Bengaluru: ಪರೀಕ್ಷೆ ಹತ್ತಿರವಾಗ್ತಿದ್ದಂತೆ ಶಾಕ್ ಕೊಟ್ಟ ಖಾಸಗಿ ಶಾಲೆಗಳು, ಫುಲ್​ ಫೀಸ್ ಕಟ್ಟಿಲ್ಲ ಅಂದ್ರೆ ನೋ ಎಕ್ಸಾಂ

ಫುಲ್​ ಫೀಸ್​ ಕಟ್ಟಿಲ್ಲ ಅಂದ್ರೆ ಪರೀಕ್ಷೆಗೆ ಕೂರಲು ಬಿಡಲ್ಲ. ಖಾಸಗಿ ಶಾಲೆಗಳ ಶುಲ್ಕದ ಕಿರುಕುಳ ಬೇಸತ್ತ ಪೋಷಕರು ಮಕ್ಕಳ ರಕ್ಷಣಾ ಆಯೋಗದ ಮೊರೆ ಹೋಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.12):  ಕೊರೊನಾ ಕೇಸ್ (Corona case) ಕಡಿಮೆಯಾಯ್ತು. ಶಾಲೆಗಳು (School) ಆರಂಭವಾಯ್ತು. ಪರೀಕ್ಷೆಗಳು ಹತ್ತಿರ ಬಂತು.  ಆದರೆ ಪರೀಕ್ಷೆ ಬರೆಯೋ ಮುನ್ನ ಫುಲ್ ಫೀಸ್ ಕಟ್ಟಿ ಅಂತ ಖಾಸಗಿ ಶಾಲೆಗಳಲ್ಲಿ ಮತ್ತೆ ಕ್ಯಾತೆ‌ ತೆಗೆದಿವೆ. 10ನೇ ತರಗತಿ ಮಾತ್ರವಲ್ಲ, LKGಗೂ ಹಾಲ್‌ಟಿಕೆಟ್ ಮಾಡಿ, ಶುಲ್ಕ (Fee) ಕಟ್ಟಿ ಎಂದು ಕಿರಿಕ್ ಮಾಡ್ತಿವೆ. ಇದಕ್ಕೆ ಪೋಷಕರು (Parents ಮಕ್ಕಳ ಆಯೋಗ ಮೆಟ್ಟಿಲೇರಿದ್ದಾರೆ. ಕೊರೊನಾ ಮೂರನೆ ಅಲೆಯಲ್ಲಿ ಕೇಸ್ ಕಡಿಮೆಯಾಗುತ್ತಿದ್ದಂತೆ ಶಾಲೆಗಳು ಶುರುವಾದವು. ಈ ವರುಷವೂ ಹಲವು ತಿಂಗಳು ಆನ್‌ಲೈನ್‌ಕ್ಲಾಸ್ ಮಾಡಬೇಕಾಯಿತು. ಇದೀಗ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆಗಳು ಬಂದಿರುವುದರಿಂದ ಮತ್ತೆ ಖಾಸಗಿ ಶಾಲೆಗಳು ತಮ್ಮ ಧನದಾಹಿತನಕ್ಕೆ ಮುಂದಾಗಿವೆ.

ಫುಲ್​ ಫೀಸ್​ ಕಟ್ಟಿದ್ರಷ್ಟೆ ಪರೀಕ್ಷೆ

ಪರೀಕ್ಷೆ ಬರೀಬೇಕೆಂದ್ರೆ ಫುಲ್ ಫೀಸ್ ಕಟ್ಟಲೇಬೇಕು. ಇಲ್ಲವಾದಲ್ಲಿ 1-10ನೇ ತರಗತಿ ಹಾಲ್ ಟಿಕೆಟ್ ಇಲ್ಲ, ಪರೀಕ್ಷೆಗೆ ಅವಕಾಶವೂ ಕೊಡುತ್ತಿಲ್ಲ.‌ ಹಾಲ್ ಟಿಕೆಟ್ ಕೊಡುವ ನೆಪದಲ್ಲಿ ಬಾಕಿ ಶುಲ್ಕ ವಸೂಲಿ ವಸೂಲಿ ಮಾಡುತ್ತಿವೆ. ಹಲವು ಪ್ರತಿಷ್ಟಿತ ಶಾಲೆಗಳಲ್ಲಿ 10ನೇ ತರಗತಿ ಮಾತ್ರವಲ್ಲ, ಯುಕೆಜಿ , ಎಲ್ ಕೆ.ಜಿ ಸೇರಿದಂತೆ ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿ, ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೇ ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಪರೀಕ್ಷೆ ಕೂರಿಸಿಲ್ಲ.

ಶಾಲೆಗಳ ಶುಲ್ಕ ಟಾರ್ಚರ್​ಗೆ ಪೋಷಕರ ಬೇಸರ

ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ಗೆ ಬೇಸತ್ತ ಪೋಷಕರ ಸಮನ್ವಯ ಸಮಿತಿ ಈ ಬಗ್ಗೆ  ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದೆ. ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರಗಿಸುವಂತೆ ಪೋಷಕರಿಂದ ಒತ್ತಾಯಿಸಲಾಗಿದೆ. ಪೋಷಕರ‌ ಸಮನ್ವಯ ಸಮಿತಿಯ ದೂರಿನ ಮೇರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. LKG ಇಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಇಲಾಖೆಗೆ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: Mysore Crime: ಜಡ್ಜ್ ಆಗಬೇಕು ಎಂದು ಕನಸು ಕಂಡವಳು ಸೇರಿದ್ದು ಮಸಣಕ್ಕೆ

ಸರ್ಕಾರ ಕಡಿವಾಣ ಹಾಕಬೇಕು

ಈ ಪತ್ರದ ಹಿನ್ನೆಲೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ. ಮಕ್ಕಳಿಗೆ ‌ಹಾಲ್ ಟಿಕೆಟ್ ಕೊಡುವ ವಿಚಾರದಲ್ಲಿ ಕೆಲ ಶಾಲೆಗಳಿಂದ ಸಮಸ್ಯೆ ಅಗಿದೆ.‌ ನಮ್ಮ ವ್ಯಾಪ್ತಿಯಲ್ಲಿ ಇರದ ಪ್ರತಿಷ್ಟಿತ ಖಾಸಗಿ ಶಾಲೆಗಳು ಈ ರೀತಿ ಮಾಡುತ್ತಿವೆ. ಆದ್ರೆ ನಮ್ಮ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಈಗಾಗಲೇ ಸೂಚನೆ ಕೊಡಲಾಗಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ರುಪ್ಸಾ ಖಾಸಗಿ ಶಾಲಾ ಒಕ್ಕೂಟ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯೆ ನೀಡ್ತಾರೆ.

ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಳೆದೆರಡು ವರುಷಗಳಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸೋದು ಕಷ್ಟವಾಗಿದೆ. ಇಂಥ ಹೊತ್ತಿನಲ್ಲಿ ಪರೀಕ್ಷೆ ಸಂದರ್ಭದಲ್ಲಿ ಹಾಲ್ ಟಿಕೆಟ್ ‌ನೀಡದೆ ಮಕ್ಕಳಿಗೆ ತೊಂದರೆ ಕೊಡೋದು ಸರಿಯಲ್ಲ.‌  ಶುಲ್ಕ ಕಿರುಕುಳ ನೀಡುವ ಶಾಲೆಗಳ ವಿರುದ್ದ ಕ್ರಮಕೈಗೊಳ್ಳಿ ಎಂದು ನೊಂದ ಪೋಷಕರ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Ticket Deal: ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರು! ಕಾಂಗ್ರೆಸ್ ಜೊತೆ ಜಿ.ಟಿ ದೇವೇಗೌಡ ‘ಟಿಕೆಟ್ ಡೀಲ್‘

ಕೊರೊನಾ ಬಂದ ಮೇಲೆ ಹಲವು ಸಂಸ್ಥೆಗಳು ನಷ್ಟದ ಹಾದಿ ಹಿಡಿದಿವೆ ಆದ್ರೆ ಖಾಸಗಿ ಶಾಲಾ-ಕಾಲೇಜು ಕೂಡ ಸೇರಿದೆ. ಶುಲ್ಕ ಪಡೆಯದೇ ಶಾಲೆ‌ ನಡೆಸೋದು ಹೇಗೆ ಎಂಬುದು ಖಾಸಗಿ ಶಾಲೆಗಳ ಪ್ರಶ್ನೆ. ಸದ್ಯ ಕೋರ್ಟ್‌ನಲ್ಲಿ ಶುಲ್ಕ ಸಂಬಂಧ ಕೇಸ್ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಬೇಕಿದೆ.
Published by:Pavana HS
First published: