ರೋಹಿಣಿ ಸಿಂಧೂರಿ- ಶಿಲ್ಪಾ ನಾಗ್​​ ನಡುವೆ ಜಟಾಪಟಿ ತಂದಿದ್ದು ಸಿಂಹ; ಸಿದ್ದರಾಮಯ್ಯ

ಒಬ್ಬ ಸಂಸದರು ಅವರದೇ ಸರ್ಕಾರದ ಅಧಿಕಾರಿಗಳನ್ನು ಬೆಂಬಲಿಸುವುದು, ತೆಗಳುವ ಕೆಲಸ ಮಾಡುವುದು ಸರಿಯಲ್ಲ

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

 • Share this:
  ಬೆಂಗಳೂರು (ಜೂ. 8): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್​ ನಡುವೆ ಒಡುಕು ಮೂಡಿಸಿ, ಎತ್ತಿಕಟ್ಟುವ ಕೆಲಸ ಮಾಡಿದ್ದು, ಸಂಸದ ಪ್ರತಾಪ್​ ಸಿಂಹ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಹಾದಿ ರಂಪ ಬೀದಿ ರಂಪ ಮಾಡುವಷ್ಟು ಪವರ್​ ಕೊಟ್ಟವರು ಯಾರು ಎಂದು ಇದೇ ವೇಳೆ ಪ್ರಶ್ನಿಸಿದರು. ಇಬ್ಬರು ಐಎಎಸ್​ ಅಧಿಕಾರಿಗಳ ನಡುವೆ ಜಟಾಪಟಿ ತಂದಿಟ್ಟಿದ್ದು, ಅದೆಂತದೋ ಸಿಂಹ ಎಂದು ಸಂಸದ ಪ್ರತಾಪ್​ ಸಿಂಹ ಹಾಗೂ ಜೆಡಿಎಸ್​ ನಾಯಕ ಸಾರಾ ಮಹೇಶ್​ ಎಂದು ಆರೋಪಿಸಿದರು. ಬಿಜೆಪಿಯವರಿಗೆ ರೋಹಿಣಿ ಸಿಂಧೂರಿಯನ್ನು ತೆಗೆದು ಶಿಲ್ಪಾ ಅವರನ್ನು ಡಿಡಿ ಮಾಡಬೇಕು ಎಂದು ಕೊಂಡಿದ್ದರು. ಇದೇ ಕಾರಣ ಈ ರೀತಿ ಅಧಿಕಾರಿಗಳು ಆರೋಪ- ಪ್ರತ್ಯಾರೋಪ ನಡೆಸುವಂತೆ ಕುಮ್ಮಕ್ಕು ನೀಡಿದರು ಎಂದು ಟೀಕಿಸಿದರು.

  ಅಧಿಕಾರಿಗಳು ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ಇವರಿಗೆ ಶಕ್ತಿ ತುಂಬಿದವರು ಯಾರು? ಈ ರೀತಿ ಮಾತನಾಡಿದಾಗ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು, ಸಂಪೂರ್ಣ ಆಡಳಿತವೇ ಕುಸಿದ ಕಾರಣ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ವರ್ಗಾವಣೆ ತಪ್ಪಿಗೆ ಶಿಕ್ಷೆ ಅಲ್ಲ ಎಂದರು.

  ರೋಹಿಣಿ ಸಿಂಧೂರಿ ಭೂಮಿ ಹಗರಣದ ಬಗ್ಗೆ ತನಿಖೆ ಮಾಡಿದ ಕಾರಣದಿಂದಲೇ ತಮ್ಮ ವರ್ಗಾವಣೆ ಆಗಿದೆ ಎಂದಿದ್ದಾರೆ. ಈ ಬಗ್ಗೆ ತನಿಖಾಗಬೇಕು. ಸ್ವತಂತ್ರ ಸಂಸ್ಥೆ ಮೂಲಕ ಈ ಕುರಿತು ತನಿಖೆ ಆಗಬೇಕು. ಅಧಿಕಾರಿಯನ್ನು ಬಳಸಿಕೊಂಡು ಕೆಲ ಅಕ್ರಮಗಳು ನಡೆದಿದೆ. ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

  ಇದನ್ನು ಓದಿ: ಹಲವು ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾದ ಚಾಮರಾಜನಗರ; ಗ್ರಾಮದಲ್ಲೂ ಆರಂಭವಾಯ್ತು ಕೇರ್​ ಸೆಂಟರ್​

  ಚುನಾಯಿತ ಸರ್ಕಾರ ಬಿಗಿ ಆಡಳಿತ ಇಲ್ಲದ ಕಾರಣ ಈ ರೀತಿಯ ವರ್ತನೆಗಳು ಕಂಡು ಬಂದಿದೆ. ಒಬ್ಬ ಸಂಸದರು ಅವರದೇ ಸರ್ಕಾರದ ಅಧಿಕಾರಿಗಳನ್ನು ಬೆಂಬಲಿಸುವುದು, ತೆಗಳುವ ಕೆಲಸ ಮಾಡುವುದು ಸರಿಯಲ್ಲ. ಆತ ಮೊದಲಿಗೆ ರೋಹಿಣಿ ಸಿಂಧೂರಿ ಬೆಂಬಲಿಸಿದ, ಬಳಿಕ ಶಿಲ್ಪಾ ನಾಗ್​ ಹೊಗಳಿದ.  ಚುನಾಯಿತ ಅಧಿಕಾರಿ ಜನರಿಗಾಗಿ ಕೆಲಸ ಮಾಡಬೇಕು. ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ನಡೆಸಬಾರದು. ಕ್ಷೇತ್ರದ ಸಂಸದರಾಗಿ ಅಧಿಕಾರಿಗಳ ನಡುವೆ ಹೊಂದಾಣಿಕೆ ನಡೆಸಬೇಕೆ ಹೊರತು ಈ ರೀತಿ ಎತ್ತಿಕಟ್ಟುವ ಕಾರ್ಯ ನಡೆಸಬಾರದು ಎಂದು ಇದೇ ವೇಳೆ ಅವರು ಮೈಸೂರು ಸಂಸದರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

  ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೈಸೂರಿನಲ್ಲಿ ಅಧಿಕಾರಿಗಳು ನಡುವೆ ಮೂಡಿದ್ದ ಜಟಾಪಟಿ ಸರ್ಕಾರಕ್ಕೆ ಸಾಕಷ್ಟು ಮುಜುಗರ ಕೂಡ ತಂದೊಟ್ಟಿತು. ಕೋವಿಡ್​ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಾಲಿಕೆ ಸದಸ್ಯರು ಶಿಲ್ಪಾನಾಗ್​ಬೆ ಬೆಂಬಲ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ ವಿರುದ್ಧ ದೂರಿದರು. ಆದರೆ, ರೋಹಿಣಿ ಸಿಂಧೂರಿ ಮಾತ್ರ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದರು. ಈ ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾದ ಸರ್ಕಾರ ಶನಿವಾರ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: