Renaming Indira Canteens: ನಮ್ಮ ನಾಯಕರ ಹೆಸರಿಟ್ಟರೆ ಬಿಜೆಪಿಯವರಿಗೆ ಹೊಟ್ಟೆಉರಿ ಏಕೆ : ಸಿದ್ದರಾಮಯ್ಯ ಕಿಡಿ

Siddaramaiah Opposes ct ravi: ಬಿಜೆಪಿಯವರ ನಾಯಕರ ಹೆಸರು ಮಾತ್ರ ಇಡಬಹುದು. ನಮ್ಮ ನಾಯಕರು ಹೆಸರು ಇಟ್ರೆ ಇವರಿಗೆ ಹೊಟ್ಟೆಉರಿ ಎಂದು ಸಿದ್ದರಾಮಯ್ಯ ಕುಟುಕಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದರು. ಇಂದಿರಾ ಕ್ಯಾಂಟಿನ್​​ ಹೆಸರು ಬದಲಾವಣೆಗೆ ಆಗ್ರಹಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (ct ravi ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಲು ಹೋಗಿದ್ದಾರೆ. ಅವಾನ್ಯಾರೋ ಸಿಟಿ ರವಿ ಎಂದು ಏಕವಚನದಲ್ಲಿ ಪ್ರಶ್ನಿಸಿದರು. ಪಕ್ಕದಲ್ಲೇ ಇದ್ದ ಕಾಂಗ್ರೆಸ್​ ಕಾರ್ಯಕರ್ತ ಸಿಟಿ ರವಿ ಆಯೋಗ್ಯ ಎಂದೊಡನೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಆ ಪದ ನಾನು ಬಳಸುವಂತಿಲ್ಲ. ಪ್ರಜಾಪ್ರಭುತ್ವದಲ್ಲಿ ನೀನು ಮಾಲೀಕ, ನೀನು ಹೇಳಬಹುದು. ಆದರೆ ನಾನು ಹೇಳಲ್ಲ ಎಂದರು. ಬಿಜೆಪಿಯವರ ನಾಯಕರ ಹೆಸರು ಮಾತ್ರ ಇಡಬಹುದು. ನಮ್ಮ ನಾಯಕರು ಹೆಸರು ಇಟ್ರೆ ಇವರಿಗೆ ಹೊಟ್ಟೆಉರಿ ಎಂದು ಕುಟುಕಿದರು.

ಕತ್ತಿಗೆ ಸಕ್ಕರೆ ಕಾಯಿಲೆ ಇರಬೇಕು..!

ಒಬ್ಬರಿಗೆ ಕೇವಲ 4 ಕೆಜಿ ಅಕ್ಕಿ ಸಾಕು ಎಂಬ ಆಹಾರ ಸಚಿವ ಉಮೇಶ್​ ಕತ್ತಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಆಹಾರ ಸಚಿವ ಕತ್ತಿ ಇದಾನೆ ಅವನು ಒಬ್ಬರಿಗೆ ನಾಲ್ಕು ಕೆಜಿ ಸಾಕು ಎಂದು ಹೇಳ್ತಾನೆ. ಅವನಿಗೇನೋ ಸಕ್ಕರೆ ಖಾಯಿಲೆ ಇರಬಹುದು. ಅದಕ್ಕೆ ಅನ್ನ ತಿನ್ನೋಲ್ಲ ಅನಿಸುತ್ತೆ. ಆದರೆ ಬೇರೆಯವರಿಗೆ ನಾಲ್ಕು ಕೆಜಿ ಸಾಕಾಗುತ್ತಾ ಎಂದು ಕಿಡಿಕಾರಿದರು.

ಬಿಎಸ್​ವೈನ ಬಿಜೆಪಿಯವರೇ ಮನೆಗೆ ಕಳುಹಿಸಿದ್ದಾರೆ

ಭಾರತೀಯ ಜನತಾ ಪಕ್ಷದವರು ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ, ಇದನ್ನು ಜನರಿಗೆ ಅರ್ಥ ಮಾಡಿಸಬೇಕು. ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದ ಬಿ.ಎಸ್​.ಯಡಿಯೂರಪ್ಪ ಅವರನ್ನ ಬಿಜೆಪಿ ಅವರೇ ಮನೆಗೆ  ಕಳಿಸಿದ್ದಾರೆ. ಯಡಿಯೂರಪ್ಪ ಅವರ ಕೃತ್ಯದಲ್ಲಿ ಭಾಗವಹಿಸಿದ್ದ ಬೊಮ್ಮಯಿ ಅವರೇ ಸಿಎಂ ಆಗಿದ್ದಾರೆ. ಇವರಿಂದ ನಾವು ಏನು ನೀರಿಕ್ಷೆ ಮಾಡಲು ಸಾಧ್ಯವಿಲ್ಲ.

ಏನೇ ಕೇಳಿದ್ರು ಕೊರೊನಾ ನೆಪ ಹೇಳ್ತಾರೆ

ಸರ್ಕಾರದ ಬಳಿ ಏನೇ ಕೇಳಿದ್ರು ಕೊರೋನಾ ನೆಪ ಹೇಳ್ತಾರೆ. ಕೊರೋನಾಗೆ ಐದರಿಂದ ಆರು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಬಿಜೆಪಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಎರಡು ವರ್ಷಗಳಲ್ಲಿ 1ಲಕ್ಷ 45 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಜನರಿಗೆ ಕೊಡೋಕೆ ಹೊಟ್ಟೆ ಉರಿ

ಆಹಾರ ಕಿಟ್ ವಿತರಣೆ ಮಾಡುವ ಕೆಲಸ ಸರ್ಕಾರ ಮಾಡಬೇಕು, ಅವರು ಮಾಡದಿರುವ ಕೆಲಸ ನಾವು ಮಾಡ್ತಿದ್ದೇವೆ. ನಾವು ಕಾಂಗ್ರೆಸ್​​​ ಶಾಸಕರಿಗೆ ಸೂಚನೆ ನೀಡಿದ್ವಿ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಫುಡ್ ಕಿಟ್ ವಿತರಣೆ ಮಾಡಿ ಎಂದು ಹೇಳಿದ್ವಿ. ಅದರ ಅನುಸಾರ ಇಂದು ನಮ್ಮ ಶಾಸಕರು ಕಿಟ್ ವಿತರಣೆ ಮಾಡ್ತಿದ್ದಾರೆ. ಜನರ ಹಣ ಜನರಿಗೆ ಕೊಡಕ್ಕೆ ನಿಮಗೆ ಹೊಟ್ಟೆ ಉರಿ ಏಕೆ ಎಂದು ಪ್ರಶ್ನಿಸಿದರು.

ಕೋರ್ಟ್​​ ಛೀಮಾರಿ ಹಾಕಿದೆ

​ ಬಡ ಜನರಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಬೆಡ್ ಸಹ ಕೊಡಕ್ಕೆ ಆಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಸತ್ರೆ ಅದರ ಬಗ್ಗೆ ಸಹ ಸುಳ್ಳು ಮಾಹಿತಿ ಕೊಟ್ಟ. ಕೋರ್ಟ್ ಛೀಮಾರಿ ಹಾಕಿತು ಎಂದು ಸಿದ್ದರಾಮಯ್ಯ ಮಾತಿನಲ್ಲೇ ತಿವಿದರು.

ಇದನ್ನೂ ಓದಿ: HD Devegowda: ಕಲಬುರಗಿ ಪಾಲಿಕೆ ಮೈತ್ರಿಗೆ ಖರ್ಗೆ ನಮ್ಮ ಜೊತೆ ಮಾತನಾಡಿದ್ದಾರೆ; ಎಚ್​ಡಿ ದೇವೇಗೌಡ

ಡಿಕೆಶಿ ಸವಾಲು

ಇನ್ನು ಪಾಲಿಕೆ ಚುನಾವಣೆ ವಿಚಾರವಾಗಿ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಿಟ್ಟಿದ್ದೇವೆ ಎಂದು ಹೇಳಿದ್ದೀರಿ. ಬಿಬಿಎಂಪಿ‌ ಚುನಾವಣೆ ನಡೆಸ್ರಿ. ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆ ನಡೆಸ್ರಿ,  ಯಾಕೆ ಚುನಾವಣೆಗಳನ್ನು ಮುಂದೂಡಿದ್ದೀರಿ.? ಕಾಂಗ್ರೆಸ್ ಪಕ್ಷದ ಶಕ್ತಿ ಏನು ಅಂತ ಗೊತ್ತಾಗುತ್ತದೆ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದರು.
Published by:Kavya V
First published: