ಬೊಮ್ಮಾಯಿ RSSನಲ್ಲಿ ಇದ್ರಾ? ನಾನು ಯಾವ ಕುಟುಂಬದ ಹಿಡಿತದಲ್ಲೂ ಇಲ್ಲ, HDKಗೆ ನನ್ನ ಕಂಡ್ರೆ ಭಯ: Siddaramaiah
Siddaramaiah Reaction to Basavaraj Bommai: ಬಸವರಾಜ ಬೊಮ್ಮಾಯಿ ಹಿಂದಿನಿಂದಲೂ ಆರ್ಎಸ್ಎಸ್ನಲ್ಲಿ (RSS) ಇದ್ದವರಾ? ಅವರು ಎಲ್ಲಿಂದ ಬಂದವರೆಂಬುದು ಎಲ್ಲರಿಗೂ ಗೊತ್ತು, ಈಗ ಅಧಿಕಾರಕ್ಕೋಸ್ಕರವಾಗಿ ಈ ರೀತಿ ಆರ್ಎಸ್ಎಸ್ ಹೇಳಿದಂತೆ ಕುಣಿಯುತ್ತಿದ್ದಾರೆ ಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ
ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ (Sindagi - Hanagal By Elections) ಹತ್ತಿರವಾಗುತ್ತಿರುವ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ (BJP, Congress, JDS) ಪಕ್ಷಗಳ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯುತ್ತಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಸಿದ್ದರಾಮಯ್ಯ (Former Chief Minister Basavaraj Bommai) ವಿರುದ್ಧ ನೀಡಿದ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸಿಎಂಗೆ ಕರಾರುವಕ್ಕಾಗಿ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿನಿಂದಲೂ ಆರ್ಎಸ್ಎಸ್ನಲ್ಲಿ (RSS) ಇದ್ದವರಾ? ಅವರು ಎಲ್ಲಿಂದ ಬಂದವರೆಂಬುದು ಎಲ್ಲರಿಗೂ ಗೊತ್ತು, ಈಗ ಅಧಿಕಾರಕ್ಕೋಸ್ಕರವಾಗಿ ಈ ರೀತಿ ಆರ್ಎಸ್ಎಸ್ ಹೇಳಿದಂತೆ ಕುಣಿಯುತ್ತಿದ್ದಾರೆ ಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಹೇಳಿಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೊಮ್ಮಾಯಿ ಅವರ ತಂಡ ಎಸ್ಆರ್ ಬೊಮ್ಮಾಯಿ ಜನತಾ ಪಕ್ಷ, ಜನತಾ ದಳದಲ್ಲಿ ಇದ್ದವರು. ಜನತಾ ದಳದಿಂದಲೇ ಮುಖ್ಯಮಂತ್ರಿ ಕೂಡ ಆಗಿದ್ದವರು. ಬಸವರಾಜ ಬೊಮ್ಮಾಯಿ ಕೂಡ ಜೆಡಿಎಸ್ನಲ್ಲೇ ಇದ್ದವರು. ಜೆಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ (Former Chief Minister JH Patel) ರಾಜಕೀಯ ಕಾರ್ಯದರ್ಶಿಯಾಗಿದ್ದರು. ಅದೆಲ್ಲಾ ಮರೆತು ಹೋಯ್ತಾ. ಅವರು ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದವರು. 2008ರಲ್ಲಿ ಅವರು ಬಿಜೆಪಿಗೆ ಹೋಗಿದ್ದು ಎಂಬುದು ನೆನಪಿರಲಿ ಎಂದರು.
ಬೊಮ್ಮಾಯಿ ಹೇಳಿದ್ದೇನು?:
ಇತ್ತೀಚೆಗೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (RSS) ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ ಆಯುಧಗಳನ್ನು ಆರ್ಎಸ್ಎಸ್ ಕಾರ್ಯಕರ್ತರು ಝಳಪಿಸಿದ್ದನ್ನು ನೈತಿಕ ಪೊಲೀಸ್ ಗಿರಿ ಎಂದು ಜರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವರು.
ಪಾಪ ಅವರ ಪರಿಸ್ಥಿತಿ ಈಗ ನೋಡಲು ಆಗುತ್ತಿಲ್ಲ ಎಂದರು. ಆರ್ಎಸ್ಎಸ್ ರಾಷ್ಟ್ರ ಕಟ್ಟುವ ಸಂಸ್ಥೆ. ಯಾವುದೇ ರಾಜಕೀಯದಲ್ಲೂ ಅದು ಭಾಗಿಯಾಗುವುದಿಲ್ಲ. ಅದರ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದು ಸಿದ್ದರಾಮಯ್ಯ ವರ್ಚಸ್ಸಿಗೆ ಶೋಭೆ ತರುವುದಿಲ್ಲ ಎಂದರು. ಮುಂದುವರೆದ ಅವರು, ಸಿದ್ದರಾಮಯ್ಯ ಒಂದು ಕುಟುಂಬದ ಕೈಗೊಂಬೆಯಾಗಿದ್ದಾರೆ. ಅವರು ಹೇಳಿದಂತೆ ಕುಣಿಯವ ಅನಿವಾರ್ಯತೆ ಅವರಿಗಿದೆ ಎಂದು ಮೂದಲಿಸಿದರು.
ಸಿದ್ದರಾಮಯ್ಯ ಪ್ರತಿಕ್ರಿಯೆ ಏನು? (Siddaramaiah Reaction to Bommai):
ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟುಕೊಂಡವನು, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವನು. ಬೊಮ್ಮಾಯಿ ಅವರು ಮೊದಲಿಂದಲೂ ಆರ್ಎಸ್ಎಸ್ನಲ್ಲಿ ಇದ್ದವರಾ? ಅವರು ಈಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಆರ್ಎಸ್ಎಸ್ಗೆ ಹೇಳಿದಂತೆ ಕೇಳುತ್ತಿದ್ದಾರೆ. ನಾನು ಯಾವುದೇ ಒಂದು ಕುಟುಂಬದ ಕೈಗೊಂಬೆಯಲ್ಲ ಎಂದಿದ್ದಾರೆ.
ನನಗೆ ಯಾರ ಕಂಡರೂ ಭಯವಿಲ್ಲ. ನನ್ನ ಕಂಡು ಭಯ ಪಡುವವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಚ್ಡಿ ಕುಮಾರಸ್ವಾಮಿಗೆ (Former Chief Minister HD Kumaraswamy) ನನ್ನ ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಅದರಂತೆ, ಸಿದ್ದರಾಮಯ್ಯ ಮತ್ತು ಉಳಿದ ಕಾಂಗ್ರೆಸ್ ನಾಯಕರು ಇನ್ನುಳಿದ ಪಕ್ಷಗಳ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಉಪಚುನಾವಣೆಗೆ ಕಾವು ಕೂಡ ಹೆಚ್ಚುತ್ತಿದೆ.
ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ (Sindagi) ಉಪ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಹಿಂದೆ ಉಪ ಚುನಾವಣೆಯ (By election) ದಿನಾಂಕ ಘೋಷಣೆಯಾದಿದ್ದರೂ ಮೂರು ಪಕ್ಷಗಳು ಉಪ ಸಮರಕ್ಕೆ ಮುಂಚಿನಿಂದಲೂ ಕಸರತ್ತು ನಡೆಸಿಕೊಂಡು ಬಂದಿವೆ. ಇದೀಗ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು (Political Developments) ಮತ್ತಷ್ಟು ಗರಿಗೆದರಿವೆ