Sudhakaran: ತಲೈವಿ ದತ್ತುಪುತ್ರನಿಗೆ ಕೊನೆಗೂ ಬಿಡುಗಡೆ ಭಾಗ್ಯ, ದಂಡ ಕಟ್ಟದೇ 1 ವರ್ಷ ಹೆಚ್ಚೇ ಜೈಲಲ್ಲಿದ್ದ ಸುಧಾಕರನ್

ಚಿನ್ನಮ್ಮನಿಗೂ ಮೊದಲೇ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಗೆ ದಂಡ ಕಟ್ಟದೆ ಶಶಿಕಲಾ ಸುಮ್ಮನಿದ್ರು. ಬಿಡುಗಡೆಯಾದ ಬಳಿಕವೂ ಸುಧಾಕರನ್ ಆರೋಗ್ಯ ಕ್ಷೇಮ ವಿಚಾರಿಸಲು ಪೋನ್ ಕರೆಯೂ ಇರಲಿಲ್ಲ.

ಜಯಲಲಿತಾ-ಸುಧಾಕರನ್

ಜಯಲಲಿತಾ-ಸುಧಾಕರನ್

  • Share this:
ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನೋ ಮಾತು ಶಶಿಕಲಾ ನಟರಾಜನ್(Shashikala Natarajan) ಗೆ ಈಗ ಅನ್ವಯಿಸುತ್ತೆ ಅನ್ಸುತ್ತೆ. ಯಾಕಂದ್ರೆ ತನ್ನ ಬಿಡುಗಡೆಯಾದ ಬಳಿಕ ಜೈಲಿನಲ್ಲಿರುವ ತಲೈವಿ ದತ್ತು ಪುತ್ರ(Adopted Son)ನನ್ನೇ ಆಕೆ ಮರೆತಂತಿದೆ. ಈ ಮಧ್ಯೆ ಕೊನೆಗೂ ಸುಧಾಕರನ್(Sudhakaran)​​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕಳೆದ ಐದು ವರ್ಷದಿಂದ‌ ಸೆರೆವಾಸದಲ್ಲಿರೋ ಜಯಲಲಿತಾ( J.Jayalalitha) ದತ್ತುಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ನಾಳೆಯೇ ಜೈಲಿನಿಂದ ಬಿಡುಗಡೆ

ಹೌದು, ಸುಧಾಕರನ್ ಗೆ ಜೈಲಿಂದ ಮುಕ್ತಿ ಸಿಕ್ಕಿದ್ದು, ಇದೇ ಶನಿವಾರ ಅಂದ್ರೆ 16ನೇ(ನಾಳೆ) ತಾರೀಖಿನಂದೇ ಜೈಲಿಂದ ರಿಲೀಸ್ ಆಗ್ತಿದ್ದಾರೆ. ಹತ್ತು ಕೋಟಿ ದಂಡ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆ ಅನುಭವಿಸ್ತಿದ್ದ ಸುಧಾಕರನ್ ಬಿಡುಗಡೆಗೆ ಸಿದ್ದತೆ ನಡೆಸಲಾಗಿದೆ. ಆದ್ರೆ ಚಿನ್ನಮ್ಮ ಬಿಡುಗಡೆಯಾದ ಬಳಿಕ ಯಾರ ಭೇಟಿಯೂ ಇಲ್ಲ, ಭರವಸೆಯ ಪೋನ್ ಸಹ ಇಲ್ಲ. ಜೊತೆಗೆ ಬಿಡುಗಡೆಯಾದ್ರೂ ಸುಧಾಕರನ್​ಗಿಲ್ಲ ಕುಟುಂಬಸ್ಥರ ಸ್ವಾಗತವಿಲ್ಲ ಎನ್ನಲಾಗಿದೆ.

ಬಿಡುಗಡೆ ವೇಳೆ ಕುಟುಂಬಸ್ಥರು ಬರಲ್ಲ

ಇನ್ನು ತಮಿಳುನಾಡಿನಿಂದ ಸುಧಾಕರನ್ ಬಿಡುಗಡೆಗೆ ಯಾರೂ ಕುಟುಂಬಸ್ಥರು ಬರುವುದಿಲ್ಲವೆಂದು ಮಾಹಿತಿ ಸಿಕ್ಕಿದೆ.. ಈಗಾಗಲೇ ಬಿಡುಗಡೆ ದಿನಾಂಕ ನಿಗದಿ ಬಗ್ಗೆ ಜೈಲಾಧಿಕಾರಿಗಳಿಂದ ಸುಧಾಕರನ್​ಗೆ ತಿಳಿಸಲಾಗಿದೆ. ವಕೀಲರ ಮೂಲಕ ಹತ್ತು ಸಾವಿರ ದಂಡ ಕಟ್ಟಿ ರಿಲೀಸ್ ಆಗಲು ಕಾತುರದಿಂದ ಕಾಯ್ತಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ‌.

ಇದನ್ನೂ ಓದಿ:Gold Mine: ಕೊಪ್ಪಳದ ಕುಷ್ಟಗಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ? ಕೆಲವೇ ದಿನಗಳಲ್ಲಿ ರೈತರ ಭೂಮಿಗೆ ಬಂಗಾರದ ಬೆಲೆ

1 ವರ್ಷ ಹೆಚ್ಚೇ ಜೈಲುವಾಸ

ಇನ್ನು ಚಿನ್ನಮ್ಮನಿಗೂ ಮೊದಲೇ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಗೆ ದಂಡ ಕಟ್ಟದೆ ಶಶಿಕಲಾ ಸುಮ್ಮನಿದ್ರು. ಬಿಡುಗಡೆಯಾದ ಬಳಿಕವೂ ಸುಧಾಕರನ್ ಆರೋಗ್ಯ ಕ್ಷೇಮ ವಿಚಾರಿಸಲು ಪೋನ್ ಕರೆಯೂ ಇರಲಿಲ್ಲ. ಅಲ್ಲದೇ ಜೈಲುವಾಸ ಅನುಭವಿಸ್ತಿರೋ ಸುಧಾಕರನ್ ನೋಡಲು ಪತ್ನಿ ಮಕ್ಕಳೇ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌‌.

ಹೌದು, ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ 2017 ರಲ್ಲಿ ಶಶಿಕಲಾ, ಇಳವರೆಸಿ, ಸುಧಾಕರನ್ ಸೇರಿ ಮೂವರೂ ಶಿಕ್ಷೆಗೆ ಒಳಗಾಗಿ ಹತ್ತು ಕೋಟಿ ದಂಡ ವಿಧಿಸಲಾಗಿತ್ತು. ಆದ್ರೆ ಶಶಿಕಲಾ ಮತ್ತು ಇಳವರೆಸಿ ಇಬ್ಬರಿಗೂ ಹತ್ತು ಕೋಟಿಯಂತೆ ದಂಡ ಕಟ್ಟಲಾಗಿತ್ತು. ಈ ನಡುವೆ ಸುಧಾಕರನ್ ಗೆ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಿನಲ್ಲಿರಲು ಸೂಚಿಸಲಾಗಿತ್ತು.

ಆಧ್ಯಾತ್ಮದ ಕಡೆ ಒಲವು

ಸದ್ಯ ದೇವಿ ಆರಾಧನೆ, ತಮಿಳಿನ ಆಧ್ಯಾತ್ಮಿಕ ಚಿಂತಕರ ಪುಸ್ತಕ ಗಳನ್ನ ಓದುವ ಹವ್ಯಾಸ ಬೆಳೆಸಿಕೊಂಡಿದ್ದು, ರಿಲೀಸ್ ಬಳಿಕ ಯಾವ ರೀತಿ ಶಶಿಕಲಾ ಕುಟುಂಬ ನಡೆಸಿಕೊಳ್ಳೋತ್ತೋ ನೋಡಬೇಕಿದೆ.

ಇನ್ನು, ಸುಧಾಕರನ್ ಜೈಲಿನ ಬ್ಯಾರಕ್ ಬಿಟ್ಟು ಹೊರಗೆ ಬರೋದಿಲ್ವಂತೆ.. ಆಧ್ಯಾತ್ಮಿಕದತ್ತ ಒಲವು ತೋರಿರೋ ಸುಧಾಕರನ್ ದೇವಿ ಆರಾಧನೆ, ತಮಿಳಿನ ಆಧ್ಯಾತ್ಮಿಕ ಚಿಂತಕರ ಪುಸ್ತಕಗಳನ್ನೆ ಸದಾ  ಓದುತ್ತಿರುತ್ತಾರಂತೆ. ದಂಡ ಕಟ್ಟದೆ ಇದ್ರೂ ಕೂಡ ಬಿಡುಗಡೆಯ ದಿನಾಂಕ ನಿಗದಿಯಾಗಿದೆ‌.  ಸದ್ಯ ವಕೀಲರು ಮಾತ್ರ ಬರಲಿದ್ದು ಬಿಡುಗಡೆ ಪ್ರಕ್ರಿಯೆ ನಡೆಸಲಿದ್ದಾರೆ.

ಕುಟುಂಬಸ್ಥರಲ್ಲಿ ಮನಸ್ತಾಪಗಳಿದ್ದು ಯಾರೂ ಬರುವುದಿಲ್ಲ ಎನ್ನಲಾಗಿದೆ.. ಜೊತೆಗೆ ಶಶಿಕಲಾ ಕೂಡಾ ಹೆಚ್ಚು ಕಾಳಜಿ ವಹಿಸದ ಕಾರಣ ತಮಿಳುನಾಡಿನಿಂದ ಯಾರೂ ಅಭಿಮಾನಿಗಳು ಸಹ ಬರುವುದಿಲ್ಲ. ಇನ್ನು ಬಿಡುಗಡೆಯಾದ ಬಳಿಕ ಸುಧಾಕರನ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕಿದೆ‌.
Published by:Latha CG
First published: