Bengaluru ರಾಘವೇಂದ್ರ ಮಠಕ್ಕೆ ಮಂತ್ರಾಲಯದ ಪೀಠಾಧಿಪತಿಗಳ ಆಗಮನ; ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದ CM

ಸಿಎಂ ಬಸವರಾಜ ಬೊಮ್ಮಾಯಿ ಜಯನಗರದ ರಾಘವೇಂದ್ರ ಮಠಕ್ಕೆ ಆಗಮಿಸಿದ್ರು. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದರು. ಬಳಿಕ  ರಾಘವೇಂದ್ರನ ಸ್ವಾಮಿ ದರ್ಶನ ಪಡೆದುಕೊಂಡರು. ರಾಘವೇಂದ್ರ ಸ್ವಾಮಿಗೆ ಆರತಿ ಬೆಳಗಿದರು.

ಸಿಎಂ ಬಸವರಾಜ ಬೊಮ್ಮಾಯಿ,  ಶ್ರೀ ಸುಭುದೇಂದ್ರ ತೀರ್ಥರು

ಸಿಎಂ ಬಸವರಾಜ ಬೊಮ್ಮಾಯಿ, ಶ್ರೀ ಸುಭುದೇಂದ್ರ ತೀರ್ಥರು

  • Share this:
ಬೆಂಗಳೂರು (ಏ.7) : ಜಯನಗರದಲ್ಲಿರುವ (Jayanagar) ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swami Math)  ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು (Subhudendra Theertharu) ಆಗಮಿಸಿದ್ರು. ಹೀಗಾಗಿ ಸುಭುದೇಂದ್ರ ತೀರ್ಥರನ್ನು ಭೇಟಿಯಾಗಲು ಇಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)  ಮಠಕ್ಕೆ ಆಗಮಿಸಿದ್ರು. ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದರು. ಬಳಿಕ  ರಾಘವೇಂದ್ರನ ಸ್ವಾಮಿ ದರ್ಶನ ಪಡೆದುಕೊಂಡರು. ರಾಘವೇಂದ್ರ ಸ್ವಾಮಿಗೆ ಆರತಿ ಬೆಳಗಿದರು. ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಜೊತೆ ಕೆಲ ಕಾಲ ಮಾತಾಡಿದ್ರು,  ಶ್ರೀಗಳಿಗೆ ಹಾರ ಹಾಕಿ ಸನ್ಮಾನಿಸಿದರು.

ಬೊಮ್ಮಾಯಿಯನ್ನು ಹಾಡಿ ಹೊಗಳಿದ ಶ್ರೀಗಳು

ಇದೇ ವೇಳೆ ಮಾತನಾಡಿದ ಸುಭುದೇಂದ್ರ ತೀರ್ಥ ಶ್ರೀಗಳು, ಮಂತ್ರಲಾಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಮುಖ್ಯಮಂತ್ರಿಗಳು ಬರಬೇಕು. ಮುಖ್ಯಮಂತ್ರಿಗಳು ನಮ್ಮ ಹಾವೇರಿ ಜಿಲ್ಲೆಯವರು. ಉತ್ತಮ ಸೇವೆ ಸಲ್ಲಿಸುತ್ತಾ ಕಾಮನ್ ಸಿಎಂ ಆಗಿದ್ದಾರೆ ಎಂದು ಸಿಎಂ ಬೊಮ್ಮಾಯಿಯನ್ನ ಗುಣಗಾನ ಮಾಡಿದರು. ಸಚಿವ ವಿ.ಸೋಮಣ್ಣ ಮತ್ತು ಸಚಿವ ಆರ್. ಅಶೋಕ್ ಸಾಥ್ ಸಿಎಂಗೆ ಸಾಥ್ ನೀಡಿದರು.

‘ಧರ್ಮ ಧರ್ಮಗಳ ನಡುವೆ ಕಚ್ಚಾಟ ಬೇಡ‘

ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ವಿದ್ಯಮಾನಗಳು ನಡೆಯುತ್ತಿರುವ ವಿಚಾರವಾಗಿ ಮಾತಾಡಿದ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ರಾಜ್ಯದಲ್ಲಿ ಶಾಂತಿ ಸೌಹಾರ್ದತೆ‌ನೆಲೆಗೊಳ್ಳಬೇಕಿದೆ, ರಾಜ್ಯದಿಂದಲೇ‌ ಈ‌ ಉತ್ತಮ ಕೆಲಸ ಆಗಬೇಕಿದೆ, ಎಲ್ಲ ಸಮುದಾಯಗಳಿಗೂ‌ ಈ ನೆಲ ಸೌಹಾರ್ದತೆ ನೀಡಿದೆ ಮನುಕು‌ಲ ಉಳಿಯಬೇಕು ಅನೇಕ ಬಗೆಯ ರೋಗಗಳು, ಆರ್ಥಿಕ ಮುಗ್ಗಟ್ಟಿನ ಸಂದರ್ಭ ಇದು ಇಂಥ ಸಂದರ್ಭದಲ್ಲಿ ಕೋಮುಗಲಭೆ ಬೇಡ, ಯಾರೂ ಆ ಥರದ ಸನ್ನಿವೇಶ ನಿರ್ಮಿಸುವುದು ಬೇಡ. ಮತಾಂತರ ಬೇಡ, ಧರ್ಮ ಧರ್ಮಗಳ ನಡುವೆ ಕಚ್ಚಾಟ ಬೇಡ ಎಂದು ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ

ಏ.10ರಿಂದ ಶ್ರೀರಾಮ್ ರಥಯಾತ್ರೆ

ಏ.10ರಿಂದ ಶ್ರೀರಾಮ್ ರಥಯಾತ್ರೆ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಾದ್ಯಾಂತ 10 ಸಾವಿರ ಜನ ಭಾಗವಹಿಸಲಿದ್ದಾರೆ. ಏ.10ರಿಂದ ಪದ್ಮನಾಭನಗರದಿಂದ ರಥಯಾತ್ರೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮೊದಲ ಬಾರಿ ಪ್ರಾರಂಭ ಮಾಡಲಾಗುತ್ತಿದ್ದು, ಇವತ್ತು ರಥ ಬರುತ್ತದೆ. ಎಲ್ಲಾ ಧರ್ಮದವರು ವ್ಯಾಪಾರ ಮಾಡಬಹುದು. ರಾಮನನ್ನು ಪ್ರೀತಿಸುವವರು ಎಲ್ಲರೂ ಭಾಗವಹಿಸಬಹುದು ಎಂದು ಹೇಳಿದ್ದಾರೆ.
2 ಪ್ರಕರಣಗಳ ತನಿಖೆಯಾಗ್ಬೇಕು

Published by:Pavana HS
First published: