ಬೆಂಗಳೂರಿನ ಪುರಾತನ ದೇವಾಯಗಳ ಸ್ವಾಧೀನಪಡಿಸಿಕೊಳ್ಳುವಿಕೆ: ಸರಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ದೇವಾಲಯದ ಪೂಜೆಗಳನ್ನು ನಿಷ್ಠೆ, ಭಕ್ತಿಯಿಂದ ನಡೆಸುತ್ತಿದ್ದು ಜೀವನೋಪಾಯಕ್ಕಾಗಿ ದೇವಾಲಯವನ್ನೇ ಅವಲಂಬಿತರಾಗಿದ್ದೇವೆ. ಸರಕಾರದ ಈ ನಿರ್ಧಾರ ನಮ್ಮ ಹೊಟ್ಟೆಗೆ ಹೊಡೆದಂತಿದೆ ಎಂದು ಅರ್ಜಿದಾರರು ದಾಖಲಿಸಿದ್ದಾರೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:

  ಬೆಂಗಳೂರಿನಲ್ಲಿರುವ ಮೂರು ಪ್ರಾಚೀನ ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವ ಕರ್ನಾಟಕ ಸರಕಾರದ “ನಿರಂಕುಶ” ನಿರ್ಧಾರವನ್ನು ಪರಿಶೀಲನೆ ನಡೆಸುವ ಸಲುವಾಗಿ ಸುಪ್ರೀಂಕೋರ್ಟ್ ವ್ಯವಸ್ಥಾಪನಾ ಸಮಿತಿಗಳನ್ನು ನೇಮಿಸುವ ನಿರ್ಧಾರ ಕೈಗೊಂಡಿದೆ. ನ್ಯಾಯಮೂರ್ತಿಗಳಾದ ಯು.ಯು ಲಲಿತ್ ಮತ್ತು ಅಜಯ್ ರಸ್ತೋಗಿ ನ್ಯಾಯಪೀಠವು ಪ್ರಶಾಂತ್ ಎಂ ಮತ್ತು ಇತರರ ಪರವಾಗಿ ವಕೀಲ ಬಾಲಾಜಿ ಶ್ರೀನಿವಾಸನ್ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದೆ.


  ಬೆಂಗಳೂರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು, ಶ್ರೀ ಚನ್ನರಾಯಸ್ವಾಮಿ ದೇವಸ್ಥಾನ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಅರ್ಚಕರು ಅರ್ಜಿದಾರರಾಗಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ದತ್ತಿ ದೇಣಿಗೆ ಕಾಯ್ದೆ 1997 ಅನ್ನು ನಿಷೇಧಿಸಲು ಹಾಗೂ ಸಂವಿಧಾನದ ಕಾಯ್ದೆ 14 (ಸಮಾನತೆ) ಕಾಯ್ದೆ 25 (ಧರ್ಮವನ್ನು ಅಭ್ಯಸಿಸುವ ಹಕ್ಕು) ಕಾಯ್ದೆ 26 (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಉಲ್ಲಂಘಿಸಿದ ಕಾರಣಕ್ಕಾಗಿ ಮುಂದಿನ ತಿದ್ದುಪಡಿಗಳನ್ನು ಕೋರಿದ್ದಾರೆ.


  ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ತಿದ್ದುಪಡಿಯ ಕಾಯ್ದೆಯ 25ನೇ ಪರಿಚ್ಛೇದಕ್ಕೆ ಅನುಗುಣವಾಗಿ, ಸೇರ್ಪಡೆಗೊಂಡ ದೇವಾಲಯಗಳ ನಿರ್ವಹಣಾ ಸಮಿತಿ ರಚನೆ ಕುರಿತು ಕರ್ನಾಟಕ ಸರಕಾರ ಹೊರಡಿಸಿದ 2021ರ ಮಾರ್ಚ್ 26ರ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.


  ಈ ಅಧಿಸೂಚನೆಯನ್ವಯ "ದೂರಗಾಮಿ ಮತ್ತು ಬದಲಾಯಿಸಲಾಗದ ಪರಿಣಾಮಗಳನ್ನು ಉಂಟುಮಾಡುತ್ತದೆ" ಎಂದು ಮನವಿಯಲ್ಲಿ ಹೇಳಿರುವ ವ್ಯವಸ್ಥಾಪನಾ ಸಮಿತಿಗಳನ್ನು ನೇಮಿಸಲು ಸರಕಾರ ಪ್ರಯತ್ನಿಸಿತು. ಇದಲ್ಲದೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸಿ ವರ್ಗದ ಅಡಿಯಲ್ಲಿ ಎಲ್ಲಾ 137 ದೇವಾಲಯಗಳು ಇರುವುದರಿಂದ ಆಕ್ಷೇಪಾರ್ಹ ಅಧಿಸೂಚನೆಯ ನಿರಂಕುಶತೆಯು ಸ್ಪಷ್ಟವಾಗಿದೆ. ಆದರೂ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿರುವ ಮೂರು ದೇವಾಲಯಗಳಿಗೆ ಸಂಬಂಧಪಟ್ಟ ಹಾಗೆ ಈ ಆದೇಶವನ್ನು ರವಾನಿಸಲು ಸರಕಾರ ನಿರ್ಧರಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


  ದೇವಾಲಯದ ಪೂಜೆಗಳನ್ನು ನಿಷ್ಠೆ, ಭಕ್ತಿಯಿಂದ ನಡೆಸುತ್ತಿದ್ದು ಜೀವನೋಪಾಯಕ್ಕಾಗಿ ದೇವಾಲಯವನ್ನೇ ಅವಲಂಬಿತರಾಗಿದ್ದೇವೆ. ಸರಕಾರದ ಈ ನಿರ್ಧಾರ ನಮ್ಮ ಹೊಟ್ಟೆಗೆ ಹೊಡೆದಂತಿದೆ ಎಂದು ಅರ್ಜಿದಾರರು ದಾಖಲಿಸಿದ್ದಾರೆ. ಆದರೆ ಈಗ ಸರಕಾರದ ಸ್ವಾಧೀನಪಡಿಸಿಕೊಳ್ಳುವ ನಿರ್ಧಾರದಿಂದಾಗಿ ದೇವಾಲಯಗಳನ್ನು ನಿರ್ವಹಿಸುವ ಹಕ್ಕನ್ನು ಅರ್ಚಕರು ಕಳೆದುಕೊಳ್ಳಲಿದ್ದು ಹೊಸ ನಿರ್ವಹಣಾ ಸಮಿತಿಯ ಸ್ಥಾಪನೆಯಿಂದ ಪುರಾತನ ದೇವಾಲಯಗಳ ಪಾವಿತ್ರ್ಯಕ್ಕೆ ಕುಂದುಂಟಾಗಲಿದೆ ಎಂಬುದಾಗಿ ಅರ್ಜಿದಾರರು ತಿಳಿಸಿದ್ದಾರೆ.


  ಇದನ್ನೂ ಓದಿ: ನಿಗದಿತ ಕಾಲಮಿತಿಯೊಳಗೆ ಜಲಜೀವನ್ ಮಿಷನ್ ಪೂರ್ಣಗೊಳಿಸಿ: ಕೇಂದ್ರ ಸಚಿವರ ಸಲಹೆ

  ಕರ್ನಾಟಕ ಹೈಕೋರ್ಟ್ 1997ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದೇಣಿಗೆ ಕಾಯ್ದೆ ಮತ್ತು ಅದರ ನಂತರದ ತಿದ್ದುಪಡಿಗಳನ್ನು ನವೆಂಬರ್ 17, 2015 ರಂದು ರದ್ದುಪಡಿಸಿತು. ಆದರೆ ತರುವಾಯ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಉನ್ನತ ನ್ಯಾಯಾಲಯವು ಹೈಕೋರ್ಟ್‌ನ ಆದೇಶವನ್ನು ತಡೆಹಿಡಿದಿದೆ. ಅಧಿಸೂಚನೆ ಅಂಗೀಕಾರವಾದ ನಂತರ ಸರಕಾರವು ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ಲಾಭವನ್ನು ಪಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ ಹಾಗೂ ಗುಂಪುಗೂಡುವುದನ್ನು ನಿಯಂತ್ರಿಸಿ.
  Published by:HR Ramesh
  First published: