Indira Canteen ಹೆಸರು ಬದಲಾವಣೆ ಮಾಡುವುದು ದ್ವೇಷದ ರಾಜಕಾರಣ; ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಕಿಡಿ

indira Canteen: ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ ಮಾಡುವ ಮುನ್ನ ಬಿಜೆಪಿ ಹೆಸರು ಎಲ್ಲೆಲ್ಲಿ ಇದ್ದಾವೋ ಅವುಗಳನ್ನು ಬದಲಾಯಿಸಲಿ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬೆಂಗಳೂರು (ಆ. 7): ಇಂದಿರಾ ಕ್ಯಾಂಟೀನ್​ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್​ ಎಂದು ಮರು ನಾಮಕರಣ ಮಾಡಬೇಕು ಎಂಬ ಸಿಟಿ ರವಿ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಗರೀಬಿ ಹಟಾವೋ ಮಾಡಿದ್ದು ಇಂದಿರಾ ಗಾಂಧಿ. ಅದಕ್ಕೋಸ್ಕರ ಇಂದಿರಾ ಕ್ಯಾಂಟೀನ್ ಗೆ ಹೆಸರಿಟ್ಟಿದ್ದೇವೆ. ರಾಷ್ಟ್ರಕ್ಕೆ ಸೇವೆ ಮಾಡಿ ಬಡವರಿಗೆ ಕಾಳಜಿ ತೋರಿದ ನೆನಪಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿಟ್ಟಿದ್ದೇವೆ. ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ ಮಾಡುವ ಮುನ್ನ ಬಿಜೆಪಿ ಹೆಸರು ಎಲ್ಲೆಲ್ಲಿ ಇದ್ದಾವೋ ಅವುಗಳನ್ನು ಬದಲಾಯಿಸಲಿ. ಬಿಜೆಪಿಯವರು ಅರುಣ್ ಜೇಟ್ಲಿ ಹೆಸರನ್ನು ಇಟ್ಟಿದ್ದಾರೆ. ಗುಜರಾತ್ ನಲ್ಲಿ ಮೋದಿ ಹೆಸರು ಇಟ್ಟಿದ್ದಾರೆ. ಅವರ ಹೆಸರನ್ನೂ ಬದಲಾವಣೆ ಮಾಡಲಿ ಎಂದು ಇದೇ ವೇಳೆ ಸವಾಲ್​​ ಹಾಕಿದರು.

  ಪ್ರಧಾನಿ ಹೆಸರು, ರಾಷ್ಟ್ರೀಯ ನಾಯಕರ ಹೆಸರನ್ನು ಸರ್ಕಾರದ ಹಲವು ಯೋಜನೆಗಳಿಗೆ ಇಡುವುದು ಮೊದಲಿನಿಂದಲೂ ರೂಢಿಯಾಗಿದೆ. ಈಗ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ನಮ್ಮ ಯೋಜನೆ ಹೆಸರನ್ನು ಬದಲಾಯಿಸುವುದು ಸರಿಯಲ್ಲ. ನೀವು ಬಂದಾಗ ಒಂದು ಹೆಸರು, ನಾವು ಬಂದಾಗ ಮತ್ತೊಂದು ಹೆಸರು ಹೀಗೆ ಬದಲಾವಣೆ ಮಾಡುತ್ತಾ ಹೋದರೆ, ಅದು ದ್ವೇಷದ ರಾಜಕಾರಣವಾಗುತ್ತದೆ ಎಂದು ತಿಳಿಸಿದರು.
  ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಂಡವಾಳ ಶಾಹಿ, ಕಾರ್ಪೊರೇಟ್ ಪರ ಇದ್ದಾರೆ. ದಲಿತ, ಬಡವರ ಬಗ್ಗೆ ಕಾಳಜಿ ಬರಲು ಹೇಗೆ ಸಾಧ್ಯ. ಅವರು ಬದಲಾವಣೆ ಮಾಡಲಿ ಆಮೇಲೆ ನೋಡೋಣ. ಸಿಟಿ ರವಿ ಹೇಳಿದ ತಕ್ಷಣ ಮಾಡಲ್ಲ. ಸರ್ಕಾರ ಏನು ತೀರ್ಮಾನ ಮಾಡುತತದೆ ನೋಡೋಣ. ನಾವು ಕೂಡ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸುತ್ತೇವೆ ಎಂದರು.

  ಇದೇ ವೇಳೆ ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಮರು ನಾಮಕರಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀವ್ ಗಾಂಧಿ ಹೆಸರನ್ನು ಯಾಕೆ ಬದಲಾಯಿಸಿದರು. ಧ್ಯಾನ್ ಚಂದ್​ ಹೆಸರನ್ನು ಇಡುವುದಕ್ಕೆ ನಮಗೆ ಅಡ್ಡಿಯಿಲ್ಲ. ದೇಶಕಕೆ ಕೀರ್ತಿ ತಂಡ ಹೆಸರಾಂತ ಹಾಕಿ ಪಟು ಅವರು, ಅವರ ಹೆಸರನ್ನು ಬೇರೆದಕ್ಕೆ ಇಡಬಹುದಿತ್ತು. ರಾಜೀವ್ ಗಾಂಧಿ ಹೆಸರನ್ನು ಯಾಕೆ ಚೇಂಜ್ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

  ಇದನ್ನು ಓದಿ: ಸೋಮವಾರ ಎಸ್​​ಎಸ್​ಎಲ್​ಸಿ ಫಲಿತಾಂಶ ಪ್ರಕಟ

  ನೂತನ ಸಚಿವ ಸಂಪುಟ ಕುರಿತು ಮಾತನಾಡಿದ ಅವರು, ಹೊಸ ಸಂಪುಟದ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಹಳಬರೇ ಇರುವಾಗ ಏನು ನಿರೀಕ್ಷೆ ಮಾಡಲು ಸಾಧ್ಯ. 13 ಜಿಲ್ಲೆಗಳಿಗೆ ಪ್ರಾತಿನಿದ್ಯ ಇಲ್ಲದ ಸಂಪುಟ ಇದು. ಕೇವಲ ನಾಲ್ಕು ದಲಿತರಿಗೆ ಸ್ಥಾನ ಕೊಟ್ಟಿದ್ದಾರೆ. ಬೋವಿಗೆ ಇಲ್ಲ, ಕೊರಚ ಕೊರಮರಿಗೆ ಇಲ್ಲ. ನಾವಿದ್ದಾಗ ಎಲ್ಲರಿಗೂ ಸಮಾನಾಗಿ ಇಟ್ಟಿದ್ದೆ. ಇದೊಂದು ತಾರತಮ್ಯ ಇರುವ ಸಂಪುಟ ಎಂದು ಹೀಗಳೆದರು.
  ಜಮೀರ್ ಮನೆ ಮೇಲೆ ಇಡಿ ದಾಳಿ ವಿಚಾರ ರಾಜಕೀಯ ಪ್ರೇರಿತವಾಗಿದೆ. ಆದಾಯ ತೆರಿಗೆ ಪಾವತಿ ಮಾಡದಿದ್ದರೆ ಐಟಿ ದಾಳಿ ಮಾಡಬೇಕು. ಹಣ ದುರುಪಯೋಗ ಪಡಿಸಿಕೊಂಡರೆ ಇಡಿ ಬರುತ್ತದೆ. ಐಟಿ ದೂರಿನ‌ ಆಧಾರದ ಮೇಲೆ ಇಡಿ ದಾಳಿ ಮಾಡಬೇಕು. ಆದರೆ ಇಲ್ಲಿ ಏನಾಗಿದೆಯೋ ಗೊತ್ತಿಲ್ಲ. ಬಿಜೆಪಿಯವರ ಮೇಲೆ ಯಾಕೆ ಯಾವುದೇ ದಾಳಿ ಮಾಡಿಲ್ಲ. ಅವರೆಲ್ಲಾ ಶ್ರೀಮಂತರಿಲ್ವಾ ಅವರೆಲ್ಲಾ ಬಿಪಿಎಲ್ ಕಾರ್ಡು ದಾರರಾ. ಇದೊಂದು ದುರುದ್ದೇಶದಿಂದ ಮಾಡಿರುವ ದಾಳಿ ಎಂದು ತಿಳಿಸಿದರು.

  ಜಮೀರ್ ಸಿದ್ದರಾಮಯ್ಯ ಆಪ್ತ ಎನ್ನುವ ವಿಚಾರ ಕುರಿತು ಮಾತನಾಡಿದ ಅವರು, ನನಗೆ ಬಹಳಷ್ಟು ಜನ ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಆಪ್ತರಿದ್ದಾರೆ. ರಾಜಕಾರಣವೇ ಬೇರೆ ಸ್ನೇಹವೇ ಬೇರೆ ಎಂದರು
  Published by:Seema R
  First published: