ಬೆಂಗಳೂರು(ಅ.16): ತಲೈವಿ ದತ್ತುಪುತ್ರ ಸುಧಾಕರನ್ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಕಳೆದ 5 ವರ್ಷಗಳಿಂದ ಸೆರೆವಾಸ ಅನುಭವಿಸಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ದತ್ತುಪುತ್ರನಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದ್ದು, ಜೈಲುವಾಸಕ್ಕೆ ವಿದಾಯ ಹೇಳಿದ್ದಾರೆ.
ಸುಧಾಕರನ್ 10 ಕೋಟಿ ದಂಡ ಕಟ್ಟದೇ, ಒಂದು ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆ ಅನುಭವಿಸಿದ್ದರು. ಚಿನ್ನಮ್ಮ ಬಿಡುಗಡೆಯಾದ ಬಳಿಕ ಯಾರೂ ಸಹ ಸುಧಾಕರನ್ ಅವರನ್ನು ಭೇಟಿಯಾಗಿರಲಿಲ್ಲ. ಭರವಸೆಯ ಫೋನ್ ಕರೆಯೂ ಸಹ ಇರಲಿಲ್ಲ. ಇಂದು ಬಿಡುಗಡೆ ವೇಳೆ ಅವರ ಕುಟುಂಬಸ್ಥರೂ ಸಹ ಯಾರೂ ಬಂದಿರಲಿಲ್ಲ. ಬದಲಾಗಿ ಅಭಿಮಾನಿಗಳು ಹೂ ಗುಚ್ಛ ನೀಡಿ ಜೈಕಾರ ಹಾಕಿದರು. ಸುಧಾಕರನ್ ತನ್ನ ಆಪ್ತರ ಜೊತೆ ಕಾರಿನ ಮೂಲಕ ರಸ್ತೆ ಮಾರ್ಗವಾಗಿ ಚೆನ್ನೈಗೆ ಪ್ರಯಾಣ ಬೆಳೆಸಿದರು.
1 ವರ್ಷ ಹೆಚ್ಚೇ ಜೈಲುವಾಸ
ಇನ್ನು ಚಿನ್ನಮ್ಮನಿಗೂ ಮೊದಲೇ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಗೆ ದಂಡ ಕಟ್ಟದೆ ಶಶಿಕಲಾ ಸುಮ್ಮನಾದರು. ಬಿಡುಗಡೆಯಾದ ಬಳಿಕವೂ ಸುಧಾಕರನ್ ಆರೋಗ್ಯ ಕ್ಷೇಮ ವಿಚಾರಿಸಲು ಪೋನ್ ಕರೆಯೂ ಇರಲಿಲ್ಲ. ಅಲ್ಲದೇ ಜೈಲುವಾಸ ಅನುಭವಿಸುತ್ತಿದ್ದ ವೇಳೆ, ಸುಧಾಕರನ್ ನೋಡಲು ಅವರ ಪತ್ನಿ- ಮಕ್ಕಳೇ ಬಂದೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2017ರಿಂದ ಜೈಲುವಾಸ
ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ 2017 ರಲ್ಲಿ ಶಶಿಕಲಾ, ಇಳವರೆಸಿ, ಸುಧಾಕರನ್ ಸೇರಿ ಮೂವರೂ ಶಿಕ್ಷೆಗೆ ಒಳಗಾಗಿ ಹತ್ತು ಕೋಟಿ ದಂಡ ವಿಧಿಸಲಾಗಿತ್ತು. ಆದ್ರೆ ಶಶಿಕಲಾ ಮತ್ತು ಇಳವರೆಸಿ ಇಬ್ಬರಿಗೂ ಹತ್ತು ಕೋಟಿಯಂತೆ ದಂಡ ಕಟ್ಟಲಾಗಿತ್ತು. ಈ ನಡುವೆ ಸುಧಾಕರನ್ ಗೆ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಿನಲ್ಲಿರಲು ಸೂಚಿಸಲಾಗಿತ್ತು.
ಇದನ್ನೂ ಓದಿ:Sudhakaran: ತಲೈವಿ ದತ್ತುಪುತ್ರನಿಗೆ ಕೊನೆಗೂ ಬಿಡುಗಡೆ ಭಾಗ್ಯ, ದಂಡ ಕಟ್ಟದೇ 1 ವರ್ಷ ಹೆಚ್ಚೇ ಜೈಲಲ್ಲಿದ್ದ ಸುಧಾಕರನ್
ಆಧ್ಯಾತ್ಮದ ಕಡೆ ಒಲವು
ಆಧ್ಯಾತ್ಮಿಕದತ್ತ ಒಲವು ತೋರಿರೋ ಸುಧಾಕರನ್ ದೇವಿ ಆರಾಧನೆ, ತಮಿಳಿನ ಆಧ್ಯಾತ್ಮಿಕ ಚಿಂತಕರ ಪುಸ್ತಕಗಳನ್ನೆ ಸದಾ ಓದುತ್ತಿದ್ದರಂತೆ. ಸುಧಾಕರನ್ ಜೈಲಲ್ಲಿದ್ದ ದಿನಗಳಲ್ಲಿ ದೇವಿ ಆರಾಧನೆ, ತಮಿಳಿನ ಆಧ್ಯಾತ್ಮಿಕ ಚಿಂತಕರ ಪುಸ್ತಕ ಗಳನ್ನ ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಇಂದು ಜೈಲಿನಿಂದ ಬಿಡುಗಡೆಯಾಗಿದ್ದು, ಶಶಿಕಲಾ ಕುಟುಂಬ ಅವರನ್ನು ಯಾವ ರೀತಿ ನಡೆಸಿಕೊಳ್ಳೋತ್ತೋ ನೋಡಬೇಕಿದೆ.
ಕುಟುಂಬಸ್ಥರಲ್ಲಿ ಮನಸ್ತಾಪಗಳಿದ್ದು ಯಾರೂ ಬರುವುದಿಲ್ಲ ಎನ್ನಲಾಗಿತ್ತು. ಅಂತೆಯೇ ಇಂದು ಬಿಡುಗಡೆ ವೇಳೆ ಅವರ ಕುಟುಂಬಸ್ಥರು ಯಾರೂ ಸಹ ಬಂದಿರಲಿಲ್ಲ. ಜೊತೆಗೆ ಶಶಿಕಲಾ ಕೂಡಾ ಹೆಚ್ಚು ಕಾಳಜಿ ವಹಿಸದ ಕಾರಣ ತಮಿಳುನಾಡಿನಿಂದ ಯಾರೂ ಅಭಿಮಾನಿಗಳು ಸಹ ಬರುವುದಿಲ್ಲ ಎನ್ನಲಾಗಿತ್ತು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ