕಾದಿತ್ತು. ಗಮನಿಸದ ಹರೀಶ್ ಠಾಣೆ ಒಳಗೆ ಹೋಗಿ ಸೈನ್ ಮಾಡಿ ಹೊರಗಡೆ ಬಂದಿದ್ದೇ ರಸ್ತೆಯಲ್ಲಿ ಕಾದಿದ್ದ ಗ್ಯಾಂಗ್ ಬೈಕ್ ನಿಂದ ಕೆಳಗೆ ಬೀಳಿಸಿ ಮನಸೋ ಇಚ್ಚೆ ಲಾಂಗು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

ನಡುರಸ್ತೆಯಲ್ಲಿ 31 ಬಾರಿ‌ ಇರಿದು ರೌಡಿಶೀಟರ್ ಕೊಲೆ..!

ಬೈಕ್ ನ ಕೆಳಗೆ ಬೀಳಿಸಿದ್ದೇ ರಕ್ಷಿತ್ ಹಾಗೂ ಆತನ ಸ್ನೇಹಿತರು ಮನಸೋ ಇಚ್ಚೆ ಅಟ್ಯಾಕ್ ಮಾಡಿದ್ರು. ಅಟ್ಯಾಕ್ ಮಾಡಿದ ರಭಸಕ್ಕೆ ತಲೆಯೇ ಚೆಲ್ಲಾಪಿಲ್ಲಿ ಆಗುವಂತೆ ಆಗಿತ್ತು. ಇತ್ತ ಕೊಲೆ ಮಾಡಿದ್ದೇ ಕಾಲ್ಕಿತ್ತ ಆರೋಪಿಗಳು ಲಾಂಗು ಮಚ್ಚು ಸಮೇತ ಎಸ್ಕೇಪ್ ಆಗಿದ್ರು. ಹರೀಶ್ ಅಲಿಯಾಸ್ ಮಿಟಾಯ್ ಎಂಬಾತ ಕಾಡುಬೀಸನಹಳ್ಳಿಯ ರೌಡಿ. ಅಪರಾಧ ಪ್ರಕರಣಗಳು ಜಾಸ್ತಿ ಆಗಿದ್ದರಿಂದ ಬಾಣಸವಾಡಿ ಪೊಲೀಸರು ಠಾಣೆಗೆ ಕರೆಸಿ ವಾರ್ನ್ ಮಾಡಿದ್ದು, ಪ್ರತಿ ವಾರ ಬಂದು ಸಹಿ ಹಾಕಲು ಸೂಚಿಸಿದ್ರು. ಅದ್ರಂತೆ ಜುಲೈ 28 ರಂದು ಠಾಣೆಯಲ್ಲಿ ಸಹಿ ಹಾಕಿ ಹೊರಗಡೆ ಬರ್ತಾ ಇದ್ದ ಹಾಗೆಯೇ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೆಲಸಕ್ಕೆಂದು ಆಫ್ರಿಕಾಗೆ ಹೋದವನು ಅಲ್ಲೇ ಲಾಕ್; ಕೊಪ್ಪಳದ ಯುವಕನ ಗೋಳು ಕೇಳೋರಿಲ್ಲ..!

ಕೊಲೆಗಾರಿಗೆ ಇಲ್ಲ ಯಾವುದೇ ಕ್ರೈಂ ಬ್ಯಾಗ್ರೌಂಡ್..!

ಕೊಲೆ ಮಾಡಿದ ರಕ್ಷಿತ್ ಹಾಗೂ ಆತನ ಸ್ನೇಹಿತರು ಯಾರೂ ಕ್ರೈಂ ಬ್ಯಾಗ್ರೌಂಡ್ ಇರೋರಲ್ಲ. ಯಾರೋಬ್ಬರ‌ ಮೇಲೆಯೂ ಯಾವುದೇ ಕೇಸ್ ಇಲ್ಲ. ಆದ್ರೆ ಕೊಲೆಯಾದ ಹರೀಶ್ 2017 ರಲ್ಲಿ ‌ಕ್ಷುಲ್ಲಕ ಕಾರಣಕ್ಕೆ ರಕ್ಷಿತ್ ನ ಕಿವಿ ಕಟ್ ಮಾಡಿದ್ದನಂತೆ. ಆಪರೇಷನ್ ಮಾಡಿಸಿದ್ರೂ ನೋವು ಮಾತ್ರ ಕಮ್ಮಿ ಆಗಿರಲಿಲ್ಲ. ಪ್ರತಿನಿತ್ಯ ನೋವು ಅಂತ ರಕ್ಷಿತ್ ತಾಯಿ ಹತ್ತಿರ ಅಳ್ತಾ ಇದ್ದ.  ಇತ್ತ ತಾಯಿ ಮಗ ನೋವು ಪಡೋದು ನೋಡಿ ಹರೀಶ್ ಗೆ ಇಡಿಶಾಪ ಹಾಕುತ್ತಾ ಕಣ್ಣೀರು ಹಾಕ್ತಾ ಇದ್ದರಂತೆ. ಇದ್ರಿಂದ ಮನನೊಂದ ರಕ್ಷಿತ್ ತನ್ನ ಸ್ನೇಹಿತರ ಜೊತೆ ಸೇರಿ ರೌಡಿ ಹರೀಶ್ ನ‌ ಮುಗಿಸೋಕೆ ಪ್ಲಾನ್​​ಮಾಡಿದ್ದ ಅಂತಾರೆ ಪೊಲೀಸರು.

ತಾಯಿಯ ಕಣ್ಣೀರು ನೋಡಲು ಆಗದ ಮಗ ಕೊಲೆಗಾರನಾಗಿದ್ದಾನೆ. ಬಾಣಸವಾಡಿ ಪೊಲೀಸರು ಬಂಧನ ‌ಮಾಡಿ ಪರಪ್ಪನ ಅಗ್ರಹಾರಕ್ಕೆ ನೂಕಿದ್ದಾರೆ. ಕೊಲೆ ಮಾಡಿದ್ರೆ ತಾಯಿ ಕಣ್ಣೀರು ಒರಿಸಬಹುದು ಅಂತ ಯೋಚಿಸದ್ದ ರಕ್ಷಿತ್ ಜೈಲು ಸೇರಿದ್ದು ತಾಯಿಯ ಕಣ್ಣೀರು ಶಾಶ್ವತ ಆಗುವಂತೆ ಆಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: