ಅಪ್ಪು ನೆನೆದು ಮತ್ತೆ ಮಗುವಿನಂತೆ ಅತ್ತ ಶಿವಣ್ಣ: ಮರೆಯಲಾಗುತ್ತಿಲ್ಲ ಪುನೀತ್​ ರಾಜಕುಮಾರ್​ ನಗು ಮುಖವ..!

ಆರ್ಯ ಈಡಿಗರ ಸಂಘದ ವತಿಯಿಂದ ಶೇಷಾದ್ರಿಪುರಂನ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನಟ ಶಿವರಾಜ್​ಕುಮಾರ್(Shivarajkumar)​,  ಚಿನ್ನೇಗೌಡ(Chinnegowda),ಶ್ರೀ ಮುರುಳಿ(Sri Murali) ಪುನೀತ್ ಅಕ್ಕ ಲಕ್ಷ್ಮೀ(Lakshmi), ಜಯಮಾಲಾ ಹಾಗೂ ಈಡಿಗ ಸಮುದಾಯದ ಮುಖಂಡರು ಭಾಗಿಯಾಗಿದ್ದಾರೆ.

ಶಿವರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​

ಶಿವರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​

  • Share this:
‘ಮುತ್ತುರಾಜ ಹೆತ್ತ ಮುತ್ತೆ.. ಎತ್ತ ಹೋದೆಯೋ.. ಅತ್ತು, ಕರೆದರೂ ಮತ್ತೆ ಬಾರದಾದೆಯೂ.. ಮರೆಯಲಾರೆವೂ ಎಂದು ನಿಮ್ಮ ಅಪ್ಪುಗೆ.. ನೆನೆಪೆ ತುಂಬಿ ಹೋದೆ.. ದೂರದೂರಿಗೆ..’ಹೌದು, ಅಪ್ಪು(Appu) ನಮ್ಮನ್ನು ಬಿಟ್ಟು ಹೋಗಿರುವುದನ್ನು ಇಂದಿಗೂ ಯಾರು ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮೊಂದಿಗೆ ಇದ್ದಾರೆ. ಅಭಿಮಾನಿಗಳ(Fans) ಹೃದಯದಲ್ಲಿದ್ದಾರೆ. ಎಲ್ಲಿವರೆಗೂ ಅಭಿಮಾನಿಗಳು ಇರುತ್ತಾರೋ ಅಲ್ಲಿವರೆಗೂ ಅಪ್ಪು ಜೀವಂತವಾಗಿರುತ್ತಾರೆ. ಅಪ್ಪು ಅವರ ಪರಮಾತ್ಮ(Paramathma) ಸಿನಿಮಾದ ಕ್ಲೈಮ್ಯಾಕ್ಸ್(Climax)​​ನಲ್ಲಿ ಒಂದು ಸ್ಲೋಗನ್​ ಇದೆ. ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಅಪ್ಪು(Appu) ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಎಲ್ಲರ ಜೊತೆ ಇದ್ದಾರೆ. ಬುದಕಿದ ಅಷ್ಟೂ ದಿನ ಅಪ್ಪು ಮಾದರಿಯಾಗುವಂತೆ ಜೀವನ ನಡೆಸಿದವರು, ಸಾಮಾಜಿಕ ಕೆಲಸಗಳು, ವ್ಯಕ್ತಿತ್ವ, ಸರಳತೆ ಎಲ್ಲವೂ ಇವರನ್ನು ನೋಡಿ ಕಲಿಯಬೇಕು.  ಅಪ್ಪು ಅವರ ಸ್ಮರಣಾಂಜಲಿ ಕಾರ್ಯಕ್ರಮ ಇಂದು ಆಯೋಜಿಲಾಗಿದೆ.  ಆರ್ಯ ಈಡಿಗರ ಸಂಘದ ವತಿಯಿಂದ ಶೇಷಾದ್ರಿಪುರಂನ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನಟ ಶಿವರಾಜ್​ಕುಮಾರ್(Shivarajkumar)​,  ಚಿನ್ನೇಗೌಡ(Chinnegowda),ಶ್ರೀ ಮುರುಳಿ(Sri Murali) ಪುನೀತ್ ಅಕ್ಕ ಲಕ್ಷ್ಮೀ(Lakshmi), ಜಯಮಾಲಾ ಹಾಗೂ ಈಡಿಗ ಸಮುದಾಯದ ಮುಖಂಡರು ಭಾಗಿಯಾಗಿದ್ದಾರೆ. ಅಪ್ಪು ಬಗ್ಗೆ ಮಾತನಾಡುತ್ತಾ ಮತ್ತೆ ಶಿವಣ್ಣ ಕಣ್ಣೀರು ಹಾಕಿದ್ದಾರೆ. 

ಅಪ್ಪು ನೆನೆದು ಮತ್ತೆ ಮಗುವಿನಂತೆ ಅತ್ತ ಶಿವಣ್ಣ!

ಪುನೀತ್ ರಾಜ್‍ಕುಮಾರ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಶಿವಣ್ಣ ಮತ್ತೆ ಕಣ್ಣೀರು ಹಾಕಿದ್ದಾರೆ. ಅಪ್ಪು ಭಾವಚಿತ್ರಕ್ಕೆ ಶಿವರಾಜ್ ಕುಮಾರ್, ಚಿನ್ನೇಗೌಡ, ಪುನೀತ್ ಅಕ್ಕ ಲಕ್ಷ್ಮೀ, ಜಯಮಾಲಾ ಹಾಗೂ ಈಡಿಗ ಸಮುದಾಯದ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಶಿವಣ್ಣ ಭಾವುಕರಾಗಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವ ನೋವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಕಣ್ಣೀರು ಹಾಕಿದ್ದಾರೆ. ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋದ ದಿನವಂತೂ ಶಿವಣ್ಣ ಅಪ್ಪು ಮೃತದೇಹದ ಪಕ್ಕ ಕೂತು ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಅಪ್ಪು ಅಮರ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಇಂದೂ ಕೂಡ ಅಪ್ಪು ನೆನೆದು ನಟ ಶಿವರಾಜ್​ಕುಮಾರ್​ ಭಾವುಕರಾಗಿದ್ದಾರೆ.

ಇದನ್ನು ಓದಿ : ಅಪ್ಪು ಅವರ ಅಮೋಘವಾದ ಕನಸಿನ ಪಯಣ: ಡಿ.6ಕ್ಕೆ ಪುನೀತ್​ ಡಾಕ್ಯುಮೆಂಟರಿ ಟೈಟಲ್​ ಲಾಂಚ್​!

ಮೊನ್ನೆ ಆಸ್ಪತ್ರೆ ಬಳಿ ಪುನೀತ್​​ ನೆನೆಸಿಕೊಂಡಿದ್ದ ಶಿವಣ್ಣ!

ಚಂದನವನದ ಮತ್ತೊಂದು ಕೊಂಡಿ ಕಳಚಿದೆ. ಹಿರಿಯ ನಟ ಶಿವರಾಮ್ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಕಳೆದ ಮೂರು ದಿನಗಳಿಂದ ಸೀತಾ ಸರ್ಕಲ್​ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಭೇಟಿಗೆ ಇಲ್ಲಿ ಬಂದಿದ್ದ ಶಿವಣ್ಣ ಅಪ್ಪು ನೆನೆದು ಕಣ್ಣೀರು ಹಾಕಿದ್ದರು. ನಾವು ತಮ್ಮನ ಕಳೆದುಕೊಂಡ ನೋವಲ್ಲಿ ಇದ್ವಿ..ದೇವರು ನಮ್ಮಗೆ ಯಾಕೆ ಪದೇ ಪದೇ ಇತರ ನೋವು ಕೊಡ್ತರೋ ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ ಆಗುತ್ತೆ ಅಂತ ಭಾವುಕರಾಗಿದ್ದರು.

ಇದನ್ನು ಓದಿ : Puneeth Rajkumar ಇಲ್ಲದೇ ಪತ್ನಿ ಅಶ್ವಿನಿ ಮೊದಲ Wedding Anniversary, ಇವರು 'ಆದರ್ಶ ಜೋಡಿ' ಯಾಕೆ ಹೇಳಿ...

ರಕ್ತದಾನ ಮತ್ತು ನೇತ್ರದಾನ ಶಿಬಿರ

ಆರ್ಯ ಈಡಿಗರ ಸಂಘದ ವತಿಯಿಂದ ಶೇಷಾದ್ರಿಪುರಂನ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪುನೀತ್ ಸ್ಮರಣಾರ್ಥ ಹಿನ್ನೆಲೆ ರಕ್ತದಾನ ಮತ್ತು ನೇತ್ರದಾನ ಶಿಬಿರ ಆಯೋಜಿಸಲಾಗಿದೆ. ಆರ್ಯ ಈಡಿಗ ಸಂಘದ ಕಚೇರಿಯಲ್ಲಿ ರಕ್ತದಾನ ಶಿಬಿರ ಏಪರ್ಡಿಸಲಾಗಿದೆ. ಆರ್ಯ ಈಡಿಗ ಸಂಘದ ವಿದ್ಯಾರ್ಥಿಗಳು, ಯುವಕರಿಂದ ಪುನೀತ್ ನೆನಪಲ್ಲಿ ರಕ್ತದಾನ ಆಯೋಜಿಸಿದ್ದಾರೆ. ಅಪ್ಪು ಮಾಡಿ ಹೋದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಆಸೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಅಪ್ಪು ಮಾಡುತ್ತಿದ್ದ ಕೆಲಸಗಳನ್ನು ಅನುಸರಿಸುತ್ತಿದ್ದಾರೆ.
Published by:Vasudeva M
First published: