ಕೊಟ್ಟ ಮಾತು ಮರೆತ ಸರ್ಕಾರ: ಕೊರೊನಾಗೆ ಬಲಿಯಾದ ಸಾರಿಗೆ ನೌಕರರಲ್ಲಿ ಕೇವಲ 7 ಮಂದಿಗೆ ಮಾತ್ರ ಪರಿಹಾರ!

ಪರಿಹಾರವನ್ನ ನೀಡುವುದಕ್ಕೆ ಸಣ್ಣ ಪ್ರಮಾಣದ ಕಾನೂನು ತೊಡಕಿದೆ. ಯಾವುದೇ ಒಬ್ಬ ಸಿಬ್ಬಂದಿ ನಿಧನರಾಗಿರುವುದಕ್ಕಿಂತ ಮುಂಚೆ 14 ದಿನ ಕೆಲಸಕ್ಕೆ ಹಾಜಾರಾಗಿ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂಬ ಮಾನದಂಡವನ್ನ ನಿಗದಿ ಮಾಡಿದ್ರು. ಈ‌ ಮಾನದಂಡದ ಅನ್ವಯ ನಾಲ್ಕು ಜನರಿಗೆ ಪರಿಹಾರ ನೀಡಲಾಗಿದೆ.

ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು: ಕೊರೊನಾದ ಎರಡು ಅಲೆಯಲ್ಲೂ ಸಾರಿಗೆ ನೌಕರರು ತಮ್ಮ ಪ್ರಾಣಾದ ಹಂಗನ್ನು ತೊರೆದು ಕೆಲಸ ಮಾಡಿದ್ರು. ಈ ವೇಳೆ ಸಾಕಷ್ಟು ಜನ ಸಾರಿಗೆ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ರು. ಈ ವೇಳೆ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆಯನ್ನ ಸಹ ನೀಡಲಾಗಿತ್ತು. ಆದ್ರೆ ಮೂರನೇ ಅಲೆ ಆರಂಭವಾಗುವುದಕ್ಕೆ ಶುರುವಾದ್ರು ಪರಿಹಾರ ಮಾತ್ರ ಸಿಕಿಲ್ಲ. ಸಾರಿಗೆ ನೌಕರರು ಕೋವಿಡ್ ನಿಂದ ಮೃತಪಟ್ಟರೆ 30 ಲಕ್ಷ  ಪರಿಹಾರ ನೀಡುವುದಾಗಿ  ಭರವಸೆ ನೀಡಿತ್ತು ಸರ್ಕಾರ.

ಇಲ್ಲಿಯವರೆಗೂ KSRTC, BMTC, NEKRTC ಹಾಗೂ NWKRTCಯ 213 ಸಿಬ್ಬಂದಿ ಈವರೆಗೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಬಿಎಂಟಿಸಿ ಒಂದರಲ್ಲೇ ಮೊದಲ ಅಲೆಯಲ್ಲಿ 38 ಜನ ಹಾಗೂ ಎರಡನೇ ಅಲೆಯಲ್ಲಿ 69 ಜನ ಒಟ್ಟು 109 ಜನ ಅಸುನೀಗಿದ್ದಾರೆ. ಆದ್ರೆ ಇಲ್ಲಿಯವರೆಗೂ ಕೇವಲ ಏಳು ಜನರಿಗೆ ಮಾತ್ರ ಪರಿಹಾರದ ಹಣ ಸಿಕ್ಕಿದೆ. ಇತ್ತ ಮನೆಯ ಯಜಮಾನನು ಇಲ್ಲ, ಸಂಸ್ಥೆಯಿಂದ ಸಂಬಳವು ಬರ್ತಿಲ್ಲ, ಪರಿಹಾರ ಕೂಡ ಸಿಗದೆ ಕುಟುಂಬಗಳು ನಡು ಬೀದಿಯಲ್ಲಿ ನಿಂತಿವೆ.

ಡಿಸೆಂಬರ್ ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಕೋವಿಡ್ ನಿಂದ ಮೃತಪಟ್ಟ ನೌಕರರಿಗೆ 30 ಲಕ್ಷ ರುಪಾಯಿ ಪರಿಹಾರ ನೀಡಬೇಕು ಅಂತ ಬೇಡಿಕೆ ಇಟ್ಟಿದ್ರು. ಸರ್ಕಾರ ಕೂಡ ನೌಕರರಿಗೆ 30 ಲಕ್ಷ ರುಪಾಯಿ ಪರಿಹಾರ ನೀಡುವ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ ಒಬ್ಬರಿಗೂ ಪರಿಹಾರ ನೀಡಿಲ್ಲ. ಇನ್ನು ಕೊರೊನಾದ ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ  ಕೆಎಸ್ಆರ್ಟಿಸಿ, ಬಿಎಂಟಿಸಿಯ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನೌಕರರು ತಮ್ಮ ಪ್ರಾಣದ ಹಂಗನ್ನ ತೊರೆದ ಕೆಲಸ ಮಾಡಿದ್ರು. ಆದರೆ ಈಗ ರಾಜ್ಯ ಸರ್ಕಾರ ಅವರನ್ನು ಮರೆತು ಕುಳಿತಿದೆ.

ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ . ಆದರೆ ಈಗ ನಾಲ್ಕು ಸಾರಿಗೆ ನಿಗಮಗಳು ನಾಟಕ ಮಾಡಲು ಶುರು ಮಾಡಿದೆ. ನಮ್ಮ ಬಳಿ ಕೋವಿಡ್ ನಿಂದ ಮೃತಪಟ್ಟ ನೌಕರರ ಮಾಹಿತಿಯೇ ಇಲ್ಲ. ಸಾರಿಗೆ ನೌಕರರು  ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವರು ರಜೆಯ ಮೇಲಿದ್ರು, ಮತ್ತೆ ಕೆಲವರಿಗೆ ಮೊದಲೇ ಅರೋಗ್ಯ ಸಮಸ್ಯೆಗಳಿತ್ತು. ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಅಂತ ಜಾರಿಕೊಳ್ಳುತ್ತಿದ್ದಾರಂತೆ.

ಇದರ ಜೊತೆಗೆ ಅಗತ್ಯ ಸೇವೆ ಹೆಸರಲ್ಲಿ ಕೊರೊನಾ ಪೀಕ್​​​ ಸಮಯದಲ್ಲೂ ಸರ್ಕಾರ ನಾಲ್ಕು ನಿಗಮದ ಬಸ್ಸುಗಳನ್ನ  ರೋಡಿಗಿಳಿಸಿತ್ತು. ನೌಕರರು ಬೇಡ ಅಂದ್ರು ಸಾರಿಗೆ ಅಧಿಕಾರಿಗಳು ಸಸ್ಪೆಂಡ್ ಮಾಡುವ ಬೆದರಿಕೆ ಹಾಕಿ, ಕೆಲಸಕ್ಕೆ ಬರುವಂತೆ ಒತ್ತಡ ಹೇರಿ ಕೆಲಸಕ್ಕೆ ಹಾಜರಾಗುವಂತೆ ಮಾಡಿದ್ರು. ಆದರೆ ನೌಕರಿಗೆ ಕೊರೊನಾ ಬಂದು ಸಾವನ್ನಪ್ಪುತ್ತಿರುವ ವೇಳೆ ಸರ್ಕಾರ ಅವ್ರರನ್ನು ಕೈಬಿಟ್ಟಿದೆ.

ಇದನ್ನೂ ಓದಿ: Delta Plus: ಎರಡು ಡೋಸ್ ವ್ಯಾಕ್ಸಿನ್ ಪಡೆದ ಬಳಿಕವೂ ಮಹಿಳೆಗೆ ವಕ್ಕರಿಸಿದ ಡೆಲ್ಟಾ ಪ್ಲಸ್ ಸೋಂಕು..!

ಇನ್ನು ಈ ಕುರಿತು ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್  ಪ್ರಶ್ನೆ ಮಾಡಿದಾಗ ಬಿಎಂಟಿಸಿಯಲ್ಲಿ ಇಲ್ಲಿಯವರೆಗೂ ಕೊರೋನಾದಿಂದಾಗಿ 109 ಜನ ಮೃತಪಟ್ಟಿದ್ದು, ಮೊದಲನೇ ಅಲೆಯಲ್ಲಿ ಮೃತರಾಗಿರುವ 38 ಜನರ ಪೈಕಿ 4 ಜನರಿಗೆ ಪರಿಹಾರ ನೀಡಿದ್ದೇವೆ. ಇನ್ನು ಉಳಿದ ಪರಿಹಾರವನ್ನ ನೀಡುವುದಕ್ಕೆ ಸಣ್ಣ ಪ್ರಮಾಣದ ಕಾನೂನು ತೊಡಕಿದೆ. ಯಾವುದೇ ಒಬ್ಬ ಸಿಬ್ಬಂದಿ ನಿಧನರಾಗಿರುವುದಕ್ಕಿಂತ ಮುಂಚೆ 14 ದಿನ ಕೆಲಸಕ್ಕೆ ಹಾಜಾರಾಗಿ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂಬ ಮಾನದಂಡವನ್ನ ನಿಗದಿ ಮಾಡಿದ್ರು. ಈ‌ ಮಾನದಂಡದ ಅನ್ವಯ ನಾಲ್ಕು ಜನರಿಗೆ ಪರಿಹಾರ ನೀಡಲಾಗಿದೆ.
ಉಳಿದವರಿಗೆ ಹಾಜಾರಾತಿ ಇಲ್ಲದ ಹಿನ್ನೆಲೆ ಸಾಕಷ್ಟು ಜನರಿಗೆ ಪರಿಹಾರ ನೀಡಬೇಕಾ ಬೇಡ್ವಾ ಎನ್ನುವ ಬಗ್ಗೆ ತೀರ್ಮಾನ ಚರ್ಚೆ ನಡೆಯುತ್ತಿದೆ. ಇದಾದ ನಂತರ ನಿರ್ದೇಶಕ ಮಂಡಳಿಯ ಬೋರ್ಡ್ ನಲ್ಲಿ ತೀರ್ಮಾನ ಮಾಡಿ‌ ಜುಲೈ ಮೊದಲ ವಾರದಲ್ಲಿ ಮೀಟಿಂಗ್ ಕರೆದು ಪರಿಹಾರದ ಬಗ್ಗೆ ನಿರ್ಧಾರ ಮಾಡುತ್ತೇವೆ. ಪರಿಹಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಮಾತುಕೊಟ್ಟಂತೆ ಕೊರೋನಾದಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದರು.

ಒಟ್ಟಾರೆಯಾಗಿ ಕೊರೋನಾ ಸಂಕಷ್ಟದ ಕಾಲದಲ್ಲೂ ಕೆಲಸ ನಿರ್ವಹಿಸಿದ ಸಾರಿಗೆ ನೌಕರರು ಸಾವನ್ನಪ್ಪಿದ್ರು ಸಾರಿಗೆ ಸಚಿವರು ಮಾತ್ರ ನಮಗೂ ಪರಿಹಾರಕ್ಕು ಯಾವುದೇ ಸಂಭಂಧವಿಲ್ಲ ಎಂಬಂತೆ ಇರುವ ಜೊತೆಗೆ ಪರಿಹಾರ ಪಡೆಯುವವ ಹಲವು ನಿರ್ಬಂದ ಹೇರಿರುವುದು ನುಂಗಗಾಲಾರದ ತುತ್ತಾಗಿರುವುದು ಮಾತ್ರ ಸತ್ಯ.
Published by:Kavya V
First published: