• Home
 • »
 • News
 • »
 • state
 • »
 • Sonu Sood - ಆಕ್ಸಿಜನ್ ಇಲ್ಲದೇ ಅರ್ಕ ಆಸ್ಪತ್ರೆ ಪರದಾಟ; ನೆರವಿನ ಹಸ್ತ ಚಾಚಿದ ನಟ ಸೋನು ಸೂದ್

Sonu Sood - ಆಕ್ಸಿಜನ್ ಇಲ್ಲದೇ ಅರ್ಕ ಆಸ್ಪತ್ರೆ ಪರದಾಟ; ನೆರವಿನ ಹಸ್ತ ಚಾಚಿದ ನಟ ಸೋನು ಸೂದ್

ಯಲಹಂಕ ನ್ಯೂ ಟೌನ್​ನಲ್ಲಿರುವ ಅರ್ಕ ಆಸ್ಪತ್ರೆ

ಯಲಹಂಕ ನ್ಯೂ ಟೌನ್​ನಲ್ಲಿರುವ ಅರ್ಕ ಆಸ್ಪತ್ರೆ

ಬೆಂಗಳೂರಿನ ಯಲಹಂಕ ನ್ಯೂ ಟೌನ್​ನಲ್ಲಿರುವ ಅರ್ಕ ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಖಾಲಿಯಾಗಿದೆ. ಸ್ಥಳೀಯ ಠಾಣೆ ಇನ್ಸ್​ಪೆಕ್ಟರ್ ಮನವಿ ಮೇರೆಗೆ ಸೋನು ಸೂದ್ ಚಾರಿಟಬಲ್ ಟ್ರಸ್ಟ್​ನ ಸದಸ್ಯರು 11 ಆಕ್ಸಿಜನ್ ಸಿಲಿಂಡರ್​ಗಳನ್ನ ಸರಬರಾಜು ಮಾಡಿ ಅನೇಕರ ಜೀವ ಉಳಿಸಿದ್ಧಾರೆ.

 • Share this:

  ಬೆಂಗಳೂರು(ಮೇ 04): ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಮಂದಿ ಬಲಿಯಾದ ಘೋರ ದುರಂತ ಘಟನೆ ದೇಶಾದ್ಯಂತ ಸದ್ದು ಮಾಡಿದೆ. ಚಾಮರಾಜನಗರವಷ್ಟೇ ಅಲ್ಲ ರಾಜ್ಯದ ಅನೇಕ ಜಿಲ್ಲೆಗಳಲ್ಲೂ ಜೀವರಕ್ಷಕ ಆಮ್ಲಜನಕದ ಕೊರತೆ ಕಾಡುತ್ತಿದೆ. ಬೆಂಗಳೂರಿನಲ್ಲೂ ಅನೇಕ ಆಸ್ಪತ್ರೆಗಳು ಕೋವಿಡ್ ರೋಗಿಗಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡುವ ಕಾರ್ಯದಲ್ಲೇ ಹೈರಾಣಾಗಿ ಹೋಗಿವೆ. ನಿನ್ನೆ ಯಲಹಂಕ ಬಳಿಯ ಎರಡು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಡಿದೆ. ಯಲಹಂಕ ನ್ಯೂಟೌನ್​ನಲ್ಲಿರುವ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಹಲವು ರೋಗಿಗಳು ಸಾವಿನ ದವಡೆಯಲ್ಲಿದ್ದರು. ಆಗ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿ ಸಕಾಲಕ್ಕೆ ಆಕ್ಸಿಜನ್ ಪೂರೈಸಿದರು.


  ಅರ್ಕ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ತಡರಾತ್ರಿ 12:30ರ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ಇಬ್ಬರು ರೋಗಿಗಳು ಮೃತಪಟ್ಟರೆನ್ನಲಾಗಿದೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರಿಗೆ ಕರೆ ಮಾಡಿದ್ದಾರೆ. ತತ್​ಕ್ಷಣವೇ ಆಸ್ಪತ್ರೆಗೆ ದೌಡಾಯಿಸಿ ಬಂದ ಇನ್ಸ್​ಪೆಕ್ಟರ್ ಸತ್ಯನಾರಾಯಣ ರಾವ್ ಅವರು ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿ ಸಹಾಯ ಯಾಚಿಸುತ್ತಾರೆ. ಇನ್ಸ್​ಪೆಕ್ಟರ್ ಸತ್ಯನಾರಾಯಣ ರಾವ್ ಅವರ ಮನವಿಗೆ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಸ್ಪಂದಿಸಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಟ್ರಸ್ಟ್ ಸದಸ್ಯರಾದ ಹಷ್ಮತ್, ಅಶ್ವಥ್, ರಾಧಿಕಾ, ರಾಘವ್ ಸಿಂಘಲ್ ಮತ್ತು ಅಮಿತ್ ಅವರು ವಿವಿಧ ಬೈಕ್ ಮತ್ತು ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್​ಗಳನ್ನ ಅರ್ಕ ಆಸ್ಪತ್ರೆಗೆ ತಂದೊಯ್ಯುತ್ತಾರೆ. ಸಕಾಲಕ್ಕೆ ಆಕ್ಸಿಜನ್ ಸಿಕ್ಕಿದ್ದರಿಂದ ಹತ್ತಾರು ರೋಗಿಗಳು ಸಾವಿನ ದವಡೆಯಿಂದ ಪಾರಾಗಿದ್ದಾರೆ.


  ಇದನ್ನೂ ಓದಿ: ನಿತ್ಯವೂ ಮೈಕ್ ಹಿಡಿದು ಬೀದಿಬೀದಿಯಲ್ಲಿ ಕೊರೋನಾ ಜನಜಾಗೃತಿ ಮೂಡಿಸುತ್ತಿರುವ ವೆಂಕಟೇಶ್


  ಅದೇ ರೀತಿ ಯಲಹಂಕ ನ್ಯೂ ಟೌನ್​ನಲ್ಲೇ ಇರುವ ಚೈತನ್ಯ ಮೆಡಿಕಲ್ ಸೆಂಟರ್​ನಲ್ಲೂ ಇಂಥದ್ದೇ ಪರಿಸ್ಥಿತಿ ಬಂದೊದಗಿದ್ದುದು ಬೆಳಕಿಗೆ ಬಂದಿದೆ. ಇಲ್ಲಿ ಆಕ್ಸಿಜನ್ ಖಾಲಿಯಾಗುತ್ತಾ ಬರುತ್ತಿರುವಂತೆಯೇ ಆಸ್ಪತ್ರೆಯವರು ತಮ್ಮಲ್ಲಿ ದಾಖಲಾಗಿದ್ದ ರೋಗಿಗಳನ್ನ ಬೇರೆ ಆಸ್ಪತ್ರೆಗೆ ವರ್​ಗವಾಗುವಂತೆ ತಿಳಿಸಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿರುವ, ವೆಂಟಿಲೇಟರ್​ನಲ್ಲಿರುವ ಹಾಗೂ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ರೋಗಿಗಳು ಆಸ್ಪತ್ರೆಯಲ್ಲಿದ್ದರು. 33 ಲೀಟರ್​ನ ಆಕ್ಸಿಜನ್ ಇರುವ 20-30 ಸಿಲಿಂಡರ್​ಗಳು ಚೈತನ್ಯ ಮೆಡಿಕಲ್ ಸೆಂಟರ್​ಗೆ ಬೇಕು ಎಂದು ಅಲ್ಲಿನ ವೈದ್ಯರು ಸಂಜೆ 7:30ಕ್ಕೆ ಸಹಾಯ ಕೋರಿದರು. ನಂತರ, ನಾಲ್ವರು ರೋಗಿಗಳನ್ನ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಬ್ಯಾಕಪ್ ಇದ್ದ ಆಕ್ಸಿಜನ್​ನಿಂದ ಉಳಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತೆನ್ನಲಾಗಿದೆ.

  Published by:Vijayasarthy SN
  First published: