Student Suicide: ಕ್ಷಮಿಸಿ ಬಿಡಿ ಅಪ್ಪ.. ಸೆಲ್ಫಿ ವಿಡಿಯೋ ಮಾಡಿ 23ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ಹಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಂಜನ್​ ಇಂದು ಮುಂಜಾನೆ 3.15ರ ಸುಮಾರಿಗೆ ಕೋಣನುಕುಂಟೆ ವ್ಯಾಪ್ತಿಯ ಪಾಲ್ಕನ್ ಸಿಟಿ ಅಪಾರ್ಟ್ ಮೆಂಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿದ್ಯಾರ್ಥಿ ಅಂಜನ್​

ವಿದ್ಯಾರ್ಥಿ ಅಂಜನ್​

  • Share this:
ಬೆಂಗಳೂರು: ಪೋಷಕರು (Parents) ಹಾಗೂ ಸ್ನೇಹಿತರಿಗೆ (Friends) ವಿಡಿಯೋ ಸಂದೇಶ (Video Message) ಕಳುಹಿಸಿ ಅಪಾರ್ಟ್ ಮೆಂಟ್ ನ 23ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಕ್ರಾಸ್ (Koonanakunte) ನಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯು (2nd PUC) ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಅಂಜನ್ ಮೃತ ವಿದ್ಯಾರ್ಥಿ. ಸಾಕಷ್ಟು ದಿನಗಳಿಂದ ಮಾನಸಿಕ ಖಿನ್ನತೆಯಿಂದ (Mental Depression) ಬಳಲುತ್ತಿದ್ದ ಅಂಜನ್​ ಇಂದು ಮುಂಜಾನೆ 3.15ರ ಸುಮಾರಿಗೆ ಕೋಣನುಕುಂಟೆ ವ್ಯಾಪ್ತಿಯ ಪಾಲ್ಕನ್ ಸಿಟಿ ಅಪಾರ್ಟ್ ಮೆಂಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕ್ಷಮಿಸಿ ಅಪ್ಪ. ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ’

ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಅಂಜನ್, ‘ಕ್ಷಮಿಸಿ ಅಪ್ಪ. ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ’ ಎಂದು ಹೇಳಿದ್ದಾನೆ. ಬಳಿಕ ವಿಡಿಯೋವನ್ನ ತಂದೆ, ಸಂಬಂಧಿಕರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂಜಯ್ ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮುಂಜಾನೆ 3.15ರ ಸುಮಾರಿಗೆ 23ನೇ ಮಹಡಿಯಿಂದ ಅಂಜನ್ ಜಿಗಿದಿದ್ದಾನೆ, ಈ ವೇಳೆ ನಾವು ಮಲಗಿದ್ದು ಮೇಲಿನಿಂದ ಬಿದ್ದ ಶಬ್ದ ಕೇಳಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆತ ರಕ್ತದ ಮಡುವಿನಲ್ಲಿ ಬಿದಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಷ್ಟರಲ್ಲಾಗಲೆ ಮಗ ಮೃತಪಟ್ಟಿದ್ದಾಗಿ ಅಂಜಯ್ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Student Suicide: ಅಪ್ಪ, ಅಮ್ಮನಿಗೆ ಒಳ್ಳೆಯ ಮಗಳಾಗಲಿಲ್ಲ: 5ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟ ವಿದ್ಯಾರ್ಥಿನಿ

ನಿನ್ನೆ ಹಾಸನದಲ್ಲಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

ಆನ್‌ಲೈನ್‌ನಲ್ಲಿ ಪಡೆದಿದ್ದ ಸಾಲವನ್ನು ಮರುಪಾವತಿಸದ್ದಕ್ಕೆ ಅವರ ಆಧಾರ್ ಕಾರ್ಡ್, ಫೋಟೋ ಎಡಿಟ್ ಮಾಡಿ ಈತ ಮೋಸಗಾರ ಎಂದು ಬರೆದು ಅದರ ಜೊತೆ ಅಶ್ಲೀಲ ವಿಡಿಯೋ ಸೇರಿಸಿ ಆತನ ಫೇಸ್‌ಬುಕ್‌ ಅಕೌಂಟ್‌ನಲ್ಲಿದ್ದ ಎಲ್ಲರಿಗೂ ಮೆಸೇಜ್ ಮಾಡಿದ್ದು ಇದರಿಂದ ಮನನೊಂದ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ. ಅಂಬರೀಶ್ (39) ಮೃತ ವ್ಯಕ್ತಿ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.



ಬೆಂಗಳೂರಲ್ಲಿ ವಾಸವಿದ್ದ ಅಂಬರೀಶ್​

ಹಾಸನ ಮೂಲದ ಅಂಬರೀಶ್ ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು‌. ಎರಡು ವರ್ಷದ ಹಿಂದೆ ಹಾಸನಕ್ಕೆ ಬಂದು ಉದಯಗಿರಿಯಲ್ಲಿ ನೆಲೆಸಿದ್ದರು. ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದ ಅಂಬರೀಶ್ ಆನ್‌ಲೈನ್‌ನಲ್ಲಿ ಸಾಲ ಪಡೆದಿದ್ದು ಮರುಪಾವತಿಸಿರಲಿಲ್ಲ‌. ಆದಕಾರಣ ಆನ್‌ಲೈನ್ ಕಂಪನಿಯವರು ದೆಹಲಿ ಕೋರ್ಟ್‌‌ನಲ್ಲಿ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸುವುದಾಗಿ ಮೆಸೇಜ್ ಮೂಲಕ ಎಚ್ಚರಿಕೆ ನೀಡಿದ್ದಲ್ಲದೇ ಪದೇ ಪದೇ ಫೋನ್ ಮಾಡಿ ಹಣ ಕಟ್ಟುವಂತೆ ಕಿರುಕುಳ ನೀಡುತ್ತಲೆ ಇದ್ದರು.

ಇದನ್ನೂ ಓದಿ: Suicide: ವೈದ್ಯ ದಂಪತಿಯ ಒಬ್ಬನೇ ಮಗ ಆತ್ಮಹತ್ಯೆಗೆ ಶರಣು.. ‘ಪ್ರಪೋಸ್ ಡೇ’ ಸುತ್ತ ಅನುಮಾನ..!

ಫೇಸ್​ಬುಕ್​ನಲ್ಲಿದ್ದ ಫ್ರೆಂಡ್ಸ್​ಗೆ ಹೋಯ್ತು ಮೆಸೇಜ್​

ಅಂಬರೀಶ್ ಸಾಲ ಮರುಪಾವತಿ ಮಾಡದೆ ಇದ್ದಾಗ ಅವರ ಆಧಾರ್‌ಕಾರ್ಡ್, ಪಾನ್‌ಕಾರ್ಡ್‌ ಹಾಗೂ ಫೋಟೋ ಎಡಿಟ್ ಮಾಡಿ ಇವನು ಮೋಸಗಾರ ಸಾಲ ಪಡೆದು ವಾಪಾಸ್ ಕಟ್ಟಿಲ್ಲ ಎಂದು ಫೋಟೋ ಮೇಲೆ ಬರೆದು ಅದಕ್ಕೆ ಅಶ್ಲೀಲ ವಿಡಿಯೋಗಳನ್ನು ಸೇರಿಸಿ ಅಂಬರೀಶ್ ಫೇಸ್‌ಬುಕ್‌ ಹ್ಯಾಕ್ ಮಾಡಿ ಅವರ ಕಾಂಟೆಕ್ಟ್‌ನಲ್ಲಿದ್ದ ಎಲ್ಲರಿಗೂ ಸೆಂಡ್ ಮಾಡಿದ್ದರು. ಇದರಿಂದ ಮನನೊಂದ ಅಂಬರೀಶ್ ಗುರುವಾರ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಅಂಬರೀಶ್ ಪತ್ನಿ ಬಡಾವಣೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಪಡೆದ ಸಾಲದಿಂದಲೇ ಅಂಬರೀಶ್ ಜೀವ ಕಳೆದಕೊಂಡಿದ್ದು, ಸಾಲ ನೀಡಿ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಕರು ಹಾಗೂ ಸ್ನೇಹಿತರು ಒತ್ತಾಯಿಸಿದ್ದಾರೆ.
Published by:Pavana HS
First published: