• Home
  • »
  • News
  • »
  • state
  • »
  • ಚಾಮರಾಜನಗರ ಪ್ರಕರಣ ಡೈವರ್ಟ್ ಮಾಡಲು ತೇಜಸ್ವಿ ಸೂರ್ಯ ಬೆಡ್ ದಂಧೆ ಬಯಲಿಗೆಳೆದಿದ್ದಾರೆ : ಸಿದ್ದರಾಮಯ್ಯ

ಚಾಮರಾಜನಗರ ಪ್ರಕರಣ ಡೈವರ್ಟ್ ಮಾಡಲು ತೇಜಸ್ವಿ ಸೂರ್ಯ ಬೆಡ್ ದಂಧೆ ಬಯಲಿಗೆಳೆದಿದ್ದಾರೆ : ಸಿದ್ದರಾಮಯ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 28 ಜನ ಸತ್ತಿದ್ದಾರೆ. ಆದರೆ ಸುಧಾಕರ್ ಮೂರು ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.

  • Share this:

ಬೆಂಗಳೂರು: ಬಿಜೆಪಿ ಸಂಸದ ನಿನ್ನೆ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ವಾರ್​ ರೂಂ ಮೂಲಕ ನಡೆಯುತ್ತಿದ್ದ ಬೆಡ್​ ಬ್ಲಾಕಿಂಗ್​ ದಂಧೆಯನ್ನು ಹೊರಗೆಳೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದರ ತನಿಖೆಯನ್ನು ರಾಜಕೀಯ ದಾಳ ಎಂದು ಟೀಕಿಸಿದ್ದಾರೆ. ಚಾಮರಾಜನಗರದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 24 ಮಂದಿ ಮೃತಪಟ್ಟಿರುವ ಪ್ರಕರಣವನ್ನು ಮರೆಮಾಚಲು ಈ ರೀತಿ ಬೆಡ್​ ಬ್ಲಾಕಿಂಗ್​ ದಂಧೆಯನ್ನು ಹೊರಗೆಳೆದಿದ್ದಾರೆ. ಸರ್ಕಾರದ ಉಳುಕು ಮರೆ ಮಾಡಲು ಬೆಡ್​ ಬ್ಲಾಕಿಂಗ್​ ದಂಧೆ ಎಂಬ ದಾಳ ಉರುಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತೇಜಸ್ವಿ ಸೂರ್ಯ ರಾಜಕೀಯವಾಗಿ ಇದನ್ನು ಮಾಡಿದ್ದಾರೆ. ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿರುವುದು ಭಾರೀ ಸುದ್ದಿ ಆಗುತ್ತಿದೆ ಎಂದು ಅದನ್ನು ಡೈವರ್ಟ್ ಮಾಡಲು ಹೀಗೆ ಮಾಡಿದ್ದಾರೆಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು ನಿನ್ನೆ ತೇಜಸ್ವಿ ಸೂರ್ಯ ಶಾಸಕರುಗಳನ್ನು ಸೇರಿಕೊಂಡು ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿರುವುದು ಒಳ್ಳೆ ಕೆಲಸವೇ. ಆದರೆ ಇಲ್ಲಿ ಹೀಗೆ ಮಾಡುವುದು ಬಿಟ್ಟು ಒಬ್ಬ ಸಂಸದನಾಗಿ ಕೇಂದ್ರ ಸರ್ಕಾರದ ಮುಂದೆ ಆಕ್ಸಿಜನ್ ಬೇಕು ಎಂದು ಕೇಳಲಿ. ತೇಜಸ್ವಿ ಸೂರ್ಯ ನ್ಯಾಷನಲ್ ಯುವ ಮೋರ್ಚಾ ಅಧ್ಯಕ್ಷರಾಗಿ ಇಷ್ಟಕ್ಕೆ ಸೀಮಿತ ಆಗಬಾರದು. ಎಲ್ಲಾ ಸಂಸದರನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಿ ಆಕ್ಸಿಜನ್ ಬಗ್ಗೆ ಕೇಳಬೇಕು. ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ. ಕೊರೋನದಿಂದ  ಹೆಚ್ಚು ಜನ ಸಾಯಬಾರದು. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗುವಂತೆ ಆಗಬೇಕು. ಅದನ್ನು ಕೇಂದ್ರದಿಂದ ಕೇಳಿ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.


ಇನ್ನು ಚಾಮರಾಜನಗರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಸುಧಾಕರ್​ ವಿರುದ್ದ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಬಹಳಷ್ಟು  ಜನ ಸಾಯುತ್ತಿದ್ದಾರೆ, ಆದರೆ ಆರೋಗ್ಯ ಸಚಿವ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 28 ಜನ ಸತ್ತಿದ್ದಾರೆ. ಆದರೆ ಸುಧಾಕರ್ ಮೂರು ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ನಿನ್ನೆ ನಾವು ಆಸ್ಪತ್ರೆಗೆ ಹೋಗಿ ಪರಿಶೀಲಿಸಿದ್ದೇವೆ. ಮುಖ್ಯ ಕಾರ್ಯದರ್ಶಿ , ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಸಭೆ ಮಾಡಿದ್ದೇನೆ. ಡಿಹೆಚ್ ಒ, ಡಿಸಿ ಜೊತೆಗಿನ ಸಭೆಯಲ್ಲಿ ಆಕ್ಸಿಜನ್ ಕೊರತೆಯಿಂದಲೇ ಸತ್ತಿದ್ದಾರೆ ಎಂದು ಹೇಳಿದ್ದಾರೆ. ಸುಳ್ಳು ಮಾಹಿತಿಯನ್ನು ಆರೋಗ್ಯ ಸಚಿವರು ನೀಡಿದ್ದಾರೆ ಎಂದು ಕಿಡಿ ಕಾಡಿದರು.


ಅಂದು ಎಲ್ಲಾ ರೋಗಿಗಳಿಗೂ 350 ಆಕ್ಸಿಜನ್ ಸಿಲಿಂಡರ್ ಬೇಕಿತ್ತು. ಅವತ್ತು 126 ಸಿಲಿಂಡರ್​ ಮಾತ್ರ ಸಪ್ಲೈ ಆಗಿತ್ತು, ಇನ್ನು ಮಿಕ್ಕಿದ್ದು ಸಪ್ಲೈ ಆಗಿಲ್ಲ. ಭಾನುವಾರವೂ ಸಪ್ಲೈ ಆಗಿಲ್ಲ. 2ನೇ ತಾರೀಖಿನಿಂದ 3ನೇ ತಾರೀಖಿನ ವರೆಗೂ 28 ಜನ ಸತ್ತಿದ್ದಾರೆ ಎಂದು ಆರೋಪಿಸಿದರು. ಚಾಮರಾಜನಗರ ಆಸ್ಪತ್ರೆಗೆ ಅಗತ್ಯ ಇರುವ ಆಕ್ಸಿಜನ್ ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಅವರು ನಿನ್ನೆ ಯಿಂದಲೇ ಪ್ರಾರಂಭ ಮಾಡಿದ್ದೇವೆ ಎಂದಿದ್ದಾರೆ. ಇನ್ನು ಪ್ರಕರಣದ ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರುತ್ತೆ ಎಂಬ ಆಶಾಭಾವನೆ ಇದೆ. ಸತ್ಯ ಹೊರ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮೈಸೂರು ಹಾಗೂ ಚಾಮರಾಜನಗರ ಡಿಸಿ ಹೇಳಿಕೆ ವಿಭಿನ್ನವಾಗಿದೆ. ಆ ಬಗ್ಗೆಯೂ ಸತ್ಯ ಕೂಡ ಹೊರಬರಬೇಕು ಎಂದು ಆಗ್ರಹಿಸಿದರು.


ಕಲಬುರಗಿ, ಕೋಲಾರ, ಬೆಂಗಳೂರಿನಲ್ಲಿ ಆಕ್ಸಿಜನ್ ಕೊರೆತೆ ಆಗಿದೆ ಎಂದು ಇದೆ ಇದರ ಬಗ್ಗೆ ಕೂಡ ತನಿಖೆ ಆಗಬೇಕು. 813 ಟನ್ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ರಾಜ್ಯಕ್ಕೆ 675 ಟನ್ ಅಲಾಟ್ ಮಾಡಿದೆ. ಕೇಂದ್ರ ಸರ್ಕಾರ ಒರಿಸ್ಸಾದಿಂದ 130 ಟನ್ ಅಲಾಟ್ ಮಾಡಿದೆ. 48 ಗಂಟೆ ಬೇಕು ಅಲ್ಲಿಂದ ಇಲ್ಲಿಗೆ ಬರುವುದಕ್ಕೆ. ಸಿಎಸ್ ಹೇಳುತ್ತಾರೆ ರಾಜ್ಯದಲ್ಲಿ ಉತ್ಪಾದನೆ ಆಗುವ ಎಲ್ಲಾ ಆಕ್ಸಿಜನ್ ಇಲ್ಲೇ ಉಪಯೋಗ ಆಗಬೇಕೆಂದು ಹೇಳಿದ್ದಾರೆ. ಕೇಂದ್ರ ಮಂತ್ರಿಗಳು, ಎಂಪಿ ಗಳಿಗೆ ಒತ್ತಾಯ ಮಾಡುತ್ತೇನೆ. ಈಗ ಇರುವ ಆಕ್ಸಿಜನ್ ಶೇ.50ರಷ್ಟು ಸಾಲುವುದಿಲ್ಲ. ಅಗತ್ಯ ಎಷ್ಟು ಇದೆ ಅದನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡವಂತೆ ಒತ್ತಾಯ ಮಾಡುತ್ತೇನೆ. ತಜ್ಞರು ಹೇಳಿದಂತೆ ಸರ್ಕಾರ ನಡೆದುಕೊಳ್ಳ ಬೇಕು, ಅವರ ಸಲಹೆ ಗಂಭೀರವಾಗಿ ಸ್ವೀಕರಿಸಬೇಕು.

Published by:Kavya V
First published: