• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Coronavirus | ಮಿತಿ ಮೀರಿ ಹರಡುತ್ತಿದೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ; ಮುಂದಿನ ದಿನಗಳು ಮತ್ತಷ್ಟು ಭೀಕರ; ಫನಾ ಎಚ್ಚರಿಕೆ!

Coronavirus | ಮಿತಿ ಮೀರಿ ಹರಡುತ್ತಿದೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ; ಮುಂದಿನ ದಿನಗಳು ಮತ್ತಷ್ಟು ಭೀಕರ; ಫನಾ ಎಚ್ಚರಿಕೆ!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಪ್ರತಿದಿನ ನೂರಾರು ಮಂದಿ ಸಾಯುತ್ತಿದ್ದು, ಅಂತ್ಯಸಂಸ್ಕಾರಕ್ಕೂ ಕೂಡ ಪರದಾಡುವಂತಹ ಸ್ಥಿತಿ ಎದುರಾಗಿದೆ. ಇಂದಿನ ಪರಿಸ್ಥಿತಿಯೇ ಹೀಗಿರುವಾಗ ಮೇ ತಿಂಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಈಗಿನಿಂದಲೇ ತಯಾರಿ ಮಾಡಿಕೊಂಡರೆ ಅಮಾಯಕ ಜನರ ಜೀವ ಕಾಪಾಡಬಹುದು. ಇಲ್ಲವಾದಲ್ಲಿ ಮರಣ ಮೃದಂಗ ಜೋರಾಗಿ ಸದ್ದು ಮಾಡಲಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ಕೊರೋನಾ ಎರಡನೇ ಅಲೆಯ ಅಬ್ಬರ ತೀವ್ರತರದಲ್ಲಿ ಹರಡುತ್ತಿದ್ದು, ಅಂಕೆಗೆ ಸಿಗದ ರೀತಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ರಾಜ್ಯದಲ್ಲಿ ದಿನಕ್ಕೆ 40 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ ಅರ್ಧದಷ್ಟು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗುತ್ತಿವೆ. ಇನ್ನು ಸಾವಿನ ಪ್ರಮಾಣದಲ್ಲೂ ಸಹ ರಾಜಧಾನಿ ಮೊದಲ ಸ್ಥಾನದಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್  ಮಿತಿ ಮೀರಿ ಹರಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ಖಾಸಗಿ‌ ಆಸ್ಪತ್ರೆಗಳ ಒಕ್ಕೂಟ (ಫನಾ) ಎಚ್ಚರಿಕೆ ನೀಡಿದೆ.!


ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ  ಡಾ. ಪ್ರಸನ್ನ ಅವರು ಮಾತನಾಡಿ, ಆಕ್ಸಿಜನ್ ಅಭಾವದಿಂದ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವುದಾಗಿ ಹೇಳಿದೆ. ನಮ್ಮ ರಾಜ್ಯದಲ್ಲಿ 700 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪತಿ ಆಗುತ್ತಿದೆ. ಆದರೆ ಮೇ ತಿಂಗಳಲ್ಲಿ ಈ ಲೆಕ್ಕಕ್ಕೂ ಮೀರಿ ಆಕ್ಸಿಜನ್ ಬೇಕಾಗಬಹುದು. ಮೇ ತಿಂಗಳಲ್ಲಿ ಸದ್ಯಕ್ಕೆ ಇರುವುದಕ್ಕಿಂತ 1,400 ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚುವರಿ ಅಗತ್ಯ ಬೀಳಬಹುದು ಎಂಬ ಆಘಾತಕಾರಿ ವಿಷಯ ಹೇಳಿದ್ದಾರೆ.


ಇದನ್ನು ಓದಿ: Corona Vaccine | ದೆಹಲಿಯಲ್ಲಿ ಕೊರೋನಾ ಲಸಿಕೆ ಇಲ್ಲ; ಕೇಂದ್ರ ಸರ್ಕಾರ ಕೊಟ್ಟರಷ್ಟೇ ಮೇ 1ರಿಂದ ಜನರಿಗೆ ಲಸಿಕೆ: ಕೇಜ್ರಿವಾಲ್


ಸದ್ಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಸೋಂಕಿತರು ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ.  ಇನ್ನೂ 1,400 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಎದುರಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಆಕ್ಸಿಜನ್ ಜೊತೆಗೆ ರೆಮಿಡಿಸ್ವಿರ್ ಅಭಾವ ಕೂಡ ಇದೆ. ಪ್ರತಿದಿನ‌ 35 ಸಾವಿರ ಸೋಂಕಿತರು ಮೇ ತಿಂಗಳಲ್ಲಿ ಪತ್ತೆಯಾಗಬಹುದು. ಈ 35 ಸಾವಿರದ ಪೈಕಿ 30 ಸಾವಿರ ಸೋಂಕಿತರಿಗೆ ರೆಮಿಡಿಸ್ವಿರ್ ಅಗತ್ಯ ಬೀಳುತ್ತೆ. ಕೇಂದ್ರ ಸರ್ಕಾರ ತಿಂಗಳಿಗೆ ಒಂದು ಲಕ್ಷ ವೈಲ್ ರೆಮಿಡಿಸ್ವಿರ್ ಪೂರೈಕೆ ಮಾಡುವ ಭರವಸೆ ಕೊಟ್ಟಿದೆ. ಆದರೆ ಪ್ರತಿ ದಿನ 30 ಸಾವಿರ ರೆಮಿಡಿಸ್ವಿರ್ ಅಗತ್ಯ ಬಿದ್ದರೆ, ಸೋಂಕಿತರು ಮತ್ತಷ್ಟು ಕಂಗೆಡಲಿದ್ದಾರೆ. ಹೀಗಾಗಿ ಸರ್ಕಾರ ಕೊಡುವುದಾಗಿ ಹೇಳಿದ ಒಂದು ಲಕ್ಷ ವೈಲ್ ರೆಮಿಡಿಸ್ವಿರ್ ಯಾವ ಮೂಲೆಗೂ ಸಾಕಾಗುವುದಿಲ್ಲ. ಸರ್ಕಾರ ಅಗತ್ಯತೆಗೆ ತಕ್ಕಂತೆ ರೆಮಿಡಿಸ್ವಿರ್ ಪೂರೈಸದಿದ್ದರೆ ಖಾಸಗಿ ಆಸ್ಪತ್ರೆಗಳು ಔಷಧಿ ಎಲ್ಲಿಂದ ತರುವುದು..? ಸೂಕ್ತ ರೀತಿಯಲ್ಲಿ ವೈದ್ಯಕೀಯ ಬೇಡಿಕೆಗಳು ಈಡೇರದಿದ್ದರೆ ಸೋಂಕಿತರ ಮಾರಣ ಹೋಮ ನಡೆಯಲಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಫನಾ ಅಧ್ಯಕ್ಷ ಡಾ. ಪ್ರಸನ್ನ ಆತಂಕಕಾರಿ ವಿಷಯ ಹಂಚಿಕೊಂಡಿದ್ದಾರೆ.


ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆ ಸಿಗದೆ ಪರದಾಡುತ್ತಿದ್ದಾರೆ. ಹಾಸಿಗೆ ಸಿಕ್ಕರೂ ಆಕ್ಸಿಜನ್ ಸಿಗದೆ ಸಾಯುವವರ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಪ್ರತಿದಿನ ನೂರಾರು ಮಂದಿ ಸಾಯುತ್ತಿದ್ದು, ಅಂತ್ಯಸಂಸ್ಕಾರಕ್ಕೂ ಕೂಡ ಪರದಾಡುವಂತಹ ಸ್ಥಿತಿ ಎದುರಾಗಿದೆ. ಇಂದಿನ ಪರಿಸ್ಥಿತಿಯೇ ಹೀಗಿರುವಾಗ ಮೇ ತಿಂಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಈಗಿನಿಂದಲೇ ತಯಾರಿ ಮಾಡಿಕೊಂಡರೆ ಅಮಾಯಕ ಜನರ ಜೀವ ಕಾಪಾಡಬಹುದು. ಇಲ್ಲವಾದಲ್ಲಿ ಮರಣ ಮೃದಂಗ ಜೋರಾಗಿ ಸದ್ದು ಮಾಡಲಿದೆ.

First published: