Children Missing Case: ಬ್ಲೂ ವೇಲ್ ಬಳಿಕ ಮೈನ್​ಕ್ರಾಫ್ಟ್​ ಗೇಮ್​ಗೆ ಒಳಗಾದ್ರಾ ಮಕ್ಕಳು; ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು?​

ಹೊಸ ದೇಶ, ಹೊಸ ಮನೆ, ಹೊಸ ಪ್ರಪಂಚ ನಿರ್ಮಾಣ ಮಾಡುವ ಗೇಮ್ ಇದಾಗಿದೆ. ಈ ಆಟದಂತೆ ಮಕ್ಕಳು ಹೊಸ ಜಗತ್ತನ್ನೆ ನಿರ್ಮಿಸಲು ಹೋದ್ರಾ ಎನ್ನುವ ಅನುಮಾನ ಪ್ರಾರಂಭವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಅ. 10): ನಗರದಲ್ಲಿ ಸಾಕಷ್ಟು ಆತಂಕಕ್ಕೆ‌ ಕಾರಣವಾಗಿದ್ದ 7 ಮಕ್ಕಳ ನಾಪತ್ತೆ ಪ್ರಕರಣಸಲ್ಲಿ ಸದ್ಯ ಮೂರು ಜನ ಪತ್ತೆಯಾಗಿದ್ದಾರೆ. ಆದರೆ ಅಪಾರ್ಟ್ಮೆಂಟ್ ಒಂದರ ಯುವತಿ ಜೊತೆ ಮನೆ ಬಿಟ್ಟಿದ್ದ ಮೂವರ ಮಕ್ಕಳ ಬಗ್ಗೆ ಇದುವರೆಗೂ ಒಂದು ಸಣ್ಣ ಸುಳಿವು ಸಹ ಸಿಕ್ಕಿಲ್ಲ. ನಾಲ್ಕು ತಂಡಗಳಲ್ಲಿ ಪೊಲೀಸರು ತನಿಖೆಗೆ ಮುಂದಾಗಿದ್ದು ನಾಲ್ವರ ನಾಪತ್ತೆ ಪ್ರಕರಣದಲ್ಲಿ 21 ವರ್ಷದ ಬಾಲಕಿ ವಿಲನ್ ಆಗಿದ್ದಾಳೆ ಎನ್ನುವ ಅನುಮಾನ ದಟ್ಟವಾಗಿ ವ್ಯಕ್ತವಾಗುತ್ತಿದೆ. ಇನ್ನೂ ಮಕ್ಕಳ‌ ಸುಳಿವು ಪತ್ತೆ ಆಗದ ಕಾರಣ ಸೋಲದೇವನಹಳ್ಳಿ ಪೊಲೀಸರಿಂದ ಪ್ರತ್ಯೇಕ ತಂಡಗಳನ್ನ ರಚಿಸಿ ಬಸ್, ರೈಲು ಯಾವುದರಲ್ಲಿ ಹೋಗಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಕಲೆಹಾಕುತ್ತಿದ್ದಾರೆ.‘

ಮಕ್ಕಳ ಪತ್ತೆಗೆ ತೀವ್ರ ಶೋಧ

ಮಂಡ್ಯ, ಬಳ್ಳಾರಿ ಹಾಗೂ ಬೀದರ್‌ನಲ್ಲಿ ಸೇರಿದಂತೆ ಮಂಗಳೂರು ಭಾಗಗಳಲ್ಲಿ ಪ್ರತ್ಯೇಕ‌ ತಂಡಗಳಲ್ಲಿ ತನಿಖೆ ನಡೆಸುತ್ತಿದ್ದು ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಮಕ್ಕಳ ಚಲನವಲನ ಪತ್ತೆಯಾಗಿಗೆ, ಪೊಲೀಸರೊಟ್ಟಿಗೆ ನಾವು ತನಿಖೆಗೆ ಸಹಕರಿಸುತ್ತಿದ್ದೇವೆ ಕೊನೆಯದಾಗಿ ಚಿಕ್ಕಬಾಣವಾರ ರೈಲ್ವೆ ನಿಲ್ದಾಣಕ್ಕೆ ಹೋಗಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ನಂತರ ಯಶವಂತಪುರ ರೈಲು ನಿಲ್ದಾಣದಲ್ಲಿ ಯಾವುದೇ ಕುರುವು ಪತ್ತೆಯಾಗಿಲ್ಲ.

ಒಡವೆ, ನಗದು ತೆಗೆದುಕೊಂಡು ನಾಪತ್ತೆ

ಪ್ರಕರಣ ಕುರಿತು ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಈ ಸಂಬಂಧ ವರ್ಷಿಣಿ ಪೋಷಕರನ್ನು ವಿಚಾರಣೆ ನಡೆಸಿದ ವೇಳೆ 3000 ನಗದು ಹಾಗೂ ಸುಮಾರು 70 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೆಸ್ ತೆಗೆದುಕೊಂಡು ಹೋಗಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ.

ಇದನ್ನು ಓದಿ: ಮೂವರು ಬಾಲಕರು ಪತ್ತೆ; ಪೇಪರ್​ ಆಯುವನ ಬಳಿ ಕೆಲಸ ಕೇಳಿದ್ದ ಮಕ್ಕಳು

ಮಕ್ಕಳಿಗೆ ಮೋಡಿ ಮಾಡಿದ್ದಳಾ ಯುವತಿ

ಅಪಾರ್ಟ್ಮೆಂಟ್‌ನಲ್ಲಿ ತುಂಬಾ ಆಕ್ಟೀವ್ ಆಗಿದ್ದ ವರ್ಷಿಣಿ,  ಗಣೇಶ ಚತುರ್ಥಿ, ಫೇರ್‌ವೆಲ್, ಕ್ರಿಕೆಟ್​​ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಆಯೋಜನೆ ಮಾಡುತ್ತಿದ್ದಳು. ,  ವರ್ಷಿಣಿಯೊಂದಿಗೆ ಮಕ್ಕಳು ಬೆರೆತರೆ ಆಕ್ಟೀವ್ ಆಗುತ್ತಾರೆ ಅನ್ನೋ ನಂಬಿಕೆ ಅಪಾರ್ಟ್ಮೆಂಟ್ ನಿವಾಸಿಗಳಲಿತ್ತು. ಅಷ್ಟೆ ಅಲ್ಲ ವರ್ಷಿಣಿ ಹೇಳಿದ್ದ ಮಾತುಗಳನ್ನ ಚಾಚು ತಪ್ಪದೆ ಮಕ್ಕಳು ಪಾಲಿಸುತ್ತಿದ್ದರು. ಸದ್ಯ ವರ್ಷಿಣಿಯೆ ಎಲ್ಲರನ್ನೂ ಕರೆದುಕೊಂಡು ಹೋಗಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ವರ್ಷಿಣಿ ಮನೆ ಯಿಂದ ಹೊರಡುವ ಮುನ್ನಾ ತನ್ನೆಲ್ಲಾ ಸಾಮಾಜಿಕ‌ ಜಾಲತಾಣಗಳ ಅಕೌಂಟ್ ಬ್ಲಾಕ್ ಮಾಡಿರುವುದು ತಿಳಿದುಬಂದಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

ಮೈನ್​ ಕ್ರಾಫ್ಟ್​ ಗೇಮಿಂಗ್​ ಹುಚ್ಚು?

ಮಕ್ಕಳು mine ಕ್ರಾಫ್ಟ್ ಅನ್ನೋ ಆನ್‌ಲೈನ್ ಗೇಮ್‌ಗೆ ಬಹಳಷ್ಟು ಅಚ್ಚುಕೊಂಡಿದ್ದರು ಎನ್ನಲಾಗಿದೆ.  ಮಕ್ಕಳು ಬಿಡುವಿನ ಸಮಯದಲ್ಲಿ ಮೈನ್ ಕ್ರಾಫ್ಟ್ ಗೇಮ್ ಆಡುತ್ತಿದ್ದರು . ಹೊಸ ದೇಶ, ಹೊಸ ಮನೆ, ಹೊಸ ಪ್ರಪಂಚ ನಿರ್ಮಾಣ ಮಾಡುವ ಗೇಮ್ ಇದಾಗಿದೆ. ಈ ಆಟದಂತೆ ಮಕ್ಕಳು ಹೊಸ ಜಗತ್ತನ್ನೆ ನಿರ್ಮಿಸಲು ಹೋದ್ರಾ ಎನ್ನುವ ಅನುಮಾನ ಪ್ರಾರಂಭವಾಗಿದೆ. ಆನ್‌ಲೈನ್‌ ಗೇಮ್‌ನಿಂದ ಪ್ರೆರೇಪಣೆಗೊಂಡು ಹೊಸ ಪ್ರಪಂಚ ಮಟ್ಟಲು ಮುಂದಾದ್ರ ಮಕ್ಕಳು ಎನ್ನಲಾಗುತ್ತಿದ್ದು ಈ ಹಿಂದೆ ಬ್ಲೂ ವೇಲ್ ಅನ್ನೋ ಗೇಮ್ ನಿಂದ ಸಾಕಷ್ಟು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು ನಂತರ ಆ ಗೇಮ್ ಅನ್ನು ಬ್ಯಾನ್ ಮಾಡಲಾಗಿತ್ತು ಸದ್ಯ ಮೈನ್ ಕ್ರಾಫ್ಟ್ ಗೇಮ್‌ನಿಂದ ಮಕ್ಕಳು ಮನೆ ತೊರೆದಿರೋ ಶಂಕೆ ವ್ಯಕ್ತವಾಗುತ್ತಿದೆ.

ಒಂದು ಸಣ್ಣ ಸುಳಿವು ಸಿಗದೆ ಫುಲ್ ಮೈಂಡ್ ಗೇಮ್‌ ಆಡಿರುವ ವರ್ಷಿಣಿಯೆ ಈ ಪ್ರಕರಣಕ್ಕೆ ಕೇಂದ್ರ ಬಿಂದುವಾಗಿದ್ದು, ನಾಲ್ಕು ಜನರನ್ನ‌ ಪೊಲೀಸರು ನಿರಂತರ ಶೋಧ ನಡೆಸಿದ್ದಾರೆ.
Published by:Seema R
First published: