• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಯಾವುದೇ ಸಮುದಾಯಕ್ಕೆ ನೋವು ಮಾಡುವುದು ಉದ್ದೇಶವಾಗಿರಲಿಲ್ಲ; ಕೋವಿಡ್​ ವಾರ್​ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ ತೇಜಸ್ವಿ ಸೂರ್ಯ

ಯಾವುದೇ ಸಮುದಾಯಕ್ಕೆ ನೋವು ಮಾಡುವುದು ಉದ್ದೇಶವಾಗಿರಲಿಲ್ಲ; ಕೋವಿಡ್​ ವಾರ್​ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ ತೇಜಸ್ವಿ ಸೂರ್ಯ

ಕ್ಷಮೆಯಾಚಿಸ ತೇಜಸ್ವಿ ಸೂರ್ಯ

ಕ್ಷಮೆಯಾಚಿಸ ತೇಜಸ್ವಿ ಸೂರ್ಯ

ಬೆಡ್​ ದಂಧೆ ಪ್ರಕರಣ ನನ್ನ ಗಮನಕ್ಕೆ ಬಂದಿತು. ಹೀಗಾಗಿ ನಾನು ತನಿಖೆ ನಡೆಸಲು ಬಯಸಿದೆ. ನನ್ನ ಈ ಕಾರ್ಯದಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿ

  • Share this:

ಕೋವಿಡ್​ ಸಂದರ್ಭದಲ್ಲಿ ಜನರು ಬೆಡ್​ ಇಲ್ಲದೇ ತತ್ತರಿಸುತ್ತಿರುವಾಗ ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂನಲ್ಲಿ ಬೆಡ್​ ಬ್ಲಾಕಿಂಗ್​ ದಂಧೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು 16 ಜನರ ಮುಸ್ಲಿಂ ಯುವಕರ ಹೆಸರನ್ನು ಪ್ರಕಟಿಸಿ. ಪ್ರಕಣದವನ್ನು ಕೋಮುವಾದಿ ಕರಿಸಿದ್ದರು. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ ಬೆಂಗಳೂರು ದಕ್ಷಿಣ ವಲಯದ ಕೋವಿಡ್​ ವಾರ್​ ರೂಂಗೆ ಇಂದು ಭೇಟಿ ನೀಡಿರುವ ಸಂಸದರು ಅಲ್ಲಿನ ಜನರು ಕ್ಷಮೆಯಾಚಿಸಿದ್ದಾರೆ. ತಮ್ಮ ಕ್ಷೇತ್ರದ ನಾಲ್ವರು ಶಾಸಕರೊಂದಿಗೆ ಕೋವಿಡ್​ ವಾರ್​ ರೂಂಗೆ ತೆರಳಿದ ಅವರು ಅಲ್ಲಿನ ಸಿಬ್ಬಂದಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.


ಇನ್ನು ತೇಜಸ್ವಿ ಸೂರ್ಯ ಪತ್ರಿಕಾ ಗೋಷ್ಟಿಯಲ್ಲಿ ಉಲ್ಲೇಖಿಸಿದ 16 ಜನರಲ್ಲಿ ಒಬ್ಬರು ಮಾತ್ರ ಬೆಡ್​ ಹಂಚಿಕೆ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ಸತ್ಯ ಬಯಲಾಗಿದೆ. ಈ ಮುಂಚೆ ಕಾರ್ಯನಿರ್ವಹಸಿತ್ತಿದ್ದವರು ತುರ್ತು ಪರಿಸ್ಥಿತಿ ಹಿನ್ನಲೆ ಕೆಲಸ ಬಿಟ್ಟಿದ್ದು. ಕಳೆದ ವಾರವಷ್ಟೇ ಈತ ತಾತ್ಕಾಲಿಕ ಸೇವೆಗೆ ನಿಯೋಜನೆ ಗೊಂಡಿದ್ದರು ಎಂಬುದು ತಿಳಿದು ಬಂದಿದೆ. ಇನ್ನುಳಿದ 15 ಮಂದಿ ಯುವ ಪದವೀಧರರಾಗಿದ್ದಾರೆ. 20 ವರ್ಷ ವರ್ಷದೊಳಗಿನ ಈ ಯುವಕರು ಹೋಮ್​ ಐಸೋಲೇಷನ್​, ರೋಗಿಗಳ ಲೆಕ್ಕಾಚಾರ , ಮೇಲ್ವಿಚಾರಣೆ, ರೋಗಿಗಳ ಡಿಸ್ಚಾರ್ಜ್​ ಸೇರಿದಂತೆ ಹಲವು ದಾಖಲೆಗಳ ಮೇಲ್ವಿಚಾರಣೆ ಅಡಿ ಕಾರ್ಯನಿರ್ವಹಿಸತ್ತಿದ್ದರು.


ವಾರ್​ ರೂಂಗೆ ಭೇಟಿ ನೀಡಿದ ತೇಜಸ್ವಿ ಸೂರ್ಯ, ಯಾರೊಬ್ಬರ ಬಗ್ಗೆಯೂ ನನಗೆ ವೈಯಕ್ತಿಕವಾಗಿ ಮಾಹಿತಿ ಇಲ್ಲ, ಅವರನ್ನು ಭೇಟಿಯೂ ಮಾಡಿಲ್ಲ, ಬೆಡ್​ ದಂಧೆ ಪ್ರಕರಣ ನನ್ನ ಗಮನಕ್ಕೆ ಬಂದಿತು. ಹೀಗಾಗಿ ನಾನು ತನಿಖೆ ನಡೆಸಲು ಬಯಸಿದೆ. ನನ್ನ ಈ ಕಾರ್ಯದಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡರು ಎಂದು ಕ್ರಿಸ್ಟಲ್​ ಇನ್ಫೋಸಿಸ್ಟಮ್​ ಸರ್ವಿಸ್​ನ ಪ್ರಾಜೆಕ್ಟ್​ ಮ್ಯಾನೇಜರ್​ ಶಿವು ನಾಯಕ್​ ತಿಳಿಸಿದರು.


ಬಿಬಿಎಂಪಿಯ ವಿವಿಧ ಟಾಸ್ಕ್​ನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 212 ಮಂದಿ ತಂಡದಲ್ಲಿ ಈ 16 ಜನರು ಇದ್ದಾರೆ. ಅವರನ್ನು ಉದ್ದೇಶಪೂರ್ವಜವಾಗಿ ಗುರಿಯಾಗಿಸಲಯ ಯಾವುದೇ ಕಾರಣವಿಲ್ಲ ಎಂದು ನಾಯ್ಕ್​ ತಿಳಿಸಿದ್ದಾರೆ.


ಇದನ್ನು ಓದಿ: ಬೆಡ್​ ಬ್ಲಾಕಿಂಗ್​ ದಂಧೆ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು 


ಆರೋಪದ ಬಳಿಕ ಈ 16 ಜನರನ್ನು ವಾರ್​ ರೂಂ ಕಾರ್ಯಚಾರಣೆಯಿಂದ ದೂರವಿರಿಸಲಾಗಿದೆ. ಪೊಲೀಸ್​ ವಿಚಾರಣೆ ಮುಗಿದ ಬಳಿಕ ಮತ್ತೆ ನಿಮ್ಮನ್ನು ಇಲ್ಲಿಗೆ ಅಥವಾ ಬೇರೆ ಪ್ರಾಜೆಕ್ಟ್​ಗೆ ನಿಯುಕ್ತಿಗೊಳಿಸಲಾಗುವುದು ಎಂದು ಹೇಳಿದ್ದೇವೆ . ಈ ಘಟನೆಯಿಂದ ಉಳಿದ ಸಿಬ್ಬಂದಿಗಳು ಬೇಸರಿಸಿಕೊಂಡಿದ್ದು, ಭಗಗೊಂಡಿದ್ದಾರೆ. ಅಲ್ಲದೇ ರಾಜಕೀಯವಾಗಿ ಬಣ್ಣಪಡೆದ ಬಳಿಕ ಕೆಲವರು ಕೆಲಸದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರು ಕೋವಿಡ್​ ಕಾರ್ಯಚಾರಣೆ ಸಮನ್ವಯದ ಮೇಲೆ ಪರಿಣಾಮ ಬೀರುತ್ತಿದೆ. ತಪ್ಪು ಮಾಡದವರು ಬಯಪಡಬೇಕಿಲ್ಲ ಎಂದು ಅವರಿಗೆ ಧೈರ್ಯ ಹೇಳಿ ಸೋತಿದ್ದೇವೆ. ತೇಜಸ್ವಿ ಸೂರ್ಯ ಎರಡನೇ ಬಾರಿ ಭೇಟಿ ನೀಡಿದ್ದು, ಇದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ ಎಂದರು.


ಕಂಪನಿ ಮುಸ್ಲಿಂರನ್ನು ಮಾತ್ರ ನೇಮಿಸಿಕೊಂಡಿಲ್ಲ 212 ಸದಸ್ಯರಿದ್ದು ಐದು ರೀತಿಯ ಕಾರ್ಯಚಾರಣೆ ನಡೆಸಲಾಗಿದೆ, ಇಂಡೆಕ್ಸಿಂಗ್​, ಹೋಮ್​ ಐಸೋಲೇಷನ್​​, ಡಿಸ್ಚಾರ್ಜ್​, ಬೆಡ್​ ಹಂಚಿಕೆ ಮತ್ತು ಸಹಾಯವಾಣಿ ಎಂಬ ಐದು ಕಾರ್ಯದಲ್ಲಿ ಇವರೆಲ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಫ್ಟ್​ ಆದಾರದ ಮೇಲೆ ಇವರೆಲ್ಲಾ ಕೆಲಸ ಮಾಡುತ್ತಿದ್ದು, 16 ಜನ ಒಂದು ಶಿಫ್ಟ್​ನಲ್ಲಿರುತ್ತಾರೆ. ಅವರು ಒಟ್ಟಿಗೆ ಕೆಲಸ ಮಾಡುತ್ತಿಲ್ಲ ಅವರ ಕಾರ್ಯಚಾರಣೆಗಳು ಬದಲಾಗುತ್ತಿದ್ದವು. ಇದನ್ನು ಬಿಬಿಎಂಪಿಯೇ ಮಾಡುತ್ತಿತ್ತು ಎಂದಿದ್ದಾರೆ


ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂ ಅಧಿಕಾರಿಗಳು ಪ್ರಭಾವಿಗಳು ಸೇರಿದಂತೆ ಯಾರ್ಯಾರದ್ದೋ ಹೆಸರಿನಲ್ಲಿ ಸುಮಾರು 4,000ಕ್ಕೂ ಹೆಚ್ಚು ಬೆಡ್​ಗಳನ್ನು ಬುಕ್​ ಮಾಡಿದ್ದು, ಇವುಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇವರೆಲ್ಲಾ ಐಸಿಯು, ವೆಂಟಿಲೇಟರ್​ ಆಕ್ಸಿಜನ್​ ಬೆಡ್​ಗಳನ್ನು ಬ್ಲಾಕ್​ ಮಾಡಿಕೊಳ್ಳುತ್ತಿದ್ದರು. ವಾರ್​ ರೂಂನ ಅಧಿಕಾರಿಗಳ ನಿರ್ದೇಶನದಂತೆ ಹೊರಗಿರುವ ದಲ್ಲಾಳಿಗಳು ಈ ಕಾರ್ಯ ಮಾಡುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಕಳೆದೆರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ

top videos


    (ವರದಿ: ದೀಪಾ ಬಾಲಕೃಷ್ಣ)

    First published: