Siddaramaiah vs DKS: ಏನಿದು ಬಣ ರಾಜಕೀಯ? ಕಾಂಗ್ರೆಸ್​ಗೆ ಬಹುಮತ ಬಂದರೆ ಡಿಕೆಶಿಗೆ ನಷ್ಟ, ಸಿದ್ದರಾಮಯ್ಯಗೆ ಲಾಭ

DK Shivakumar vs Siddaramaiah cold war: ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಕುರ್ಚಿಯ ಮೇಲೆ ಆಸೆ ಚೆಲ್ಲಿಲ್ಲ, ಡಿಕೆ ಶಿವಕುಮಾರ್​ ಕೂಡ ಈ ಬಾರಿ ಮುಖ್ಯಮಂತ್ರಿ ಆಗಲೇ ಬೇಕು ಎಂದು ಪಣ ತೊಟ್ಟಿದ್ದಾರೆ.

ಸಿದ್ದರಾಮಯ್ಯ - ಡಿಕೆಶಿ ಫೈಲ್​ ಫೋಟೊ

ಸಿದ್ದರಾಮಯ್ಯ - ಡಿಕೆಶಿ ಫೈಲ್​ ಫೋಟೊ

 • Share this:
  ಬೆಂಗಳೂರು: ರಾಜಕೀಯ ಪಕ್ಷಗಳಲ್ಲಿ ಬಣ ರಾಜಕೀಯ ಇಂದು ನಿನ್ನೆಯದಲ್ಲ. ಅದರಲ್ಲೂ ಕರ್ನಾಟದಲ್ಲಿ ಸ್ವಪಕ್ಷೀಯರ ಬಣ ರಾಜಕೀಯದ ದೊಡ್ಡ ಇತಿಹಾಸವೇ ಇದೆ (History of political cold war in Karnataka). ರಾಮಕೃಷ್ಣ ಹೆಗಡೆ - ಎಚ್​ಡಿ ದೇವೇಗೌಡ, ದೇವೇಗೌಡ - ಜೆಎಚ್​ ಪಟೇಲ್​, ಬಿಎಸ್​ ಯಡಿಯೂರಪ್ಪ - ಈಶ್ವರಪ್ಪ, ಸಿದ್ದರಾಮಯ್ಯ - ಡಿಕೆಶಿ, ಡಿಕೆಶಿ - ರಮೇಶ್​ ಜಾರಕಿಹೊಳಿ, ಸಿದ್ದರಾಮಯ್ಯ - ಡಾ ಜಿ ಪರಮೇಶ್ವರ್​... ಹೀಗೇ ಲೆಕ್ಕ ಹಾಕಿದರೆ ಇನ್ನೂ ಹತ್ತಾರು ಹೆಸರುಗಳು ಕೇಳಿ ಬರುತ್ತವೆ. ಈಗ ವಿಪಕ್ಷ ನಾಯಕ Siddaramaiah ಮತ್ತು ಕಾಂಗ್ರೆಸ್​ ಅಧ್ಯಕ್ಷ DK Shivakumar​ ಒಳ ಜಗಳ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಹುಡುಕ ಹೊರಟರೆ ಕಾಣುವುದು ಮುಂದಿನ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ. 

  ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಜೋಡೆತ್ತುಗಳಂತೆ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್​ನ ಹಲವು ನಾಯಕರು ಆಗಾಗ ಹೇಳಿಕೆಗಳನ್ನು ಕೊಟ್ಟರೂ, ಎಲ್ಲರಿಗೂ ತಿಳಿದಿರುವ ಸತ್ಯ ಅದು ಅಸಾಧ್ಯ ಎಂಬುದು. ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಕುರ್ಚಿಯ ಮೇಲೆ ಆಸೆ ಚೆಲ್ಲಿಲ್ಲ, ಡಿಕೆ ಶಿವಕುಮಾರ್​ ಕೂಡ ಈ ಬಾರಿ ಮುಖ್ಯಮಂತ್ರಿ ಆಗಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಉಗ್ರಪ್ಪ ಮತ್ತು ಸಲೀಂ ನಡುವಿನ ಮಾತುಕತೆ ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್​ ಪಕ್ಷದೊಳಗೇ ಪಿಸುಮಾತಿದೆ. ಡಿಕೆ ಶಿವಕುಮಾರ್​ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ ತಮ್ಮ ಆಪ್ತರಾದ MB Patil​ ಅಥವಾ Satish Jarakiholi ಅವರನ್ನು ಕೂರಿಸಲು ಸಿದ್ದರಾಮಯ್ಯ ಸತತವಾಗಿ ಪ್ರಯತ್ನ ಪಡುತ್ತಿದ್ದಾರೆ ಎಂದೂ ಆರೋಪಗಳಿವೆ.

  ಡಿಕೆಶಿ ಲಾಬಿ ಮತ್ತು ಜೆಡಿಎಸ್​ ಜೊತೆ ಒಳ ಒಪ್ಪಂದ:

  ಇತ್ತ ಡಿಕೆ ಶಿವಕುಮಾರ್​ ಕೂಡ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲು ಬೇಕಾದ ಲಾಬಿಯನ್ನು ಮಾಡುತ್ತಲೇ ಇದ್ದಾರೆ. ಮೂಲಗಳ ಪ್ರಕಾರ ಡಿಕೆಶಿ ಈಗಾಗಲೇ ಎಚ್​ಡಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ಅವರ ಜೊತೆ ಒಳ ಒಪ್ಪಂದ ಮಾಡಿಕೊಂಡಾಗಿದೆ. ಜೆಡಿಎಸ್​ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಸದ್ಯಕ್ಕೆ ಅಸಾಧ್ಯದ ಮಾತು. ಇದೇ ಕಾರಣಕ್ಕೆ ಡಿಕೆಶಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಒಂದು ವೇಳೆ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಬಹುಮತ ಬರದಿದ್ದರೆ, ಜೆಡಿಎಸ್​ಗೆ ಬೇಡಿಕೆ ಬರಲಿದೆ. ಈ ಹಿಂದೆ ಆಪರೇಷನ್​ ಕಮಲಕ್ಕೆ ಮೊದಲು ಯತ್ನಿಸಿದಾಗ ಡಿಕೆಶಿ ಅಂದಿನ ಮುಖ್ಯಮಂತ್ರಿ HD Kumaraswamy ಸರಕಾರ ಉಳಿಸಲು ಭಗಿರತ ಪ್ರಯತ್ನ ಮಾಡಿದ್ದರು.

  ಮೊದಲ ಬಾರಿ ಡಿಕೆಶಿ ಅವರ ಕಾರಣದಿಂದಲೇ ಆಪರೇಷನ್​ ಕಮಲ ವಿಫಲವಾಗಿತ್ತು. ಇದರಿಂದ ಕುಮಾರಸ್ವಾಮಿ ಮತ್ತು ಡಿಕೆಶಿ ನಡುವಿನ ಹಳೆಯ ಎಲ್ಲಾ ಬಿನ್ನಾಭಿಪ್ರಾಯಗಳೂ ಶಮನಗೊಂಡಿತ್ತು. ನಂತರ Ramesh Jarakiholi ಮತ್ತು ಡಿಕೆಶಿ ನಡುವಿನ ಜಗಳದಿಂದ ಕಾಂಗ್ರೆಸ್​ ಮತ್ತು ಜೆಡಿಎಸ್​ನ 18 ಶಾಸಕರು ಗುಳೆ ಹೋದಾಗಲೂ ಡಿಕೆಶಿ ಸರಕಾರ ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇದು ಕೂಡ ಡಿಕೆಶಿ ಮತ್ತು HD Deve Gowda ಕುಟುಂಬವನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡಿತ್ತು. ಅದಾದ ನಂತರ ಇಬ್ಬರೂ ಆಗಾಗ ಪರಸ್ಪರ ಭೇಟಿ, ಮಾತುಕತೆ ನಡೆಸುತ್ತಲೇ ಇದ್ದಾರೆ.

  ಬಹುಮತ ಬಂದರೆ ಡಿಕೆಶಿ ಸಿಎಂ ಆಗಲು ಸಾಧ್ಯವಿಲ್ಲ:

  ಒಂದು ವೇಳೆ ಕಾಂಗ್ರೆಸ್​ಗೆ ಬಹುಮತ ಬಂದರೆ ಸಿದ್ದರಾಮಯ್ಯ ಬಣ ಡಿಕೆ ಶಿವಕುಮಾರ್​ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪುವುದಿಲ್ಲ. ಏಕೆಂದರೆ ಬೆಂಗಳೂರು ಮತ್ತು ಹಳೆ ಮೈಸೂರು ಪ್ರಾಂತ್ಯ ಹೊರತುಪಡಿಸಿ ಡಿಕೆಶಿಗೆ ಇನ್ನೆಲ್ಲೂ ಬಲವಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಎಂಬಿ ಪಾಟೀಲ್​ ಮತ್ತು ಮುಂಬೈ ಕರ್ನಾಟಕ (ಬೆಳಗಾವಿ) ಭಾಗದಲ್ಲಿ ಸತೀಶ್​ ಜಾರಕಿಹೊಳಿ ಅವರ ಪ್ರಭಾವವಿದೆ. ಮತ್ತು ಮುಂದಿನ ಬಾರಿಯೂ ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕೇಳಿ ಬರಲಿದೆ. ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗಲು ಸಾಧ್ಯವಾಗದಿದ್ದರೂ, ಆಪ್ತರಾದ ಎಂಬಿ ಪಾಟೀಲ್​ ಮತ್ತು ಸತೀಶ್​ ಜಾರಕಿಹೊಳಿ ಅವರನ್ನು ಪದವಿಗೇರಿಸಲು ಲಾಬಿ ಮಾಡಲಿದ್ದಾರೆ.

  ಇದನ್ನೂ ಓದಿ: ಸಿದ್ದರಾಮಯ್ಯ ನಿವಾಸದಲ್ಲಿ ಸೋದರರ ಮುಖಾಮುಖಿ; ಮಧು ಬಂಗಾರಪ್ಪ ಬೆನ್ನಲ್ಲೇ ‘ಕೈ’ಗೆ ಕುಮಾರ್ ಬಂಗಾರಪ್ಪ?

  ಡಿಕೆ ಶಿವಕುಮಾರ್​ಗೂ ಈ ವಿಚಾರದ ಅರಿವಿದೆ, ಅದಕ್ಕಾಗಿಯೇ ಜೆಡಿಎಸ್ ​ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಈ ಬಾರಿಯೂ ಕಾಂಗ್ರೆಸ್​ಗೆ ಬಹುಮತ ಬರದಂತೆ ಡಿಕೆ ಶಿವಕುಮಾರ್​ ನೋಡಿಕೊಳ್ಳುತ್ತಾರೆ. ಹಾಗಾದಲ್ಲಿ ಮಾತ್ರ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಜೆಡಿಎಸ್​ ಡಿಕೆಶಿ ಮುಖ್ಯಮಂತ್ರಿ ಆಗುವುದಾದರೆ ಬೆಂಬಲ ನೀಡಲಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್​ ಮುಖಂಡ.

  ಇದನ್ನೂ ಓದಿ: ಕಾಂಗ್ರೆಸ್​ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ; CWC​ ಸಭೆಯಲ್ಲಿ ತೀರ್ಮಾನ!

  ಮುಂದುವರೆದ ಅವರು, ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಅಭ್ಯರ್ಥಿಗಳನ್ನು ಡಿಕೆಶಿ ಕರೆ ತರುತ್ತಿದ್ದಾರೆ. ಉದಾಹರಣೆಗೆ ತೀರ್ಥಳ್ಳಿಯಲ್ಲಿ ಮುಂದಿನ ಬಾರಿ ಕಿಮ್ಮನೆ ರತ್ನಾಕರ್​ ಗೆಲುವು ನಿಶ್ಚಿತ ಎನ್ನಲಾಗಿತ್ತು. ಆದರೆ ಅಲ್ಲಿ ಈಗ ಜೆಡಿಎಸ್​ನಿಂದ ಆರ್​ ಎಂ ಮಂಜುನಾಥ್​ ಗೌಡರನ್ನು ಕರೆತರಲಾಗಿದೆ. ಇದರಿಂದ ಕಾಂಗ್ರೆಸ್​ ಎರಡು ಬಣವಾಗಲಿದೆ ಮತ್ತು ಕಾಂಗ್ರೆಸ್​ಗೆ ನಷ್ಟವೇ ಎನ್ನುತ್ತಾರೆ ಹಿರಿಯ ಕಾಂಗ್ರೆಸ್​ ಕಾರ್ಯಕರ್ತ. ​
  Published by:Sharath Sharma Kalagaru
  First published: