ಕಟೀಲ್ ಜೋಕರ್ ಲೆವೆಲ್ ರಾಜಕಾರಣಿ, ಬಿಜೆಪಿ ಮುಖಂಡರಿಗೆ ಧಂ ಇಲ್ಲ: Siddaramaiah ವಾಗ್ದಾಳಿ

ಮಾಜಿ ಸ್ಪೀಕರ್​ ರಮೇಶ್ ಕುಮಾರ್​​ನ (ramesh kumar) ಜೈಲಿಗೆ ಕಳಿಸ್ತೀನಿ ಎಂಬ ಸಚಿವ ಕೆ. ಸುಧಾಕರ್ (k sudhakar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದುಡ್ಡಿನ ಮದ ಅವರಿಗೆ. ಕಾಂಗ್ರೆಸ್ ನಿಂದ ಗೆದ್ದು ಹೋಗಿದ್ದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ದಿ ಕಲಿಸ್ತಾರೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ಬೆಂಗಳೂರು: ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ (rahul Gandhi) ಡ್ರಗ್​ ಪೆಡ್ಲರ್​​​​​ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ (nalin kumar kateel) ಹೇಳಿಕೆ ವಿರುದ್ಧ ಕಾಂಗ್ರೆಸ್ಸಿಗರು ಕೆಂಡಾಮಂಡಲರಾಗಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah )ಅವರು ಕಟೀಲ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ನಳೀನ್​ ಕುಮಾರ್​ ಕಟೀಲ್​​​ ಜೋಕರ್ ರಾಜಕಾರಣಿ, ಪ್ರಬುದ್ದ ರಾಜಕಾರಣಿ ಅಲ್ಲ. ಕಟೀಲ್ ತಲೆ ಕೆಟ್ಟಿದೆ ಅಂತ ಕಾಣುತ್ತೆ ಎಂದು ಕಿಡಿಕಾರಿದರು. ಇನ್ನು ಮಾಜಿ ಸ್ಪೀಕರ್​ ರಮೇಶ್ ಕುಮಾರ್​​ನ (ramesh kumar) ಜೈಲಿಗೆ ಕಳಿಸ್ತೀನಿ ಎಂಬ ಸಚಿವ ಕೆ. ಸುಧಾಕರ್ (k sudhakar) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದುಡ್ಡಿನ ಮದ ಅವರಿಗೆ. ಕಾಂಗ್ರೆಸ್ ನಿಂದ ಗೆದ್ದು ಹೋಗಿದ್ದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ದಿ ಕಲಿಸ್ತಾರೆ ಎಂದು ಎಚ್ಚರಿಸಿದರು.

ಅವರೆಲ್ಲಾ 2023ಕ್ಕೆ ಮನೆಗೆ ಹೋಗ್ತಾರೆ

ಅಧಿಕಾರದ ಮದ ಅವರಿಗಿದೆ, ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. 2023ಕ್ಕೆ ಮನೆಗೆ ಹೋಗ್ತಾರೆ. ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದು ಸುಧಾಕರ್​ಗೆ ತಿರುಗೇಟು ಕೊಟ್ಟರು. ಜೆಡಿಎಸ್ ನವರು ಏನೇ ಮಾಡಲಿ, ಅವರು ಬಿಜೆಪಿ ಜೊತೆಗೇ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು. ಇವರಿಗೆ ಯಾವ ಸಿದ್ಧಾಂತವಿದೆ, ಅಲ್ಪಸಂಖ್ಯಾತರು ಬಹಳ ಬುದ್ಧಿವಂತರಿದ್ದಾರೆ. ಜೆಡಿಎಸ್ ನವರಿಗೆ ಅಷ್ಟು ಈಸಿಯಾಗಿ ಒಲಿಯಲ್ಲ. ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಜೊತೆ ಸೇರಿದ ಮೇಲೆ ಸೆಕ್ಯೂಲರ್ ಆಗ್ತಾರಾ? ಜೆಡಿಎಸ್ ಜಾತ್ಯಾತೀತ ಪಾರ್ಟಿಯಲ್ಲ. ಪ್ರಾದೇಶಿಕ ಪಾರ್ಟಿ ನಿಜ, ಆದರೆ ಸೆಕ್ಯೂಲರ್ ಅಲ್ಲ. ಹೆಸರು ಮಾತ್ರ ಜಾತ್ಯಾತೀತ, ನಡವಳಿಕೆ ಮಾತ್ರ ಕೋಮುವಾದಿ ಎಂದು ವಾಗ್ದಾಳಿ ನಡೆಸಿದರು.

ಶ್ರೀಗಳು ಸರ್ಕಾರಕ್ಕ ಪಾಠ ಕಲಿಸಲಿ

ಪಂಚಮಸಾಲಿ ಸಮುದಾಯದವರಿಗೆ ಬಿಜೆಪಿ ಕಮಿಟ್ ಮಾಡಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ನೀಡ್ತೀವಿ ಅಂತ ಹೇಳಿದ್ದರು. ಎಸ್.ಟಿ ಸಮುದಾಯಕ್ಕೂ ಬಿಜೆಪಿ ಕಮಿಟ್ ಆಗಿತ್ತು, ಅದೆಲ್ಲವನ್ನೂ ಕೂಡ ಸರ್ಕಾರ ಈಡೇರಿಸಬೇಕು ಈಗ. ಇಲ್ಲದಿದ್ದರೆ ಪಂಚಮಸಾಲಿ ಸಮಯದಾಯ ಬಿಜೆಪಿಗೆ ಪಾಠ ಕಲಿಸಲಿ ಎಂದರು. ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು, ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯಮೃತ್ಯುಂಜಯ ಶ್ರೀಗಳ ಹೇಳಿಕೆ ನೀಡಿದ್ದಾರೆ. ಪಂಚಮಸಾಲಿಗೆ ಕಮಿಟ್ ಮೆಂಟ್ ಆಗಿದ್ದಾರೆ. ಸರ್ಕಾರ ಮೀಸಲಾತಿ ಬಗ್ಗೆ ಕಮಿಟ್ ಆಗಿದೆ, ಹಾಗಾಗಿ ಅದನ್ನ ಮಾಡಬೇಕಾಗುತ್ತದೆ. ಶ್ರೀಗಳು ಸರ್ಕಾರಕ್ಕ ಪಾಠ ಕಲಿಸಲಿ ಬೇಕಾದ್ರೆ ಎಂದರು.

ಇದನ್ನೂ ಓದಿ: ಟೀಕೆ ಮಾಡೋರಿಗೆ ನೆನಪಿರಲಿ, ದೇಶದ ಪ್ರಧಾನಿ-ರಾಷ್ಟ್ರಪತಿ ಕೂಡ RSSನವರು: HDKಗೆ ಯಡಿಯೂರಪ್ಪ ತಿರುಗೇಟು

ರಾಜ್ಯದ ಬಿಜೆಪಿ ನಾಯಕರಿಗೆ ಧಂ ಇಲ್ಲ

ರಾಜ್ಯದ ಬಿಜೆಪಿ ನಾಯಕರಿಗೆ ಧಂ ಇಲ್ಲ, ನಾವು ಭಿಕ್ಷುಕರಂತೆ ಅಲ್ಲಿ ಬೇಡಬೇಕಾ? ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೇಳೋಕೆ, ಸ್ಪೆಶಲ್ ಗ್ರಾಂಟ್ ಕೂಡ ‌ಬರ್ತಿಲ್ಲ. ಇವರಿಗೆ ಧಂ ಎಲ್ಲಿದೆ ಕೇಂದ್ರ ಸರ್ಕಾರದ ಬಳಿ ಹೋಗಿ‌ ಕೇಳೋಕೆ. ಹೇಡಿಗಳ ರೀತಿ ನಡೆದುಕೊಳ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೈ ಎಲೆಕ್ಷನ್ ನಲ್ಲಿ ಹಣದ ಹೊಳೆ‌ಹರಿಸ್ತಿದ್ದಾರೆ, ಒಂದು ವೋಟಿಗೆ 2 ಸಾವಿರ ಕೊಡ್ತಿದ್ದಾರಂತೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದರು. ಯಾವ ಸಾಧನೆ ಬಗ್ಗೆ ಹೇಳೋಕೆ ಆಗುತ್ತೆ. ಕೊರೊನಾದಲ್ಲಿ ಹಣ ಲೂಟಿ ಹೊಡೆದ್ರು. ಯಾವ ಅಭಿವೃದ್ಧಿ ಮಾಡಿದ್ದಾರೆ, ಒಂದೇ ಒಂದು ಮನೆ ಹೊಸದಾಗಿ ಕೊಟ್ಟಿದ್ದಾರಾ? ಜನ ಯಾಕೆ ಮತ ಹಾಕ್ತಾರೆ ಇವರಿಗೆ ಎಂದು ಪ್ರಶ್ನಿಸಿದರು.

ಪೊಲೀಸರು ಕೇಸರಿ ಶಾಲು ಹಾಕಿದ್ದು ಫ್ರೀಪ್ಲಾನ್ಡ್

RSSನ ಬೈಯೋದು ಅಲ್ಪಸಂಖ್ಯಾತರ ಓಲೈಕೆಗಲ್ಲ. ಎಲ್ಲ ಪೊಲೀಸರಿಗೆ ಕೇಸರಿ‌ಶಾಲು ಹಾಕ್ತಾರೆ. ಪೊಲೀಸರಿಗೆ ತ್ರಿಶೂಲ ಕೊಟ್ಟು ಬಿಡಲಿ. ಕೇಸರಿ ಶಾಲು ಹಾಕಿದ್ದು ಫ್ರೀಪ್ಲಾನ್ಡ್ , ಎಲ್ಲರು ಒಂದೇ ಕೇಸರಿ ಹಾಕಿದ್ದಾರೆ ಅಂದ್ರೆ ಏನರ್ಥ. ಒಂದೇ ಕಡೆ ಮೊದಲೇ ಪರ್ಚೇಸ್ ಮಾಡಿರೋದು ತಾನೇ ಎಂದರು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು. ಜನ ಎಲ್ಲವನ್ನ‌ಸಹಿಸಿಕೊಂಡ್ರೆ ಹೇಗೆ, ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ, ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು.
Published by:Kavya V
First published: