• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Nikhil-Zameer: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು & ಜಮೀರ್ ಬೆಂಬಲಿಗರ ನಡುವೆ ಗಲಾಟೆ.. ಕಾರಣವೇನು?

Nikhil-Zameer: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು & ಜಮೀರ್ ಬೆಂಬಲಿಗರ ನಡುವೆ ಗಲಾಟೆ.. ಕಾರಣವೇನು?

ಶಾಸಕ ಜಮೀರ್​, ನಿಖಿಲ್​ ಕುಮಾರಸ್ವಾಮಿ

ಶಾಸಕ ಜಮೀರ್​, ನಿಖಿಲ್​ ಕುಮಾರಸ್ವಾಮಿ

ಸದಾಶಿವನಗರದಲ್ಲಿರುವ ಗೆಸ್ಟ್​​​ಹೌಸ್​ ಎನ್ನಲಾದ ರಂಕಾ ಅಪಾರ್ಟ್​​ಮೆಂಟ್​ ಬಳಿ ಇಬ್ಬರು ಮುಖಂಡ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಸದಾಶಿವನಗರ ಠಾಣೆ ಮೆಟ್ಟಿಲೇರಿದೆ.

  • Share this:

ಬೆಂಗಳೂರು: ಜೆಡಿಎಸ್​ ಯುವ ಮುಖಂಡ, ನಟ ನಿಖಿಲ್​​ ಕುಮಾರಸ್ವಾಮಿ ಬೆಂಬಲಿಗರು ಹಾಗೂ ಕಾಂಗ್ರೆಸ್​ ಶಾಸಕ ಜಮೀರ್​ ಅಹಮ್ಮದ್​ ಖಾನ್​ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಸದಾಶಿವನಗರದಲ್ಲಿರುವ ಗೆಸ್ಟ್​​​ಹೌಸ್​ ಎನ್ನಲಾದ ರಂಕಾ ಅಪಾರ್ಟ್​​ಮೆಂಟ್​ ಬಳಿ ಇಬ್ಬರು ಮುಖಂಡ ಬೆಂಬಲಿಗರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಸದಾಶಿವನಗರ ಠಾಣೆ ಮೆಟ್ಟಿಲೇರಿದೆ. ಗೆಸ್ಟ್ ಹೌಸ್ ಬಳಿ ನಿಖಿಲ್ ಕುಮಾರಸ್ವಾಮಿಯವರ ಮೂವರು ಬಾಡಿ ಗಾರ್ಡ್ ಗಳು ತೆರಳಿದ್ದಾರೆ. ಗೆಸ್ಟ್ ಹೌಸ್ ಬಳಿಯಿದ್ದ ಕೇರ್ ಟೇಕರ್ ರನ್ನ ಓಡಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಗೆಸ್ಟ್ ಹೌಸ್ ನಮ್ಮದು ಎಂದು ಕೇರ್ ಟೇಕರ್ ರನ್ನ ಓಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ.


ಬೆಂಬಲಿಗರ ಗಲಾಟೆ ಠಾಣೆ ಮೆಟ್ಟಿಲೇರುತ್ತಿದ್ದಂತೆ ಸದಾಶಿವನಗರ ಠಾಣೆಗೆ ಜಮೀರ್ ಪಿಎ ಫಾರುಕ್ ದೌಡಾಯಿಸಿದರು. ಸದ್ಯ ಈ ಫ್ಲ್ಯಾಟ್ ಜಮೀರ್ ಅವರ ಹೆಸರಲ್ಲಿ ಇದೆ ಎಂದು ಫಾರೂಕ್​​ ತಿಳಿಸಿದ್ದಾರೆ. ಸದಾಶಿವನಗರ ರಂಕಾ ಎನ್ ಕ್ಲೇವ್ ಅಪಾರ್ಟ್ಮೆಂಟ್ ಗೆ ಆಗಮಿಸಿದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿದರು. ಸದಾಶಿವನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ‌ಪರಿಶೀಲನೆ ನಡೆಯಿತು. ಇನ್ನು ದೂರು ನೀಡಲು ಹಿಂದೇಟು ಹಾಕಿದ ಪಿಎ ಫಾರೂಕ್​ ಮಾತುಕತೆ ಮೂಲಕವೇ ಗಲಾಟೆ ಇತ್ಯರ್ಥ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.


ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಾರು ಚಾಲಕ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಗಲಾಟೆ ಬಗ್ಗೆ ಕಾರು ಚಾಲಕ ಶೌಕತ್​ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಧ್ಯಮಗಳು ಪ್ರಶ್ನಿಸಿದಾಗ ಅಣ್ಣ ಹೋಗಿ ನೋಡು ಏನು ಗಲಾಟೆ ಅಂತ ಹೇಳಿದರು. ಹಾಗಾಗಿ ಸ್ಥಳಕ್ಕೆ ಬಂದಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.




ಚಾಮರಾಜನಗರದ ಕ್ಷೇತ್ರದ ಶಾಸಕ ಜಮೀರ್​​ ಕಾಂಗ್ರೆಸ್​ಗೆ ಬರುವ ಮುನ್ನ ಜೆಡಿಎಸ್​ನಲ್ಲಿದ್ದರು. ಎಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಭಿನ್ನಮತದ ಬಾವುಟ ಹಾರಿಸಿ ಕಾಂಗ್ರೆಸ್​ಗೆ ಬಂದಿದ್ದರು. ನಂತರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಜಮೀರ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಜೆಡಿಎಸ್​ ತೊರೆದ ಜಮೀರ್​ ಹಾಗೂ ಎಚ್​ಡಿಕೆ ರಾಜಕೀಯ ವೈರಿಗಳು ಎನ್ನಬಹುದು. ಇನ್ನು ಎಚ್​ಡಿಕೆ ಅವರು ಪುತ್ರ ನಿಖಿಲ್​​ ಸಮೇತ ಇಡೀ ಕುಟುಂಬ ಬಿಡದಿ ಬಳಿಯ ಫಾರ್ಮ್​​ಹೌಸ್​ನಲ್ಲಿ ಲಾಕ್​ಡೌನ್​ ಸಮಯವನ್ನು ಕಳೆಯುತ್ತಿದ್ದಾರೆ. ಸದಾಶಿವನಗರ ಅಪಾರ್ಟ್​​ಮೆಂಟ್​ ಬಳಿ ನಡೆದಿರುವ ಗಲಾಟೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.


ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 92 ಸಾವಿರದ,596 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದ ಸಕ್ರಿಯ ಕೇಸ್‌ಲೋಡ್ ಸಂಖ್ಯೆ 12 ಲಕ್ಷ, 31 ಸಾವಿರದ, 415ಕ್ಕೆ ಬಂದು ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷ, 62 ಸಾವಿರದ, 664 ಜನರು ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,219 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 3 ಲಕ್ಷ, 53 ಸಾವಿರದ, 528 ಕ್ಕೆ ಲುಪಿದೆ. ಇದೇ ವೇಳೆ ದೇಶಾದ್ಯಂತ ಒಟ್ಟು 23 ಕೋಟಿ, 90 ಲಕ್ಷ, 58 ಸಾವಿರದ 360 ಕೊರೊನಾ ಲಸಿಕೆ ನೀಡಲಾಗಿದೆ.



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: