ವಲಸಿಗರಿಗೆ ಏನ್ರಯ್ಯಾ ಬಿಜೆಪಿಗೆ ಹೋಗಿಬಿಟ್ರಿ ಅಂದ್ರೆ, ಅಲ್ಲಿದ್ರೂ ನಾವು ನಿಮ್ಮವರೇ ಕಣಣ್ಣ ಅಂತಾರೆ: ಸಿದ್ದರಾಮಯ್ಯ

ವಲಸಿಗರು ಕಳ್ಳರಿದ್ದಾರೆ. ಏನ್ರಯ್ಯಾ ಬಿಜೆಪಿಗೆ ಹೋಗಿಬಿಟ್ರಾ ಅಂದ್ರೆ, ಅಲ್ಲಿದ್ರೂ ನಾವು ನಿಮ್ಮವರೇ ಕಣಣ್ಣ ಅಂತಾರೆ. ಇಂತವರನ್ನ ನಾವು ನಂಬೋದೇಗೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನಾಚರಣೆ ಹಾಗೂ ಮಾಜಿ ಸಿಎಂ ದೇವರಾಜ ಅರಸು ಜನ್ಮಜಯಂತಿಯನ್ನು ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಆಚರಿಸಲಾಯಿತು. ರಾಜ್ಯ ಕಾಂಗ್ರೆಸ್​​ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕಾಂಗ್ರೆಸ್​ ತೊರೆದು ಬಿಜೆಪಿಗೆ ಹೋಗಿರುವ ಶಾಸಕರು-ಸಚಿವರ ಬಗ್ಗೆ ವ್ಯಂಗ್ಯವಾಡಿದರು. ವಲಸಿಗರು ಕಳ್ಳರಿದ್ದಾರೆ. ಏನ್ರಯ್ಯಾ ಬಿಜೆಪಿಗೆ ಹೋಗಿಬಿಟ್ರಾ ಅಂದ್ರೆ, ಅಲ್ಲಿದ್ರೂ ನಾವು ನಿಮ್ಮವರೇ ಕಣಣ್ಣ ಅಂತಾರೆ. ಇಂತವರನ್ನ ನಾವು ನಂಬೋದೇಗೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದ  ಶಾಸಕರು ಬಿಜೆಪಿಗೇ ಸೇರಿ ಬಹುತೇಕರು ಸಚಿವರಾಗಿದ್ದಾರೆ.

ಒಬಿಸಿ ಮೀಸಲಾತಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, ಒಬಿಸಿ ಮೀಸಲಾತಿ‌ ಈಗ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ್ಮೇಲೆ ಕೊಟ್ಟಿದ್ದಾರೆ. ಇಲ್ಲದಿದ್ದರೆ ಕಂಟೆಂಟ್ ಆಫ್ ಕೋರ್ಟ್ ಆಗುತ್ತಿತ್ತು, ಇದಕ್ಕೆ ಹೆದರಿಯೇ ಅವರು ಮೀಸಲಾತಿ ತಂದಿದ್ದು. ಈ ಮೀಸಲಾತಿಯನ್ನು ನಾವು(ಕಾಂಗ್ರೆಸ್​​ನವರು) ಹಿಂದೆಯೇ ತಂದಿದ್ದೆವು, ಅದಕ್ಕೆ ಕೋರ್ಟ್ ನಲ್ಲಿ ತಡೆ ಹಾಕಿದ್ದರು. ಬಿಜೆಪಿಯ ರಾಮಜೋಯಿಸ್ ಅವರೇ ಹಾಕಿದ್ದರು, ಆಗ ಕೇಸ್ ಕೂಡ ಬಿದ್ದು ಹೋಗಿತ್ತು. ಈಗ ಕೋರ್ಟ್ ಗೆ ಹೆದರಿ ಮೀಸಲಾತಿ ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಶೇ.10 ರಷ್ಟು ಮೀಸಲಾತಿ ತಂದಿದ್ದಾರೆ. ಈಗ ನಾವು ತಂದಿದ್ದು ಅಂತ ಹೇಳಿಕೊಳ್ತಿದ್ದಾರೆ, ಇದು ಬಿಜೆಪಿಯ ಹಿಂದುಳಿದ ನಾಯಕರಿಗೆ ಅರ್ಥವಾಗಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: DK Shivakumar: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಯಡಿಯೂರಪ್ಪ ಗಳಗಳನೆ ಅತ್ತಿದ್ದು ಏಕೆ? : ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ ನಡೆಸಿದ ಜಾತಿಸಮೀಕ್ಷೆ ಸಂಬಂಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಜಾತಿ‌ಸಮೀಕ್ಷೆ ಮಾಡಿಸಿದ್ದೆವು. ನಮ್ಮ‌ಅವಧಿಯಲ್ಲಿ ಗಣತಿ ವರದಿ ರೆಡಿಯಾಗಿರಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗ ಶೆಟ್ಟಿಗೆ ಹೇಳಿದ್ದೆ. ಪಾಪ ಪುಟ್ಟರಂಗ ಶೆಟ್ಟಿಗೆ ಕುಮಾರಸ್ವಾಮಿ ಬೈಯ್ದಿದ್ದಾರೆ, ವರದಿ ತೆಗೆದು ಮೂಲೆಗೆ ಹಾಕಿದ್ದಾರೆ. ಈಗ ಬಿಜೆಪಿಯವರು ಆ ವರದಿನ ತೆಗೆದುಕೊಳ್ಳಬೇಕಲ್ಲ. ಇನ್ನೂ‌ ವರದಿಯನ್ನ ಅವರು ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್  ಅವರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಸಮ್ಮುಖದಲ್ಲಿ ಕಾಂಗ್ರೆಸ್​​ಗೆ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಅವರು, 40 ವರ್ಷ ಸಾಮಾಜಿಕ ಹೋರಾಟ ಮಾಡಿದವನು ನಾನು. ಪತ್ರಕರ್ತನಾಗಿ 20 ವರ್ಷ ಕೆಲಸ ಮಾಡಿದ್ದೇನೆ. ಇಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದೇನೆ. ಜಾತಿ ಸಮೀಕರಣ, ಸಂಪನ್ಮೂಲ ಕ್ರೋಡೀಕರಣ ಮಾಡಿದರು, ಹಾಗಾಗಿಯೇ ಅರಸು ಆಡಳಿತದಲ್ಲಿ‌ ಯಶಸ್ವಿಯಾದ್ರು. ನಾನು ಅದೇ ಗುರಿ ಇಟ್ಟುಕೊಂಡು‌ ಬಂದಿದ್ದೇನೆ, ಸಣ್ಣ ಸಮುದಾಯ ಸೇರಿಸುವ ಕೆಲಸ ಮಾಡಬೇಕಿದೆ. ದಕ್ಕಲಿಗ ಸಮುದಾಯವನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ ಗುರುತಿಸಿದ್ದರು. ಆ ಸಮುದಾಯದ ಅಭಿವೃದ್ಧಿಗೆ ನೆರವಾಗಿದ್ದರು. ಇಂತಹ ಸಮುದಾಯಗಳನ್ನ ಗುರುತಿಸಿದ್ದು ಕಾಂಗ್ರೆಸ್, ಆ ಕೆಲಸವನ್ನ ನಾನು ಮಾಡುತ್ತೇನೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: