ಬಿಜೆಪಿ ಸರ್ಕಾರ 10% ಕಮಿಷನ್ ಸರ್ಕಾರ, ವಿಜಯೇಂದ್ರ ಪಾಲು ಎಷ್ಟಿದೆ ಗೊತ್ತಿಲ್ಲ: ಸಿದ್ದರಾಮಯ್ಯ

ಎಲ್ಲದರಲ್ಲೂ ಕಮಿಷನ್ ತಗೋತಿದ್ದಾರೆ. ೮-೧೦% ಕಮಿಷನ್ ತಗೊಂಡು ಕೆಲಸ ಮಾಡ್ತಿದ್ದಾರೆ. ಇದರಲ್ಲಿ ವಿಜಯೇಂದ್ರಗೆ ಎಷ್ಟು ಪಾಲಿದೆಯೋ ಗೊತ್ತಿಲ್ಲ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ.

ವಿಪಕ್ಷ ನಾಯಕ ಸಿದ್ದರಾಮಯ್ಯ.

  • Share this:
ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಬಿಜೆಪಿ ಎಂಎಲ್​​ಸಿ ಎಚ್​.ವಿಶ್ವನಾಥ್​ ಮಾಡಿರುವ ಕಿಕ್​​ಬ್ಯಾಕ್​​ ಆರೋಪ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಎಡೆ ಮಾಡಿದೆ. ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ 2 ಸಾವಿರ ಕೋಟಿ ಕಿಕ್​​ಬ್ಯಾಕ್​​ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಶೇ.10ರಷ್ಟು ಲಂಚ ಕಲೆಕ್ಟ್ ಮಾಡ್ತಿದೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆಯಲ್ಲಿ ಕಮಿಷನ್​​​ ನಡೆಯುತ್ತಿದೆ. ಎಲ್ಲೆಲ್ಲಿ ಕಾಮಾಗಾರಿ ನಡೆಯುತ್ತೆ ಅಲ್ಲಿ ಕಮಿಷನ್​​​ ಕಲೆಕ್ಟ್ ಮಾಡುತ್ತಾರೆ ಎಂದು ಆರೋಪಿಸಿದರು.

ಭದ್ರಾ ಕೇಂದ್ರ ಸರ್ಕಾರದ ಯೋಜನೆ, ಇದರಲ್ಲಿ ವಿಜಯೇಂದ್ರ ಕಲೆಕ್ಟ್ ಮಾಡ್ತಿದಾರೊ ಗೊತ್ತಿಲ್ಲ.  ಇಲ್ಲ ಬೇರೆಯವರು ಕಮಿಷನ್ ಕಲೆಕ್ಟ್ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಇದು ೮-೧೦% ಕಮಿಷನ್ ಸರ್ಕಾರ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ಸರ್ಕಾರ ಬಂದಾಗಿನಿಂದ ಕಮಿಷನ್ ಸರ್ಕಾರ ಆಗಿದೆ. ಕೇವಲ ಇರಿಗೇಷನ್ ಡಿಪಾರ್ಟ್ಮೆಂಟ್ ಮಾತ್ರ ಅಲ್ಲ , ಲೋಕೋಪಯೋಗಿ ಅಲ್ಲ ಬೇರೆ ಇಲಾಖೆಯಲ್ಲೂ ಕಮಿಷನ್ ಕೊಡಬೇಕು. ಇವರು ಎಲ್ಲದರಲ್ಲೂ ಕಮಿಷನ್ ತಗೋತಿದ್ದಾರೆ. ೮-೧೦% ಕಮಿಷನ್ ತಗೊಂಡು ಕೆಲಸ ಮಾಡ್ತಿದ್ದಾರೆ. ಇದರಲ್ಲಿ ವಿಜಯೇಂದ್ರಗೆ ಎಷ್ಟು ಪಾಲಿದೆಯೋ ಗೊತ್ತಿಲ್ಲ ಎಂದರು.

ಜಿಂದಾಲ್ ಕಿಕ್ ಬ್ಯಾಕ್ ನಲ್ಲಿ ಸಿದ್ದರಾಮಯ್ಯ ಹೆಸರಿದೆ ಎಂಬ ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಈ ಹಿಂದೆಯೇ ಇದನ್ನು ನಿರಾಕರಿಸಿದ್ದೇನೆ. ಯಾವುದೋ ಹಳೆಯ ಸುಳ್ಳು ಆರೋಪಗಳಿಗೆ ಉತ್ತರ ಕೊಡ್ತಾ ಕೂರಲ್ಲ. ಜಿಂದಾಲ್ ವಿಷಯದಲ್ಲಿ ಸುಳ್ಳು ಆರೋಪವನ್ನು ತಳ್ಳಿ ಹಾಕಿದ್ದೇನೆ ಎಂದರು.

ಇನ್ನು ವಿಶ್ವನಾಥ್​ ಆರೋಪಕ್ಕೆ ನಿನ್ನೆ ಪ್ರತಿಕ್ರಿಯಿಸಿದ್ದ ಸಿಎಂ ಬಿ.ಎಸ್​.ಯಡಿಯೂರಪ್ಪ, ಅವರ ಹೇಳಿಕೆ ಬಗ್ಗೆ ಮಾತಾಡಲ್ಲ. ಅವರ ಆರೋಪ ಆಧಾರ ರಹಿತವಾಗಿದೆ. ಅವರ ವಿರುದ್ದ ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ, ಬಿಜೆಪಿ ಎಂಎಲ್​ಸಿ ಎಚ್​.ವಿಶ್ವನಾಥ್​​ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು ಯಡಿಯೂರಪ್ಪಕ್ಕೆ ವಯಸ್ಸಾಗಿದೆ. ವಯಸ್ಸಾದವರಿಂದ ಆಡಳಿತ ವೇಗವಾಗಿ ನಡೆಯಲ್ಲ ಎಂಬ ಹೇಳಿಕೆ ಬಿಎಸ್​​ವೈ ಆಪ್ತರನ್ನು ಕೆರಳಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇನ್ನು ರಾಜ್ಯದಲ್ಲಿ ಜೂನ್​ 7ರ ನಂತರವೂ ಲಾಕ್​​ಡೌನ್​ ವಿಸ್ತರಣೆ ಆಗಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ. ಕೆಲವೊಂದಿಷ್ಟು ಸಡಿಲಿಕೆ ನೀಡುವ ಸೂಚನೆಯನ್ನೂ ನೀಡಿದ್ದಾರೆ.
Published by:Kavya V
First published: