ಯಡಿಯೂರಪ್ಪ ಅತ್ಯಂತ ದುರ್ಬಲ, ಅನುಪಯುಕ್ತ ಸಿಎಂ ಆಗಿದ್ದು ಶೀಘ್ರವೇ ಕೆಳಗಿಳಿಸುತ್ತಾರೆ: ಸಿದ್ದರಾಮಯ್ಯ

ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರರು ಮುಳಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

ಸಿದ್ದರಾಮಯ್ಯ, ಬಿ.ಎಸ್​.ಯಡಿಯೂರಪ್ಪ

  • Share this:
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಬಿ.ಎಸ್​.ಯಡಿಯೂರಪ್ಪ ಬಗ್ಗೆ ವಿಪಕ್ಷ ನಾಯಕ ವಾಗ್ದಾಳಿ ನಡೆಸಿದರು. ಚಾಮರಾಜಪೇಟೆಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅತ್ಯಂತ ದುರ್ಬಲ, ಅನುಪಯುಕ್ತ ಮುಖ್ಯಮಂತ್ರಿ. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರರು ಮುಳಗಿದ್ದಾರೆ. ನಾನು ಕಂಡ ಅತ್ಯಂತ ದುರ್ಬಲ ಸಿಎಂ ಯಡಿಯೂರಪ್ಪ. ಹೀಗಾಗಿ ಯಡಿಯೂರಪ್ಪರನ್ನು ಕೆಳಗಿಳಿಸುತ್ತಾರೆ. ನಾನು ಮೊದಲೇ ಈ ವಿಷಯ ಹೇಳಿದ್ದೆ, ಯಡಿಯೂರಪ್ಪ ಹೊರತಾಗಿ ಯಾರೂ ಬಂದರೂ ಅಷ್ಟೇ. ಬಿಜೆಪಿಯಿಂದ ಮುಂದೆ ಆಗಬಹುದ ಸಿಎಂ ದುರ್ಬಲನೇ ಇರುತ್ತಾರೆ. ರಾಜ್ಯದ ಪರಿಸ್ಥಿತಿ ಹದಗೆಡಲು ಅವರೇ ಕಾರಣ ಎಂದು ಮಾತಿನಲ್ಲೇ ತಿವಿದರು.

ನಾನು ಬಾದಾಮಿ ಕ್ಷೇತ್ರದ ಶಾಸಕ, ಚಾಮರಾಜಪೇಟೆಯಲ್ಲಿ ಸ್ಪರ್ಧಿಸಿ ಎಂದು ಜಮೀರ್ ಹೇಳುತ್ತಾರೆ. ಪ್ರೀತಿಯಿಂದ ಹಾಗೆ ಜಮೀರ್ ಹೇಳಬಹುದು. ಚಾಮರಾಜಪೇಟೆ ಮಾತ್ರವಲ್ಲ ಅನೇಕ ಕ್ಷೇತ್ರಕ್ಕೆ ಹೋಗಿದ್ದೇನೆ , ಅನೇಕ ಕೋವಿಡ್ ಫುಡ್ ವಿತರಣೆ ಮಾಡಿದ್ದೇನೆ. ಯಾರು ಕರೆದರೂ ನಾನು ಹೋಗುತ್ತೇನೆ. ಹೆಬ್ಬಾಳ, ಕೋಲಾರ, ಮಾಲೂರಿಗೂ ಹೋಗಿದ್ದೆ. ಇದರಲ್ಲಿ ಯಾವುದೇ ಬೇರೆ ಅರ್ಥವಿಲ್ಲ ಎಂದು ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದರು. ಇದೇ ವೇಳೆ ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ಸಾಹೇಬ್ರು ಸ್ಪರ್ಧಿಸಲಿ, ಇದು ನನ್ನ ಬಯಕೆ ಎಂದ ಶಾಸಕ ಜಮೀರ್ ಅಹ್ಮದ್ ತಿಳಿಸಿದರು. ಹೆಬ್ಬಾಳಕ್ಕೂ ಬಂದು ಸ್ಪರ್ಧಿಸಲಿ ಎಂದ ಭೈರತಿ ಸುರೇಶ್ ಸಹ ಸಿದ್ದರಾಮಯ್ಯನವರಿಗೆ ಆಹ್ವಾನಿಸಿದರು.

ಇನ್ನು ರಾಜ್ಯದ ಹಲವೆಡೆ ಕೊರೋನಾ ನಿವಾರಣೆಗೆ ಜನ ಮೂಢನಂಬಿಕೆ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೌಢ್ಯಗಳಿಂದ ಕೋವಿಡ್ ನಿವಾರಣೆ ಸಾಧ್ಯವಿಲ್ಲ. ಮೂಢನಂಬಿಕೆಯಿಂದ ಪರಿಹಾರ‌ ಆಗಲ್ಲ, ಹಾಗಿದ್ದರೆ ವೈದ್ಯ ವಿಜ್ಞಾನ, ಆಯುರ್ವೇದ ಯಾಕೆ‌ ಇರಬೇಕಿತ್ತು. ಮೂಢನಂಬಿಕೆಯಿಂದ ದೀಪ ಹಚ್ಚಿದಾಗಲೇ ಹೋಗಬೇಕಿತ್ತು. ಚಪ್ಪಾಳೆ ತಟ್ಟಿದಾಗ ಕೊರೊನಾ ಹೋಗಬೇಕಿತ್ತು. ಎರಡನೇ ಅಲೆ ಯಾಕೆ ಬಂತು? ಮೂರನೇ ಅಲೆ‌ ಬೇರೆ ಬರಲಿದೆಯಂತೆ ಎಂದು ಪ್ರಶ್ನಿಸಿದರು. ಇನ್ನು ಒಬ್ಬ ಶಾಸಕನಾಗಿ ಅಭಯ್ ಪಾಟೀಲ್ ಮೌಢ್ಯ ಬಿತ್ತುವುದು ಸರಿಯಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: freedom fighter Doreswamy RIP : ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ

ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬಿಜೆಪಿಯವರೇ ಭಾಗಿದ್ದಾರೆಂದು ಆರೋಪಿಸಿದರು. ಶಾಸಕ ಸತೀಶ್ ರೆಡ್ಡಿ ಕಡೆಯವರೇ ಶಾಮೀಲಾಗಿದ್ದು, ಅವರ ಪಿಎ ಬಾಬು ಬಂಧನ ಆಗಿದೆ. ಸುಖಾಸುಮ್ಮನೆ ಯಾರ್ಯಾರ ಮೇಲೆ ಆರೋಪ ಮಾಡಿದ್ದರು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು. ಇದರ ಬೆನ್ನಲ್ಲೇ ಕೆಪಿಸಿಸಿಯಲ್ಲಿ ಕೈನಾಯಕರ‌ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ. ಮಾಜಿ ಸಚಿವ ಯು.ಟಿ.ಖಾದರ್, ಹೆಚ್.ಎಂ.ರೇವಣ್ಣ, ಸಂಸದ ಡಿ.ಕೆ.ಸುರೇಶ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ರಾಜ್ಯ ಸರ್ಕಾರದ ಲಸಿಕೆ ಅಭಿಯಾನ ನೀತಿವನ್ನು ಟೀಕಿಸಿದವರು. ೪೫ ರ ಮೆಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿದೆ. ಎಲ್ಲರಿಗೂ ಲಸಿಕೆ ಸರಿಯಾಗಿ ನೀಡ್ತಿಲ್ಲ. ೧೮ ವರ್ಷ ಮೇಲ್ಪಟ್ಟವರಿಗೂ ಚಾಲನೆ ಕೊಟ್ಟಿದ್ದಾರೆ. ಫ್ರಂಟ್ ಲೈನ್ ವಾರಿಯರ್ಸ್ ಗೆ ಲಸಿಕೆ ನೀಡ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪ್ರಾರಂಭಿಸಿದ್ದಾರೆ. ೧೮ ಮೇಲ್ಪಟ್ಟವರಿಗೆ ಸರ್ಕಾರ ಕೊಡ್ತಿಲ್ಲ. ಸುಗುಣ, ಅಪೋಲೋ, ಮಣಿಪಾಲ್,ಕ್ರೌಡೌನ್ ನಲ್ಲಿ ೧೨, ೩೦೦ ಹಾಗೂ ಅಪೋಲೋದಲ್ಲಿ ೧೪೦೦ ರೂ. ಕೋವ್ಯಾಕ್ಸಿನ್ ಗೆ ತೆಗೆದುಕೊಳ್ತಾರೆ. ಕೋವಿಶೀಲ್ಡ್ ಗೆ ೮೫೦,೯೦೦ ರೂ ತೆಗೆದುಕೊಳ್ತಿದ್ದಾರೆ. ಯಾರು ಬೇಕಾದರೂ ಹಣ ಕೊಟ್ಟು ಲಸಿಕೆ ಪಡೆಯಬಹುದು. ಸರ್ಕಾರ ಖಾಸಗಿಯವರಿಗೆ ಉತ್ತೇಜನ ನೀಡ್ತಿದೆ. ಇದು ಕೂಡ ಕಾಳಸಂತೆಗೆ ಅವಕಾಶಕೊಟ್ಟಂತೆ. ಸಾಮಾನ್ಯ ಜನರು ದುಬಾರಿ ಹಣ ಕೊಟ್ಟು ತೆಗೆದುಕೊಳ್ತಾರಾ? ಸರ್ಕಾರವೇ ಖಾಸಗಿಯವರ ಜೊತೆ ಪಾಲುದಾರನಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪುಸ್ಫಿ ನೀಡುವಂತೆ ಸಂಸದ ತೇಜಸ್ವಿಸೂರ್ಯ ಆ್ಯಡ್ ಹಾಕಿಕೊಳ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ‌ಬಗ್ಗೆ ಹಾಕಿಕೊಳ್ತಾರೆ. ಇದನ್ನ ಗಮನಿಸಿದರೆ ಏನನ್ನಿಸುತ್ತದೆ. ಸರ್ಕಾರವೇ ಖಾಸಗಿಯವರ ಜೊತೆ ಇನ್ವಾಲ್ವ್ ಆಗಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ವಿಶ್ವದಲ್ಲಿ ೨೨ ಕಂಪನಿ‌ಲಸಿಕೆ ತಯಾರಿಸುತ್ತಿವೆ. ಸರ್ಕಾರ ಎರಡು ಕಂಪನಿಯಿಂದ ಅಷ್ಟೇ ಖರೀದಿಸುತ್ತಿದೆ. ಗ್ಲೋಬಲ್ ಟೆಂಡರ್ ಕರೆದಿದ್ದೇವೆ ಎಂದಿದ್ದಾರೆ. ಕೇವಲ ರಷ್ಯಾದಿಂದ ಸ್ಪುಟ್ನಿಕ್ ಮಾತ್ರ ಖರೀದಿ ಮಾಡ್ತಿದ್ದಾರೆ. ಉಳಿದ ಸಂಸ್ಥೆಗಳಿಂದ ಲಸಿಕೆ ಖರೀದಿ‌ ಮಾಡ್ತಿಲ್ಲ. ಹೀಗಾಗಿ ಲಸಿಕೆ ಸರಿಯಾಗಿ ಲಭ್ಯವಾಗ್ತಿಲ್ಲ. ಲಸಿಕೆ ಇಲ್ಲದೆ ನೂರು ಕೋಟಿ ಜನರಿಗೆ ಕೊಡಲು ಆಗಲ್ಲ. ೨೮ ದಿನದ ನಂತರ ಎರಡನೇ ಡೋಸ್ ಪಡೆಯಬೇಕು. ಆದರೆ ಈಗ ಮೂರು ತಿಂಗಳು ಮಾಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ೫ ಸಾವಿರ ವ್ಯವಸ್ಥೆ ಮಾಡಿದ್ದೆವು. ಇಂತಹ ವೇಳೆ ನಿಮಗೆ ಕೊಡೋಕೆ ಏನು ಕಷ್ಟ ಎಂದು ಪ್ರಶ್ನಿಸಿದರು.

ನಿಮ್ಮ ಕಾರ್ಯಕರ್ತರಿಗೆ ಲಸಿಕೆ ಸಿಗ್ತಿಲ್ಲ. ಹೊಸ ರೋಗ,ಹೊಸ ಔಷಧಿ ಬಂದಾಗ ಸಂಶಯವಿರುತ್ತದೆ. ಲಸಿಕೆಯನ್ನ ಮೊದಲೇ ಇವರು ತೆಗೆದುಕೊಳ್ಳಬೇಕಿತ್ತು. ಇವರು ಕೊಟ್ಟಿದ್ದು ಡಿಗ್ರೂಪ್ ನೌಕರರಿಗೆ, ಇವರೇ ಯಾಕೆ ಮೊದಲು ಪಡೆಯಲಿಲ್ಲ. ಜನರಲ್ಲಿ ಆತ್ಮವಿಶ್ವಾಸ ತುಂಬಲಿಲ್ಲ. ಆತ್ಮವಿಶ್ವಾಸ ತುಂಬಿದ್ದರೆ ಜನ ಹೆದರುತ್ತಿರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಆಕ್ಸಿಜನ್ ಕೊಡಿ ಎಂದು ಹೈಕೋರ್ಟ್ ಹೇಳಬೇಕಾಯ್ತು. ಇಲ್ಲವಾದರೆ ಆಕ್ಸಿಜನ್ ಸಿಗ್ತಿರಲಿಲ್ಲ. ಇವತ್ತು ಜಡ್ಜ್ ತೀರ್ಪನ್ನೇ ಪ್ರಶ್ನಿಸುತ್ತಿದ್ದಾರೆ, ಜಡ್ಜ್ ಗಳನ್ನೇ ಪ್ರಶ್ನಿಸಿದರೆ ನ್ಯಾಯ ಎಲ್ಲಿ ಸಿಗಲಿದೆ.

ರಾಜ್ಯದ ಬಿಜೆಪಿ ಸಂಸದರು ಜನರಿಂದ ಗೆದ್ದುಬಂದಿಲ್ಲ. ನಾವು ಮೋದಿಯಿಂದ ಗೆದ್ದು ಬಂದಿದ್ದೇವೆಂಬ ಅಭಿಪ್ರಾಯವಿದೆ. ಹಾಗಾಗಿ ಇವತ್ತು ಸಂಸದರು ಕೆಲಸ ಮಾಡ್ತಿಲ್ಲ. ಕೇಂದ್ರದಿಂದ ಯಾವ ನೆರವನ್ನೂ ತರುತ್ತಿಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ಖಾದರ್ ವಾಗ್ದಾಳಿ ನಡೆಸಿದರು.
Published by:Kavya V
First published: