Siddaramaiah Targets BSY: ಲೂಟಿ ಹೊಡೆದಿದ್ದಕ್ಕೆ BSY ಅತ್ಯುತ್ತಮ ಶಾಸಕನಾ? ರಾಜಹುಲಿ ಅಂತ ಬೇರೆ ಕರಿಬೇಕಾ? ಸಿದ್ದರಾಮಯ್ಯ ಕೆಂಡ

why bs yediyurappa awarded as best mla: ಬಿ.ಎಸ್​.ಯಡಿಯೂರಪ್ಪ ರಾಜಾಹುಲಿ ಅಂತೆ. ಏಕೆ ಅಕ್ಕಿ ನಿಲ್ಲಿಸಿದಕ್ಕೆ ಇವರನ್ನ ರಾಜಾಹುಲಿ ಅಂತ ಕರಿಬೇಕಾ? ಯಡಿಯೂರಪ್ಪ ಅತ್ಯುತ್ತಮ ಶಾಸಕ ಅಂತೆ. ಏಕೆ ಲೂಟಿ ಹೊಡೆದಿದಕ್ಕೆ ಯಡಿಯೂರಪ್ಪ ಅತ್ಯುತ್ತಮ ಶಾಸಕರಾ?

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

  • Share this:
ಬೆಂಗಳೂರು: ಹೆಬ್ಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲ ಜೆಡಿಎಸ್​ ಮುಖಂಡರು, ಜೆಡಿಎಸ್​ ಕಾರ್ಯಕರ್ತರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ(BJP Government)  ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಸುಳ್ಳು ಹೇಳ್ತಾರೆ, ಈಗ ದೇಶದಲ್ಲಿ ಇಂಧನ ಬೆಲೆ ಜಾಸ್ತಿ ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದೆ. ಸಾಮಾನ್ಯ ಜನರು ಜೀವನ ಮಾಡಲು ಆಗುತ್ತಿಲ್ಲ. ಇದು ನಿಮ್ಮ ಆಚ್ಛೇ ದಿನನಾ? ದೇಶದಲ್ಲಿ ಬಡವರು ಬದುಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಇವರ ಅಪ್ಪನ ಮನೆಯಿಂದ ತಂದು ಕೊಡ್ತಾರಾ?

ಹಿಂದೆ ನಾನು ಸಿಎಂ ಆಗಿದ್ದಾಗ ಬಡ ಜನರಿಗೆ ಏಳು ಕೆಜಿ ಅಕ್ಕಿ ಕೊಟ್ಟಿದೆ. ಯಡಿಯೂರಪ್ಪ, ಕುಮಾರಸ್ವಾಮಿ  ಕೊಟ್ಟಿದ್ದಾರಾ..?ಈಗ ಸಿಎಂ ಬೊಮ್ಮಾಯಿ ಕೊಡ್ತಾರಾ..? ಬಡವರಿಗೆ ಅಕ್ಕಿ ಕೊಡಲು ಏನ್ ಕಷ್ಟ..? ನಿಮ್ಮ ಅಪ್ಪನ ಮನೆಯಿಂದ ಏನಾದರೂ ತಂದು ಕೊಡ್ತೀರಾ..? ಏನ್ ಕಷ್ಟ ನಿಮಗೆ ಬಡಜನರಿಗೆ ಅಕ್ಕಿ ಕೊಡೊಕ್ಕೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಲೂಟಿ ಹೊಡೆದಿದಕ್ಕೆ ಅತ್ಯುತ್ತಮ ಶಾಸಕನಾ?

ಬಿ.ಎಸ್​.ಯಡಿಯೂರಪ್ಪ ರಾಜಾಹುಲಿ ಅಂತೆ. ಏಕೆ ಅಕ್ಕಿ ನಿಲ್ಲಿಸಿದಕ್ಕೆ ಇವರನ್ನ ರಾಜಾಹುಲಿ ಅಂತ ಕರಿಬೇಕಾ? ಯಡಿಯೂರಪ್ಪ ಅತ್ಯುತ್ತಮ ಶಾಸಕ ಅಂತೆ. ಏಕೆ ಲೂಟಿ ಹೊಡೆದಿದಕ್ಕೆ ಯಡಿಯೂರಪ್ಪ ಅತ್ಯುತ್ತಮ ಶಾಸಕರಾ? ಏನ್ ಮಾಡಿದ್ದಾರೆ ಇವರು ಲೂಟಿ ಹೊಡೆದಿದ್ದು ಬಿಟ್ಟು ಎಂದು ಟೀಕಿಸಿದರು. ಬಡವರಿಗೆ ಅಕ್ಕಿ ಕೊಡಿ ಅಂತ ಹೇಳಿದ್ರೆ, ಆಹಾರ ಸಚಿವ ಕತ್ತಿ ಐದು ಕೆಜಿ ಸಾಕು ಅಂತ ಹೇಳ್ತಾರೆ. ನಾನೇ ಹೇಳ್ತಿನಿ‌ ಮುಂದೆ ನಾವು ಅಧಿಕಾರಕ್ಕೆ ಬಂದೇ ಬರ್ತಿವಿ. ಮತ್ತೆ ಬಡ ಜನರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತಿವಿ. ಇಂದಿರಾ ಕ್ಯಾಂಟಿನ್ ಒಪನ್ ಮಾಡ್ತಿವಿ. ಹೀಗಾಗಿ ನಾನು ಕೈ ಮುಗಿದು ಪ್ರಾರ್ಥನೆ ಮಾಡ್ತಿನಿ. ಮುಂದೆ ಈ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಕಾಂಗ್ರೆಸ್​ಗೆ ಬಂದವರಿಗೆ ಸ್ವಾಗತ

ಇನ್ನು ಇಂದು ಜೆಡಿಎಸ್ ನ ಹನುಮಂತೇಗೌಡ, ಅನಂತರಾಮು , ಆನಂದ್ ನಮ್ಮ ಪಕ್ಷಕ್ಕೆ ಸೇರಿದಂತೆ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದೀರಿ. ಪಕ್ಷ ಸೇರಿದ ಎಲ್ಲರಿಗೂ ಸ್ವಾಗತ ಬಯಸುತ್ತೇನೆ ಎಂದರು. ಹನುಮಂತೇ ಗೌಡ ಕಾಂಗ್ರೆಸ್ ಸೇರಿದ್ದಾರೆ. ಹಿಂದೆ ಕಾಂಗ್ರೆಸ್ ನಲ್ಲೇ ಇದ್ರೂ , ನಂತ್ರ ಜೆಡಿಎಸ್ ಹೋಗಿ ಚುನಾವಣೆಯಲ್ಲಿ ನಿಂತು ಹೆಚ್ಚು ಮತವನ್ನು ಪಡೆದಿದ್ದರು ಅಂದ್ರೆ ಅವರೊಬ್ಬ ಜನಪ್ರಿಯ ನಾಯಕರು ಎಂದು ಪಕ್ಷ ಆಗಮಿಸಿದವರನ್ನು ಸಿದ್ದರಾಮಯ್ಯ ಹೊಗಳಿದರು.

ಇದನ್ನು ಓದಿ: Bharat Bandh: ನಾಳೆ ಭಾರತ್ ಬಂದ್, ಕರ್ನಾಟಕದಲ್ಲಿ ಬಂದ್​ ಯಶಸ್ವಿಯಾಗುತ್ತಾ? ಅಂದು ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

2 ಕೋಟಿ ಉದ್ಯೋಗ ಎಲ್ಲಿ?

ಇದನ್ನು ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸಹ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ 2014 ರಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ದೇಶದಲ್ಲಿ ನಿರುದ್ಯೋಗ ವನ್ನು ತೊಡಗಿಸಿ ಯುವಕರನ್ನು ಸ್ವಾವಲಂಭಿಗಳನ್ನಾಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು 7 ವರ್ಷವಾಯ್ತು. ವರ್ಷಕ್ಕೆ 2 ಕೋಟಿಯಂತೆ 14 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ಸೃಷ್ಟಿಯಾದ ಉದ್ಯೋಗಗಳು ಎಷ್ಟು? ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನಾದರೂ (Private Job) ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​   ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
Published by:Kavya V
First published: