ಮೋದಿ Rally ಮಾಡಬಹುದು, ಆದರೆ ನಾವು ಪಾದಯಾತ್ರೆ ಮಾಡಿದ್ರೆ ಕೊರೊನಾ ಬರುತ್ತಾ? Siddaramaiah ಕಿಡಿ

ನಮ್ಮ ಪಾದಯಾತ್ರೆಯಿಂದ ಕೊರೊನಾ ಕೇಸ್​ಗಳು ಹೆಚ್ಚಾಗುತ್ತೆ ಅಂತಾರಲ್ಲ. ಉತ್ತರಪ್ರದೇಶದಲ್ಲಿ ನೋಡಿದ್ದೀರಾ. ಅಲ್ಲಿ ಪಾದಯಾತ್ರೆ ಮಾಡಲಿಲ್ವಾ? ಪ್ರಧಾನಿ ಮೋದಿಗೆ ಒಂದು ಕಾನೂನು, ನಮಗೊಂದು ಕಾನೂನಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯಿಂದ (Mekedatu Padayatra) ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಖಡಕ್​ ಹೇಳಿಕೆ ನೀಡಿದ್ರು. ಕೊರೊನಾ (Corona) ಸೋಂಕನ್ನು ನಿಯಂತ್ರಿಸುವ ಕೆಲಸ ಯಾರದ್ದು, ಆರೋಗ್ಯ ಸಚಿವ ಕೆ.ಸುಧಾಕರ್ (Health Minister K Sudhakar) ಆ ಕೆಲಸ ಮಾಡಬೇಕು. ಅವರು ಸರಿಯಾಗಿ ನಿಯಂತ್ರಣ ಮಾಡದಿದ್ದರಿಂದ ಸೋಂಕು ಹೆಚ್ಚಾಗಿದೆ. ನಮಗೂ ಜವಾಬ್ದಾರಿ ಇದೆ. ಕೋವಿಡ್​ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡ್ತೀವಿ. ನಮ್ಮ ಪಾದಯಾತ್ರೆಯಿಂದ ಕೊರೊನಾ ಕೇಸ್​ಗಳು ಹೆಚ್ಚಾಗುತ್ತೆ ಅಂತಾರಲ್ಲ. ಉತ್ತರಪ್ರದೇಶದಲ್ಲಿ ನೋಡಿದ್ದೀರಾ, ಅಲ್ಲಿ ಪಾದಯಾತ್ರೆ ಮಾಡಲಿಲ್ವಾ? ಪ್ರಧಾನಿ ಮೋದಿಗೆ ಒಂದು ಕಾನೂನು, ನಮಗೊಂದು ಕಾನೂನಾ ಎಂದು ಪ್ರಶ್ನಿಸಿದರು.

ನಾವ್ಯಾಕೆ ಮಾಡಬಾರದು?

ನಾವು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ, ಜನರ ಹಿತಕ್ಕಾಗಿ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಕೊರೊನಾ ನೆಪವೊಡ್ಡುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿಯೇ ಯುಪಿಯಲ್ಲಿ ಸಮಾವೇಶಗಳನ್ನು ಮಾಡಿರುವಾಗ, ನಾವ್ಯಾಕೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮೇಕೆದಾಟು ರಾಜಕಾರಣ ಅಂದ್ರೆ ಅಡ್ವಾಣಿ ಮಾಡಿದ ರಥಯಾತ್ರೆ ಏನು? DK Shivakumar ಪ್ರಶ್ನೆ

ಏನೇ ಮಾಡಲಿ ಪಾದಯಾತ್ರೆ ಮಾಡೇ ಮಾಡ್ತೀವಿ

ಇದೇ ವಿಷಯವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ, ಅವರು ಏನೇ ಮಾಡಲಿ ಪಾದಯಾತ್ರೆ ಮಾಡೇ ಮಾಡ್ತೀವಿ ಎಂದು ಖಂಡಾತುಂಡವಾಗಿ ಹೇಳಿದರು.  ಬಿಜೆಪಿ ರಾಜ್ಯ ಅಲ್ಲ, ದೇಶಾದ್ಯಂತ ಹೋರಾಟ ಮಾಡಲಿ. ಮಂತ್ರಿ ನುಡಿಮುತ್ತುಗಳನ್ನಾಡಿದ್ದಾರೆ. ಸಿಎಂ, ಬಿಜೆಪಿ ಅಧ್ಯಕ್ಷ, ಅಶೋಕ್ ಎಲ್ಲಾ ಅವರ ಮಾತುಗಳನ್ನ ಸರ್ಟಿಫೈ ಮಾಡಿದ್ದಾರೆ. ಅವರ ಸಂಸ್ಕೃತಿ ಅನಾವರಣ ಆಗಿದೆ, ಅವರ ವಿಶ್ವರೂಪ ದರ್ಶನ ಆಗಿದೆ ಎಂದರು.

ಮೊದಲು ಆ ಹಣ ಪಡೆಯಲಿ

ಇನ್ನು ಮೇಕೆದಾಟು ಪಾದಯಾತ್ರೆ ವಾಪಸ್ ಪಡೆಯಲು ಆರೋಗ್ಯ ಸಚಿವ ಕೆ.ಸುಧಾಕರ್ ಮನವಿ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ನೀಡಬೇಕು, ಮೊದಲು ಆ ಹಣ ಪಡೆಯಲಿ. ಏರ್ ಪೋರ್ಟ್ ನಲ್ಲಿ ಕೋವಿಡ್​ ರಿಪೋರ್ಟ್​​ ನೀಡಲು ಅವ್ಯವಹಾರ ನಡೆಯುತ್ತಿದೆ. ಊಟ-ಹೋಟೆಲ್ ಎಲ್ಲಾ ಅಡ್ಜಸ್ಟ್ ಮೆಂಟ್ ಮಾಡ್ಕೋತಾ ಇದಾರೆ. ಜನರಿಗೆ ತೊಂದರೆ  ಆಗ್ತಾ ಇದೆ, ಮೊದಲು ಅದನ್ನ ನೋಡಲಿ ಎಂದು ಸವಾಲೆಸೆದರು.

ಕೊರೊನಾ ಸ್ಪೋಟವಾದರೆ ಕಾಂಗ್ರೆಸ್ ಹೊಣೆ ಎಂಬ ಸುಧಾಕರ್ ಹೇಳಿಕೆ ವಿಚಾರವಾಗಿ ಡಿಕೆಶಿ ಕಿಡಿಕಾರಿದರು. ಈಗಾಗಲೇ ನಮ್ಮ ವಿರುದ್ದ ಕೇಸ್ ಹಾಕಿದ್ದಾರೆ, ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ. ಏಕೆ ಅವರ ವಿರುದ್ದ ಕೇಸ್ ಮಾಡಿಲ್ಲ? ಸಿಎಂ ವಿರುದ್ದ ಕೇಸ್ ಹಾಕಲಿ. ಏನೇ ಅದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತಿವಿ. ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ಅವರು ಏನೇ ಮಾಡಲೀ, ಪಾದಯಾತ್ರೆ ಮಾಡೇ ಮಾಡ್ತೀವಿ. ರಿಪಬ್ಲಿಕ್​​ ಆಫ್ ರಾಮನಗರ ಎಂಬ ಹೇಳಿಕೆಗೆ ನಮ್ಮ ಜನ ಅಲ್ಲಿದ್ದಾರೆ, ಅವರು ಉತ್ತರ ಕೊಡ್ತಾರೆ, ಜನರು ನಿರ್ಧಾರ ಮಾಡಲಿ ಎಂದಷ್ಟೇ ಹೇಳಿ ಹೊರಟರು ಡಿಕೆಶಿ.

ಇದನ್ನೂ ಓದಿ: ಗಂಡಸ್ತನ ಇದೆಯಾ ಎಂದು ಕರೆಯೋದು BJPಯ ಸಂಸ್ಕೃತಿಯಾ? DK Suresh ಪ್ರಶ್ನೆ

ಇದೇ ವಿಚಾರವಾಗಿ ಇಂದು ಮಾತನಾಡಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಕನಕಪುರ (Kanakapura) ಯಾರು ಸ್ವತ್ತು ಅಲ್ಲ ಎಂದು ಕಾಲೆಳೆದಿದ್ದಾರೆ. ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ?. ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ ಎಂದು ವ್ಯಂಗ್ಯ ಮಾಡಿದ್ದಾರೆ.
Published by:Kavya V
First published: