ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ಹಾನಿಯಾಗುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ಕೊಟ್ಟ ಹಿನ್ನೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ಅವರ ನಡುವೆ ಮತ್ತೆ ಮಾತಿನ ಸಮರ ನಡೆದಿದೆ. ಬೆಳಿಗ್ಗೆ 11.30 ಕ್ಕೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸುಮಲತಾ ಅವರು ಮನವಿ ಸಲ್ಲಿಸಿದ್ದರು. ಸಂಸದರ ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಆನಂತರ ಮಾತನಾಡಿದ ಸಂಸದೆ ಸುಮಲತಾ ಅವರು "ಸಿಎಂ ಅವರು ದಿಶಾ ಸಮಿತಿ ಸಭೆ ಕರೆದಿದ್ದರು, ಅದು ಯಾವುದೋ ಕಾರಣಕ್ಕೆ ಮುಂದೂಡಲ್ಪಟ್ಟಿದೆ.
ಮೈ ಶುಗರ್ ಬಗ್ಗೆ ಇವಂತಿಂದ ಅಲ್ಲ ಎರಡು ವರ್ಷದಿಂದ 20 ಬಾರಿ ಮಾತನಾಡಿದ್ದೆನೇ. ಪತ್ರ ಕೂಡ ಬರೆದಿದೆ. ರೈತರಿಗೆ ಯಾವುದೋ ಉತ್ತರ ಕೊಡಬೇಕು ಇಲ್ಲದಿದ್ರೆ ರೈತರು ಆಕ್ರೋಶಗೊಳ್ತಾರೆ. ಎಷ್ಟೋ ಬಾರಿ ದುಡ್ಡು ಕಳೆದುಕೊಂಡಿದ್ದಾರೆ, ಹಿಂದಿನ ಆರೇಳು ವರ್ಷದಲ್ಲಿ ಏನು ಮಾಡಿಲ್ಲ. ದ್ವೇಷ ಮಾಡ್ತಾ ಕೂರಲು ಆಗಲ್ಲ, ರೈತರಿಗೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ. ಮಂಡ್ಯ ಜಿಲ್ಲೆಯ ರೈತರು ಕಬ್ಬನ್ನು ಬೇರೆ ಕಡೆ ಸಾಗಿಸಲು ಕಷ್ಟಪಡುತ್ತಿದ್ದಾರೆ, ಆದ ಕಾರಣ ಮಂಡ್ಯದಲ್ಲಿ ಶುಗರ್ ಫ್ಯಾಕ್ಟರಿ ಓಪನ್ ಆಗೋವರೆಗೂ ಸರ್ಕಾರವೇ ಸಾಗಣಿಕ ವೆಚ್ಚ ಬರಿಸಬೇಕು.
ಇದೇ ವೇಳೆ ಕುಮಾರಸ್ವಾಮಿ ದಾಖಲೆ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಸಂಸದೆ ಸುಮಲತಾ ‘‘ದಯವಿಟ್ಟು ಆಡಿಯೋ ಇವತ್ತೇ ಬಿಡುಗಡೆ ಮಾಡಲಿ, ಚುನಾವಣೆ ವರೆಗೂ ಯಾಕೆ ಕಾಯಬೇಕು. ಚುನಾವಣೆ ವರೆಗೂ ಬಿಡುಗಡೆ ಮಾಡಲ್ಲ ಅಂದ್ರೆ ಹೇಗೆ. ಚುನಾವಣೆಗೆ ಇನ್ನು ಒಂದುವರೆ ಎರಡು ವರ್ಷ ಇದೆ. ಸ್ಪೆಷಲ್ ಎಫೆಕ್ಟ್ಸ್ ಮಾಡಿ ಬಿಡುಗಡೆ ಮಾಡೋಕೆ ಅಷ್ಟು ದಿನ ಬೇಕಾ‘‘? ಎಂದು ವ್ಯಂಗ್ಯವಾಡಿದರು.
ಅವರು ಮಾತನಾಡೋ ಅಧಿಕಾರ ಕಳೆದುಕೊಂಡಿದ್ದಾರೆ. ಅವರ ತಂದೆಯವರನ್ನ ನಾನು, ಅಂಬರೀಶ್ ತಂದೆ ಸ್ಥಾನದಲ್ಲೇ ನೋಡಿದ್ದೀವಿ. ಅವರು ಎಂಎಲ್ಎ ಆದ್ರೆ ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ. ಅವರು ಗೌರವ ಕೊಟ್ಟು ಗೌರವ ಪಡೆಯಲಿ ಎಂದು ಅವರ ಬಳಿ ಮನವಿ ಮಾಡುತ್ತೇನೆ ಎಂದರು.
ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಬಿರುಕು ಬಿಟ್ಟಿರಬಹುದು. ಅದರಿಂದ ಬಿರುಕು ಬಿಟ್ಟಿಲ್ಲ ಅಂದ್ರೆ ನಾವು ನಿಜಕ್ಕೂ ಸಂತೋಷ ಪಡೋಣ. ಬಿರುಕು ಇಲ್ಲ ಅಂದ್ರೆ ಅವರು ಸುಮ್ಮನೆ ಇರಬೇಕಿತ್ತು. ನಾನು ಮತ್ತೊಮ್ಮೆ ಎಲ್ಲಾ ವಿಚಾರ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ದೀನಿ. ನಿಷೇಧ ಮಾಡಿದ್ರೂ ಕೂಡ ಗಣಿಗಾರಿಕೆ ನಡೆಯುತ್ತಿದೆ ಎಂದು ಗಮನಕ್ಕೆ ತಂದಿದ್ದೇನೆ. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಕುಮಾರಸ್ವಾಮಿ ಅವರು ಆಡೋ ಮಾತು ಆಡಿ ,ಈಗ ಸಮರ್ಥನೆ ಮಾಡಿಕೊಳ್ಳೋದಲ್ಲ. ಅವರಿಗೆ ಈ ನಡೆ ಶೋಭೆ ತರೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: HDK vs Sumalatha - ಕೆಆರ್ಎಸ್ ಡ್ಯಾಂ ಗೇಟಿಗೆ ಮಲಗಿಸಿದ್ರೆ ಬಿಗಿಯಾಗುತ್ತೆ ಎಂದ ಹೆಚ್ಡಿಕೆಗೆ ಸುಮಲತಾ ಅಂಬರೀಶ್ ತಿರುಗೇಟು ಕೆಆರ್ಎಸ್ ಡ್ಯಾಮ್ ಬಿರುಕುಬಿಟ್ಟಿದೆ ಎಂದು ಸುಮಲತಾ ಅಂಬರೀಶ್ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಕುಮಾರಸ್ವಾಮಿ ಅವರು, ಇವರನ್ನು ಡ್ಯಾಮ್ ಗೇಟಿಗೆ ನಿಲ್ಲಿಸಿದರೆ ಬಿಗಿಯಾಗುತ್ತೆ ಎಂದಿದ್ದಾರೆ. ಇದಕ್ಕೆ ಸುಮಲತಾ ಖಾರವಾಗಿ ತಿರುಗೇಟು ಕೊಟ್ಟಿದ್ಧಾರೆ.
ಕೆಆರೆಸ್ ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಬಿಡುತ್ತಿದೆ ಅಂತ ಮಾಧ್ಯಮಗಳೇ ವರದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ಕೊಟ್ಟಿದ್ದೇನೆ. ಸರ್ಕಾರ ತನಿಖೆ ನಡೆಸಲಿ. ಸುಮಲತಾರನ್ನ ಕೆಆರ್ಎಸ್ ಗೇಟಿಗೆ ಮಲಗಿಸಿಸಬೇಕೆಂಬ ಕುಮಾರಸ್ವಾಮಿ ಹೇಳಿಕೆಗೆ ಕೂಡಲೇ ಕ್ಷಮೆ ಕೇಳುವಂತೆ ಸುಮಲತಾ ಒತ್ತಾಯಿಸಿದರು.
ಮನ್ಮುಲ್ ಅಕ್ರಮದ ಬಗ್ಗೆಯೂ ಸಿಎಂ ಜತೆ ಚರ್ಚಿಸಿದೀನಿ. ಈ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಮುಗಿದು ವರದಿ ಬರಲಿ, ನಂತರ ಮಾತಾಡೋಣ. ತನಿಖೆಗೂ ಮುನ್ನ ಅವರ ಹಾಗೆ ಮಾತಾಡಲ್ಲ ನಾನು ಅವರಲ್ಲ ಎಂದು ಕುಮಾರಸ್ವಾಮಿ ಅವರಿಗೆ ಸುಮಲತಾ ತಿರುಗೇಟು ನೀಡಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ