Karnataka Assembly: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

ವಿಪಕ್ಷ ನಾಯಕರ ಗ್ಯಾಸ್​ ದರ ಏರಿಕೆ ವಿಚಾರ ಕುರಿತ ಚರ್ಚೆ ಸಮಯದಲ್ಲಿ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಿದ್ದರಾಮಯ್ಯ ಹೋಂ ವರ್ಕ್​ ಕೊಟ್ಟ ಸ್ವಾರಸ್ಯಕರ ಘಟನೆ ಕೂಡ ಸದನದಲ್ಲಿ ನಡೆಯಿತು.

ಫೈಲ್​ ಫೋಟೋ

ಫೈಲ್​ ಫೋಟೋ

  • Share this:
    ಬೆಂಗಳೂರು (ಸೆ. 15): ಪೆಟ್ರೋಲ್​ , ಡಿಸೇಲ್​ ಹಾಗೂ ಅಡುಗೆ ಸಿಲಿಂಡರ್​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಇಂದು ವಿಧಾನಸಭೆ ಅಧಿವೇಶನದಲ್ಲಿ ಜೋರು ಸದ್ದು ಮಾಡಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ಮತ್ತು  ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೊಟೇಲ್​ಗಳಲ್ಲಿ ತಿಂಡಿ ರೇಟುಗಳು ದುಬಾರಿಯಾಗಿವೆ. ಒಂದು ಇಡ್ಲಿಗೆ 36 ರೂ ಆಗಿದೆ. ಹೊಟೇಲ್​ನಲ್ಲಿ ತಿಂಡಿ ದರ ಹೆಚ್ಚಿದ ಕಾರಣ ನಾನು ಹೋಟೇಲ್​ಗೆ ಹೋಗುವುದನ್ನೇ ನಿಲ್ಲಿಸಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಈ ವೇಳೆ ವಿಪಕ್ಷ ನಾಯಕರ ಗ್ಯಾಸ್​ ದರ ಏರಿಕೆ ವಿಚಾರ ಪ್ರಸ್ತಾಪದ ಚರ್ಚೆ ಸಮಯದಲ್ಲಿ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಿದ್ದರಾಮಯ್ಯ ಹೋಂ ವರ್ಕ್​ ಕೊಟ್ಟ ಸ್ವಾರಸ್ಯಕರ ಘಟನೆ ಕೂಡ ಸದನದಲ್ಲಿ ನಡೆಯಿತು.

    ಹೋಟೇಲ್​ಗೆ ಹೋಗುವುದನ್ನು ನಿಲ್ಲಿಸಿದ್ದೇನೆ
    ಪೆಟ್ರೋಲ್​, ಡಿಸೇಲ್​ ಮತ್ತು ಗ್ಯಾಸ್​ ದರ ಏರಿಕೆಯಿಂದ ಹೊಟೇಲ್​ಗಳಲ್ಲಿ ತಿಂಡಿ ದರ ಜಾಸ್ತಿಯಾಗಿದೆ. ಎರಡು ಇಡ್ಲಿ, ಒಂದು ವಡೆಗೆ 39 ರೂ ಆಗಿದೆ. ಯಾಕೆ ಜಾಸ್ತಿ ಆಯ್ತು? ಇಂಧನ ದರ ಹೆಚ್ಚಾಗಿದೆ, ಅದ್ಕೆ ಹೆಚ್ಚಾಗಿದೆ. ನಾನು ಜನಾರ್ಧನ ಹೋಟೆಲ್​ನಲ್ಲಿ ಮಸಾಲೆ ದೋಸೆ ದರ 60 ರೂ ಆಗಿದೆ? ಯಾಕೆ ಜಾಸ್ತಿಯಾಗಿದೆ ಎಂದರೆ ಅಡುಗೆ ಎಣ್ಣೆ ದುಬಾರಿಯಾಗಿರುವುದರಿಂದ ಉದಾಹರಣ ಕೊಟ್ಟು ಸದನದ ಗಮನ ಸೆಳೆದರು. ಅಷ್ಟೇ ಅಲ್ಲದೇ, ಬೆಲೆ ಜಾಸ್ತಿ ಆಗಿರುವುದರೊಂದ ನಾನು ಹೋಟೆಲ್ ಗೆ ಹೋಗುವುದು ಕಡಿಮೆ ಆಗಿದೆ ಎಂದು ತಿಳಿಸಿದರು.

    ದೋಸೆ ಬೆಲೆ ಹೆಚ್ಚಾಗಲು ಅಕ್ಕಿ ದರ ಏರಿಕೆ ಕಾರಣ
    ಸಿದ್ದರಾಮಯ್ಯ ಅವರ ಬ ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಎಲ್ಲ ವಸ್ತುಗಳ ದರ ಏರಿಕೆಗೆ ಇಂಧನ ದರ ಹೆಚ್ಚಳವೊಂದೇ ಕಾರಣ ಅಲ್ಲ. ದೋಸೆ ದರ ಏರಲು ಇಂಧನ ದರವೇ ಕಾರಣ ಅಲ್ಲ. ದೋಸೆ ದರ ಏರಲು ಅಕ್ಕಿಯ ದರ ಏರಿದ್ದು ಕಾರಣ ಎಂದರು. ಗೃಹ ಸಚಿವರ ಈ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.

    ಇದನ್ನು ಓದಿ: ಜೆಇಇ ಮೇನ್ ಫಲಿತಾಂಶ ಪ್ರಕಟ; ಕರ್ನಾಟಕದ ಗೌರಬ್ ದಾಸ್​ಗೆ First Rank ​

    ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ
    ಇದೇ ವೇಳೆ ಮಾತು ಮುಂದುವರೆಸಿದ ಸಿದ್ದರಾಮಯ್ಯ ಬೆಲೆ ಏರಿಕೆ ದರ ಎಷ್ಟಾಗಿದೆ ಎಂಬುದು ಅರಗ ಜ್ಞಾನೇಂದ್ರ ಅವರಿಗೆ ಗೊತ್ತಾಗಬೇಕು ಎಂದರೇ ಅವರು ತಮ್ಮ ಮನೆಯ ಹೋಂ ಮಿನಿಸ್ಟರ್​ಗೆ ಕೇಳಬೇಕು ಎಂದು ವಿಪಕ್ಷ ನಾಯಕರು ಕಾಲೆಳೆದರು.

    ಎಲ್ಲದಕ್ಕೂ ಡೀಸೆಲ್ ಪೆಟ್ರೋಲ್ ಕಾರಣವಾ? ಎಂಬ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹೌದು ಡೀಸೆಲ್ ದರ ಏರಿಕೆ ಕಾರಣ. ಡೀಸೆಲ್ ದರ ಹೆಚ್ಚಾದರೆ ಸಾಗಣಿಕೆ ದರ ಹೆಚ್ಚಾಗುತ್ತೆ, ಗ್ಯಾಸ್ ದರ ಹೆಚ್ಚಳ ಆದರೆ ಅಡುಗೆ ಬೆಲೆ ಹೆಚ್ಚಳ ಆಗುತ್ತದೆ. ದರ ಡಬಲ್ ಆಗಿರುವುದು ಸುಳ್ಳಾ? ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಗೆ ಕೇಳಿ ನೋಡಿ ಗೊತ್ತಾಗುತ್ತದೆ. ಅರಗ ಜ್ಞಾನೇಂದ್ರ ಅವರು ಮನೆ ಖರ್ಚಿಗೆ ಇಷ್ಟು ಹಣ ಅಂತ ಕೊಟ್ಟು ಸುಮ್ಮನೆ ಆಗ್ತಾರೆ ಅನ್ನಿಸುತ್ತೆ. ರಾತ್ರಿಗೆ ಹೋಗಿ ಮನೆಯಲ್ಲಿ ಕೇಳಿಕೊಂಡು ಬಂದು ನಾಳೆ ಸದನಕ್ಕೆ ತಿಳಿಸಬೇಕು ಎಂದು ತಾಕೀತು ಮಾಡಿದರು.

    ಸೆಸ್​ ಕಡಿತಗೊಳಿಸಿ
    ದೇಶದ ಜನರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಇದೇ ಕಾರಣಕ್ಕೆ ತಮಿಳುನಾಡು ಸಿಎಂ ಪೆಟ್ರೋಲ್ ಮೇಲಿನ 3 ರೂ ಸೆಸ್ ಕಟ್ ಮಾಡಿದ್ದಾರೆ. ನೀವ್ಯಾಕೆ ಕಟ್ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಜನರು ಕೊರೋನಾ ಸಂಕಷ್ಟದಲ್ಲಿದ್ದಾರೆ. ತಮಿಳುನಾಡು ಸಿಎಂಗೆ ಸಾಧ್ಯವಾಗಿರುವುದು ನಿಮ್ಮಿಂದ ಯಾಕೆ ಸಾಧ್ಯವಾಗಲ್ಲ. ನೀವು ಕಡಿಮೆ ಮಾಡಬಹುದು ಅಲ್ಲವೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕೇಳಿದರು. ಜೊತೆಗೆ ಸೆಸ್ ಇಳಿಸುವಂತೆ ಒತ್ತಾಯಿಸಿದರು.
    Published by:Seema R
    First published: