Bengaluru: ಇವಳೆಂಥಾ ಕಳ್ಳಿ ಗೊತ್ತಾ? “ಥ್ಯಾಂಕ್ಸ್” ಅನ್ನುತ್ತಲೇ ಚೈನ್ ಕದೀತಾಳೆ ಈ ಲೇಡಿ!

ಚಾಲಾಕಿ ಕಳ್ಳಿ ಇವಳು. ವಾಹನ ಸವಾರರನ್ನು ಡ್ರಾಪ್ ಕೇಳುವ ಈ ಮಹಿಳೆ, ಪ್ರಯಾಣದುದ್ದಕ್ಕೂ ಅವರ ಬಳಿ ಚೆನ್ನಾಗಿಯೇ ಮಾತನಾಡಿ, ವಿಶ್ವಾಸಗಿಟ್ಟಿಸುತ್ತಾಳೆ. ಅವಳು ಹೇಳಿದ ಸ್ಟಾಪ್ ಬರುವಷ್ಟರಲ್ಲಿ ಆತ್ಮೀಯಳಂತೆ ಆಗುತ್ತಾಳೆ. ಅವಳ ಮಾತಿಗೆ ಮರುಳಾದ್ರೆ ಕಥೆ ಮುಗೀತು...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: “ಈಗಿನ ಕಾಲದಲ್ಲಿ ಯಾರು ಯಾರಿಗೂ ಸಹಾಯ (Help) ಮಾಡೋದಿಲ್ಲಪ್ಪ, ಕಾಲ ತುಂಬಾ ಕೆಟ್ಹೋಯ್ತು” ಅಂತ ನಾಲ್ಕಾರು ಜನ ಹಿರಿಯರು ಸೇರಿದಾಗ ಮಾತಾಡಿಕೊಳ್ತಾರೆ. ಆದ್ರೆ ಮತ್ತೊಬ್ಬರಿಗೆ ಸಹಾಯ ಮಾಡುವ ಜನ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಜನ ಆಗಲೂ ಇದ್ರು, ಈಗಲೂ ಇದ್ದಾರೆ. ಆದರೆ ಅವರ ಸಹಾಯ ಮಾಡುವ ಗುಣವನ್ನೇ ಅದೆಷ್ಟೋ ಬಾರಿ ಖದೀಮರು, ಕಳ್ಳರು ದುರುಪಯೋಗ (Miss Use) ಪಡೆದುಕೊಂಡು ಬಿಡುತ್ತಾರೆ. ಇದಕ್ಕೆ ಉದಾಹರಣೆ (Example) ಎನ್ನುವಂತೆ ಇಲ್ಲೊಂದು ಘಟನೆ ನಡೆದಿದೆ. ಇಲ್ಲಿ ಪಾಪ, ಹೋಗ್ಲಿ ಅಂತ ಸಹಾಯ ಮಾಡಿದ ವ್ಯಕ್ತಿಯೇ ಈಗ ಅಮೂಲ್ಯ ವಸ್ತು (Valuable Things) ಕಳೆದುಕೊಂಡಿದ್ದಾರೆ. ಸಹಾಯ ಪಡೆದ ಮಹಿಳೆ (Lady) ಎಸ್ಕೇಪ್ (Escape) ಆಗಿದ್ದಾಳೆ. ಹಾಗಾದ್ರೆ ಏನಪ್ಪಾ ಇದು ಕಥೆ ಅಂತ ತಿಳಿದುಕೊಳ್ಳೋದಕ್ಕೆ ಈ ಸ್ಟೋರಿ ಓದಿ…

ಮೊದಲು “ಸಹಾಯ ಮಾಡಿ ಪ್ಲೀಸ್” ಅಂತಾಳೆ

ಬೆಂಗಳೂರಿನಲ್ಲಿ ಯಾರಾದ್ರೂ ಬೈಕು, ಕಾರಲ್ಲಿ ಹೋಗುತ್ತಿರುವಾಗ ಇನ್ನೊಬ್ಬರು ಸಹಾಯ ಕೇಳುವುದು, ಡ್ರಾಪ್ ಮಾಡಿ ಎನ್ನುವುದು ಕಾಮನ್. ಇಲ್ಲಿ ಖತರ್ನಾಕ್ ಲೇಡಿಯೊಬ್ಬಳು ಇಂಥವ್ರನ್ನೇ ಟಾರ್ಗೆಟ್ ಮಾಡ್ತಾ ಇದ್ದಳು. ದಾರಿ ಮಧ್ಯೆ ನಿಂತುಕೊಂಡು ವಾಹನ ಸವಾರರ ಬಳಿ ಡ್ರಾಪ್ ಕೇಳುತ್ತಿದ್ದಳು.

ಬಹುತೇಕರು ವಾಹನ ನಿಲ್ಲಿಸದೇ ಮುಂದೆ ಹೋದ್ರೆ, ಕೆಲವರು ಮಾತ್ರ ಪಾಪ ಅಂತ ವಾಹನ ನಿಲ್ಲಿಸಿ, ವಿಚಾರಿಸ್ತಿದ್ರು. ಆಕೆಯನ್ನು ತಮ್ಮ ಬೈಕ್ ಅಥವಾ ಕಾರಿನಲ್ಲಿ ಹತ್ತಿಸಿಕೊಂಡು, ಆಕೆ ಹೇಳಿದ ಕಡೆ ಡ್ರಾಪ್ ಕೊಡ್ತಾ ಇದ್ರು. ಡ್ರಾಪ್ ಕೊಟ್ಟು, ಆಕೆ ಇಳಿದ ಬಳಿಕವೇ ಆಕೆ ಕೈಚಳಕ ತೋರಿಸ್ತಾ ಇದ್ದಳು.

“ಧನ್ಯವಾದ” ಹೇಳುತ್ತಲೇ ಚಿನ್ನ ಕದಿಯುವ ಚಾಲಾಕಿ!

ಹೀಗೆ ಡ್ರಾಪ್ ಕೇಳುವ ಈ ಮಹಿಳೆ ಸಾಮಾನ್ಯದವಳಲ್ಲ. ಚಾಲಾಕಿ ಕಳ್ಳಿ ಇವಳು, ವಾಹನ ಸವಾರರನ್ನು ಡ್ರಾಪ್ ಕೇಳುವ ಈ ಮಹಿಳೆ, ಪ್ರಯಾಣದುದ್ದಕ್ಕೂ ಅವರ ಬಳಿ ಚೆನ್ನಾಗಿಯೇ ಮಾತನಾಡಿ, ವಿಶ್ವಾಸಗಿಟ್ಟಿಸುತ್ತಾಳೆ. ಅವಳು ಹೇಳಿದ ಸ್ಟಾಪ್ ಬರುವಷ್ಟರಲ್ಲಿ ಆತ್ಮೀಯಳಂತೆ ಆಗುತ್ತಾಳೆ.

ಇದನ್ನೂ ಓದಿ: Koppal: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದ ರೈತನಿಗೆ ಅನುಮತಿ ಪತ್ರ ಕೊಟ್ಟ PDO..ಅನ್ನದಾತನಿಗೆ ಅವಮಾನ!

ಆಮೇಲೆ ಅವಳ ಸ್ಟಾಪ್ ಬಂದ ತಕ್ಷಣವೇ ವಾಹನದಿಂದ ಇಳಿಯುವ ಆಕೆ, ಥ್ಯಾಂಕ್ ಹೇಳುತ್ತಾಳೆ. ಬರೀ ಅಷ್ಟೇ ಅಲ್ಲ, ವಾಹನ ಸವಾರನ್ನು ತಬ್ಬಿಕೊಂಡು ಥ್ಯಾಂಕ್ಸ್ ಹೇಳುತ್ತಾಳೆ. ಪ್ರತಿಯಾಗಿ ಅವರು ವೆಲ್‌ಕಮ್ ಹೇಳಿ ಅಲ್ಲಿಂದ ಹೊರಟಿರುತ್ತಾರೆ. ಅಷ್ಟರಲ್ಲಿ ವಾಹನ ಸವಾರನ ಕುತ್ತಿಗೆಯಲ್ಲಿದ್ದ ಚೈನ್ ಆಕೆಯ ಕೈಯಲ್ಲಿ ಇರುತ್ತದೆ.

ಬೆಳಕಿಗೆ ಬಂದಿದ್ದು ಹೇಗೆ ಕಿಲಾಡಿ ಲೇಡಿಯ ಕೃತ್ಯ?

ಫೆಬ್ರವರಿ 3ರಂದು ವಕೀಲ ಪ್ರವೀಣ್ ಎನ್ನುವವರು ಏರ್‌ಲೈನ್ಸ್ ಹೋಟೆಲ್‌ ಮಾರ್ಗದಲ್ಲಿ ಹೋಗ್ತಾ ಇದ್ದರು. ಆಗ ಈ ಲೇಡಿ ಅವರ ಬಳಿ ಡ್ರಾಪ್ ಕೇಳಿದ್ದಾಳೆ. ಬಳಿಕ ವಾಹನದಿಂದ ಇಳಿಯುತ್ತಿದ್ದಂತೆ ಥ್ಯಾಂಕ್ಸ್ ಹೇಳುತ್ತಾ, ಅವರನ್ನು ತಬ್ಬಿಕೊಂಡಿದ್ದಾಳೆ. ಅದಾದ ಮೇಲೆ ಅಲ್ಲಿಂದ ಆಕೆ ತೆರಳಿದ್ದಾಳೆ.

ಬಳಿಕ ವಕೀಲ ಪ್ರವೀಣ್ ಮನೆಗೆ ಬಂದಾಗಲೇ ತಮ್ಮ ಕತ್ತಿನಲ್ಲಿ 25 ಗ್ರಾಂ ಬಂಗಾರದ ಚೈನ್ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಆಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿದ ಪ್ರವೀಣ್, ಅಪರಿಚಿತ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಏಕಾಏಕಿ BMTC Buses ಹೊತ್ತಿ ಉರಿದೇ ಬಿಟ್ಟವು.. ಹೆದರಿರುವ ಪ್ರಯಾಣಿಕರ ವಿಶ್ವಾಸ ಗಳಿಸಲು ಮುಂದಾದ MD

ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಮಹಿಳೆ

ಈ ಮಹಿಳೆ ಶ್ರೀಮಂತ ವಾಹನ ಸವಾರರನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎನ್ನಲಾಗಿದೆ. ದೂರದಿಂದಲೇ ಅವರ ವೇಷಭೂಷಣ ನೋಡಿ, ಅವರ ಕಾರು, ಬೈಕ್ ನೋಡಿ ಲೆಕ್ಕಾಚಾರ ಹಾಕುತ್ತಿದ್ದಳು. ಶ್ರೀಮಂತರು ಅನಿಸಿದ್ರೆ ಮಾತ್ರ ಡ್ರಾಪ್ ಕೇಳುತ್ತಿದ್ದಳು ಎನ್ನಲಾಗಿದೆ.

ಸದ್ಯ ವಕೀಲ ಪ್ರವೀಣ್ ಅವರು ನೀಡಿರುವ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ಫೂಟೇಜ್‌ಗಳಲ್ಲಿ ಮಹಿಳೆಯ ಚಲನ ವಲನ ದಾಖಲಾಗಿದ್ದು, ಆಕೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Published by:Annappa Achari
First published: