Siddaramaiah on CM-Speaker: ಸಿಎಂ RSS ಕೈಗೊಂಬೆ, ಸ್ಪೀಕರ್ ಸರ್ಕಾರದ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ

siddaramaiah calls cm bommai is puppet of rss : ಸಿಎಂ ಬಸವರಾಜ್​​ ಬೊಮ್ಮಾಯಿ ಮೇಲೆ ನಿರೀಕ್ಷೆಯಿತ್ತು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅಂದುಕೊಂಡಿದ್ದೆ. ಆದರೆ ಸಿಎಂ ಆರ್ ಎಸ್ ಎಸ್ ಕೈಗೊಂಬೆಯಂತೆ ಕೆಲಸ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ವಿಧಾನಸಭೆ ಅಧಿವೇಶನವನ್ನು ಕೊನೆಯ ದಿನ ಸ್ಪೀಕರ್​ (speaker )ಮುಂದೂಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah )ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್​ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಅಧಿವೇಶನವನ್ನು  ಸ್ಪೀಕರ್ ಅವರು ಮುಂದೂಡಿಕೆ ಮಾಡಿದ್ದಾರೆ. ಇಂದೇ ಕೊನೆ ದಿನ ಅಂತ ಹೇಳಿ  ಮುಂದೂಡಿಕೆ ಮಾಡಿದ್ದಾರೆ. ಇದು ಸರ್ಕಾರದ ತೀರ್ಮಾನ ಅಂತ ಹೇಳಿ ಮುಂದೂಡಿಕೆ ಮಾಡಿದ್ದಾರೆ. ಆದ್ರೆ ನಾವು ಅಧಿವೇಶನ ಮುದುವರಿಸಿ ಅಂತ ಹೇಳಿದ್ವಿ. ಸಾಕಷ್ಟು ಸಾರ್ವಜನಿಕರ  ವಿಚಾರಗಳು ಚರ್ಚೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಬೇಕು ಅಂತ ಒತ್ತಾಯ ಮಾಡಿದೆ. NEP ಸೇರಿದಂತೆ ಸಾಕಷ್ಟು ವಿಚಾರ ಚರ್ಚೆ ಮಾಡಬೇಕಿತ್ತು. ಆದರೆ ವಿಧಾನಸಭೆ ಅಧಿವೇಶನವನ್ನು ಸ್ಪೀಕರ್ ಮುಂದೂಡಿದ್ದಾರೆ. ಸರ್ಕಾರದ ನಿರ್ದೇಶನದ ಮೇರೆಗೆ ಮುಂದೂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಸ್ಪೀಕರ್​​ ಸರ್ಕಾರದ ಕೈಗೊಂಬೆ

ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ, ಸ್ವತಂತ್ರವಾಗಿ ನಿರ್ಧಾರ ಹೇಗೆ ತೆಗೆದುಕೊಳ್ತಾರೆ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು, ಸರ್ಕಾರದ ಭಾಗವಾದರೆ ಹೇಗೆ ಎಂದು ಪ್ರಶ್ನಿಸಿದರು. ಎಲ್ಲಾ ಬಿಲ್ ಪಾಸು ಮಾಡಿಕೊಂಡ್ರು, ಜನರ ಸಮಸ್ಯೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಾಯಿ RSS ಕೈಗೊಂಬೆ

ಸಿಎಂ ಬಸವರಾಜ್​​ ಬೊಮ್ಮಾಯಿ ಮೇಲೆ ನಿರೀಕ್ಷೆಯಿತ್ತು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅಂದುಕೊಂಡಿದ್ದೆ. ಆದರೆ ಸಿಎಂ ಆರ್ ಎಸ್ ಎಸ್ ಕೈಗೊಂಬೆಯಂತೆ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ನಾಲ್ಕು ‌ಲಕ್ಷ ಜನ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ. ಸತ್ತವರಿಗೆ ಪರಿಹಾರವನ್ನ ಇಲ್ಲಿಯವರೆಗೆ ಕೊಟ್ಟಿಲ್ಲ. ರಾಮುಲು ಕೊಟ್ಟಿದ್ದೇವೆಂದು ಸುಳ್ಳು ಹೇಳ್ತಾರೆ. ಯಡಿಯೂರಪ್ಪ ಕೊಟ್ಟಿಲ್ಲವೆಂದು ಹೇಳ್ತಾರೆ. ಜನವಿರೋಧಿ, ಸಂವಿಧಾನ ವಿರೋಧಿ ಸರ್ಕಾರ. ಇದೊಂದು ಮಾನಗೆಟ್ಟ ಸರ್ಕಾರ ಎಂದು ಕುಟುಕಿದರು.

ಆರ್ಥಿಕ ಸ್ಥಿತಿ ಬಗ್ಗೆ ಚರ್ಚೆ ಆಗಬೇಕು

ನಾನು ಬಿಎಸಿ ‌ಸಭೆಯಲ್ಲಿ‌ ಕಲಾಪ ವಿಸ್ತರಣೆಗೆ ಮನವಿ‌ ಮಾಡಿದ್ದೆ. ಜನರ ಸಮಸ್ಯೆಗಳ ಚರ್ಚೆಯಾಗಬೇಕು.ಸದನ ನಡೆಸಿ ಆರು ತಿಂಗಳಾಗಿದೆ ಎಂದು ಹೇಳಿದ್ದೆ. ಕನಿಷ್ಟ ೨೦ ದಿನ ಕಲಾಪ ನಡೆಸುವಂತೆ ಹೇಳಿದ್ದೆ. ಇನ್ಮೊಂದು ಬಿಎಸಿ ಸಭೆ ಮಾಡೋಣ ಎಂದಿದ್ದರು, ಆದರೆ ಬಿಎಸಿ‌ಸಭೆಯನ್ನ‌ಕರೆಯಲೇ ಇಲ್ಲ. ಕೊನೆಗೆ ಐದು ದಿನ ವಿಸ್ತರಣೆಗೆ ಪತ್ರ ಬರೆದೆ. ಸರ್ಕಾರ ಒಪ್ಪುತ್ತಿಲ್ಲವೆಂದು ಸ್ಪೀಕರ್​​​ ಹೇಳಿದ್ರು. ಈಗ ರಾಷ್ಟ್ರೀಯ ಶಿಕ್ಷಣ ನೀತಿ ಪಾಲಿಸಿ ಚರ್ಚೆಯಾಗಬೇಕು. ಇವತ್ತು ಪಾಲಿಸಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಸರ್ಕಾರದ ಆರ್ಥಿಕ‌ಸ್ಥಿತಿ ಡೋಲಾಯಮಾನವಾಗಿದೆ, ಅದರ ಬಗ್ಗೆ ಚರ್ಚೆಯಾಗಬೇಕಿತ್ತು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಸರಿಯಿಲ್ಲ

ಮೈಸೂರು ಅತ್ಯಾಚಾರ ಪ್ರಕರಣ ಚರ್ಚೆಯಾಯ್ತು, ಆದರೆ ಸರ್ಕಾರ ಸರಿಯಾದ ಉತ್ತರ ಕೊಡಲಿಲ್ಲ. ನಾವು ಧರಣಿ ಮಾಡೋದು ಬೇಡ ಅಂದುಕೊಂಡಿದ್ದೆವು, ಅಂತಿಮವಾಗಿ ವಿಸ್ತರಣೆಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಇಂದು ಅನಿವಾರ್ಯವಾಗಿ ಧರಣಿ ಮಾಡಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಪಾಲಿಸಿ ಸರಿಯಲ್ಲ. ಇದು ದಲಿತರು,ಮಹಿಳೆಯರನ್ನ ಗುಲಾಮರನ್ನಾಗಿ ಮಾಡುತ್ತದೆ. ಅದಕ್ಕೆ ಈ ಬಿಲ್ ಅನ್ನ ತಂದಿದ್ದಾರೆ. ಇದು ನಾಗಪುರ ಎಜುಕೇಶನ್ ಪಾಲಿಸಿ ಎಂದು ಟೀಕಿಸಿದರು.

ಇದನ್ನೂ ಓದಿ: Bharath Bandh: ಸೋಮವಾರ ಭಾರತ್ ಬಂದ್: ಹೋಟೆಲ್ ಓಪನ್, ಮುಷ್ಕರ ಇದೆ.. ಉಳಿದಂತೆ ಏನಿರುತ್ತೆ? ಏನಿರಲ್ಲ?

ಲೋಕಸಭೆ ಸ್ಪೀಕರ್ ಜಂಟಿ ಅಧಿವೇಶನ ವಿಚಾರವಾಗಿ ಕಾಂಗ್ರೆಸ್​​ ಬಾಯ್ಕಾಟ್ ಮಾಡಲು ನಿರ್ಧರಿಸಿದೆ. ಜನಸಾಮಾನ್ಯರ ಚರ್ಚೆಗೆ ಅವಕಾಶವಿಲ್ಲ, ಲೋಕಸಭೆ ಸ್ಪೀಕರ್ ಜಂಟಿ‌ ಸದನ ಮಾತನಾಡೋಕೆ ಅವಕಾಶವಿಲ್ಲ. ವಿಧಾನಸಭೆಯಲ್ಲಿ ಮಾತನಾಡಲು ಅವಕಾಶವಿಲ್ಲ. ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಲಿ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
Published by:Kavya V
First published: