ಬೆಂಗಳೂರು(ಸೆ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಇಂದು ಮುಂಜಾನೆ ಯುವಕನೊಬ್ಬ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು(Shoot out) ಆತ್ಮಹತ್ಯೆ(Student Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಜಯ್ ನಗರ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣದ ಬಳಿ ಫುಟ್ಪಾತ್ ಮೇಲೆ ಆತನೇ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ(Sadashivanagar Police station) ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.
ಘಟನೆಗೂ ಮುನ್ನ ಏನಾಯ್ತು?
ಯುವಕ ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ. ಮುಂಜಾನೆ 4 ಗಂಟೆ ಸಮಯದಲ್ಲಿ ಎಲ್ಲರೂ ಮಲಗಿದ್ದಾಗ ಎದ್ದು ಹೊರಗೆ ಬಂದಿದ್ದ. ಮಾನಸಿಕ ಒತ್ತಡದಲ್ಲಿದ್ದ ಎನ್ನುವ ಶಂಕೆ ವ್ಯಕ್ತವಾಗಿದೆ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಬರ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಗೆ ಮನೆಯಿಂದ ತೆರಳಿ ವಾಕ್ ಮಾಡಲು ಬಂದಿದ್ದ. ನಾಲ್ಕು ಗಂಟೆಯಿಂದ ಆತನ ಪೋಷಕರು ನಿರಂತರವಾಗಿ ಕರೆ ಮಾಡುತ್ತಿದ್ದರು. ಆದರೆ ಯುವಕ ಕರೆ ಸ್ವೀಕರಿಸಿರಲಿಲ್ಲ.
ಇದನ್ನೂ ಓದಿ:Assam: ಪರೀಕ್ಷೆಗೆ Shorts ಹಾಕಿಕೊಂಡು ಬಂದ ವಿದ್ಯಾರ್ಥಿನಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಸಿದ ಸಿಬ್ಬಂದಿ
ಬಳಿಕ ಮಗ ತಲೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ವಿಷಯ ಪೋಷಕರಿಗೆ ತಿಳಿದಿದೆ. ತಲೆಯ ಎಡಭಾಗಕ್ಕೆ ಯುವಕ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಪಟ್ಟ ಬಳಿಕವೂ ಪೋಷಕರು ನಿರಂತರವಾಗಿ ಮಗನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೃತ ಯುವಕನ ಪೋಷಕರು ಆಗಮಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ತಾಯಿ ಗೆ ಒಬ್ಬನೇ ಮಗ ಎಂದು ತಿಳಿದು ಬಂದಿದೆ. ಮೃತನ ತಂದೆ-ತಾಯಿ ಬಳಿ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮೃತ ಯುವಕ ಎಲ್ಲಿಯವನು?
ಭಗತ್ ಸಿಂಗ್- ಬಾಬ್ನಾ ದಂಪತಿಯ ಮಗ ರಾಹುಲ್ ಭಂಡಾರಿ ಮೃತಪಟ್ಟ ಯುವಕ. ಭಗತ್ ಸಿಂಗ್ ಉತ್ತರಾಖಂಡ ಮೂಲದವರು. ಬೆಂಗಳೂರಿಗೆ ಬಂದು 20 ವರ್ಷವಾಗಿತ್ತು. ಭಗತ್ ಸಿಂಗ್ ನಿವೃತ್ತ ಆರ್ಮಿ ಆಫೀಸರ್. ಆರ್.ಟಿ.ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು.
ಮೃತ ಯುವಕ ರಾಹುಲ್ ಭಂಡಾರಿ ಆರ್ಮಿ ಪಬ್ಲಿಕ್ ಸ್ಕೂಲಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಎನ್ನಲಾಗಿದೆ. ರ್ಯಾಂಕ್ ಸ್ಟೂಡೆಂಟ್ ಕೂಡ ಆಗಿದ್ದ. ಹತ್ತನೇ ತರಗತಿಯಲ್ಲಿ ಶೇ.90 ರಷ್ಟು ಅಂಕ ಪಡೆದಿದ್ದ ರ್ಯಾಂಕ್ ಸ್ಟೂಡೆಂಟ್. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅನ್ನೋ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:PM Modi Birthday: ಮೋದಿ ಹುಟ್ಟುಹಬ್ಬವನ್ನು ‘ನಿರುದ್ಯೋಗ ದಿನ‘ ಎಂದು ಆಚರಿಸುತ್ತಿರುವ ಯೂತ್ ಕಾಂಗ್ರೆಸ್
ಘಟನಾ ಸ್ಥಳದಲ್ಲೇ 11 ಜೀವಂತ ಗುಂಡುಗಳು ಪತ್ತೆ
ಘಟನಾ ಸ್ಥಳದಲ್ಲೇ 11 ಜೀವಂತ ಗುಂಡುಗಳು ಪತ್ತೆಯಾಗಿವೆ. ಗನ್ ಪೌಚ್ ನಲ್ಲಿ ಇನ್ನೂ 11 ಜೀವಂತ ಗುಂಡುಗಳು ಇದ್ದವು ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಪೊಲೀಸರು ಕ್ರೈಂ ಸೀನ್ ಸೆಕ್ಯೂರ್ ಮಾಡಿದ್ದರು. ಘಟನಾ ಸ್ಥಳದಲ್ಲಿ ಎಫ್ಎಸ್ಎಲ್ ತಂಡ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.
ಪಿಸ್ತೂಲ್ ಪಾಯಿಂಟ್ 32 (.32) ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ