ಆತ್ಮಹತ್ಯೆ ತಡೆಯಲು ವಿದ್ಯಾರ್ಥಿಗಳ ಕೋಣೆಯಲ್ಲಿನ ಸೀಲಿಂಗ್ ಫ್ಯಾನ್‌ಗಳ ತೆಗೆದುಹಾಕುತ್ತಿರುವ IISc

ವಿದ್ಯಾರ್ಥಿಗಳು, ಎಲ್ಲಾ IISc ಹಾಸ್ಟೆಲ್‌ಗಳಲ್ಲಿ ವಾಲ್ ಮೌಂಟೆಡ್ ಫ್ಯಾನ್‌ಗಳನ್ನು ಸೀಲಿಂಗ್ ಫ್ಯಾನ್‌ಗಳ ಬದಲಿಗೆ ಅಳವಡಿಸುವುದು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸಹಕಾರಿಯಾಗಿರುವ ವಿಧಾನವಾಗಿದೆ ಎಂದು ಅವರು ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು(removing ceiling fans) ತೆಗೆದುಹಾಕುವ ಮೂಲಕ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಗಳನ್ನು(Prevent suicides ) ತಡೆಗಟ್ಟುವ ಹೊಸ ಯೋಜನೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (Indian Institute of Science) ಪ್ರಾರಂಭಿಸಿದೆ ಎಂದು ಸಂಸ್ಥೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳು ಟೆರೇಸ್‌ ಹಾಗೂ ಮೇಲ್ಛಾವಣಿಗಳನ್ನು ಪ್ರವೇಶಿಸುವುದನ್ನು ಸಂಸ್ಥೆಯು ನಿರ್ಬಂಧಿಸಲು ಪ್ರಾರಂಭಿಸಿದೆ ಎಂಬುದಾಗಿ ಹೇಳಲಾಗುತ್ತಿದ್ದು, ಈ ವಿಧಾನವು ದುರ್ಬಲ ಮಾನಸಿಕ ಆರೋಗ್ಯ ಸಮಸ್ಯೆಯ ಮೂಲ ಎಂದು ವಿದ್ಯಾರ್ಥಿಗಳು ( students) ಸಂದೇಹ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗಳನ್ನು ತಡೆಯಲು ಸಂಸ್ಥೆಯ ಕ್ರಮ:
ಸೆಪ್ಟೆಂಬರ್‌ನಲ್ಲಿ ಶಿಕ್ಷಣ ಸಂಸ್ಥೆ ನೀಡಿರುವ ಪ್ರಕಾರ, ಈ ವರ್ಷದಲ್ಲಿ 4 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, 2020ರಲ್ಲಿ 2 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ವಾರದ ಆರಂಭದಲ್ಲಿ ಯು-ಬ್ಲಾಕ್‌ನಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ತೆಗೆಯುವ ಕೆಲಸ ಆರಂಭಗೊಂಡಿದೆ ಎಂದು ವಿದ್ಯಾರ್ಥಿಗಳು ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ. ಗೋಡೆಗೆ ಅಳವಡಿಸುವ ಫ್ಯಾನ್‌ಗಳನ್ನು (ವಾಲ್ ಮೌಂಟೆಡ್ ಫ್ಯಾನ್‌ಗಳು) ಸೀಲಿಂಗ್ ಫ್ಯಾನ್‌ಗಳ ಬದಲಿಗೆ ಬಳಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Indian Institute of Science: ಬೆಂಗಳೂರಿನ IIScಯಲ್ಲಿ ಮುಂದಿನ ವರ್ಷದಿಂದ ಮೆಡಿಕಲ್​ ಕೋರ್ಸ್‌ಗಳ ಆರಂಭ

IIScಯ ಹಾಸ್ಟೆಲ್‌ಗಳಲ್ಲಿನ ಎಲ್ಲಾ ಕೊಠಡಿಗಳನ್ನು ಮುಂದಿನ 15 ದಿನಗಳಲ್ಲಿ ಮುಚ್ಚಲಾಗುವುದು. ಹಾಸ್ಟೆಲ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಆತ್ಮಹತ್ಯೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಇದಕ್ಕೆ ನೇಮಿಸಲಾದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ ಎಂದು ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷರಿಗೆ ಬರೆದಿರುವ ಆಂತರಿಕ ಇ-ಮೇಲ್‌ ತಿಳಿಸಿದೆ. ಈ ಪತ್ರವನ್ನು ಸುದ್ದಿ ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಗಿದೆ.

ವಿದ್ಯಾರ್ಥಿ ಸಮೀಕ್ಷೆ:
ವಿದ್ಯಾರ್ಥಿಗಳು ನಡೆಸಿರುವ ಸಮೀಕ್ಷೆಯ ಫಲಿತಾಂಶಗಳನ್ನು ಕೂಡ ಪತ್ರವು ಒಳಗೊಂಡಿದ್ದು, 305 ಪ್ರತಿಕ್ರಿಯೆಗಳಲ್ಲಿ 90% ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್‌ಗಳ ಬದಲಿಗೆ ಗೋಡೆಗೆ ಅಳವಡಿಸುವ ಫ್ಯಾನ್‌ಗಳು ಬೇಕಾಗಿಲ್ಲ ಎಂದು ತಿಳಿಸಿದ್ದರೆ, 6% ವಿದ್ಯಾರ್ಥಿಗಳು ಇದಕ್ಕೆ ನಾವು ಗಮನ ನೀಡುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚುವರಿಯಾಗಿ 88% ವಿದ್ಯಾರ್ಥಿಗಳು, ಎಲ್ಲಾ IISc ಹಾಸ್ಟೆಲ್‌ಗಳಲ್ಲಿ ವಾಲ್ ಮೌಂಟೆಡ್ ಫ್ಯಾನ್‌ಗಳನ್ನು ಸೀಲಿಂಗ್ ಫ್ಯಾನ್‌ಗಳ ಬದಲಿಗೆ ಅಳವಡಿಸುವುದು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸಹಕಾರಿಯಾಗಿರುವ ವಿಧಾನವಾಗಿದೆ ಎಂದು ಅವರು ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಯೋಜನೆ ಮೌಲ್ಯರಹಿತವಾದುದು:
ಈ ಸಮೀಕ್ಷೆಯನ್ನು IIScಯ ಸಂಪೂರ್ಣ ವಿದ್ಯಾರ್ಥಿ ಜನಸಂಖ್ಯೆಯ ಮಾದರಿಯಾಗಿ ತೆಗೆದುಕೊಂಡಿದ್ದು ಪ್ರಸ್ತುತ ವಿದ್ಯಾರ್ಥಿ ಸಮುದಾಯವು ಈ ಹೊಸ ಮಾದರಿಯೊಂದಿಗೆ ಮುಂದುವರಿಯಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ಈ ಹೊಸ ಯೋಜನೆಯು ಮೌಲ್ಯರಹಿತವಾದುದು ಎಂಬುದಾಗಿ ಕಂಡುಕೊಂಡಿದ್ದಾರೆ ಎಂದು ಪತ್ರ ತಿಳಿಸಿದೆ. ಇನ್ನು ವಿದ್ಯಾರ್ಥಿ ಕೌನ್ಸಿಲ್‌ನ ಸದಸ್ಯರೊಬ್ಬರನ್ನು ಈ ಕುರಿತು ಸಂಪರ್ಕಿಸಿದಾಗ, ವಿಷಯವು ಇನ್ನೂ ಚರ್ಚೆಯಲ್ಲಿದ್ದು ಫ್ಯಾನ್ ತೆಗೆದುಹಾಕುವ ಉದ್ದೇಶ ನಿರ್ಧರಿತವಾಗಿಲ್ಲ ಎಂದು ತಿಳಿಸಿದ್ದಾರೆ.

ಪರಿಣಾಮಕಾರಿಯಾಗಿಲ್ಲದ ವಿದ್ಯಾರ್ಥಿ ಕ್ಷೇಮ ಕೇಂದ್ರ:
ಸಂಸ್ಥೆಯ ಉನ್ನತ ಅಧಿಕಾರಿಗಳನ್ನು ಸುದ್ದಿಮಾಧ್ಯಮವು ಸಂಪರ್ಕಿಸಿದಾಗ, ವಿವಿಧ ಮೂಲಗಳಿಂದ ಮಾಹಿತಿ ಪಡೆದ ನಂತರ ನಿಮ್ಮ ಪ್ರಶ್ನೆಗೆ ಪ್ರತಿಕ್ರಿಯೆಗಳನ್ನು ಕಳುಹಿಸುತ್ತೇವೆ ಎಂಬ ಮಾಹಿತಿ ದೊರಕಿದೆ. ಮಾನಸಿಕ ಆರೋಗ್ಯ ಬೆಂಬಲ ಒದಗಿಸಲು ಆರಂಭಿಸಲಾಗಿರುವ ಕ್ಷೇಮ ಕೇಂದ್ರವೂ ಪರಿಣಾಮಕಾರಿಯಾಗಿಲ್ಲ ಎಂಬುದಾಗಿ ವಿದ್ಯಾರ್ಥಿಗಳು ಆರೋಪಿಸಿದೆ.

ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು

ಕ್ಷೇಮ ಕೇಂದ್ರದ ಕುರಿತು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇವೆ ಎಂಬುದಾಗಿ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ತಿಳಿಸಿದ್ದಾರೆ. ಕೇಂದ್ರದಲ್ಲಿ ಇನ್ನಷ್ಟು ಮಹತ್ತರ ಬದಲಾವಣೆಗಳನ್ನು ತರಲಾಗುವುದು ಎಂದು ಸದಸ್ಯರು ಹೇಳಿರುವುದಾಗಿ ಸುದ್ದಿಪತ್ರಿಕೆ ಉಲ್ಲೇಖಿಸಿದೆ.
Published by:vanithasanjevani vanithasanjevani
First published: